ಅನುದಿನದ ಮನ್ನಾ
ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
Tuesday, 12th of November 2024
3
1
164
Categories :
ಸ್ತುತಿ (Praise)
"ಈ ಒಳ್ಳೆಯ ಕೆಲಸವನ್ನು ನಿಮ್ಮಲ್ಲಿ ಪ್ರಾರಂಭಿಸಿದಾತನು ಅದನ್ನು ನಡಿಸಿಕೊಂಡು ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಪೂರ್ಣತೆಗೆ ತರುವನೆಂದು ನನಗೆ ಭರವಸವುಂಟು."(ಫಿಲಿಪ್ಪಿ 1:6)
"ಕಟ್ಟುವವರು ಯೆಹೋವನ ಮಂದಿರದ ಅಸ್ತಿವಾರವನ್ನು ಹಾಕಿದಾಗ ಇಸ್ರಾಯೇಲರ ಅರಸನಾದ ದಾವೀದನು ನೇಮಿಸಿದ ಕ್ರಮಕ್ಕನುಸಾರವಾಗಿ ಯೆಹೋವನನ್ನು ಸ್ತುತಿಸಿ ಕೀರ್ತಿಸುವುದಕ್ಕೋಸ್ಕರ ಯಾಜಕರು ತಮ್ಮ ದೀಕ್ಷಾವಸ್ತ್ರಗಳಿಂದ ಭೂಷಿತರಾಗಿ ತುತ್ತೂರಿಗಳೊಡನೆಯೂ, ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆಯೂ ನಿಂತುಕೊಂಡರು. ಅವರು ಪರಸ್ಪರ ಹಾಡುತ್ತಾ, ಯೆಹೋವನನ್ನು ಸಂಕೀರ್ತಿಸುತ್ತಾ, “ಆತನು ಒಳ್ಳೆಯವನು; ಆತನ ಕೃಪೆಯು ಇಸ್ರಾಯೇಲರೊಂದಿಗೆ ಶಾಶ್ವತವಾಗಿರುತ್ತದೆ” ಎಂದು ಕೃತಜ್ಞತಾಸ್ತುತಿಮಾಡಿದರು. ಯೆಹೋವನ ಕೀರ್ತನೆ ಕೇಳಿಸಿದ ಕೂಡಲೆ ಯೆಹೋವನ ಆಲಯದ ಅಸ್ತಿವಾರವು ಹಾಕಲ್ಪಟ್ಟಿರುತ್ತದೆಂದು ಜನರೆಲ್ಲರೂ ಉತ್ಸಾಹಧ್ವನಿಯಿಂದ ಜಯಘೋಷ ಮಾಡಿದರು."ಎಂದು ಸತ್ಯವೇದದ ಎಜ್ರ 3:10-11ರ ವಾಕ್ಯ ಹೇಳುತ್ತದೆ.
ಅವರು ಹೀಗೇಕೆ ಮಾಡಿದರು ಎಂದು ನಿಮಗೆ ಆಶ್ಚರ್ಯವಾಗಬಹುದು. ಅಲ್ಲಿನ್ನು ಕೇವಲ ಅಸ್ಥಿವಾರ ಮಾತ್ರ ಹಾಕಲಾಗಿತ್ತು. ದೇವಾಲಯವನ್ನು ಇನ್ನೂ ಸಂಪೂರ್ಣವಾಗಿ ನಿರ್ಮಿಸಿಯೂ ಆಗಿರಲಿಲ್ಲ. ಹಾಗೆ ಸಂಪೂರ್ಣ ಗೊಳಿಸಲು ಅವರು ಇನ್ನೂ ಬಹಳ ದೂರ ಸಾಗಬೇಕಿತ್ತು. ಆದರೂ ದೇವಾಲಯವನ್ನು ನಿರ್ಮಿಸುವ ಮೊದಲೇ ಅವರು ದೇವರನ್ನು ಸ್ತುತಿಸಲು ಪ್ರಾರಂಭಿಸಿದರು.
ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುವ ಕೆಲವು ಸಂಪತ್ಭರಿತ ಗುಪ್ತ ರಹಸ್ಯಗಳು ಇಲ್ಲಿವೆ.
ಕೊಂಡಾಡುವಂತದ್ದು ನಂಬಿಕೆಯನ್ನು ವ್ಯಕ್ತಪಡಿಸುವ ಕ್ರಿಯೆಯಾಗಿದೆ.
ನಂಬಿಕೆ ಹೇಳುವುದೇನೆಂದರೆ, “ಕರ್ತನೇ, ನೀನು ಏನನ್ನು ಪ್ರಾರಂಭಿಸುತ್ತೀರೋ, ಆ ಎಲ್ಲವನ್ನೂ ನೀನು ಮಾಡಲು ಸಾಧ್ಯ ಮತ್ತು ನೀನು ಅದನ್ನು ಮಾಡಿ ಮುಗಿಸುವಿರಿ ಎಂದು ನಾನು ನಂಬುತ್ತೇನೆ. ನಿನ್ನ ಯೋಜನೆಯನ್ನು ನನಗೆ ಪ್ರಕಟ ಪಡಿಸಿದಕ್ಕಾಗಿ ಸ್ತೋತ್ರ.ಏಕೆಂದರೆ ನಿನ್ನ ಯೋಜನೆ ಯಾವಾಗಲೂ ಮೇಲುಗೈ ಸಾಧಿಸುತ್ತದೆ.
