ಅನುದಿನದ ಮನ್ನಾ
ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Sunday, 22nd of December 2024
0
0
8
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಯೇಸುವಿನರಕ್ತದ ಮೂಲಕ ಜಯ.
"ನೀವು ಬಾಗಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವದಾದ ಕಾರಣ ನಾನು ಅದನ್ನು ಕಂಡು ನಿಮಗೆ ಯಾವ ನಷ್ಟವನ್ನೂ ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಐಗುಪ್ತದವರನ್ನು ಸಂಹರಿಸುವಾಗ ನಿಮಗೆ ಯಾವ ಹಾನಿಯೂ ಉಂಟಾಗುವದಿಲ್ಲ."(ವಿಮೋಚನಕಾಂಡ 12:13).
ಪಸ್ಕಹಬ್ಬದ ಕಾಲದಲ್ಲಿ ಯೇಸು ಕ್ರಿಸ್ತನ ರಕ್ತದ ರೀತಿಯಲ್ಲಿಯೇ ಪ್ರಾಣಿಗಳ ರಕ್ತವನ್ನು ಉಪಯೋಗಿಸಲಾಗುತ್ತಿತ್ತು. ಆ ರಕ್ತವು ಬರಬೇಕಾದ ಕ್ರಿಸ್ತನನ್ನು ಸೂಚಿಸುತ್ತದೆ. ಆ ರಕ್ತವನ್ನು ನೋಡಿ ನಾನು ಮುಂದೆ ಹೋಗುವೆನು ಎಂದು ದೇವರು ಇಸ್ರಾಯೆಲ್ಯಾರಿಗೆ ಹೇಳಿದ್ದನು.ಒಂದು ಸಂಹಾರದೂತನು ಇಡೀ ದೇಶವನ್ನು ಬಡಿಯುವುದರಲ್ಲಿದ್ದಾಗ ಈ ರಕ್ತದ ಮೂಲಕ ತನ್ನ ಜನರಿಗೆ ಮಾತ್ರ ವಿನಾಯಿತಿಯನ್ನು ದೇವರು ಅನುಗ್ರಹಿಸಿದ್ದನು.
ಈ ಒಂದು ಸಂಗತಿಯಿಂದ ನಾವು ಯೇಸುವಿನ ರಕ್ತದಲ್ಲಿರುವ ಬಲವೇನು ಎಂಬುದನ್ನು ಕಲಿಯಬಹುದಾಗಿದೆ. ಯೇಸುವಿನ ರಕ್ತವನ್ನುನಮ್ಮ ಮೇಲೆ ಮಾತ್ರವಲ್ಲದೆ ನಮಗೆ ಸಂಬಂಧಿಸಿದ ಪ್ರತಿಯೊಂದರ ಮೇಲೂ ಯೇಸುವಿನ ರಕ್ತವನ್ನು ಹಚ್ಚುವ ಮುಖಾಂತರ ನಮಗೆ ಜಯವಿದೆ ಇದು ನಮಗೆ ಕೆಡುಕುಗಳಿಂದ ವಿನಾಯಿತಿ ಕೊಡುತ್ತದೆ.
