ಅನುದಿನದ ಮನ್ನಾ
ರೂಪಾಂತರ ಹೊಂದಲು ಇರುವ ಸಾಮರ್ಥ್ಯ.
Friday, 31st of January 2025
3
1
46
Categories :
ರೂಪಾಂತರ(transformation)
"ನಾವೆಲ್ಲರೂ ಮುಸುಕುತೆಗೆದಿರುವ ಮುಖದಿಂದ ಕರ್ತನ ಪ್ರಭಾವವನ್ನು ದರ್ಪಣದಲ್ಲಿ ಕಾಣಿಸುತ್ತದೋ ಎಂಬಂತೆ ದೃಷ್ಟಿಸುವವರಾಗಿದ್ದು ಪ್ರಭಾವದಿಂದ ಅಧಿಕಪ್ರಭಾವಕ್ಕೆ ಹೋಗುತ್ತಾ ಆ ಪ್ರಭಾವದ ಸಾರೂಪ್ಯವುಳ್ಳವರೇ ಆಗುತ್ತೇವೆ; ಇದು ದೇವರಾತ್ಮನಾಗಿರುವ ಕರ್ತನ ಕೆಲಸಕ್ಕನುಸಾರವಾದದ್ದೇ." (2 ಕೊರಿಂಥ 3:18)
ರೂಪಾಂತರವೆಂದರೆ ಪ್ರಕೃತಿ, ಹೊರನೋಟ ಅಥವಾ ರೂಪದಲ್ಲಿ ಕಾಣುವ ಸ್ಪಷ್ಟ ಬದಲಾವಣೆಯಾಗಿದೆ. ವಾಸ್ತವವಾಗಿ, ಪ್ರತಿಯೊಬ್ಬರೂ ರೂಪಾಂತರದ ಕಥೆಗಳನ್ನು ಇಷ್ಟಪಡುತ್ತಾರೆ. ನಾವೆಲ್ಲರೂ ಪ್ರಸ್ತುತಕ್ಕಿಂತ ಹೆಚ್ಚು ಆರಾಮದಾಯಕ ವ್ಯಕ್ತಿಯಾಗಲು ಬಯಸುವವರಾಗಿರುತ್ತೇವೆ. ನಾವು ಆಗ ಬಯಸುವ ಮುಂದಿನ ವ್ಯಕ್ತಿಯ ಬಗ್ಗೆ ನಮ್ಮ ಸುಪ್ತ ಮನಸ್ಸಿನಲ್ಲಿ ಒಂದು ಸ್ಪಷ್ಟವಾದ ಚಿತ್ರಣವಿರುತ್ತದೆ.
ಬಹುಶಃ ಈ ರೂಪಾಂತರ ಕಥೆಗಳಲ್ಲಿಯೇ ಅತ್ಯಂತ ಆಸಕ್ತಿದಾಯಕವಾದ ಕಥೆ ಎಂದರೆ ಸತ್ಯವೇದದ ಎಸ್ತೇರ್ ಗ್ರಂಥವಾಗಿದೆ. ಎಸ್ತೇರಳ ಕಥೆಯು ಒಬ್ಬ ಯುವ ಅನಾಥ ಯಹೂದಿ ರೈತ ಹುಡುಗಿಯು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಪರ್ಷಿಯನ್ ರಾಜನ ಅರಮನೆಯನ್ನು ಪ್ರವೇಶಿಸುವ ನಿಜವಾದ ಕಥೆಯಾಗಿದೆ. ಅವಳು ಮೊದಲು ಅರಸನ ಹೃದಯ ಗೆದ್ದು ರಾಣಿಯಾಗಿ ಎಲ್ಲಾ ಅಡೆತಡೆಗಳ ವಿರುದ್ಧ ಹೋರಾಡಿ ಅಂತಿಮವಾಗಿ ತನ್ನ ಜನಾಂಗವಾದ ಇಸ್ರೇಲ್ ಅನ್ನು ವಿನಾಶದಿಂದ ರಕ್ಷಿಸುತ್ತಾಳೆ.
ದೇವರೊಂದಿಗಿನ ಅನ್ಯೋನ್ಯತೆ ಮತ್ತು ಸರಿಯಾದ ಆಯ್ಕೆಗಳ ಮೂಲಕ ನಾವು ನಮ್ಮ ಜೀವಮಾನ ಪರ್ಯಂತ ಅದ್ಭುತ ರೂಪಾಂತರವನ್ನು ಎದುರು ನೋಡುವಂತದ್ದು ಇಂದಿಗೂ ಸಾಧ್ಯ ಎನ್ನುವುದನ್ನು ಎಸ್ತೆರಳ ಪುಸ್ತಕವು ನನಗೆ ಮನವರಿಕೆ ಮಾಡಿಕೊಟ್ಟಿದೆ.