ನೀವು ಯಾವುದೇ ಹೊಸ ಕಾರ್ಯಗಳನ್ನು ತೊಡಗಿಸಿಕೊಂಡಾಗ,"ಈ ಸಂಗತಿ ಯಶಸ್ವಿಯಾಗುತ್ತದೆಯೇ?"ಎಂಬೆಲ್ಲಾ ಸಂದೇಹಗಳು ನಿಮ್ಮ ಮನಸ್ಸಿನ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ.ಅಂತಹ ಸಮಯದಲ್ಲಿ, ಸಣ್ಣ ಪ್ರಾರಂಭಕ್ಕಾಗಿ ಆತನಿಗೆ ಸ್ತೋತ್ರ ಎಂದು ಕರ್ತನನ್ನು ಕೊಂಡಾಡಲು ಪ್ರಾರಂಭಿಸಿ, . ಆಗ ನೀವು ನಂಬಲಾಗದ ಹೆಚ್ಚಾದ ವಿಷಯಗಳನ್ನು ನೋಡುವವರಾಗುತ್ತೀರಿ.
ಕರ್ತನನ್ನು ಕೊಂಡಾಡುವಂತದ್ದು ನಿಮ್ಮ ನಂಬಿಕೆಯನ್ನು ಬಲಪಡಿಸುತ್ತದೆ.
ನೆಹಮಿಯನು ತನ್ನ ಕೆಲಸಗಾರರಿಗೆ "..... ಯೆಹೋವನ ಆನಂದವೇ ನಿಮ್ಮ ಬಲವಾಗಿದೆ” ಎಂದನು.(ನೆಹಮಿಯ 8:10)ನಿಮ್ಮ ಆನಂದವನ್ನು ನೀವು ಕಳೆದುಕೊಂಡರೆ, ನಿಮ್ಮ ಅಧಿಕಾರ ಕಳೆದುಕೊಳ್ಳುತ್ತೀರಿ. ನೀವು ನಿಮ್ಮ ಅಧಿಕಾರ ಕಳೆದುಕೊಂಡರೆ, ನಿಮ್ಮ ಶತ್ರುವನ್ನು ಜಯಿಸುವ ನಿಮ್ಮ ಬಲವನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಶತ್ರುವನ್ನು ಜಯಿಸುವ ಬಲವನ್ನು ನೀವು ಕಳೆದುಕೊಂಡರೆ, ನೀವು ಸೋತವರೇ.
" ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅಬ್ರಹಾಮನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥನೆಂದು ಪೂರ್ಣದೃಢತೆಯುಳ್ಳವನಾದನು."(ರೋಮನ್ನರು 4;20)ಎಂದು ಸತ್ಯವೇದ ಹೇಳುತ್ತದೆ.
ದೇವರನ್ನು ಸ್ತುತಿಸುವಂತದ್ದು ನಿಮ್ಮ ಪರಿಸರವನ್ನೇ ಬದಲಾಯಿಸುತ್ತದೆ.
ಮಣ್ಣು, ಕಲ್ಲು ಮತ್ತು ಸಿಮೆಂಟ್ ಮತ್ತು ಭಾಗಶಃ ನಿರ್ಮಿಸಿದ ಕಟ್ಟಡದ ನಿರ್ಮಾಣ ಹಂತವನ್ನು ಕಲ್ಪಿಸಿಕೊಳ್ಳಿ ಮತ್ತು ಅದರ ಮಧ್ಯದಲ್ಲಿ ಜನರು ದೇವರನ್ನು ಹರ್ಷೋದ್ಗಾರ ಮಾಡಿತ್ತಿರುವುದನ್ನು ಕಲ್ಪಿಸಿಕೊಳ್ಳಿ . ನೀವು ದೇವರನ್ನು ಸ್ತುತಿಸುವಾಗ, ನಿಮ್ಮ ಸಮಸ್ಯೆಗಳು ಬದಲಾಗುವುದಿಲ್ಲ, ಆದರೂ ನಿಮ್ಮ ದೃಷ್ಟಿಕೋನವು ಖಂಡಿತವಾಗಿಯೂ ಬದಲಾಗುತ್ತದೆ. ಸರಳವಾಗಿ ಹೇಳುವುದಾದರೆ, ನೀವು ಆರಂಭಿಕ ಹಂತಗಳಲ್ಲಿಯೇ ದೇವರನ್ನು ಸ್ತುತಿಸಿದಾಗ, ನೀವು ಉತ್ತಮವಾಗಿ ಕೆಲಸ ಮಾಡಲಾರಾಂಭಿಸುತ್ತೀರಿ, ಮತ್ತು ಕೆಲಸವು ತ್ವರಿತವಾಗಿ ಮತ್ತು ವೇಗವಾಗಿ ಪೂರೈಸಲ್ಪಡುತ್ತದೆ. ಅದು ನಿಮ್ಮ ನಂಬಿಕೆಯನ್ನು ಕಟ್ಟುತ್ತದೆ ಮತ್ತು ನೀವು ಮಾಡುತ್ತಿರುವ ಕೆಲಸದಲ್ಲಿ ದೇವರು ನಿಮ್ಮೊಂದಿಗೆ ಇದ್ದಾನೆ ಎಂಬ ಅರಿವುಮೂಡಿಸುತ್ತದೆ.
ಪ್ರಾರ್ಥನೆಗಳು
ಯೆಹೋವ ದೇವರೇ ನಿನ್ನ ಮಹಾ ಪ್ರೀತಿಯನ್ನು ಯುಗಯುಗಕ್ಕೂ ಹಾಡುವೆನು. ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯನ್ನು ನನ್ನ ಬಾಯಿ ತಿಳಿಯಪಡಿಸುವುದು.
Join our WhatsApp Channel
Most Read
● ಆಟ ಬದಲಿಸುವವ● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ಸ್ಥಿರತೆಯಲ್ಲಿರುವ ಶಕ್ತಿ
● ಮೂರು ಆಯಾಮಗಳು
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಒಳಕೋಣೆ
ಅನಿಸಿಕೆಗಳು