ಅನೇಕ ಸಮಯಗಳಲ್ಲಿ ಅನಿರೀಕ್ಷಿತ ದಾಳಿ ಉಂಟಾದಾಗ ಅವಿಶ್ವಾಸಿಗಳು ಮತ್ತು ಅನೇಕ ಶೈಶವಾವಸ್ಥೆಯಲ್ಲಿರುವಂತಹ ಕ್ರೈಸ್ತರು "ಹೋ"ಎಂದು ಕಿರುಚುತ್ತಾರೆ. ಆದರೆ ಯೇಸುವಿನ ರಕ್ತವು ನಮಗಾಗಿ ಏನು ಮಾಡಬಲ್ಲದು ಎಂಬುದನ್ನು ಅರಿತಿದ್ದರೆ ಅಂತಹ ಅನಿರೀಕ್ಷಿತ ದಾಳಿಯ ಸಮಯದಲ್ಲಿ ನೀವು ಯೇಸುವಿನ ರಕ್ತದ ಮೇಲೆಯೇ ಆತುಕೊಳ್ಳುತ್ತೀರಿ ಮತ್ತು ಯೇಸುರಕ್ತಕ್ಕೆ ಜಯವೆಂದು ಆರ್ಭಟಿಸಲು ಆರಂಭಿಸುತ್ತೀರಿ. ನೀವು ಯೇಸುವಿನ ರಕ್ತಕ್ಕೆಜಯ ಎಂದು ಕೂಗುವಾಗ ಅದು ನಿಮ್ಮನ್ನು ಅನಿರೀಕ್ಷಿತ ದಾಳಿಯಿಂದಲೂ ವ್ಯಾದಿಗಳಿಂದಲೂ ಅಪಘಾತಗಳಿಂದಲೂ ಮತ್ತು ಎಲ್ಲಾ ಕೆಡುಕುಗಳಿಂದಲೂ ರಕ್ಷಿಸಿ ಕಾಯುತ್ತದೆ
ವಿಮೋಚನ ಕಾಂಡ 24:8 ಹೀಗೆ ಹೇಳುತ್ತದೆ.
"ಆಗ ಮೋಶೆ ಆ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿವಿುಕಿಸಿ - ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲಾ ಆಜ್ಞೆಗಳ ಪ್ರಕಾರ ಯೆಹೋವನು ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತವು ಇದೇ ಅಂದನು." ಎಂದು.
ಈ ಒಡಂಬಡಿಕೆಯು ಹಳೆಯ ಒಡಂಬಡಿಕೆಗೆ ಸಂಬಂಧಿಸಿದೆ. ಆದರೆ ಇದೇ ನಿಯಮವೇ ಹೊಸ ಒಡಂಬಡಿಕೆಗೂ ಅನ್ವಯಿಸುತ್ತದೆ. ಯೇಸುಕ್ರಿಸ್ತನು ತನ್ನ ರಕ್ತವನ್ನು ಶಿಲುಬೆಯ ಮೇಲೆ ಸುರಿಸಿದಾಗ ಆ ರಕ್ತವು ಆತ್ಮಿಕ ಆಯಾಮದಲ್ಲಿ ನಮ್ಮ ಮೇಲೆ ಪ್ರೋಕ್ಷಿಸಲ್ಪಟ್ಟಿತು ನಮ್ಮನ್ನು ಶುದ್ಧೀಕರಿಸಿತು ನಮ್ಮನ್ನು ಪರಿಶುದ್ಧರನ್ನಾಗಿ ಮಾಡಿತು ನಮ್ಮನ್ನು ನೀತಿವಂತರನ್ನಾಗಿ ಮಾಡಿತು ಮತ್ತು ದೇವರ ಒಡಂಬಡಿಕೆಗೆ ಬಾದ್ಯಸ್ತರನ್ನಾಗಿ ಮಾಡಿ ಮುದ್ರೆ ಹಾಕಿತು.
