ಅನುದಿನದ ಮನ್ನಾ
ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Tuesday, 24th of December 2024
2
0
92
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನನಗೆ ನಿನ್ನ ಕರುಣೆ ಬೇಕು.
"ಆದರೂ ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯನ್ನಿಟ್ಟು ಅವನಿಗೆ ಸೆರೆಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು."(ಆದಿಕಾಂಡ 39:21)
ಮನುಷ್ಯರು ಎದುರಿಸುವ ಒಂದು ಕಷ್ಟವೆಂದರೆ, ಪರಸ್ಥಳದಲ್ಲಿ ಇರುವಾಗ ಸಂಪನ್ಮೂಲಗಳ ಮತ್ತು ಸಹಾಯ ಹಸ್ತದ ಕೊರತೆಯನ್ನು ಅವರು ಎದುರಿಸಬೇಕಾಗಿ ಬರಬಹುದು. ಆದರೆ ಇಲ್ಲಿ ಯೋಸೇಫನು ಅಪರಿಚಿತ ನೆಲದಲ್ಲಿ ಸೆರೆಮನೆಯಲ್ಲಿರುವಾಗಲೂ ಮತ್ತು ಅವನು ಎಲ್ಲೇ ಹೋದರೂ ದೇವರು ಅವನನ್ನು ಕರುಣಿಸುತ್ತಿದ್ದನು. ಮತ್ತು ಅವನಿಗೆ ಮನುಷ್ಯರ ದಯೆಯು ದೊರಕುವಂತೆ ಮಾಡುತ್ತಿದ್ದನು. ಯೋಸೇಫನು ಸೆರೆಮನೆಯಲ್ಲಿದ್ದಾಗಲೇ ದೇವರ ಕರುಣೆಯನ್ನು ದಯೆಯನ್ನು ಆನಂದಿಸಿದ್ದರೆ ಅದರರ್ಥ ಅವನು ಅದಕ್ಕೆ ಮುಂಚಿತವಾಗಿಯೂ ಸಹ ಅವನು ದೇವರ ಕರುಣೆಯನ್ನು ದಯೆಯನ್ನು ಅನುಭವಿಸಿರಲೇಬೇಕು ಎಂದು.
ದೇವರು ನಮಗಾಗಿ ಇಟ್ಟಿರುವ ಜೀವನದ ಕರೆಯನ್ನು ಪೂರ್ಣಗೊಳಿಸಲು ನಮ್ಮ ಜೀವಿತದಲ್ಲಿ ಜನರಿಂದ ಒಳಿತನ್ನು ಹೊಂದಿಕೊಳ್ಳಲು ನಮಗೆ ದೇವರ ಕರುಣೆಯು ಅತ್ಯಾವಶ್ಯಕವಾಗಿ ಬೇಕು. ದೇವರ ಕರುಣೆ ಇಲ್ಲದೆ ಹೋಗಿದ್ದರೆ ನಾವು ಶತ್ರುವಿನಿಂದ ಬರುವ ಅನೇಕ ರೀತಿಯ ದೋಷಾರೋಪಣೆ, ನ್ಯಾಯ ತೀರ್ಪುಗಳಿಂದ ನಮ್ಮ ಜೀವಿತದ ಮೇಲೆ ಆಗುವ ದುಷ್ಪರಿಣಾಮವನ್ನು ನಾವು ಅನುಭವಿಸಬೇಕಿತ್ತು.
ನಾವುಗಳು ಯಾರೂ ಸಹ ಪರಿಪೂರ್ಣರಾದ ಮನುಷ್ಯರಲ್ಲ ಮತ್ತು ನಾವು ಮಾಡುವ ತಪ್ಪುಗಳಿಂದ ಅನೇಕ ಪಾಪಮಯ ಕಾರ್ಯಗಳಿಂದ ಇಂದು ಅವು ನಮ್ಮನ್ನು ನ್ಯಾಯ ತೀರ್ಪಿಗೆ ಗುರಿ ಮಾಡಬಹುದಾಗಿತ್ತು. ಆದರೆ ದೇವರ ಕರುಣೆಯೇ ಇಂತದ್ದರಿಂದ ನಮ್ಮನ್ನು ಕಾಪಾಡುವಂತದ್ದು, ಕಾಯುವಂತದು ಹಾಗೂ ಆತನ ದಯೆಯನ್ನು ಆನಂದಿಸುವಂತೆ ಮಾಡುವಂತದ್ದು ಆಗಿದೆ. ಇಂದು ನಮ್ಮ ಪ್ರಾರ್ಥನೆಯ ಮುಖ್ಯ ನಿರೂಪಣೆಯು ಮನುಷ್ಯರ ದಯೆಯನ್ನು ಅನುಭವಿಸಲು ದೇವರ ಕರುಣೆಯನ್ನು ಎದುರು ನೋಡಬೇಕು ಎಂಬುದನ್ನು ತೋರಿಸುತ್ತದೆ.
ವಿಮೋಚನ ಕಾಂಡ 33:19 ರಲ್ಲಿ ದೇವರು ಹೇಳುತ್ತಾನೆ
" ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಾಗಿ ದಾಟಿಹೋಗುವಂತೆ ಮಾಡುವೆನು; ಯೆಹೋವನ ನಾಮದ ಮಹತ್ವವನ್ನು ನಿನ್ನೆದುರಾಗಿ ಪ್ರಕಟಿಸುವೆನು. ಯಾವನ ಮೇಲೆ ದಯೆಯಿಡುವೆನೋ ಅವನ ಮೇಲೆ ದಯೆಯಿಡುವೆನು; ಯಾರನ್ನು ಕರುಣಿಸುವೆನೋ ಅವರನ್ನು ಕರುಣಿಸುವೆನು ." ಎಂದು.
ದೇವರ ಕರುಣೆ ಹೊಂದದ ಮನುಷ್ಯರು ಯಾವುದನ್ನು ಹೊಂದಲು ತುಂಬಾ ಶ್ರಮಪಡಬೇಕೊ ಅದನ್ನು ದೇವರ ಕರುಣೆಯನ್ನು ಹೊಂದಿದ ಮನುಷ್ಯನು ಬಹಳ ಸುಲಭವಾಗಿ ಆನಂದಿಸಬಹುದು.
ನಮಗೆ ದೇವರ ಕರುಣೆ ಏಕೆ ಬೇಕು?
ನಾನು ಈಗಾಗಲೇ ಅನೇಕ ವಿಚಾರಗಳನ್ನು ಇಲ್ಲಿ ತಿಳಿಸಿದ್ದರೂ ನಿಮಗೆ ದೇವರ ಕರುಣೆ ಏಕೆ ಬೇಕು ಎನ್ನುವುದಕ್ಕೆ ನನ್ನ ಬಳಿ ಇನ್ನೂ ಅನೇಕ ಕಾರಣಗಳ ಪಟ್ಟಿ ಇದೆ. (ಆದರೂ ಇದು ಸಮಗ್ರವಾದ ಪಟ್ಟಿಯಲ್ಲ)
1.ನ್ಯಾಯತೀರ್ಪನ್ನು ಜಯಿಸುವುದಕ್ಕಾಗಿ ನಮಗೆ ದೇವರ ಕರುಣೆಯ ಅವಶ್ಯಕತೆ ಇದೆ. (ಯಾಕೋಬ 2:13)
2. ಶತ್ರು ನಮ್ಮ ವಿರುದ್ಧವಾಗಿ ಬರೆದಿರುವ ಕೇಡಿನ ಕೈಬರಹಗಳನ್ನು ಅಳಿಸಿ ಹಾಕಲು ನಮಗೆ ದೇವರ ಕರುಣೆಯು ಬೇಕು.(ಕೊಲಸ್ಸೆ 2:14).
3. ದೇವರ ಆಶೀರ್ವಾದಗಳನ್ನು ಆತನ ದಯೆಯನ್ನು ಅನುಭವಿಸಲು ದೇವರ ಕರುಣೆಯು ನಮಗೆ ಬೇಕು.
