"ಆದದ್ದೆಲ್ಲಾ ಮೊರ್ದೆಕೈಗೆ ತಿಳಿದಾಗ ಮೊರ್ದೆಕೈ ತನ್ನ ವಸ್ತ್ರಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯನ್ನು ಹಚ್ಚಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗಿ ಬಹು ದುಃಖದಿಂದ ಗೋಳಾಡಿದನು. ಅವನು ಅರಸನ ಅರಮನೆಯ ಬಾಗಿಲಿನವರೆಗೆ ಬಂದನು. ಏಕೆಂದರೆ ಗೋಣಿತಟ್ಟನ್ನು ಉಟ್ಟುಕೊಂಡು ಅರಸನ ಅರಮನೆಯ ಬಾಗಿಲಲ್ಲಿ ಪ್ರವೇಶಿಸಲು ಒಬ್ಬನಿಗೂ ಅಪ್ಪಣೆ ಇರಲಿಲ್ಲ." ( ಎಸ್ತೇರಳು 4: 1-2)
ಅರಮನೆಯ ಏಕಾಂತದಲ್ಲಿ ವಾಸಿಸುತ್ತಿದ್ದ ಎಸ್ತೇರಳು, ಎಲ್ಲಾ ಯಹೂದಿಗಳನ್ನು ನಿರ್ನಾಮ ಮಾಡಲು ರಾಜನು ಹೊರಡಿಸಿದ ಭಯಾನಕ ಆದೇಶದ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. ಅವಳು ತನ್ನ ಸೋದರಸಂಬಂಧಿ ಮೊರ್ದೆಕೈ ಹೀಗೆ ಮಾಡುತ್ತಿರುವುದನ್ನು ಕಂಡು ದಿಗ್ಭ್ರಮೆಗೊಂಡರೂ ಅವನ ನಡವಳಿಕೆಯ ಹಿಂದಿನ ಕಾರಣವನ್ನು ಅವಳು ಅರ್ಥಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಹೇಗೂ, ಹೊರಗಿನ ಪ್ರಪಂಚದೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದ ಅವಳ ದಾಸಿಯರು ಮತ್ತು ಕಂಚುಕಿಯರು ಆ ವಿನಾಶಕಾರಿ ಸುದ್ದಿಯನ್ನು ಎಸ್ತೇರಳಿಗೆ ತಿಳಿಸಿದರು. ಅವರು ಯಹೂದಿಗಳನ್ನು ನಾಶಮಾಡುವ ಶಾಸನದ ಬಗ್ಗೆಯೂ ಮತ್ತು ರಾಜನ ಖಜಾನೆಗೆ ದೊಡ್ಡ ಮೊತ್ತದ ಹಣವನ್ನು ಕೊಡುತ್ತೇನೆ ಎಂದು ಆ ನಾಶನಕ್ಕಾಗಿ ಹಾಮಾನನು ಮಾಡಿದ ವಾಗ್ದಾನ ಕುರಿತು ಹೇಳಿದರು. ಈ ಮಾಹಿತಿಯು ಎಸ್ತರಳಿಗೆ ಆಘಾತ ತಂದಿತು , ಏಕೆಂದರೆ ಅವಳು ಆ ಪರಿಸ್ಥಿತಿಯ ಗಂಭೀರತೆಯನ್ನು ಮತ್ತು ತನ್ನ ಜನರು ಎದುರಿಸುತ್ತಿರುವ ಅಪಾಯವನ್ನು ಅರಿತುಕೊಂಡಳು.