ಯೇಸುವಿನ ರಕ್ತವು ಒಂದೇ ಬಾರಿ ಸುರಿಸಲ್ಪಟ್ಟು ಇಲ್ಲಿಯವರೆಗೂ ಅದು ಮಾತನಾಡುತ್ತಲೇ ಬರುತ್ತಿದೆ. ಅದು ಹೇಬೆಲನ ರಕ್ತಕ್ಕಿಂತಲೂ ಹಿತಕರವಾಗಿ ಮಾತನಾಡುವಂತದ್ದಾಗಿದೆ(ಇಬ್ರಿಯ 12:24). ಕೆಲವು ರಕ್ತವು ದ್ವೇಷವನ್ನು ಮಾತಾಡುತ್ತದೆ ಯಾರಾದರೂ ಅನ್ಯಾಯವಾಗಿ ಕೊಲ್ಲಲ್ಪಟ್ಟರೆ ಆ ರಕ್ತವು ಮಾತಾಡಬಲ್ಲದು, ಆದ್ದರಿಂದಲೇ ಹೇಬೆಲನು ಕೊಲ್ಲಲ್ಪಟ್ಟಾಗ ಅವನ ರಕ್ತವು ಭೂಮಿಯೊಳಗಿಂದ ಕೂಗುತ್ತಿತ್ತು. (ಆದಿಕಾಂಡ 4:10). ಜನರು ಅನ್ಯಾಯವಾಗಿ ಕೊಲ್ಲಲ್ಪಟ್ಟಾಗ ಅವರ ಧ್ವನಿಯು ನ್ಯಾಯ ತೀರ್ಪಿಗಾಗಿ ತಮ್ಮನ್ನು ಕೊಂದವರ ವಿರುದ್ಧ ಮತ್ತು ಅವರ ತಲೆಮಾರುಗಳ ವಿರುದ್ಧ ಕೂಗಿ ಕೊಳ್ಳುತ್ತದೆ ಆದರೆ ಯೇಸುಕ್ರಿಸ್ತನ ರಕ್ತವು ನಮಗಾಗಿ ನಮ್ಮ ಒಳಿತಿಗಾಗಿ ಹಿತಕರವಾಗಿ ಮಾತನಾಡುತ್ತದೆ ಯೇಸುಕ್ರಿಸ್ತನ ರಕ್ತವು ನಮ್ಮನ್ನು ಸಮರ್ಥಿಸಿಕೊಂಡು ಮಾತನಾಡುತ್ತದೆ ಯೇಸುವಿನ ರಕ್ತವು ನಮ್ಮನ್ನು ಶುದ್ಧೀಕರಿಸುವ ವಿಮೋಚಿಸುವ ಮಾತುಗಳನ್ನಾಡುತ್ತದೆ.
ರಕ್ತವು ಮಾತನಾಡಬಲ್ಲದು ಏಕೆಂದರೆ ರಕ್ತದಲ್ಲಿ ಜೀವವಿದೆ (ಯಾಜಕಕಾಂಡ17:11). ಯೇಸು ಕ್ರಿಸ್ತನ ಜೀವವು ಸಹ ಆತನು ಸುರಿಸಿದ ರಕ್ತದಲ್ಲಿದೆ ಆತನು ತನ್ನ ರಕ್ತವನ್ನು ಸುರಿಸುವ ಮೂಲಕ ಆತನು ನಮಗಾಗಿ ಆತನಿಗೆ ಜೀವವನ್ನು ಕೊಡುತ್ತಿದ್ದೇನೆ ಎಂಬುದನ್ನು ಈ ವಿಧದಲ್ಲಿ ತೋರಿಸಿದನು.
ಕೀರ್ತನೆ 106:38 ಹೇಳುತ್ತದೆ "ಅವರು ನಿರಪರಾಧಿಗಳ ರಕ್ತವನ್ನು ಸುರಿಸಿದ್ದಾರೆ" ಎಂದು.
ನಿರಪರಾಧಿಗಳ ರಕ್ತವನ್ನು ಸುರಿಸುವಂತಹ ದುಷ್ಟ ವ್ಯಕ್ತಿಗಳು ಈ ಲೋಕದಲ್ಲಿ ಈಗಲೂ ಇದ್ದಾರೆ ಅವರು ಕೊಲೆಗಳನ್ನು ಮಾಡಿ ಅವರ ಮರಣದಲ್ಲಿ ವಿಕೃತ ಸಂತೋಷಪಡುತ್ತಾರೆ. ಅವರು ಬಿದ್ದಾಗ ಇವರಿಗೆ ಸಂತೋಷವಾಗುತ್ತದೆ. ನೀವು ಎದ್ದು ಇವರನ್ನು ಎದುರಿಸಿ ಗೆಲ್ಲದಿದ್ದರೆ ಇವರು ನಿಮ್ಮ ಜೀವಿತವನ್ನು ನಾಶ ಮಾಡಲು ಕೂಡ ಸಿದ್ದರಾಗುತ್ತಾರೆ. "ಲೋಕವೆಲ್ಲಾ ಕೆಡುಕನ ವಶದಲ್ಲಿದೆ" ಎಂದು ದೇವರ ವಾಕ್ಯ ಹೇಳುತ್ತದೆ. (1 ಯೋಹಾನ 5:19)
ಈ ಲೋಕದಲ್ಲಿ ನಿರಪರಾಧಿಗಳ ರಕ್ತವನ್ನು ಸುರಿಸುವಂತಹ ದುಷ್ಟ ವ್ಯಕ್ತಿಗಳಿದ್ದಾರೆ ಅವರು ಆತ್ಮಿಕ ಆಯಾಮದಲ್ಲಿ ಜನರ ಮೇಲೆ ದಾಳಿ ಮಾಡುವ ದುರಾತ್ಮ ಶಕ್ತಿಗಳಾಗಿದ್ದಾರೆ. ಯೇಸುವಿನ ರಕ್ತದ ಮೂಲಕ ಈ ಎಲ್ಲಾ ದುಷ್ಟಬಲದ ಮೇಲೆ ದುಷ್ಟ ಅಧಿಕಾರಗಳ ಮೇಲೆ ನಿಮಗೆ ಜಯವಿದೆ. ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಎಲ್ಲಾ ವಿಷಯಗಳಲ್ಲಿಯೂ ಪೂರ್ಣ ಜಯಶಾಲಿಗಳಾಗಿದ್ದೇವೆ ಎಂದು ದೇವರ ವಾಕ್ಯವು ಹೇಳುತ್ತದೆ. (ರೋಮ 8:37)
"ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು."ಪ್ರಕಟನೆ 12:11 ಹೇಳುತ್ತದೆ.
ಯೇಸುವಿನ ರಕ್ತದ ಮೂಲಕ ನಮಗೆ ವಿರುದ್ಧವಾಗಿ ಬರುವ ಪ್ರತಿಯೊಂದು ಶಕ್ತಿಯನ್ನು ಹೋರಾಟವನ್ನು ನಾವು ಜಯಿಸಿದ್ದೇವೆ. ಸೈತಾನನ ಮೇಲೆ ಜಯ ಹೊಂದಲು ಯೇಸುವಿನ ರಕ್ತವೆಂಬುದು ಸಾಕಾದಂತಹ ಅಂಶವಾಗಿದೆ.
ಯೇಸುವಿನ ರಕ್ತದ ಮೂಲಕ ನಾವು ಸೈತಾನನ್ನಾಗಲೀ ಯಾವುದೇ ಪ್ರಭುತ್ವಗಳನ್ನಾಗಲಿ ಅಧಿಕಾರಗಳನ್ನಾಗಿ ಜಯಿಸಲು ಶಕ್ತರಾಗಿದ್ದೇವೆ. ಆದರೆ ಅದಕ್ಕೆ ಮುನ್ನ ನೀವು ಯೇಸುವಿನ ರಕ್ತವು ಏನೆಲ್ಲಾ ಮಾಡಬಹುದು ಎಂಬ ಅರಿವನ್ನು ಹೊಂದಿ ಕೊಳ್ಳಬೇಕು. ಮತ್ತು ಯೇಸುವಿನ ರಕ್ತದಲ್ಲಿರುವ ಅಧಿಕಾರದ ಮೇಲೆ ಭರವಸೆ ಉಳ್ಳವರಾಗಿರಬೇಕು ಇಂದು ನಾವು ಪ್ರಾರ್ಥಿಸಿ ಯೇಸುವಿನ ರಕ್ತದ ಮೂಲಕ ಜಯವನ್ನು ಹೊಂದಲು ಹೋಗುವಾಗ ನೀವು ಈ ಎಲ್ಲಾ ವಿಚಾರದ ಕುರಿತು ಪ್ರಾರ್ಥನೆಯನ್ನು ಧ್ಯಾನವನ್ನು ಮುಂದುವರಿಸಿಕೊಂಡು ಹೋಗಿ ಯೇಸುವಿನ ರಕ್ತವು ಮಾಡುವ ಕಾರ್ಯಗಳನ್ನು ಕುರಿತು ನೀವು ಅಧ್ಯಯನ ಮಾಡಬೇಕೆಂದು ನಾನು ಬಯಸುತ್ತೇನೆ. ಆಗ ಮಾತ್ರವೇ ಈ ಜಯವು ನಿಮ್ಮಲ್ಲಿ ಹಗಲು ರಾತ್ರಿ ನೆಲೆಗೊಂಡಿರುತ್ತದೆ