4. ನಾವು ಅಜಾಗರೂಕತೆಯಿಂದ ಆತನ ಆಜ್ಞೆಗಳನ್ನು ಮೀರಿ ಮಾಡಿದ ಅಪರಾಧಕ್ಕಾಗಿ ನಮಗೆ ಆತನ ಕರುಣೆ ಬೇಕು.
5. ದೇವರಿಂದ ಸಿಗುವ ಎಲ್ಲಾ ಒಳಿತುಗಳನ್ನು ಆನಂದಿಸಲು ನಮಗೆ ದೇವರ ಕರುಣೆ ಬೇಕು.
6.ದೇವರ ಪ್ರಸನ್ನತೆಯನ್ನು ಹೊಂದಲು ದೇವರ ಕರುಣೆ ನಮಗೆ ಬೇಕು. ದೇವರ ಕರುಣೆ ಇಲ್ಲದೆ ಆತನ ಸಾನಿಧ್ಯ ಪ್ರವೇಶವು ನಮಗೆ ಅಸಾಧ್ಯ. (ವಿಮೋಚನಾ ಕಾಂಡ 25:21-22).
7. ನಮ್ಮ ಜೀವನದ ಮೇಲೆ ದೋಷಾರೋಪಣೆ ಮಾಡುವ ಆಪಾದಕನ ಬಾಯಿ ಮುಚ್ಚಿಸಲು ನಮಗೆ ದೇವರ ಕರುಣೆ ಬೇಕು. (ಯೋಹಾನ8:7-11)
8. ನಮನ್ನು ಗುರಿ ಮಾಡಿಕೊಂಡು ನಮ್ಮ ವಿರುದ್ಧವಾಗಿ ನುಗ್ಗುವ ಎಲ್ಲಾ ಕೇಡು ಗಂಡಾಂತರಗಳನ್ನು, ಸಂಕಟಗಳನ್ನು ಎಲ್ಲಾ ದುಷ್ಟತ್ವಗಳನ್ನು ತಡೆಯಲು ನಮಗೆ ದೇವರ ಕರುಣೆಯು ಬೇಕು.
ಇಂದು ದೇವರ ಬಲವನ್ನು ಮತ್ತು ಆಶೀರ್ವಾದಗಳನ್ನು ಅನುಭವಿಸುವಂತೆ ಮಾಡುವ ದೇವರ ಕರುಣೆಯು ನಮಗೆ ಬೇಕು ಎಂದು ಮೊರೆಡುವ ಸಮಯವಾಗಿದೆ.
ಮಾರ್ಕ್ 10:46-52 ರಲ್ಲಿ ಕುರುಡನಾದ ಬಾರ್ತಿಮಾಯನು "ಯೇಸುವೇ ದಾವಿದ ಕುಮಾರನೇ ನನ್ನನ್ನು ಕರುಣಿಸು" ಎಂದು ಕೂಗಿ ಮೊರೆ ಇಟ್ಟನು. ಇವನು ಕರುಣೆಗಾಗಿ ಮೊರೆ ಇಟ್ಟನು. ನೀವು ದೇವರ ಕರುಣೆಗೋಸ್ಕರ ಮೊರೆ ಇಡುವಾಗ ಅದು ಆತನ ಗಮನವನ್ನು ನಿಮ್ಮ ಕಡೆಗೆ ಸೆಳೆಯುತ್ತದೆ. ಬಾರ್ತಿಮಾಯನ ಕೂಗು ಯೇಸುವಿನ ಗಮನವನ್ನು ಸೆಳೆದಾಗ ಯೇಸುವು ಅವನ ಕಡೆಗೆ ತಿರುಗಿ ನಿಂತು "ನಾನು ನಿನಗೇನು ಮಾಡಬೇಕೆಂದು ಬಯಸುತ್ತೀಯಾ"ಎಂದು ಕೇಳಿದನು. ಆಗ ಭಾರ್ತಿಮಾಯನು "ನನಗೆ ಕಣ್ಣು ಕಾಣುವಂತೆ ಮಾಡಬೇಕು"ಎಂದನು. ಕರುಣೆಗಾಗಿ ನೀವು ಇಡುವ ಮೊರೆಯ, ಸೈತಾನನು ನಿಮ್ಮ ಶರೀರದಲ್ಲಿ ಹಾಳು ಮಾಡಿದ ಯಾವುದನ್ನಾದರೂ ಪುನಸ್ಥಾಪಿಸಲು ಶಕ್ತವಾಗಿದೆ.
ದೇವರ ಕರುಣೆಯನ್ನು ಅನುಭವಿಸಿದ ಮನುಷ್ಯರಲ್ಲಿ ದಾವಿದನು ಸಹ ಒಬ್ಬನಾಗಿದ್ದಾನೆ ದಾವೀದನು ದೇವರ ಕರುಣೆಯ ಮಹತ್ವವನ್ನು ಅರಿತಿದ್ದರಿಂದಲೇ ತನ್ನ ಅನೇಕ ಕೀರ್ತನೆ ಪುಸ್ತಕಗಳಲ್ಲಿ ಅದನ್ನು ಕುರಿತು ಬರೆದಿದ್ದಾನೆ
ದಾವೀದನು ದೇವರ ಕರುಣೆ ಕುರಿತು ಬರೆದ ಕೆಲವು ಕೀರ್ತನೆಗಳ ಸಾಲುಗಳನ್ನು ನಾನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.
- ಕೀರ್ತನೆಗಳು 4:1 "ನ್ಯಾಯವನ್ನು ಸ್ಥಾಪಿಸುವ ನನ್ನ ದೇವರೇ, ನಿನಗೆ ಮೊರೆಯಿಡುತ್ತೇನೆ; ಸದುತ್ತರವನ್ನು ದಯಪಾಲಿಸು. ನನ್ನನ್ನು ಇಕ್ಕಟ್ಟಿನಿಂದ ಬಿಡಿಸಿ ಇಂಬಾದ ಸ್ಥಳದಲ್ಲಿ ಸೇರಿಸಿದಾತನೇ, ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಅಂಗೀಕರಿಸು"
- ಕೀರ್ತನೆಗಳು 6:2 "ಯೆಹೋವನೇ, ಕನಿಕರಿಸು; ನಾನು ನಿಶ್ಶಕ್ತನಾಗಿ ಹೋಗಿದ್ದೇನೆ. ಯೆಹೋವನೇ, ವಾಸಿಮಾಡು; ನನ್ನ ಎಲುಬುಗಳೆಲ್ಲಾ ತತ್ತರಿಸುತ್ತವೆ".
- ಕೀರ್ತನೆಗಳು 9:13 "ಯೆಹೋವನೇ, ಮರಣದ್ವಾರದೊಳಗೆ ಸೇರದಂತೆ ನನ್ನನ್ನು ಉದ್ಧರಿಸುವವನೇ, ಕನಿಕರಿಸು; ಹಗೆಗಳಿಂದ ನನಗುಂಟಾದ ಬಾಧೆಯನ್ನು ಲಕ್ಷ್ಯಕ್ಕೆ ತಂದುಕೋ"
- ಕೀರ್ತನೆಗಳು13:5 "ನಾನಂತೂ ನಿನ್ನ ಕರುಣೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವದು."
- ಕೀರ್ತನೆಗಳು 23:6 "ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು."
- ಕೀರ್ತನೆಗಳು 25:7 "ಯೆಹೋವನೇ, ನನ್ನ ಯೌವನದ ತಪ್ಪುಗಳನ್ನೂ ದ್ರೋಹಗಳನ್ನೂ ಮನಸ್ಸಿನಲ್ಲಿಡದೆ ನಿನ್ನ ಕೃಪೆಗೆ ತಕ್ಕಂತೆ ದಯಾಪೂರ್ವಕವಾಗಿ ನನ್ನನ್ನು ನೆನಸು."
- ಕೀರ್ತನೆಗಳು 30:10 "ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ಕರುಣಿಸು; ಯೆಹೋವನೇ, ನನ್ನ ಸಹಾಯಕ್ಕೆ ಬಾ."