ಇಂದಿನ ನಮ್ಮ ಅಧ್ಯಯನ ಭಾಗವು "ನಾವೆಲ್ಲರೂ" ಎಂಬ ಪದಗುಚ್ಛದಿಂದ ಪ್ರಾರಂಭವಾಗುತ್ತದೆ. ರೂಪಾಂತರದಿಂದ ಯಾರೂ ಹೊರತಾಗುವುದಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ವಾಸ್ತವವಾಗಿ, ನಾವು ಮಹಿಮೆಯಿಂದ ಮಹಿಮೆಗೆ ಬದಲಾಗುತ್ತಿರಬೇಕೆಂದು ದೇವರು ಬಯಸುತ್ತಾನೆ. ನಾವು ಆತನ ಸ್ವಭಾವವನ್ನು ಭೂಮಿಯ ಮೇಲೆ ಪುನರಾವರ್ತಿಸಬೇಕೆಂದು ದೇವರು ಬಯಸುತ್ತಾನೆ ಮತ್ತು ಆತನ ವ್ಯಕ್ತಿತ್ವವನ್ನು ಒಂದು ಹಂತದ ವೈಭವದಿಂದ ಇನ್ನೊಂದಕ್ಕೆ ಪ್ರತಿಬಿಂಬಿಸುವವರಾಗಿದ್ದೇವೆ.
ಈ ಸಮಯದಲ್ಲಿ ನೀವು ಯಾವ ಹಂತದಲ್ಲಿದ್ದೀರಿ? ನಿಮ್ಮ ಕುಟುಂಬಕ್ಕೆ ಅಗತ್ಯವಾದ ಸಂಗತಿಗಳು ಯಾವುವು? ನಿಮ್ಮ ಬುದ್ಧಿವಂತಿಕೆಯ ಮಿತಿಯೇ ಇಷ್ಟು ಎಂದು ನಿಮ್ಮ ಜೀವಿತದಲ್ಲಿ ಮಿತಿ ಸೂಚಿಸುತ್ತಿರುವ ಸಂಗತಿ ಯಾವುದು ? ನಿಮ್ಮ ಜೀವನದಲ್ಲಿ ಇನ್ನೂ ಯಾವ ಒಳ್ಳೆಯ ಸಂಗತಿಗಳು ಉಂಟಾಗುವುದಿಲ್ಲ ಎಂದು ಯಾರು ನಿಮಗೆ ಹೇಳಿದರು? ನೀವು ಯಾವಾಗಲೂ ಸಾಮಾನ್ಯರಾಗಿಯೇ ಉಳಿಯುತ್ತೀರಿ ಎಂದಿಗೂ ಆಕರ್ಷಕರಾಗುವುದಿಲ್ಲ ಎಂದು ಯಾರು ಹೇಳುತ್ತಾರೆ?
ಆದರೆ ನನ್ನಲ್ಲಿ ನಿಮಗಾಗಿ ಒಳ್ಳೆಯ ಸುದ್ದಿ ಒಂದಿದೆ. ನೀವು ಧೂಳಿನಿಂದ ಮೇಲಕ್ಕೆ ಎತ್ತಲ್ಪಟ್ಟು ರೂಪಾಂತರಗೊಳ್ಳುವುದನ್ನು ನೋಡಲು ದೇವರು ಬಯಸುತ್ತಾನೆ. ಕೀರ್ತನೆ 113: 7-8 ರಲ್ಲಿ ಸತ್ಯವೇದ ಹೇಳುತ್ತದೆ, "ಆತನು ಬಡವರನ್ನು ಧೂಳಿನಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಮೇಲಕ್ಕೆತ್ತುತ್ತಾನೆ, ಆತನು ಪ್ರಭುಗಳೊಂದಿಗೆ ಅಂದರೆ ಅವರ ಜನಾಧಿಪತಿಗಳೊಡನೆ ಅವರನ್ನು ಕುಳ್ಳಿರಿಸುತ್ತಾನೆ." ಎಂದು
ಈಗ, ಎಸ್ತೇರ್ ಪರ್ಷಿಯಾದ ರಾಣಿಯ ಸ್ಥಾನಕ್ಕೆ ಏರಿಸಲ್ಪಡುವ ಮೊದಲು ವಷ್ಟಿ ಎಂಬ ಇನ್ನೊಬ್ಬ ರಾಣಿ ಕೃಪೆಯಿಂದ ಬಿದ್ದು ಹೋಗಿದ್ದಳು