ಮೊರ್ದೆಕೈ, ಆ ಆದೇಶದ ಒಂದು ಪ್ರತಿಯನ್ನು ಎಸ್ತೇರಳಿಗೆ ತಲುಪಿಸಲು ಸಂದೇಶವಾಹಕನನ್ನು ಕಳುಹಿಸಿದನು. ಆದೇಶವನ್ನು ಸ್ವೀಕರಿಸಿದ ನಂತರ, ಮೊರ್ದೆಕೈ ಎಸ್ತರಳಿಗೆ ಹೇಗಾದರೂ , ಆಕೆಯ ಜನರ ಪರವಾಗಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದನು. ಯಹೂದಿಗಳಿಗೆ ಕರುಣೆ ಮತ್ತು ರಕ್ಷಣೆ ದೊರಕಿಸಿಕೊಡುವಂತೆ ಮನವಿ ಮಾಡಲು ಅವಳ ಪ್ರಭಾವವನ್ನು ಬಳಸಿಕೊಂಡು ರಾಜನೊಂದಿಗೆ ಮಧ್ಯಸ್ಥಿಕೆ ವಹಿಸುವಂತೆ ಅವನು ಅವಳನ್ನು ಬೇಡಿಕೊಂಡನು. ಎಸ್ತರಳು ಅರಮನೆಯಲ್ಲಿ ವಾಸಿಸುತ್ತಿದ್ದರಿಂದ ಮತ್ತು ರಾಜನ ಬಳಿಗೆ ನೇರವಾಗಿ ಪ್ರವೇಶ ಪಡೆಯುವ ಅರ್ಹತೆ ಹೊಂದಿದ್ದರಿಂದ ಇದು ಮಹತ್ವದ ವಿನಂತಿಯಾಗಿತ್ತು, ಆದರೆ ಇದು ಅವಳನ್ನು ಅನಿಶ್ಚಿತ ಸ್ಥಿತಿಯಲ್ಲಿ ಇರಿಸಿತು, ಏಕೆಂದರೆ ರಾಜ ಶಾಸನ ಪ್ರಕಾರ ರಾಜನ ಅನುಮತಿಯಿಲ್ಲದೇ ರಾಜ್ಯಕಾರ್ಯಗಳಲ್ಲಿ ಮಾಡುವ ಹಸ್ತಕ್ಷೇಪವು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದಾಗಿತ್ತು .
"ಆಗ ಮೊರ್ದೆಕೈಯು ಎಸ್ತೇರಳಿಗೆ, “ಯೆಹೂದ್ಯರೆಲ್ಲಾ ನಾಶವಾದರೂ ನೀನೊಬ್ಬಳು ಮಾತ್ರ ಅರಮನೆಯಲ್ಲಿರುವುದರಿಂದ ತಪ್ಪಿಸಿಕೊಳ್ಳುವೆಯೆಂದು ಭಾವಿಸಬೇಡ. ಏಕೆಂದರೆ ನೀನು ಈಗ ಮೌನವಾಗಿದ್ದು ಬಿಟ್ಟರೆ ಮತ್ತೊಂದು ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ಬಿಡುಗಡೆಯೂ ಉಂಟಾಗುವುವು. ಆದರೆ ನೀನೂ ನಿನ್ನ ತಂದೆಯ ಮನೆಯವರೂ ನಾಶವಾಗಿಹೋಗುವಿರಿ. ಇಂಥಾ ಕಾಲಕ್ಕೋಸ್ಕರ ನೀನು ಪಟ್ಟಕ್ಕೆ ಬಂದಿರಬಹುದು, ಯಾರಿಗೆ ಗೊತ್ತು?” ಎಂದು ಹೇಳಿ ಕಳುಹಿಸಿದನು.(ಎಸ್ತೇರಳು 4:13-14)
ಉತ್ತಮ ಮಾರ್ಗದರ್ಶಕರು ನಮ್ಮ ದೃಷ್ಟಿಕೋನಗಳನ್ನು ವಿಸ್ತರಿಸಲು ಮತ್ತು ನಮ್ಮಲ್ಲಿರುವ ಉಮ್ಮಸ್ಸನ್ನು ಇಮ್ಮಡಿಗೊಳಿಸಲು ನಮಗೆ ಸ್ಫೂರ್ತಿ ನೀಡುವವರಾಗಿರುತ್ತಾರೆ. ಅವರು ನಮ್ಮನ್ನು ಭಯದಿಂದ ಹಿಂದೆ ಸರಿಸುತ್ತಾರೆ ಮತ್ತು ದೇವರ ದೊಡ್ಡ ಯೋಜನೆಯಲ್ಲಿ ನಾವು ಹೇಗೆ ಪಾತ್ರವಹಿಸಬಹುದು ಎಂಬುದನ್ನು ಪರಿಗಣಿಸಲು ನಮ್ಮನ್ನು ಆಹ್ವಾನಿಸುತ್ತಾರೆ.