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ನನ್ನ ಗೌರವ ಮತ್ತು ನನ್ನ ಉನ್ನತಿಗೆ ವಿರುದ್ಧವಾಗಿ ಆತ್ಮಿಕ ಆಯಾಮದಲ್ಲಿಯೂ ಭೌತಿಕ ಆಯಾಮದಲ್ಲಿಯೂ ಕಾರ್ಯ ಮಾಡುವ ಎಲ್ಲದರ ಮೇಲೆ ಯೇಸುವಿನ ರಕ್ತದ ಮೂಲಕ ಯೇಸು ನಾಮದಲ್ಲಿ ಜಯ ಹೊಂದಿದ್ದೇನೆ. (ರೋಮ 8:37)
2. ನನಗಾಗಿ ಇಟ್ಟಿರುವ ಮಹಿಮೆಯುಳ್ಳ ಕರೆಗೆ ವಿರುದ್ಧವಾಗಿ ಹೋರಾಡುವ ಎಲ್ಲಾ ಬಲವನ್ನು ಯೇಸುಕ್ರಿಸ್ತನ ನಾಮದಲ್ಲಿ ಜಯಿಸಿದ್ದೇನೆ ಯೇಸುರಕ್ತದ ಮೂಲಕ ನಿನ್ನನ್ನು ನಾನು ಜಯಿಸುತ್ತೇನೆ. ( ಪ್ರಕಟಣೆ 12:11)
3. ನನ್ನ ತಲೆಯ ಮೇಲೆ ತೂಗುತ್ತಿರುವ ಪ್ರತಿಯೊಂದು ಮರಣಕರ ನ್ಯಾಯತೀರ್ಪನ್ನು ಯೇಸುವಿನ ರಕ್ತದ ಮೂಲಕ ನಾಶಗೊಳಿಸುತ್ತೇನೆ. (ಇಬ್ರಿಯ 12:24)
4. ನನ್ನ ಮೇಲೆ ದೋಷಾರೋಪಣೆ ಮಾಡುವ, ನನ್ನನ್ನು ಖಂಡಿಸಿ ನನ್ನ ಕರೆಗೆ ವಿರುದ್ಧವಾಗಿ ನ್ಯಾಯತೀರ್ಪಿಗೆ ಎಳೆಯುವ ಎಲ್ಲಾ ಧ್ವನಿಗಳು ಯೇಸುರಕ್ತದ ಮೂಲಕ ಯೇಸು ನಾಮದಲ್ಲಿ ನಿಶಬ್ದವಾಗಲಿ.(ಕೊಲಸ್ಸೆ 2:14)
5. ಯೇಸುವಿನ ರಕ್ತದ ಮೂಲಕ ನನಗೆ ವಿರೋಧವಾಗಿ ರೂಪಿಸಲ್ಪಟ್ಟ ಪ್ರತಿಯೊಂದು ಆಯುಧವನ್ನು ಯೇಸುನಾಮದಲ್ಲಿ ಸಫಲವಾಗದಂತೆ ನಾಶಪಡಿಸುತ್ತಿದ್ದೇನೆ.(ಯೆಶಾಯ 54:17)
6.ಯೇಸುವಿನ ರಕ್ತದ ಮೂಲಕ ಸಂಭ್ರಮಾಚರಣೆಯ ಆಯಾಮಕ್ಕೆ ನಾನು ಯೇಸುನಾಮದಲ್ಲಿ ಪ್ರವೇಶಿಸುತ್ತೇನೆ. ನನ್ನ ಸಾಕ್ಷಿಯನ್ನು ತಡೆಯಲು ಪ್ರಯತ್ನಿಸುವ ಯಾವುದೇ ಅಧಿಕಾರವಾಗಲಿ, ಯೇಸು ನಾಮದಲ್ಲಿ ಬಿದ್ದು ವ್ಯರ್ಥವಾಗಲಿ. (ಕೀರ್ತನೆ 118:15).
