ಅನುದಿನದ ಮನ್ನಾ
4
1
81
ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು
Thursday, 23rd of January 2025
Categories :
Praise
ನಾನಾಗಲೀ ಮತ್ತು ನೀವಾಗಲೀ ದೇವರನ್ನು ಏಕೆ ಸ್ತುತಿಸಬೇಕು? ಇಂದು, ನಾವು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡೋಣ.
ಸ್ತುತಿಸಬೇಕೆಂಬುದು ಒಂದು ಆಜ್ಞೆ.
ಉಸಿರು ಇರುವ ಎಲ್ಲವೂ ಕರ್ತನನ್ನು ಸ್ತುತಿಸಲಿ. (ಕೀರ್ತನೆ 150:6)
ನಿರ್ಜೀವ ವಲ್ಲದಂತ ಜೀವಂತವಾಗಿರುವ ಎಲ್ಲವೂ ಕರ್ತನನ್ನು ಸ್ತುತಿಸಬೇಕು ಎಂದು ಸತ್ಯವೇದ ಹೇಳುತ್ತದೆ.ನಮಗೆ ದೇವರ ವಾಕ್ಯವು ಕೇವಲ ಒಂದು ಸಲಹೆಯಲ್ಲ. ಬದಲಾಗಿ ಅದು ಆಜ್ಞೆಯಾಗಿದೆ. ಸಲಹೆಯನ್ನು ಬೇಕಿದ್ದರೆ ನಿರ್ಲಕ್ಷಿಸಬಹುದು, ಆದರೆ ಆಜ್ಞೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ನೀವು ಆಜ್ಞೆಯನ್ನು ನಿರ್ಲಕ್ಷಿಸಿದರೆ, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ನಮಗೆ "ಇಷ್ಟವಾದಾಗ" ಮಾತ್ರ ದೇವರನ್ನು ಸ್ತುತಿಸಬಹುದು ಎಂದು ಸತ್ಯವೇದ ಹೇಳುವುದಿಲ್ಲ. ನಾವು ಸ್ತುತಿಸಲೇ ಬೇಕೆಂದು ನಮಗೆ ಆಜ್ಞಾಪಿಸಲಾಗಿದೆ. ಸ್ತುತಿಸುವುದು ಒಂದು ಆಯ್ಕೆಯಾಗಿದೆಯೇ ಹೊರತು ಅದು ಭಾವನೆಯಲ್ಲ.
ದೇವರನ್ನು ಸ್ತುತಿಸಬೇಕೆಂದು ದೇವರವಾಕ್ಯವು ಏಕೆ ಆಜ್ಞಾಪಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಏಕೆಂದರೆ ದೈಹಿಕವಾಗಿಯಾಗಲೀ ಮಾನಸಿಕವಾಗಿರಲಿ, ಭಾವನಾತ್ಮಕವಾಗಿರಲಿ ಮತ್ತು ಆಧ್ಯಾತ್ಮಿಕವಾಗಿರಲಿ ಯಾವುದೂ ಕೂಡ ಸ್ತುತಿಸುವುದರ ಅಥವಾ ವಾಕ್ಯ ಅಧ್ಯಯನಗಳ ಅಭ್ಯಾಸ ಮಾಡುವುದಕ್ಕಿಂತ ಹೆಚ್ಚಿನ ಸ್ವಸ್ಥತೆಯನ್ನು ನೀಡಲಾರದು ಎಂಬುದು ದೇವರಿಗೆ ತಿಳಿದದೇ.