ಮೊರ್ದೆಕೈ, ಎಸ್ತೆರಳನ್ನು " ನೀನು ಇಂಥ ಪರಿಸ್ಥಿತಿಗಾಗಿಯೇ ಪಟ್ಟಕ್ಕೆ ಬಂದಿರ ಬಹುದು ಯಾರಿಗೆ ಗೊತ್ತು ?ಎಂದು ಕೇಳಿದ " ಈ ಪ್ರಶ್ನೆಯು ಎಸ್ತರಳಿಗೆ ತನ್ನ ಜೀವನದ ಉದ್ದೇಶವನ್ನು ಪ್ರತಿಬಿಂಬಿಸಲು ಪ್ರೋತ್ಸಾಹಿಸಿದಲ್ಲದೆ, ತನ್ನ ಜನರಿಗಾಗಿ ದೈವಿಕ ಯೋಜನೆಯಲ್ಲಿ ಅವಳು ಮಹತ್ವದ ಪಾತ್ರವನ್ನು ವಹಿಸಬೇಕೆಂದು ಸೂಚನೆ ಕೊಟ್ಟಿತು.
ನಮ್ಮಲ್ಲಿ ಪ್ರತಿಯೊಬ್ಬರಿಗೂ ದೇವರ ಸೇವೆ ಮಾಡಲು ಅನನ್ಯ ಅವಕಾಶವಿದೆ, ಆದರೆ ಈ ಅವಕಾಶಗಳು ಅಂತರ್ಗತ ಅಪಾಯಗಳೊಂದಿಗೆ ಬರುತ್ತವೆ. ಇದು ಉಪವಾಸ ಮತ್ತು ಪ್ರಾರ್ಥನೆ, ಆರ್ಥಿಕವಾದ ಅರ್ಪಣೆ , ಕ್ಷಮೆ ಮತ್ತು ಹಿಂದಿನ ನೋವನ್ನು ಮರೆತು ಬಿಡುವುದು ಅಥವಾ ದೇವರ ಕರೆಗೆ ಉತ್ತರಿಸಲು ತಮ್ಮ ಆರಾಮ ವಲಯದಿಂದ ಹೊರಗೆ ಬರುವುದನ್ನು ಒಳಗೊಂಡಿರಬಹುದು. ಸವಾಲು ಯಾವುದೇ ಇರಲಿ, ದೇವರ ಸೇವೆಗೆ ಒಂದು ನಿರ್ದಿಷ್ಟ ಮಟ್ಟದ ಶೌರ್ಯ ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ಇಚ್ಛೆಯ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.
Bible Reading: Numbers 36- Deuteronomy 1
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿಮ್ಮ ಸೇವೆ ಮಾಡಲು ನೀವು ನನಗೆ ನೀಡಿದ ವಿಶೇಷ ವರಗಳು ಮತ್ತು ಸಾಮರ್ಥ್ಯಗಳಿಗಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನನ್ನ ಸುತ್ತಲಿರುವವ ಎಲ್ಲರ ಮಧ್ಯೆ ನಿನ್ನ ಸೇವೆಯನ್ನು ಶ್ರದ್ಧೆಯಿಂದ ಮಾಡುವಂತೆ ಪ್ರೇರೇಪಿಸಲ್ಪಡಲು ಮತ್ತು ಪ್ರೇರೇಪಿಸಲು ದಯವಿಟ್ಟು ನನಗೆ ಬಲ ನೀಡು ಎಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ, ಆಮೆನ್.
Join our WhatsApp Channel

Most Read
● ಯೇಸುವಿನ ಹೆಸರು.● ದೇವರಿಗಾಗಿ ಮತ್ತು ದೇವರೊಂದಿಗೆ.
● ಯಾಬೇಚನ ಪ್ರಾರ್ಥನೆ
● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಕನಸುಗಳ ಕೊಲೆಪಾತಕರು
● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು