ಅನುದಿನದ ಮನ್ನಾ
ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Friday, 20th of December 2024
2
0
42
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಇದು ನಾನು ಗುರುತಿಸಲ್ಪಡುವ ಮತ್ತು ಪ್ರತಿಫಲ ಹೊಂದುವ ಕಾಲ
"ನಿಮ್ಮ ಕೈಗಳು ಜೋಲು ಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು ಎಂದು ಹೇಳಿದನು".(2 ಪೂರ್ವಕಾಲವೃತ್ತಾಂತ 15:7)
ಯೇಸುನಾಮದಲ್ಲಿ ನಿಮಗೆ ಈ ವರ್ಷದಲ್ಲಿಯೇ ಪ್ರತಿಫಲವು ಸಿಕ್ಕಬೇಕೆಂಬುದೇ ನಿಮಗಾಗಿ ನಾನು ಮಾಡುವ ಪ್ರಾರ್ಥನೆಯಾಗಿದೆ.
ಎಷ್ಟೇ ಕಷ್ಟಪಟ್ಟರು ಪ್ರತಿಫಲ ದೊರಕದೆ ಹೋಗುವ ಸಾಧ್ಯತೆಯಂತೂ ಇದೆ. ಯಾಕೋಬನು ತನ್ನ ಸೋದರ ಮಾವನಾದ ಲಾಬಾನನ ಮನೆಯಲ್ಲಿದ್ದಾಗ ಇದನ್ನು ಅನುಭವಿಸಿದ್ದನ್ನು ನಾವು ನೋಡಿದ್ದೇವೆ. ಯಾಕೋಬನು ಅನೇಕ ವರ್ಷಗಳ ಕಾಲ ಒಂದೇ ಸಮನೆ ದುಡಿದನು. ಆದರೆ ಅದಕ್ಕೆ ಪ್ರತಿಫಲವೇನೂ ಸಿಕ್ಕಲಿಲ್ಲ ದೇವರು ಯಾಕೋಬನನ್ನು ಸಂಧಿಸಿದಾಗ ಕಥೆಯೆಲ್ಲ ಬದಲಾಗಿ ಹೋಯಿತು ಲಾಬಾನನ ಸಂಪತ್ತೆಲ್ಲಾ ದೈವೀಕವಾಗಿ ಯಾಕೋಬನದಾಗಿ ಪರಿವರ್ತನೆಯಾಯಿತು.(ಆದಿಕಾಂಡ 31:38-42)
ಯಾಕೋಬನು ಒಡಂಬಡಿಕೆಯ ಮಗುವಾಗಿಯೂ ಲಾಬಾನನು ಈ ಲೋಕದ ವ್ಯವಸ್ಥೆಯಾಗಿಯೂ ಪ್ರತಿನಿಧಿಸುತ್ತಾರೆ. ನಾವು ಈ ಲೋಕದಲ್ಲಿ ವಿಶ್ವಾಸಿಗಳಾಗಿ ಅಸ್ತಿತ್ವದಲ್ಲಿದ್ದೇವೆ ಆದರೆ ನಾವು ಈ ಲೋಕದವರಲ್ಲ.
ಈ ಲೋಕದ ವ್ಯವಸ್ಥೆಯು ಲಾಬಾನನ ಹಾಗೆ ಕಾರ್ಯ ಮಾಡುತ್ತದೆ. ಈ ಲೋಕದಲ್ಲಿ ಅನೇಕ ಯಾಮಾರಿಸುವ ಅಳತೆಗಳನ್ನು ವ್ಯಾಪಾರದಲ್ಲಿ ಬಳಸಲಾಗುತ್ತಿದೆ ಮಾರುಕಟ್ಟೆಯಲ್ಲಿಯೂ ಎಲ್ಲಿಯೂ ನೋಡಿದರು ಅಲ್ಲೆಲ್ಲ ಯಾಮರಿಸುವಿಕೆಯೇ. ಆದರೆ ದೇವರ ಮಕ್ಕಳಾಗಿ ದೇವರು ಈ ವಿಚಾರಕ್ಕೆ ಮಧ್ಯಪ್ರವೇಶಿಸಬೇಕೆಂದು ನಾವು ಪ್ರಾರ್ಥಿಸಬೇಕು. ಆಗ ನಮಗಾಗಿ ಬರಬೇಕಾದ ಪ್ರತಿಫಲವು ಚಿಲ್ಲರೆ ಆಗುವುದಿಲ್ಲ. ದೇವರು ಮಧ್ಯ ಪ್ರವೇಶಿಸಿದರೇನೇ,ನಾವು ನಮಗೆ ಬರಬೇಕಾದ ಪೂರ್ಣ ಪ್ರಮಾಣದ ಪ್ರತಿಫಲವನ್ನು ಪಡೆದುಕೊಂಡು ಅನುಭವಿಸಲು ಸಾಧ್ಯವಾಗುತ್ತದೆ.
2 ಪೂರ್ವ ಕಾಲ ವೃತ್ತಾಂತ 15:7 ಹೇಳುತ್ತದೆ "ನಿನ್ನ ಕಾರ್ಯಕ್ಕೆ ಪ್ರತಿಫಲ ತಪ್ಪದು" ಎಂದು. ಪ್ರತಿಯೊಂದು ಕಾರ್ಯಕ್ಕೂ ಪ್ರತಿಫಲವಿದೆ ಮತ್ತು ದೇವರು ನಿಮ್ಮ ಕೆಲಸಕ್ಕೆ ಪ್ರತಿಫಲವನ್ನು ನೀಡುವುದಾಗಿ ಭರವಸೆ ನೀಡಿದ್ದಾನೆ. ನೀವು ಐದು ವರ್ಷದಿಂದ ಕೆಲಸ ಮಾಡುತ್ತಿದ್ದೀರಾ ಏಳು ವರ್ಷದಿಂದ ಕೆಲಸ ಮಾಡುತ್ತಿದ್ದೀರಾ ಅಥವಾ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೀರಾ ನನಗೆ ತಿಳಿಯದು. ಆದರೆ ಈ ವರ್ಷವು ಯೇಸು ನಾಮದಲ್ಲಿ ನಿಮ್ಮ ಕೆಲಸವನ್ನು ಗುರುತಿಸುವ ಅದಕ್ಕಾಗಿ ಪ್ರತಿಫಲ ಪಡೆಯುವ ವರ್ಷವಾಗಿರುತ್ತದೆ. ಯಾರೇ ಅದನ್ನು ತಿನ್ನುತ್ತಿದ್ದರೂ ದೇವರು ಅವರ ಕೈಗಳಿಂದ ಅದನ್ನು ತೆಗೆದುಕೊಂಡು ನಿಮಗೆ ಯೇಸು ನಾಮದಲ್ಲಿ ತಿರುಗಿ ಕೊಡುತ್ತಾನೆ.
ಎಸ್ತೆರಳು 6:3ರಲ್ಲಿ "ಇದಕ್ಕಾಗಿ ಮೊರ್ದಕೈಗೆ ಯಾವ ಸ್ಥಾನಮಾನಗಳು ದೊರೆತವು" ಎಂದು ಅರಸನು ಕೇಳುತ್ತಾನೆ ಯಾಕೆಂದರೆ ಮೊರ್ದಕೈ ಅರಸನ ಜೀವವನ್ನು ಉಳಿಸುವ ಸಹಾಯವನ್ನು ಮಾಡಿರುತ್ತಾನೆ. ಆದರೆ ಅವನಿಗೆ ಅದಕ್ಕಾಗಿ ಯಾವ ಪ್ರತಿಫಲವೂ ಸಿಕ್ಕಿರಲಿಲ್ಲ. ಅದು ದಾಖಲಿಸಲ್ಪಟ್ಟಿದ್ದರೂ ಅವನು ಸನ್ಮಾನಿಸಲ್ಪಡಲಿಲ್ಲ. ಆದರೆ ಸರಿಯಾದ ಸಮಯದಲ್ಲಿ ದೇವರು ಮಧ್ಯ ಪ್ರವೇಶಿಸಿದನು.ಒಂದು ದಿನ ಅರಸನು ನಿದ್ದೆ ಬರದೇ ದಾಖಲೆಗಳನ್ನೆಲ್ಲ ತರಿಸಿ ನೋಡುತ್ತಿರಲು ಮೊರ್ದಕೈ ಸನ್ಮಾನಿಸಲ್ಪಡದೇ ಇದ್ದದ್ದು ಅರಸನಿಗೆ ಕಂಡುಬಂತು.
ಇಂದು ದೇವರು ನಿಮ್ಮ ಕಡೆ ದೃಷ್ಟಿ ಹರಿಸಿದ್ದಾನೆ ಮತ್ತು ನಿಮಗೆ ಬರಬೇಕಾದ ಪ್ರತಿಫಲವನ್ನು ಕೊಡಿಸುತ್ತಾನೆ. ಈ ಕಾಲದಲ್ಲಿ ನೀವು ನಿಮಗೆ ಸಿಗಬೇಕಾದ ಪ್ರತಿಫಲವನ್ನು ಹೊಂದಿಕೊಂಡು ಆನಂದಿಸಬೇಕೆಂದು ಯೇಸು ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ. ನಮ್ಮಲ್ಲಿ ಬಹಳ ಜನರು ಸಭಾ ಸೇವೆಯಲ್ಲಿ ವ್ಯವಹಾರದಲ್ಲಿ ಸಮುದಾಯದಲ್ಲಿಹೀಗೆ ವಿವಿಧ ಸ್ಥಳಗಳಲ್ಲಿ ಬೇರೆಯವರ ಜೀವನಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ಒಂದಲ್ಲ ಒಂದು ರೀತಿಯಲ್ಲಿ ಕೆಲವರು ನಮ್ಮ ಕಷ್ಟವನ್ನು ಇನ್ನೂ ಗುರುತಿಸಿಲ್ಲ ಕೆಲವು ಜನರು ಆಶೀರ್ವದಿಸಲ್ಪಟ್ಟಾಗ ನಮಗೆ ಅದರ ಪಾಲನ್ನು ಕೊಡಲಿಲ್ಲ. ಆದರೆ ದೇವರು ತನ್ನ ಪ್ರತಿಫಲ ನೀಡುವ ವ್ಯವಸ್ಥೆಯಲ್ಲಿ ನಮಗೆ ಅದಕ್ಕಾಗಿ ಬರಬೇಕಾದ ಪ್ರತಿಫಲವನ್ನು ಕೊಟ್ಟೇ ಕೊಡುವನು. ಮತ್ತೊಂದು ದೇವರ ವಾಕ್ಯವನ್ನು ನಾನಿಲ್ಲಿ ಹೇಳಲು ಬಯಸುತ್ತೇನೆ ಪ್ರಸಂಗಿ 9:15-16 ಹೇಳುತ್ತದೆ.
"ಆಗ ಅಲ್ಲಿದ್ದವರು ತಮ್ಮಲ್ಲಿ ಒಬ್ಬ ಬಡ ಜ್ಞಾನಿಯನ್ನು ಕಂಡುಕೊಂಡರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದನು; ಆದರೆ ಆ ಬಡ ಜ್ಞಾನಿಯನ್ನು ಯಾರೂ ಸ್ಮರಿಸಲಿಲ್ಲ. [16] ನಾನು ಇದನ್ನು ನೋಡಿ, ಬಲಕ್ಕಿಂತ ಜ್ಞಾನವೇ ಶ್ರೇಷ್ಠ; ಆದರೆ ಜನರು ಬಡವನ ಜ್ಞಾನವನ್ನು ತಾತ್ಸಾರಮಾಡಿ ಅವನ ಮಾತುಗಳನ್ನು ಗಮನಿಸರು ಅಂದುಕೊಂಡೆನು." ಎಂದು.
ಹಾಗಾಗಿ ನಾನು ಹೇಳುವುದೇನೆಂದರೆ "ಬಲಕ್ಕಿಂತಲೂ ಜ್ಞಾನ ಉತ್ತಮವಾದದ್ದು".ಈ ವಾಕ್ಯದಲ್ಲಿನ ವ್ಯಕ್ತಿಯು ಜ್ಞಾನಿಯಾಗಿದ್ದಾನೆ ಆದರೆ ದರಿದ್ರನಾಗಿದ್ದಾನೆ. ಈ ವ್ಯಕ್ತಿಯು ತನ್ನ ಜ್ಞಾನದಿಂದ ಸಂಪೂರ್ಣ ಪಟ್ಟಣವನ್ನು ರಕ್ಷಿಸಿದನು. ಆದರೂ ಯಾರೂ ಈ ವ್ಯಕ್ತಿಯನ್ನು ನೆನಪಿಸಿಕೊಳ್ಳಲಿಲ್ಲ.ಸಾಮಾನ್ಯವಾಗಿ ಮನುಷ್ಯರು ಸುಲಭವಾಗಿ ಮರೆತುಬಿಡುವ ಸ್ವಭಾವದವರು. ಅದಕ್ಕಾಗಿಯೇ ಕೀರ್ತನೆಗಾರನು ಹೇಳುತ್ತಾನೆ.. " "ನನ್ನ ಮನವೇ, ಯೆಹೋವನನ್ನು ಕೊಂಡಾಡು; ಆತನ ಉಪಕಾರಗಳಲ್ಲಿ ಒಂದನ್ನೂ ಮರೆಯಬೇಡ." ಎಂದು (ಕೀರ್ತನೆಗಳು 103:2).
ಏನೇ ಆಗಲಿ ಒಳ್ಳೆಯ ವಿಚಾರಗಳನ್ನು ಬೇಗ ಮರೆತು ಬಿಡುತ್ತೇವೆ. ಬೇರೆಯವರು ನಮಗೆ ಮಾಡಿದ ಒಳ್ಳೆಯದನ್ನು ನಾವು ಬೇಗ ಮರೆತುಬಿಡುವವರಾಗಿದ್ದೇವೆ ಆದರೆ ನಮಗೆ ವಿರೋಧವಾಗಿ ಮಾಡಿದ ಕೆಟ್ಟದ್ದನ್ನು ಬಹುಕಾಲ ನೆನಪಿನಲ್ಲಿಟ್ಟುಕೊಂಡಿದ್ದೇವೆ. ಜನರು ನಿಮ್ಮನ್ನು ಮರೆತು ಹೋಗಬಹುದು.ನೀವೇನು ಮಾಡಬೇಕೆಂದರೆ ಇದಕ್ಕಾಗಿ ದೇವರು ಮಧ್ಯಪ್ರವೇಶಿಸಬೇಕೆಂದು ಪ್ರಾರ್ಥಿಸಬೇಕು. ಆಗ ನೀವು ಪಟ್ಟ ಕಷ್ಟಗಳು ವ್ಯರ್ಥವಾಗಿ ಹೋಗುವುದಿಲ್ಲ. ದೇವರು ಆ ವ್ಯಕ್ತಿಗಳಿಂದಲೋ ಇಲ್ಲವೇ ಬೇರೆ ಸ್ಥಳದಿಂದಲೋ ನಿಮಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರತಿಫಲವನ್ನು ಕೊಟ್ಟೆ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾನೆ. ನೀವು ಒಂದು ಕಡೆ ಪ್ರಯಾಸಪಟ್ಟಿರಬಹುದು ಆದರೆ ಮತ್ತೊಂದು ಕಡೆ ಅದಕ್ಕಾಗಿ ಪ್ರತಿಫಲ ಹೊಂದಬಹುದು ಹಾಗಾಗಿ ದೇವರ ಶಕ್ತಿಯನ್ನು ಮಿತ ಮಾಡಬೇಡಿರಿ.
ಈ ಎಲ್ಲಾ ನಿದರ್ಶನಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ದೇವರ ಪ್ರತಿಫಲಗಳನ್ನು ಪ್ರಕಟಿಸುವುದಕ್ಕಾಗಿಯೇ. ದೇವರು ನೀವು ಪ್ರತಿಫಲ ಹೊಂದುವ ಕಾಲವನ್ನು ನಿಮ್ಮ ಬಳಿಗೆ ಬರಮಾಡಬಲ್ಲನು. ದೇವರ ವಾಕ್ಯಗಳನ್ನು ನೀವು ಕೈಕೊಂಡು ನಡೆಯುವಾಗ ನಿಮ್ಮ ಕಷ್ಟವು ವ್ಯರ್ಥವಾಗಿ ಹೋಗುವುದಿಲ್ಲ. ಆದಿಕಾಂಡ 15:1 ರಲ್ಲಿ ದೇವರು ಅಬ್ರಹಾಮನಿಗೆ "ಅಬ್ರಹಾಮನೆ ಹೆದರಬೇಡ ನಾನೇ ನಿನಗೆ ಗುರಾಣಿಯಾಗಿದ್ದೇನೆ ನಾನೇ ನಿನಗೆ ಅತ್ಯಧಿಕವಾದ ಬಹುಮಾನ" ಎಂದು ಹೇಳಿದ್ದನ್ನು ನೋಡಿರಿ ಇಲ್ಲಿ ದೇವರು ನಾನೇ ನಿನ್ನ ಅತ್ಯಧಿಕ ಬಹುಮಾನ ಎಂದು ಹೇಳುತ್ತಾನೆ.
