ಅನುದಿನದ ಮನ್ನಾ
ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Wednesday, 27th of November 2024
4
1
103
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನನ್ನ ದುಡಿಮೆಯು ವ್ಯರ್ಥವಾಗುವುದಿಲ್ಲ.
"ಶ್ರಮೆಯಿಂದ ಸಮೃದ್ಧಿ; ಹರಟೆಯಿಂದ ಕೊರತೆ. (ಜ್ಞಾನೋಕ್ತಿ 14:23)
ಫಲಪ್ರದವಾಗಿರಬೇಕೆಂಬುದು ಒಂದು ಆಜ್ಞೆಯಾಗಿದೆ.ಅದು ದೇವರು ಮನುಷ್ಯನನ್ನು ಸೃಷ್ಟಿಸಿದ ನಂತರ ಅವನಿಗೆ ನೀಡಿದ ಪ್ರಮುಖ ಆಜ್ಞೆಗಳ ಭಾಗವಾಗಿತ್ತು. ಲಾಭರಹಿತ ದುಡಿಮೆ ಎಂದರೆ ಅದು ನಿಮ್ಮ ಜೀವನದಲ್ಲಿ ಶತ್ರುವು ಕೆಲಸ ಮಾಡುತ್ತಿದ್ದಾನೆ ಎಂಬುದರ ಸಂಕೇತವಾಗಿದೆ. ಈ ಶಕ್ತಿಗಳಿಂದ ಜನರು ದಾಳಿಗೊಳಗಾದಾಗ, ಅವರು ತಮ್ಮ ದುಡಿದದ್ದನ್ನು ತೋರಿಸಲು ಏನೂ ಇರುವುದಿಲ್ಲ. ಕೆಲವೊಮ್ಮೆ, ಈ ಶಕ್ತಿಗಳು ಜನರಿಗೆ ಕೆಲಸ ಮಾಡಲು ಮತ್ತು ಕೆಲವು ಫಲಿತಾಂಶಗಳನ್ನು ಪಡೆಯಲು ಅವಕಾಶ ನೀಡಬಹುದು, ಆದರೆ ರಾತ್ರೋರಾತ್ರಿ, ಅವರು ಅಷ್ಟು ವರ್ಷಗಳ ಎಲ್ಲಾ ಶ್ರಮವನ್ನು ಅಳಿಸಿಹಾಕುವ ತೊಂದರೆ ಮತ್ತು ನಷ್ಟ ಉಂಟು ಮಾಡುವವನಾಗಿರುತ್ತಾನೆ. ಇಂದು ಅನೇಕ ವಿಶ್ವಾಸಿಗಳು ವ್ಯರ್ಥವಾಗಿ ಶ್ರಮಿಸುತ್ತಿದ್ದಾರೆ; ಅವರು ಸೈತಾನನ ಕಾರ್ಯಾಚರಣೆಯ ಬಗ್ಗೆ ತಿಳಿದಿಲ್ಲ. ಈ ವಿಶ್ವಾಸಿಗಳು ಪ್ರತಿಭಾನ್ವಿತರಾಗಿದ್ದಾರೆ ಆದರೆ ಉನ್ನತೀಕರಿಸಲ್ಪಡುವುದಿಲ್ಲ ; ಅವರು ಅರ್ಹತೆಗಳನ್ನು ಹೊಂದಿದ್ದಾರೆ ಆದರೆ ಉದ್ಯೋಗವಿಲ್ಲದವರಾಗಿದ್ದಾರೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದಾರೆ ಆದರೆ ಹಣವಿಲ್ಲದವರಾಗಿದ್ದಾರೆ. ಅವರಲ್ಲಿ ಕೆಲವರು ಬಹು ಕಠಿಣ ವಾಗಿ ದುಡಿಯುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಕೆಲಸ ಮಾಡುತ್ತಾರೆ ಆದರೂ ಇನ್ನೂ ಸಾಲದಲ್ಲಿ ಬದುಕುತ್ತಿದ್ದಾರೆ.
ಕೆಲವು ವಿಶ್ವಾಸಿಗಳು ತಮ್ಮ ವ್ಯವಹಾರಗಳಲ್ಲಿ ಈಗಾಗಲೇ ಯಶಸ್ವಿಯಾಗಿದ್ದಾರೆ, ಆದ್ದರಿಂದ ಅವರು ಈ ರೀತಿಯ ಪ್ರಾರ್ಥನೆಗಳನ್ನು ಪ್ರಾರ್ಥಿಸಬೇಕೆಂದು ಅವರು ಭಾವಿಸುವುದಿಲ್ಲ. ಯಶಸ್ವಿಯಾಗಿ ಎಲ್ಲವೂ ನಡೆಯುವಾಗ ಸೈತಾನನು ಮಾಡಬಹುದಾದ ದಾಳಿಗೆ ಮೊದಲೇ ಬೇಲಿ ಹಾಕುವ ಪ್ರಾರ್ಥನೆ ಮಾಡುವುದು ಉತ್ತಮ ಎಂದು ಅವರು ತಿಳಿದಿರುವುದಿಲ್ಲ. ನಾವು ಸ್ವಲ್ಪ ನಿರ್ಲಕ್ಷ್ಯ ವಹಿಸಿದರರೂ ಸಾಕು ಸೈತಾನನು ಯಾವುದೇ ಸಮಯದಲ್ಲಿ ಆಕ್ರಮಣ ಮಾಡಬಹುದು, ಇಂದಿರುವ ಯಶಸ್ಸನ್ನು ನಾಳೆ ಕಳೆದುಕೊಳ್ಳಬಹುದು. ಉದಾಹರಣೆಗೆ, ಯೋಬನನ್ನು ತೆಗೆದುಕೊಳ್ಳಿ. ಯೋಬನು ಎಲ್ಲವನ್ನೂ ಹೊಂದಿದ್ದವನೂ, ಈಗಾಗಲೇ ಯಶಸ್ವಿಯಾಗಿ ವಿಸ್ತಾರವಾಗಿ ಹಬ್ಬಿಕೊಂಡವನೂ ಆಗಿದ್ದನು. ಆದರೆ ಸೈತಾನನು ಅವನ ಮೇಲೆ ದಾಳಿ ಮಾಡಿದಾಗ, ಅವನು ಒಂದೇ ದಿನದಲ್ಲಿ ಎಲ್ಲವನ್ನೂ ಕಳೆದುಕೊಂಡನು. ದೇವರು ಅವನೊಂದಿಗಿಲ್ಲದಿದ್ದರೆ ಯೋಬನು ಪುನಃಸ್ಥಾಪನೆಯಾಗಲಾಗುತ್ತಿರಲಿಲ್ಲ.
ಜನರ ಕೆಲಸ ವ್ಯರ್ಥವಾಗಲು ಕೆಲವು ಪ್ರಮುಖ ಕಾರಣಗಳು
1. ದಾಸತ್ವ
ಇಸ್ರಾಯೆಲ್ಯರು ದಾಸತ್ವದಲ್ಲಿದ್ದರು ಅವರ ಎಲ್ಲಾ ಕಷ್ಟರ್ಜಿತವು ವ್ಯರ್ಥವಾಗುತಿತ್ತು.
"ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ. ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು."
"ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು. [14] ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು."(ವಿಮೋ 1:9-11,13-14)
2.ದುಷ್ಟರ ದುಷ್ಟತನ.
"ಇಸ್ರಾಯೇಲರು ತಿರುಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದ್ದರಿಂದ ಆತನು ಅವರನ್ನು ಏಳು ವರ್ಷಗಳ ಕಾಲ ಮಿದ್ಯಾನ್ಯರ ಕೈಗೆ ಒಪ್ಪಿಸಿದನು. ಮಿದ್ಯಾನ್ಯರ ಹಸ್ತವು ಬಲಗೊಂಡಿದ್ದರಿಂದ ಇಸ್ರಾಯೇಲರು ಅವರಿಗೆ ಹೆದರಿ ಪರ್ವತಗಳಲ್ಲಿ ಗುಹೆಗಳನ್ನು, ಕಂದರಗಳನ್ನು ಮಾಡಿಕೊಂಡು ಅದರಲ್ಲಿ ವಾಸಿಸುತ್ತಿದ್ದರು. ಇವರು ಬಿತ್ತನೆಮಾಡಿದಾಗಲೆಲ್ಲಾ ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣ ದೇಶದವರೂ ಇವರಿಗೆ ವಿರೋಧವಾಗಿ ದಂಡೆತ್ತಿ ಬಂದು ಇಳಿದುಕೊಳ್ಳುತ್ತಿದ್ದರು. ಅವರು ಗಾಜಾ ಪ್ರಾಂತ್ಯದವರೆಗಿದ್ದ ಎಲ್ಲಾ ಭೂಮಿಯ ಹುಟ್ಟುವಳಿಯನ್ನು ಹಾಳುಮಾಡಿಬಿಡುತ್ತಿದ್ದುದರಿಂದ ಇವರಿಗೆ ದವಸಧಾನ್ಯವಾಗಲಿ, ಕುರಿ, ದನ, ಕತ್ತೆಗಳಾಗಲಿ ಉಳಿಯಲೇ ಇಲ್ಲ. ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಹಿತವಾಗಿ ಮಿಡತೆಗಳಂತೆ ಗುಂಪುಗುಂಪಾಗಿ ಬರುತ್ತಿದ್ದರು. ಅವರೂ ಅವರ ಒಂಟೆಗಳೂ ಅಸಂಖ್ಯವಾಗಿದ್ದವು. ಆ ಗುಂಪೆಲ್ಲಾ ಬಂದು ದೇಶವನ್ನು ಹಾಳುಮಾಡುತ್ತಿತ್ತು. ಇಸ್ರಾಯೇಲರು ಮಿದ್ಯಾನ್ಯರ ದೆಸೆಯಿಂದ ಬಹಳವಾಗಿ ಕುಗ್ಗಿಹೋಗಿ ಯೆಹೋವನಿಗೆ ಮೊರೆಯಿಟ್ಟರು."(ನ್ಯಾಯ 6:1-6)
ಕೆಲವೊಮ್ಮೆ, ಸೈತಾನನು ಜನರು ತಮ್ಮ ಯೌವ್ವನ ಸಮಯದಲ್ಲಿ ಯಶಸ್ವಿಯಾಗಲು ಅನುಮತಿಸಬಹುದು ಆದರೆ ವೃದ್ಧಾಪ್ಯದಲ್ಲಿ, ಅವರು ಅವನನ್ನು ಅನಾರೋಗ್ಯದಿಂದ ಬಾದಿಸ ಮಾಡಿ ಅವನ ಆರ್ಥಿಕತೆಯನ್ನು ಬರಿದಾಗುವಂತೆ ಮಾಡಬಹುದು. ಕೆಲವೊಮ್ಮೆ, ವಿದ್ಯಾಭ್ಯಾಸ ಮುಗಿಸಿದ ಮಕ್ಕಳನ್ನು ಸಾಯುವಂತೆ ಮಾಡಿ ಆ ಮಗುವಿನ ಮೇಲೆ ಪೋಷಕರು ಮಾಡಿದ ಎಲ್ಲಾಹೂಡಿಕೆಯು ವ್ಯರ್ಥವಾಗುವಂತೆ ಮಾಡಬಹುದು. ಅವನು ಹೀಗೆ ನಿಮ್ಮನ್ನು ತಡೆಯುವ ಮೊದಲು ಅವನನ್ನು ನೀವೇ ನಿಲ್ಲಿಸಿ; ಅವನು ನಿಮ್ಮೊಂದಿಗೆ ಹೋರಾಡುವ ಮೊದಲು ನೀವೇ ಅವನೊಂದಿಗೆ ಹೋರಾಡಿ. ನಿಮ್ಮ ಶತ್ರು ರಕ್ತ ಮಾಂಸದಿಂದ ಕೂಡಿದವನಲ್ಲ , ನಿಮ್ಮ ಶತ್ರು ಸೈತಾನ ನಾಗಿದ್ದಾನೆ. ಆದರೆ ಅವನು ನಿಮ್ಮ ವಿರುದ್ಧ ಜನರನ್ನು ಎತ್ತಿ ಕಟ್ಟಬಹುದು ನಿಮಗೆ ವಿರುದ್ಧವಾಗಿ ಬಳಸಬಹುದು. ಆ ಜನರು ನಿಮ್ಮ ನಿಜವಾದ ಶತ್ರುಗಳಲ್ಲ, ಆದರೆ ಅವರು ಆ ಸೈತಾನನ ಪ್ರಭಾವಕ್ಕೆ ಒಳಗಾಗಿರುತ್ತಾರೆ ಅಷ್ಟೇ. ಆತ್ಮೀಕ ಶತ್ರುವನ್ನು ಪ್ರತಿಬಂದಿಸಲು ನೀವು ಪ್ರಾರ್ಥಿಸುವಾಗ , ಮಾನವ ಪಾತ್ರಗಳ ಮೇಲಿನ ಅವನ ಪ್ರಭಾವವೂ ನಿಲ್ಲುತ್ತದೆ.
3. ಪಾಪಮಯ ಜೀವನಶೈಲಿ
ಪಾಪವು ಸೈತಾನನಿಗೆ ನಿಯಮಾತ್ಮಕ ಅನುಮತಿಯನ್ನು ನೀಡುತ್ತದೆ.
"ನಿಮ್ಮ ಅಪರಾಧಗಳು ಇವುಗಳನ್ನು ತಪ್ಪಿಸಿಬಿಟ್ಟಿವೆ, ನಿಮ್ಮ ಪಾಪಗಳು ನಿಮಗೆ ಮೇಲನ್ನು ತಡೆದಿವೆ."(ಯೆರೆಮೀಯ 5:25)
ಲಾಭರಹಿತ ಶ್ರಮವನ್ನು ಅನುಭವಿಸಿದಂತ ಕೆಲವು ಸತ್ಯವೇದದ ಉದಾಹರಣೆಗಳು
- ಮರೆಯಲ್ಪಟ್ಟ ಜ್ಞಾನಿ
ಪ್ರಸಂಗಿ 9:15 ರಲ್ಲಿ, ಒಬ್ಬ ಬಡ ಜ್ಞಾನಿಯು ಇಡೀ ಪಟ್ಟಣವನ್ನು ವಿನಾಶದಿಂದ ರಕ್ಷಿಸಿದನು, ಆದರೆ ಜನರು ಅವನನ್ನು ಮರೆತುಬಿಟ್ಟರು. ಅವna ಶ್ರಮಕ್ಕೆ ಪ್ರತಿಫಲ ಸಿಗಲಿಲ್ಲ. ಈ ಮನುಷ್ಯನು ಜ್ಞಾನಿಯಾಗಿದ್ದನು , ಆದರೆ ಅವನು ಬಡವನಾಗಿದ್ದನು. ಅವನು ಜನರಿಗೆ ಸಹಾಯ ಮಾಡಿದಾಗ, ಜನರೂ ಅವನನ್ನು ಮರೆತುಬಿಡುತ್ತಾರೆ. ಜ್ಞಾನವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು, ಆದರೆ ಜನರನ್ನು ವ್ಯರ್ಥವಾಗಿ ದುಡಿಸಿಕೊಳ್ಳುವಂತೆ ಮಾಡುವ ಈ ಮನೋಭಾವದೊಂದಿಗೆ ನೀವು ವ್ಯವಹರಿಸಿದ್ದರೆ, ನೀವು "ಬಡ ಜ್ಞಾನಿಯೇ " ಆಗುತ್ತೀರಿ.
- ಯಾಕೋಬ
ಯಾಕೋಬನು ಅನೇಕ ಬಾರಿ ವಂಚನೆಗೆ ಒಳಗಾಗಿ ಅವನ ದುಡಿಮೆಗೆ ಪೂರ್ಣ ಪ್ರತಿಫಲವನ್ನು ಹೊಂದಿಕೊಂಡಿರಲಿಲ್ಲ. ಅವನ ಜೀವನದ ಮೇಲೆ ಅವನು ದೇವರೊಂದಿಗೆ ಮಾಡಿಕೊಂಡ ಒಡಂಬಡಿಕೆಯೇ ಅವನನ್ನು ಉಳಿಸಿದ್ದು .