ಕರುಣೆಗಾಗಿ ಇಡುವ ಮೊರೆಯು ದೇವರ ಗಮನವನ್ನು ಸೆಳೆಯುತ್ತದೆ. ಕರುಣೆಯು ನಿಮ್ಮನ್ನು ಬಿಡುಗಡೆ ಮಾಡಬಲ್ಲದು ಸ್ವಸ್ಥಗೊಳಿಸಬಲ್ಲದು ಮತ್ತು ನಿಮಗೆ ಸಹಾಯ ಮಾಡಬಲ್ಲದು.
- ಕೀರ್ತನೆಗಳು 32:10 "ದುಷ್ಟರಿಗೆ ಅನೇಕ ಕಷ್ಟನಷ್ಟಗಳು ಉಂಟಾಗುವವು; ಆದರೆ ಯೆಹೋವನಲ್ಲಿ ಭರವಸವಿಟ್ಟವರನ್ನು ಆತನ ಕೃಪೆಯು ಆವರಿಸಿಕೊಳ್ಳುವದು."( 32:10)
- ಕೀರ್ತನೆಗಳು 33:18 "ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ; ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ."
ಇಂದು ನೀವು ದೇವರ ಕರುಣೆಗಾಗಿ ಮೊರೆ ಇಡಬೇಕೆಂದು ನಾನು ಬಯಸುತ್ತೇನೆ. ನಾನು ಈ ಕೆಲವು ಕೀರ್ತನೆಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿರುವುದರಿಂದ ನೀವು ದೇವರ ಕರುಣೆಯ ಕುರಿತು ಆಳವಾದ ತಿಳುವಳಿಕೆಯನ್ನು ಹೊಂದಿಕೊಳ್ಳಬಹುದು. ನಿಮ್ಮ ಜೀವಿತದಲ್ಲಿ ಯಾವ ಕ್ಷೇತ್ರದಲ್ಲಿ ನಿಮಗೆ ದೇವರ ಕರುಣೆಯ ಅಗತ್ಯವಿದೆಯೋ ಅದು ನನಗೆ ತಿಳಿಯದು. ಆದರೆ ನೀವು ದೇವರೇ ನನ್ನನ್ನು ಕರುಣಿಸು ಎಂದು ಕೂಗಿ ಕೊಳ್ಳುವುದಾದರೆ ನಿಮಗೆ ಯಾವ ಕ್ಷೇತ್ರದಲ್ಲಿ ದೇವರ ಕರುಣೆಯ ಬೇಕೋ,ಖಂಡಿತವಾಗಿಯೂ ಆ ಕ್ಷೇತ್ರದಲ್ಲಿ ನಿಮಗೆ ಸಿಗುವುದು.
Bible Reading Plan : 1 Timothy 6 - Hebrews 1
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1.ಓ ಕರ್ತನೆ ನನ್ನನ್ನು ಕರುಣಿಸು ನನಗೆ ಸಹಾಯ ಮಾಡು (ಕೀರ್ತನೆ 51:1)
2. ಕರ್ತನೇ ನಿನ್ನ ಕರುಣೆಯನ್ನು ನನಗೆ ತೋರಿಸು ಇದರಿಂದ ನನಗೆ ಮನುಷ್ಯರ ದೃಷ್ಟಿಯಲ್ಲಿ ಯೇಸು ನಾಮದಲ್ಲಿ ದಯ ದೊರಕಲಿ.(ಕೀರ್ತನೆ 90: 17)
3. ಕರ್ತನೇ, ನಿನ್ನ ಕರುಣೆಯಿಂದ ನನಗೆ ಬಿಡುಗಡೆಯನ್ನು ಅನುಗ್ರಹಿಸು ಮತ್ತು ಯೇಸು ನಾಮದಲ್ಲಿ ನನಗೆ ಸಹಾಯ ಮಾಡು (ಕೀರ್ತನೆ 79:9)