"ಕೃತಜ್ಞತಾಸ್ತುತಿಯೊಡನೆ ಆತನ ಮಂದಿರದ್ವಾರಗಳಿಗೂ ಕೀರ್ತನೆಯೊಡನೆ ಆತನ ಅಂಗಳಗಳಿಗೂ ಬನ್ನಿರಿ;
ಆತನ ಉಪಕಾರ ಸ್ಮರಿಸಿರಿ;
ಆತನ ನಾಮವನ್ನು ಕೊಂಡಾಡಿರಿ."(ಕೀರ್ತನೆಗಳು 100:4)
ಇಲ್ಲಿ ಮೊದಲು ದೇವರ ಮಂದಿರ ದ್ವಾರಗಳ ನಂತರ ಆತನ ಅಂಗಳಗಳ ಮೂಲಕ ಎನ್ನುವ ಎರಡು ಹಂತದ ಪ್ರವೇಶವಿದೆ. ಕೀರ್ತನೆಗಾರನು ಕೃತಜ್ಞತಾಸ್ತುತಿಯು ನಮ್ಮನ್ನು ಮಂದಿರ ದ್ವಾರಗಳ ಮೂಲಕ ಸಾಗುವ ಪ್ರವೇಶವನ್ನು ಒದಗಿಸುತ್ತದೆ ಎಂದು ಹೇಳುತ್ತಾನೆ, ಆದರೆ ಸ್ತೋತ್ರವು ನಮ್ಮನ್ನು ಅಂಗಳಕ್ಕೆ ಪ್ರವೇಶಿಸುವಂತೆ ಕರೆದೊಯ್ಯುತ್ತದೆ .
ನಿಸ್ಸಂಶಯವಾಗಿ, ಯೇಸುವಿನ ರಕ್ತವು ಪಾಪದಿಂದ ನಮ್ಮನ್ನು ಬಿಡಿಸಿ ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಮಾರ್ಗ ಮಾಡಿಕೊಡುತ್ತದೆ (ಇಬ್ರಿಯ 10:19). ಹೀಗಾಗಿ ನಮ್ಮ ಸಾರ್ವಕಾಲಿಕ ಸ್ತೋತ್ರವು ಆತನ ಉಪಸ್ಥಿತಿಗೆ ಸ್ಪಷ್ಟವಾದ ಮತ್ತು ಅಡೆತಡೆಯಿಲ್ಲದ ಮಾರ್ಗವನ್ನು ನಮಗೆ ಒದಗಿಸುತ್ತದೆ.
ನೀವು ಪ್ರಾರ್ಥನೆ ಮಾಡುವಾಗ ಆರಂಭದಲ್ಲೇ, ತಕ್ಷಣವೇ ನಿಮ್ಮ ವಿನಂತಿಗಳ ಪಟ್ಟಿಯನ್ನು ಆತನ ಮುಂದೆ ತರಬೇಡಿ. ಪರಲೋಕ ಮತ್ತು ಭೂಮಿಯನ್ನು ಉಂಟುಮಾಡಿದ ದೇವರನ್ನು ಸಮೀಪಿಸಲು ಇದು ತಪ್ಪಾದ ಮಾರ್ಗವಾಗಿರುತ್ತದೆ. ಕೃತಜ್ಞತ ಸ್ತುತಿಯೊಡನೆ - ಆತನ ದ್ವಾರಗಳನ್ನು ಮತ್ತು ಸ್ತೋತ್ರದೊಂದಿಗೆ ಆತನ ಅಂಗಳಗಳನ್ನು ಪ್ರವೇಶಿಸುವ ಮೂಲಕ ನಿಮ್ಮ ಪ್ರಾರ್ಥನೆಯನ್ನು ಪ್ರಾರಂಭಿಸಿ.
ದೇವರ ಆಲಯಕ್ಕೆ ಬರುವ ಉತ್ಸಾಹ ಮತ್ತು ಸುಯೋಗವನ್ನು ಅಪೊಸ್ತಲರ ಕೃತ್ಯಗಳು ಅಧ್ಯಾಯ 3 ರಲ್ಲಿ ಸುಂದರ ದ್ವಾರ ಎಂದು ಕರೆಯಲ್ಪಡುವ ದೇವಾಲಯದ ದ್ವಾರದಲ್ಲಿ ಕುಂಟನನ್ನು ಗುಣಪಡಿಸುವ ಮೂಲಕ ವಿವರಿಸಲಾಗಿದೆ.
"ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ ಹಾರುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು."(ಅಪೊಸ್ತಲರ ಕೃತ್ಯಗಳು 3:8)
ತನ್ನ ಜೀವನದುದ್ದಕ್ಕೂ, ಆ ಕುಂಟ ಮನುಷ್ಯನು ಕೇವಲ ಜನರು ಹಾದುಹೋಗುವುದನ್ನು, ದ್ವಾರಗಳ ಮೂಲಕ ದೇವಾಲಯದ ಅಂಗಳಕ್ಕೆ ಹೋಗುವುದನ್ನು ಮಾತ್ರ ನೋಡುತ್ತಿದ್ದನು. ಆದಾಗ್ಯೂ, ಪೇತ್ರ ಮತ್ತು ಯೋಹಾನ ಅವನನ್ನು ಭೇಟಿಯಾದ ದಿನ, ಅವನ ಜೀವನದ ಎಲ್ಲವೂ ಬದಲಾಗಿ ಹೋಯಿತು. ಈಗ ಅವನು ತನ್ನನ್ನು ಸ್ವಸ್ಥಪಡಿಸಿದಕ್ಕಾಗಿ ದೇವರಿಗೆ ಧನ್ಯವಾದ ಹೇಳಬಹುದು ಮತ್ತು ಆ ದ್ವಾರಗಳ ಮೂಲಕ ದೇವಾಲಯದ ಅಂಗಳಕ್ಕೆ ಹೋಗಬಹುದು. ಈಗ ಅವನು ಕೇವಲ ವೀಕ್ಷಿಸುತ್ತಾ ಕೂರುವ ಬದಲು ಅದರಲ್ಲಿ ಸಾಗುವ ಜನರೊಂದಿಗೆ ಭಾಗವಹಿಸಲು ಸಹ ಸಾಧ್ಯವಾಯಿತು.
ಅವನು ವ್ಯಕ್ತಪಡಿಸಿದ ಸಂತೋಷ ನಮಗೆ ಮಾದರಿ ಮತ್ತು ಸ್ಫೂರ್ತಿಯಾಗಬೇಕು.
ಗಮನಿಸಿ: ನೋಹ ಅಪ್ಲಿಕೇಶನ್‌ನಲ್ಲಿ ಸ್ತೋತ್ರದ ವಿಭಾಗವನ್ನು ಪರಿವೀಕ್ಷಿಸಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ತಂದೆ, ಮಗ ಮತ್ತು ಪವಿತ್ರಾತ್ಮನನ್ನು ಸ್ತುತಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
Bible Reading: Exodus 14-16
ಅರಿಕೆಗಳು
ಅರಿಕೆ
"ಯೆಹೋವನೇ ನೀನೇ ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದೀಯ; ಎಲ್ಲಾ ದೇವರುಗಳಲ್ಲಿ ನೀನೇ ಭಯಂಕರನು ಹಲ್ಲೆಲೂಯ ! (ಕೀರ್ತನೆ 96:4) ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಕರ್ತನನ್ನು ಸ್ತುತಿಸುತ್ತಾ ಸ್ವಲ್ಪ ಸಮಯವನ್ನು ಕಳೆಯಿರಿ.
Join our WhatsApp Channel

Most Read
● ನಂಬಿಕೆಯಲ್ಲಿರುವ ಬಲ● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
● ದೇವರಿಗಾಗಿ ದಾಹದಿಂದಿರುವುದು
● ಬೀಜದಲ್ಲಿರುವ ಶಕ್ತಿ-1
● ಅಪ್ಪನ ಮಗಳು - ಅಕ್ಷಾ
● ನೀವು ದೇವರ ಉದ್ದೇಶಕ್ಕಾಗಿ ನಿಯೋಜಿಸಲ್ಪಟ್ಟಿದ್ದೀರಿ
ಅನಿಸಿಕೆಗಳು