"ಏಳನೆಯ ದಿನದಲ್ಲಿ ಅರಸನಾದ ಅಹಷ್ವೇರೋಷನು ದ್ರಾಕ್ಷಾರಸಪಾನಮಾಡಿ ಆನಂದಲಹರಿಯಲ್ಲಿದ್ದಾಗ ಬಹು ಸುಂದರಿಯಾದ ರಾಣಿಯ ಸೌಂದರ್ಯವನ್ನು ಜನರಿಗೂ ಸರದಾರರಿಗೂ ತೋರಿಸಬೇಕೆಂದು ತನ್ನ ಸಾನ್ನಿಧ್ಯಸೇವಕರಾದ ಮೆಹೂಮಾನ್, ಬಿಜೆತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೇತರ್, ಕರ್ಕಸ್ ಎಂಬ ಏಳು ಮಂದಿ ಕಂಚುಕಿಗಳಿಗೆ - ವಷ್ಟಿರಾಣಿಯು ರಾಜ ಮುಕುಟವನ್ನು ಧರಿಸಿಕೊಂಡು ರಾಜಸನ್ನಿಧಿಗೆ ಬರಬೇಕೆಂಬದಾಗಿ ಹೇಳಿರಿ ಎಂದು ಆಜ್ಞಾಪಿಸಿದನು. ಕಂಚುಕಿಗಳು ತಿಳಿಸಿದ ರಾಜಾಜ್ಞೆಗೆ ವಷ್ಟಿರಾಣಿಯು - ಬರುವದಿಲ್ಲ ಎಂದು ಉತ್ತರಕೊಟ್ಟಳು. ಇದರಿಂದ ಅರಸನು ಬಹುಕೋಪಗೊಂಡು ರೌದ್ರಾವೇಶನಾದನು. (ಎಸ್ತೇರ್ 1:10-12)
ರಾಣಿ ವಷ್ಟಿ ಏಕೆ ಅರಸನಾದ ಅಹಷ್ವೇರೋಷನ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದಳು ಎಂಬುದು ಯಾರಿಗೂ ತಿಳಿದಿಲ್ಲ. ಅವಳಿಗೆ ನಿಜವಾಗಿ ಏನಾಯಿತು ಎಂಬುದೂ ನಮಗೆ ತಿಳಿದಿಲ್ಲ. ಕೆಲವು ಬೈಬಲ್ ವಿದ್ವಾಂಸರು ನಮಗೆ ಹೇಳುವ ಪ್ರಕಾರ ರಾಣಿ ವಷ್ಟಿಯನ್ನು ರಾಣಿಯ ಸ್ಥಾನದಿಂದ ಕೆಳಗಿಳಿಸಿ ಬಹಿಷ್ಕರಿಸಲಾಯಿತು ಅಥವಾ ಅರಮನೆಯ ಸ್ತ್ರೀಯರ ಅರಮನೆಯಲ್ಲಿ ಅವನ ದೃಷ್ಟಿಯಿಂದ ದೂರವಿರಲು ಅನುಮತಿಸಲಾಯಿತು. ರಾಜನ ಆಜ್ಞೆಯನ್ನು ನಿರಾಕರಿಸಿದ ಕಾರಣ ಅವಳನ್ನು ಗಲ್ಲಿಗೇರಿಸಲಾಯಿತು ಎಂದು ಕೆಲವರು ನಂಬುತ್ತಾರೆ.
ನಮ್ಮಲ್ಲಿ ಹೆಚ್ಚಿನವರು ಉತ್ತಮ ಜೀವನ ಹೊಂದುವಂತ, ತಾವು ಉತ್ತಮರಾಗುವಂತ ಕನಸು ಕಾಣುತ್ತಾರೆ. ಈ ಕ್ಷಣದಲ್ಲಿ ನಾವು ಮಾಡುವುದಕ್ಕಿಂತ ಇನ್ನೂ ಉತ್ತಮವಾಗಿ ಮಾಡಲು ನಾವು ಬಯಸುತ್ತೇವೆ. ಆದಾಗ್ಯೂ, ನಮ್ಮನ್ನು ಯಾವಾಗಲೂ ನೋಡುವ ನಮ್ಮ ಸುತ್ತಮುತ್ತಲಿನ ಜನರು ಮತ್ತು ಲೌಕಿಕ ಜೀವನವನ್ನು ನಡೆಸುವ ಜನರು ಮತ್ತು ನಮ್ಮ ನಡುವೆ ಈ ವ್ಯತ್ಯಾಸವನ್ನು ಗುರುತಿಸುವುದು ಕೊಂಚ ಕಷ್ಟವೇ. ಪ್ರಪಂಚದ ಮಾನದಂಡಗಳನ್ನು ಅನುಸರಿಸುವ ಮೂಲಕ ನಾವು ಉತ್ತಮವಾಗಲು ಬಯಸುತ್ತೇವೆ. ದುರದೃಷ್ಟವಶಾತ್, ನಾವು ಅಪಹಾಸ್ಯಕ್ಕೀಡಾಗಿ ಆ ಪ್ರಯತ್ನ ಅಂತ್ಯಗೊಳ್ಳುತ್ತದೆ.
ಆದರೆ ನೀವು ಇಂದು ದೇವರ ಮೇಲೆ ಏಕೆ ಆಧಾರಾಗೊಳ್ಳಬಾರದು? ಸತ್ಯವೇನೆಂದರೆ, ದೇವರ ವಾಕ್ಯದಿಂದ ಸಿಕ್ಕ ಒಂದು ಪ್ರಕಟಣೆ ಮಾತ್ರ ನಮ್ಮ ಜೀವನದಲ್ಲಿ ಕ್ರಾಂತಿಯನ್ನು ಉಂಟುಮಾಡುತ್ತದೆ. ಎಸ್ತೆರಳ ಪುಸ್ತಕದಲ್ಲಿರುವ ಸತ್ಯಗಳು ನಿಮ್ಮ ಜೀವನವನ್ನು ನೀವು ಊಹಿಸಲೂ ಸಾಧ್ಯವಾಗದ ಮಟ್ಟಕ್ಕೆ ಕ್ರಾಂತಿ ಮಾಡಬಲ್ಲವು. ಎಸ್ತರ್ ದೇವರ ಮುಂದೆ ತನ್ನ ನಿಲುವನ್ನು ಉಳಿಸಿಕೊಂಡಳು, ಹಾಗಾಗಿ ಅವಳು ತನ್ನ ರೂಪಾಂತರದ ಕ್ಷಣವನ್ನು ಕಳೆದುಕೊಳ್ಳಲಿಲ್ಲ. ಈಗ ಇದು ನಿಮ್ಮ ಸರದಿ. ದೇವರನ್ನು ಧೃಡವಾಗಿ ಹಿಡಿದುಕೊಳ್ಳಿ.
Bible Reading: Exodus 36-38
ಅರಿಕೆಗಳು
ತಂದೆಯೇ, ಇಂದು ನನಗಾಗಿ ನೀವು ಕೊಟ್ಟ ಈ ವಾಕ್ಯಕ್ಕಾಗಿ ನಾನು ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನನ್ನ ಜೀವನವು ಮಹಿಮೆಯಿಂದ ಮಹಿಮೆಗೆ ಸಾಗಬೇಕೆಂದು ನೀವು ಬಯಸುತ್ತೀರಿ. ನಿಮ್ಮ ಬಲವಾಗಿ ನೆಲೆನಿಲ್ಲಲು ನೀವು ನನಗೆ ಸಹಾಯ ಮಾಡಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನಿಮ್ಮ ವಾಕ್ಯದ ಸತ್ಯತೆ ಮೇಲೆ ಆಧಾರಗೊಳ್ಳುವಂತೆ ನೀನು ನನಗೆ ಸಹಾಯ ಮಾಡಬೇಕೆಂದು ನಾನು ಪ್ರಾರ್ಥಿಸುತ್ತೇನೆ, ಏಕೆಂದರೆ ಅದುವೇ ನನಗೆ ಬಿಡುಗಡೆ ನೀಡುವಂತದ್ದಾಗಿದೆ . ನನ್ನ ಜೀವನವು ಈ ವರ್ಷ ನಿಜವಾಗಿಯೂ ಯೇಸುನಾಮದಲ್ಲಿ ರೂಪಾಂತರವನ್ನು ಅನುಭವಿಸುತ್ತದೆ. ಆಮೆನ್.
Join our WhatsApp Channel
Most Read
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ಕರ್ತನ ಆನಂದ
● ಪರಲೋಕದ ವಾಗ್ದಾನ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ದ್ವಾರ ಪಾಲಕರು / ಕೋವರ ಕಾಯುವವರು
● ದೇವರು ನನಗಿಂದು ಒದಗಿಸುತ್ತಾನೋ?
ಅನಿಸಿಕೆಗಳು