4. ಕರ್ತನೇ, ನಿನ್ನ ಕರುಣೆಯು ನನ್ನ ಮೇಲಿರಲಿ ಮತ್ತು ನಾನು ಹೋಗುವ ಕಡೆಯೆಲ್ಲಾ ನಿನ್ನ ಕರುಣೆಯು ನನ್ನನ್ನು ಹಿಂಬಾಲಿಸಲಿ. (ಕೀರ್ತನೆ 23:6)
5. ಓ ಕರ್ತನೇ, ಕರುಣಿಸು ಯೇಸುನಾಮದಲ್ಲಿ ನನ್ನನ್ನು ಸ್ವಸ್ಥಗೊಳಿಸು. (ಕೀರ್ತನೆ 6:2)
6. ತಂದೆಯೇ, ನನ್ನ ಜೀವಿತ, ನನ್ನ ಗೌರವ ಮತ್ತು ನನ್ನ ಆಶೀರ್ವಾದವನ್ನು ಗುರಿ ಮಾಡಿಟ್ಟುಕೊಂಡು ನನ್ನ ಮೇಲೆ ದಾಳಿ ಮಾಡುವ ಶತ್ರುವಿನಿಂದ ಯೇಸು ನಾಮದಲ್ಲಿ ನನ್ನ ಪ್ರಾಣವನ್ನು ತಪ್ಪಿಸಿ ಕಾಪಾಡು.(ಕೀರ್ತನೆ 116:8)
7.ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆ ತೋರಿಸು ದೇವರೇ ನಾನು ಬಹುಕಾಲದಿಂದ ಮಾಡುತ್ತಿರುವ ಪ್ರಾರ್ಥನೆಗಳಿಗೆ ನಿನ್ನ ಕರುಣೆಯಿಂದ ಈ ಕಾಲದಲ್ಲಿಯೇ ನನಗೆ ಯೇಸು ನಾಮದಲ್ಲಿ ಸದುತ್ತರ ದೊರಕಲಿ. ನಿನ್ನ ಕರುಣೆಯನ್ನು ನನಗೆ ಅನುಗ್ರಹಿಸು (1ಯೋಹಾನ5:14-15)
8.ತಂದೆಯೇ, ನಿನ್ನ ಕರುಣೆಯಿಂದ ನನ್ನ ವಿರುದ್ಧವಾಗಿ ಏಳುವ ಪ್ರತಿಯೊಂದು ಧ್ವನಿಯು ಯೇಸುನಾಮದಲ್ಲಿ ನಿಶಬ್ದವಾಗಲಿ. ನನ್ನ ಜೀವನಕ್ಕೆ ವಿರೋಧವಾಗಿರುವ ನ್ಯಾಯ ತೀರ್ಪನ್ನು ಗೆಲ್ಲುವಂತೆ ಯೇಸುನಾಮದಲ್ಲಿ ನನ್ನನ್ನು ಕರುಣಿಸು. (ಯಾಕೋಬ 2:13)
9.ತಂದೆಯೇ, ನಿನ್ನ ಕರುಣೆಯಿಂದ ನನ್ನೆಲ್ಲಾ ಪಾಪಗಳನ್ನು ಕ್ಷಮಿಸಿಬಿಡು ಮತ್ತು ಎಲ್ಲಾ ಅನೀತಿಯನ್ನು ತೊಳೆದು ಯೇಸು ನಾಮದಲ್ಲಿ ನನ್ನನ್ನು ಶುದ್ಧೀಕರಿಸು (1ಯೋಹಾನ 1:9)
10.ಓ ದೇವರೇ ನನ್ನೆಲ್ಲಾ ಆಶೀರ್ವಾದಗಳನ್ನು ನನ್ನೆಲ್ಲಾ ಸ್ವಾಸ್ಥ್ಯಗಳನ್ನು ಪುನಸ್ತಾಪಿಸಿಕೊಳ್ಳಲು ಯೇಸುನಾಮದಲ್ಲಿ ನಿನ್ನ ಕರುಣೆಯು ನನಗೆ ದೊರಕಲಿ (ಯೋವೇಲ 2:25).
Join our WhatsApp Channel
Most Read
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
● ನೀವು ಯುದ್ಧರಂಗದಲ್ಲಿರುವಾಗ: ಒಳನೋಟ
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
● ಕಳೆದು ಹೋದ ರಹಸ್ಯ
ಅನಿಸಿಕೆಗಳು