ಇಬ್ರಿಯ 11:6 ಹೇಳುತ್ತದೆ ದೇವರು ತನ್ನನ್ನು ಹುಡುಕುವವರಿಗೆ ಪ್ರತಿಫಲ ಕೊಡುವವನ್ನಾಗಿದ್ದಾನೆ ಎಂದು ಹಾಗಾಗಿ ದೇವರು ತನ್ನ ಮಕ್ಕಳಿಗೆ ಬಹುಮಾನ ನೀಡಬಲ್ಲನು ನಾವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರ ಎಂದು ಮಾಡದೆ ಕರ್ತನಿಗೋಸ್ಕರ ಎಂದು ಮನಪೂರ್ವಕವಾಗಿ ಮಾಡಬೇಕು. ಏಕೆಂದರೆ ಪ್ರತಿಫಲ ದೊರೆಯುವಂತದು ಕರ್ತನಿಂದ ಎಂದು ಪೌಲನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ (ಕೊಲಸ್ಸೆ 3:23-24)
ಇದು ನಿಮ್ಮ ಪ್ರತಿಫಲದ ಕಾಲ ದೇವರ ಮಧ್ಯಪ್ರವೇಶಕ್ಕಾಗಿ ನೀವು ಪ್ರಾರ್ಥಿಸಲೇಬೇಕು. ಯಾಕೋಬನಿಗೆ ಪ್ರತಿಫಲ ಅನುಗ್ರಹಿಸಿ ಆಶೀರ್ವದಿಸಿದ ದೇವರೇ ನಿಮಗೂ ಇಂದು ಪ್ರತಿಫಲ ಕೊಡುತ್ತಾನೆ. ಇಂದು ನಮ್ಮ ಈ ಪ್ರಾರ್ಥನೆಯಲ್ಲಿ ಪ್ರತಿಫಲ ಮತ್ತು ಗುರುತಿಸುವಿಕೆಯ ಕಾಲ ಎಂಬುದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸೋಣ.
ನೀವು ಮನಪೂರ್ವಕವಾಗಿ ಈ ಪ್ರಾರ್ಥನೆಯನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ದೇವರು ಈ ವರ್ಷದಲ್ಲಿಯೇ ನಿಮಗೆ ಪ್ರತಿಫಲ ಕೊಡುವನು ಎಂಬುದನ್ನು ನಾನು ನೋಡುತ್ತಿದ್ದೇನೆ ಮತ್ತು ನಿಜವಾಗಿಯೂ ನೀವು ಗುರುತಿಸಲ್ಪಟ್ಟು ದೇವರು ಕತ್ತಲಾದ ಸ್ಥಳದಿಂದ ತಿಳಿ ಬೆಳಕಿಗೆ ಯೇಸು ನಾಮದಲ್ಲಿ ನಿಮ್ಮನ್ನು ತರುವನು.
Bible Reading Plan : 2 Corinthians 10- Galatians 4
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ತಂದೆಯೇ, ಯೇಸು ನಾಮದಲ್ಲಿ ಶೀಘ್ರವಾಗಿ ನನ್ನ ಗುರುತಿಸಲ್ಪಡುವಿಕೆಯು ಮತ್ತು ಪ್ರತಿಫಲ ಪಡೆಯುವ ಕಾಲವು ಬರುವಂತೆ ನಿನ್ನ ಮಹಿಮೆ ಪ್ರಕಟವಾಗಲಿ. (ಇಬ್ರಿಯ 11:6)
2. ತಂದೆಯೇ, ಜ್ಞಾಪಕ ಪುಸ್ತಕಗಳು ನನಗಾಗಿ ತೆರೆಯಲ್ಪಟ್ಟು ಈ ಕಾಲದಲ್ಲಿಯೇ ನನ್ನನ್ನು ಆಶೀರ್ವದಿಸು. (ಮಲಾಕಿ 3:16)
3.ನನಗಾಗಿ ಸಹಾಯ ಮಾಡಲು ನೇಮಿಸಲ್ಪಟ್ಟ ಯಾರಾದರೂ ಸರಿಯೇ ಯೇಸು ನಾಮದಲ್ಲಿ ನನ್ನ ಒಳಿತಿಗಾಗಿ ನನ್ನ ಹೆಸರನ್ನು ನೆನಪಿಸಿಕೊಳ್ಳುವಂತೆ ನನ್ನ ಹೆಸರನ್ನು ಯೇಸುನಾಮದಲ್ಲಿ ಈ ವಾತಾವರಣದಲ್ಲಿ ಬಿಡುಗಡೆ ಮಾಡುತ್ತೇನೆ. ( ಎಸ್ತೆರಳು 6:1-3)
4. ಕರ್ತನೇ ನಿನ್ನ ಪರಿಶುದ್ಧ ನಿವಾಸದಿಂದ ನಿನ್ನ ಸಹಾಯವು ನನಗೆ ಒದಗಿ ಬರಲಿ. (ಕೀರ್ತನೆ 20:2).