"ನಾನು ಇಪ್ಪತ್ತು ವರುಷ ನಿನ್ನ ಬಳಿಯಲ್ಲಿದ್ದೆನಲ್ಲಾ. ನಿನ್ನ ಆಡುಕುರಿಗಳು ಕಂದು ಹಾಕಲಿಲ್ಲ; ನಿನ್ನ ಹಿಂಡಿನ ಟಗರುಗಳನ್ನು ನಾನೇನೂ ತಿಂದುಬಿಡಲಿಲ್ಲ; 39 ಕಾಡುಮೃಗಗಳು ಕೊಂದ ಪಶುಗಳನ್ನು ನಿನ್ನ ಭಾಗಕ್ಕೆ ಹಾಕದೆ ನಾನೇ ಬದಲುಕೊಟ್ಟೆನು; ಹಗಲಾಗಲಿ ಇರುಳಾಗಲಿ ಕದ್ದುಹೋದದ್ದರ ಲೆಕ್ಕವನ್ನು ನನ್ನಿಂದಲೇ ತೆಗೆದುಕೊಂಡಿ; 41ಇಪ್ಪತ್ತು ವರುಷ ನಿನ್ನ ಮನೆಯಲ್ಲಿದ್ದೆನು; ನಿನ್ನಿಬ್ಬರ ಹೆಣ್ಣುಮಕ್ಕಳಿಗಾಗಿ ಹದಿನಾಲ್ಕು ವರುಷವೂ ನಿನ್ನ ಆಡುಕುರಿಗಳಿಗಾಗಿ ಆರು ವರುಷವೂ ಸೇವೆ ಮಾಡಿದೆನು. ನೀನು ಹತ್ತು ಸಾರಿ ನನ್ನ ಸಂಬಳವನ್ನು ಬದಲಾಯಿಸಿದಿ.42ನನ್ನ ಹಿರಿಯರ ದೇವರು, ಅಂದರೆ ಅಬ್ರಹಾಮನ ದೇವರೂ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ಆಗಿರುವಾತನು, ನನ್ನ ಪಕ್ಷದಲ್ಲಿ ಇರದಿದ್ದರೆ ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಾಗಿ ಕಳುಹಿಸುತ್ತಿದ್ದಿ. ದೇವರು ನನ್ನ ಕಷ್ಟವನ್ನೂ ನಾನು ಪಟ್ಟ ಪ್ರಯಾಸವನ್ನೂ ನೋಡಿದ್ದರಿಂದಲೇ ನಿನ್ನೆಯ ರಾತ್ರಿ ನಿನ್ನನ್ನು ಗದರಿಸಿದನು ಅಂದನು. (ಆದಿಕಾಂಡ 31:38-42)
ನಮ್ಮ ಸಮಾಜದಲ್ಲಿ ಅನೇಕ ಜನರು ಲಾಬಾನನಂತಿದ್ದಾರೆ; ಅಂಥವರು ಜನರಿಗೆ ಮೋಸ ಮಾಡುವವರಾಗಿ ಜನರಿಗೆ ಬರಬೇಕಾದ ಸಂಪೂರ್ಣ ಆಶೀರ್ವಾದವನ್ನು ತಪ್ಪಿಸುವವರಾಗಿದ್ದಾರೆ. ನೀವು ಪ್ರಾರ್ಥಿಸಲು ಸಾಧ್ಯವಾದಾಗ ದೇವರು ನಿಮಗೆ ಇಂತವರ ಮೇಲೆ ಸಂಪೂರ್ಣ ಸ್ವಾಧೀನವನ್ನು ನೀಡಲು ಮುಂದಾಗಬಹುದು.
ಹೆಚ್ಚಿನ ಅಧ್ಯಯನ: ಲೂಕ 5:5-7, ಯೆಶಾಯ 65:21-23, 1 ಕೊರಿಂಥ15:10
Bible Reading Plan : Mark 1-6
ಪ್ರಾರ್ಥನೆಗಳು
1) ನನ್ನ ಜೀವನದ ಸುಗ್ಗಿಯ ಸಮಯವನ್ನು ನಾಶಮಾಡಲು ನಿಯೋಜಿಸಲಾದ ಪ್ರತಿಯೊಂದು ಶಕ್ತಿಯನ್ನು ನಾನು ಯೇಸುವಿನ ಹೆಸರಿನಲ್ಲಿ ಚದುರಿಸಿ ಬಿಡುತ್ತೇನೆ. (ಯೋವೇಲ 2:25, ಯೆಶಾಯ 54:17)
2. ನನ್ನ ಕೈಗಳ ಕೆಲಸಗಳ ವಿರುದ್ಧ ಕೆಲಸ ಮಾಡುವ ಯಾವುದೇ ದುಷ್ಟ ಶಕ್ತಿಯನ್ನು ಯೇಸುವಿನ ಹೆಸರಿನಲ್ಲಿ ನಾನು ನಾಶಪಡಿಸುತ್ತೇನೆ. (ಧರ್ಮೋಪದೇಶಕಾಂಡ 28:12, ಕೀರ್ತನೆ 90:17)
3. ನನ್ನ ಜೀವನದಲ್ಲಿ ಒಳ್ಳೆಯ ವಿಷಯಗಳ ಮೇಲೆ ಆಕ್ರಮಣ ಮಾಡುವ ಯಾವುದೇ ಶಕ್ತಿಯನ್ನು ನಾನು ದೇವರ ಅಭಿಷೇಕ ಮತ್ತು ಯೇಸುವಿನ ರಕ್ತದ ಮೂಲಕ , ಯೇಸುವಿನ ಹೆಸರಿನಲ್ಲಿ ನಾಶಪಡಿಸುತ್ತೇನೆ. (ಯೆಶಾಯ 10:27, ಪ್ರಕಟನೆ 12:11)
4. ನನ್ನ ಆರೋಗ್ಯ, ವ್ಯಾಪಾರ ಮತ್ತು ಕುಟುಂಬದ ಮೇಲೆ ಧಾಳಿ ಮಾಡುವ ಕಬಳಿಸುವ, ದರೋಡೆಕೋರರು ಮತ್ತು ವಿನಾಶಕರನ್ನು ನಾನು ಯೇಸುವಿನ ಹೆಸರಿನಲ್ಲಿ ಖಂಡಿಸುತ್ತೇನೆ. (ಮಲಾಕಿ 3:11, ಯೋಹಾನ 10:10)
5. ನನ್ನ ಶ್ರಮವನ್ನು ವ್ಯರ್ಥ ಮಾಡಲು ನಿಯೋಜಿಸಲಾದ ಯಾವುದೇ ಅಧಿಕಾರವನ್ನು ನಾನು ಯೇಸುವಿನ ಹೆಸರಿನಲ್ಲಿ ನಿಷೇಧಿಸುತ್ತೇನೆ. (ಯೆಶಾಯ 65:23, ಕೀರ್ತನೆ 127:1)
6. ತಂದೆಯೇ, ನನ್ನ ಕೈಗಳ ಕೆಲಸವನ್ನು ಆಶೀರ್ವದಿಸಿ ಮತ್ತು ಯೇಸುವಿನ ಹೆಸರಿನಲ್ಲಿ 100 ಪಟ್ಟು ಸುಗ್ಗಿಯನ್ನು ಉತ್ಪಾದಿಸುವಂತೆ ಮಾಡಿ. (ಆದಿಕಾಂಡ 26:12, ಧರ್ಮೋಪದೇಶಕಾಂಡ 28:8)
7. ಸೈತಾನನು ಕದ್ದ ನನ್ನ ಪ್ರತಿಯೊಂದು ಆಶೀರ್ವಾದ, ಸದ್ಗುಣ, ಅವಕಾಶಗಳು ಮತ್ತು ಸಂಪತ್ತನ್ನು ಯೇಸುವಿನ ಹೆಸರಿನಲ್ಲಿ ಪುನಃಸ್ಥಾಪಿಸಿಕೊಳ್ಳುತ್ತೇನೆ . (1 ಸಮುವೇಲ 30:18-19, ಯೋವೇಲ 2:25)
8. ನನ್ನ ಅಸ್ಥಿವಾರದಲ್ಲಿ ನೆಡಲಾಗಿರುವ ಯಾವುದೇ ದುಷ್ಟನ ಕ್ರಿಯೆಗಳನ್ನು ಯೇಸುವಿನ ರಕ್ತದಿಂದ ನಾನು ಯೇಸುವಿನ ಹೆಸರಿನಲ್ಲಿ ನಿಲ್ಲಿಸುತ್ತೇನೆ ಮತ್ತು ನಿರ್ಬಂಧಿಸುತ್ತೇನೆ. (ಕೊಲೊಸ್ಸೆ 2:14, ಇಬ್ರಿಯ 12:24)
9. ನನ್ನ ಪರಲೋಕದ ತಂದೆಯು ನನ್ನ ಜೀವನದಲ್ಲಿ ನೆಡದ ಯಾವುದೇ ತೋಟವನ್ನು ಯೇಸುವಿನ ಹೆಸರಿನಲ್ಲಿ ಕಿತ್ತುಹಾಕಲ್ಪಡಲಿ (ಮತ್ತಾಯ 15:13, ಯೆರೆಮಿಯಾ 1:10)
10. ನನ್ನ ಜೀವನದ ಆಸ್ತಿವಾರಗಳಲ್ಲಿ ನಿಯೋಜಿಸಲಾದ ಯಾವುದೇ ಶಾಪ ಮತ್ತು ವೈಫಲ್ಯವನ್ನು ನಾನು ಯೇಸುವಿನ ಹೆಸರಿನಲ್ಲಿ ನಾಶಪಡಿಸುತ್ತೇನೆ. (ಗಲಾತ್ಯ 3:13, ಪ್ರಲಾಪಗಳು 5:7)
Join our WhatsApp Channel
Most Read
● ಹೋಲಿಕೆಯ ಬಲೆ● ಪ್ರಾರ್ಥನಾ ಹೀನತೆ ಎಂಬ ಪಾಪ
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
ಅನಿಸಿಕೆಗಳು