7. ಯೇಸುವಿನ ರಕ್ತವೇ ಯಾವುದೇ ಕೆಡುಕನ ಬಾಣಗಳು ನನಗೆ ತಾಗದಂತೆ ನನ್ನ ಪರವಾಗಿ ದಯಮಾಡಿ ಯೇಸು ಕ್ರಿಸ್ತನನಾಮದಲ್ಲಿ ಹೋರಾಡು. (ಎಫಸ್ಸೆ 6:12).
8. ನನ್ನನ್ನು ನನ್ನ ಕುಟುಂಬದಲ್ಲಿರುವ ನನ್ನ ಸಂಗಾತಿಯನ್ನು ನನ್ನ ಮಕ್ಕಳನ್ನು,ನನ್ನ ವ್ಯವಹಾರಗಳನ್ನು, ನನಗೆ ಸಂಬಂಧಿಸಿದ ಎಲ್ಲವನ್ನೂ ಮತ್ತು ನನ್ನ ಪ್ರೀತಿ ಪಾತ್ರರನ್ನು ಯೇಸುವಿನ ರಕ್ತದಲ್ಲಿ ಮರೆಮಾಚುತ್ತಿದ್ದೇನೆ. (ಕೀರ್ತನೆ 91:4)
9.ನನ್ನ ಕೇಡಿಗಾಗಿ ಬರೆದಿರುವಂತಹ ಪ್ರತಿಯೊಂದು ಅಂಧಕಾರದ ಬರಹಗಳನ್ನು ಯೇಸುವಿನ ರಕ್ತದ ಮೂಲಕ ತೊಳೆದು ಹಾಕುತ್ತಿದ್ದೇನೆ ಮತ್ತು ಅವುಗಳನ್ನು ತಿರುಗಿಸುತ್ತಿದ್ದೇನೆ. ಪ್ರತಿಯೊಂದು ಬಾಕಿ ಇರುವ ಅಂಧಕಾರದ ಕಾರ್ಯಗಳು ಯಾವುದೇ ತಿಂಗಳಲ್ಲಾದರೂ ನಡೆಯುವಂತೆ ನನಗೆ ವಿರುದ್ಧವಾಗಿ ನನ್ನ ಕೇಡಿಗಾಗಿ ರೂಪಿಸಲ್ಪಟ್ಟಿರುವಂತಹ ಯೋಜನೆಗಳು ಯೇಸು ನಾಮದಲ್ಲಿ ರದ್ದಾಗಲಿ, ಅಳಸಿ ಹೋಗಲಿ.(ಕೊಲಸ್ಸೆ 2:15)
10. ಯೇಸುವಿನ ರಕ್ತ, ದಯಮಾಡಿ ನನ್ನ ಜೀವಿತದೊಳಗೆ ಹರಿದು ನನ್ನೊಳಗೆ ಕನಸಿನ ಮೂಲಕ ಇಲ್ಲವೇ ಮತ್ಯಾವ ರೂಪದಲ್ಲಿ ಆದರೂ ಹಾಕಲ್ಪಟ್ಟಂತ ಪ್ರತಿಯೊಂದು ವಿಷ ವಸ್ತುವನ್ನೂ ಎಲ್ಲಾ ಮಲಿನತೆಗಳನ್ನೂ ಯೇಸು ನಾಮದಲ್ಲಿ ನನ್ನಿಂದ ತೆಗೆದುಹಾಕು. (1ಯೋಹಾನ 1:7)
Join our WhatsApp Channel
Most Read
● ಆರಾಧನೆಗೆ ಬೇಕಾದ ಇಂಧನ● ದೇವರ ರೀತಿಯ ನಂಬಿಕೆ
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕೆಂಪು ದೀಪದ ಎಚ್ಚರಿಕೆ ಗಂಟೆ
● ಕಳೆದು ಹೋದ ರಹಸ್ಯ
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.
ಅನಿಸಿಕೆಗಳು