5. ತಂದೆಯೇ ನಾನು ಪಟ್ಟ ಕಷ್ಟಗಳು ನನ್ನ ಸುಕ್ರತ್ಯಗಳು ಯೇಸು ನಾಮದಲ್ಲಿ ಜ್ಞಾಪಕಕ್ಕೆ ಬಂದು ಪ್ರತಿಫಲ ಹೊಂದುವಂತೆ ಯೇಸು ನಾಮದಲ್ಲಿ ಮಾಡು. (ಪ್ರಕಟಣೆ 14:13)
6. ಈ ಕಾಲವು ನನ್ನನ್ನು ಮೇಲ್ದರ್ಜೆಗೆ ಏರಿಸುವ ಪ್ರತಿಫಲ ಹೊಂದುವ ಸಂಭ್ರಮಾಚರಣೆ ಮಾಡುವ ಕಾಲವಾಗಿದೆ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ.(ಕೀರ್ತನೆ 75:6-7)
7. ತಂದೆಯೇ, ಉನ್ನತ ಸ್ಥಾನದಲ್ಲಿ ನನ್ನ ಪರವಾಗಿ ಒಳ್ಳೆಯದನ್ನೇ ಹೇಳುವ ಮನುಷ್ಯರನ್ನು ಮತ್ತು ಧ್ವನಿಗಳನ್ನು ಯೇಸು ನಾಮದಲ್ಲಿ ನನಗಾಗಿ ಎಬ್ಬಿಸು. (ಜ್ಞಾನೋಕ್ತಿ. 22:29).
8. ನನ್ನ ಜೀವಿತ ವೃತ್ತಿ ಸೇವೆ ಮತ್ತು ನನ್ನ ಕುಟುಂಬವನ್ನು ಗುರಿ ಮಾಡಿಕೊಂಡು ಅದಕ್ಕೆ ವಿರುದ್ಧವಾಗಿ ದೋಷಾರೋಪಣೆ ಮಾಡುವ ಎಲ್ಲಾ ಧ್ವನಿಗಳು ಯೇಸು ನಾಮದಲ್ಲಿ ನಿಶ್ಯಬ್ದವಾಗಿ ಹೋಗಲಿ. (ಯೆಶಾಯ 54:17)
9. ಎಲ್ಲಾ ಕಾರ್ಯಗಳು ನನ್ನ ಹಿತಕ್ಕಾಗಿ ಒಂದಾಗಿ ಕಾರ್ಯ ಮಾಡುತ್ತದೆ ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ. (ರೋಮ 8:28).
10. ಪೂರ್ವ ಉತ್ತರ ಪಶ್ಚಿಮ ದಕ್ಷಿಣ ದಿಕ್ಕುಗಳಿಂದ ನನ್ನ ಪ್ರತಿಫಲದ ಆಶೀರ್ವಾದದ ಕಾಲವನ್ನು ಮುಂದೆ ಬರಲೆಂದು ಯೇಸು ನಾಮದಲ್ಲಿ ಕರೆ ನೀಡುತ್ತೇನೆ.(ಧರ್ಮೋಪದೇಶಕಾಂಡ 28:12)
Join our WhatsApp Channel
Most Read
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕನಸು ಕಾಣುವ ಧೈರ್ಯ
● ಕರ್ತನ ಸೇವೆ ಮಾಡುವುದು ಎಂದರೇನು-I
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ಸರಿಪಡಿಸಿಕೊಳ್ಳಿರಿ
● ಕೃಪೆಯ ಮೇಲೆ ಕೃಪೆ
ಅನಿಸಿಕೆಗಳು