"ರಕ್ಷಕನು ಏಸಾವಿನ ಪರ್ವತವನ್ನು ಆಳಲು ಚೀಯೋನ್ ಪರ್ವತವನ್ನು ಏರುವನು. ಆಗ ರಾಜ್ಯವು ಯೆಹೋವ ದೇವರದಾಗಿರುವುದು". (ಓಬದ್ಯ 1:21)
ಹೆಚ್ಚಿನ ಜನರು ಭಾವಿಸುವಂತೆ ಮಕ್ಕಳು ಒಂದು ಆಕಸ್ಮಿಕ ಪ್ರಮಾದವಲ್ಲ. ಬಹುಶಃ ನಿಮ್ಮ ಮಗುವನ್ನು ಒಂದು ಪ್ರಮಾದವೆಂದೂ, ಯೋಜಿತವಾಗದೆ ಆದ ಗರ್ಭಧಾರಣೆಯಿಂದ ಹುಟ್ಟಿಬಿಟ್ಟಿದಂತ ಮಗು ಎಂದು ನೋಡುವ ಪೋಷಕರಲ್ಲಿ ನೀವೂ ಸಹ ಒಬ್ಬರಾಗಿರಬಹುದು ಮತ್ತು ಇದರಿಂದಾಗಿ ನೀವು ಅವರ ಜೀವನ ಮತ್ತು ಅವರ ಪಾಲನೆಯನ್ನು ಗಂಭೀರವಾಗಿ ಪರಿಗಣಿಸದೇ ಹೋಗುತ್ತಿರಬಹುದು. ನಿಮಗಾಗಿ ನನ್ನಲ್ಲಿ ಒಂದು ಒಳ್ಳೆಯ ಸುದ್ದಿ ಇದೆ; ನಿಮ್ಮ ಮಗು ಒಂದು ಪ್ರಮಾದವಲ್ಲ. ದೇವರು ನಿಮ್ಮ ಮಗುವಿಗಾಗಿ ಒಂದು ನಿರ್ದಿಷ್ಟ ಯೋಜನೆಯನ್ನು ಹೊಂದಿದ್ದಾನೆ. ನಿಮ್ಮ ಮಗು ಭೂಮಿಯನ್ನು ಬೆಳಗಿಸಲು ದೇವರಿಂದ ಕಳುಹಿಸಲ್ಪಟ್ಟ ಒಂದು ನಕ್ಷತ್ರವಾಗಿದೆ. ದುರದೃಷ್ಟವಶಾತ್, ಹೆಚ್ಚಿನ ಪೋಷಕರು ತಮ್ಮ ಮಕ್ಕಳ ತಾರಾಪಟ್ಟವನ್ನು ಗುರುತಿಸುವುದಿಲ್ಲ , ಆದರೆ ಸೈತಾನನು ಆ ಮಕ್ಕಳ ಉದಯೋನ್ಮುಖತೆಯನ್ನು ಹೊಸಕಿಹಾಕಲು ತನಗೆ ಸಾಧ್ಯವಾದ ಎಲ್ಲವನ್ನೂ ಮಾಡುತ್ತಾನೆ.
ಮಾರ್ಕ 9:20-23 ರಲ್ಲಿರುವ ಈ ನಿದರ್ಶನವನ್ನು ನೋಡೋಣ. ಸತ್ಯವೇದ ಹೇಳುತ್ತದೆ, " ಅವರು ಅವನನ್ನು ಯೇಸುವಿನ ಬಳಿಗೆ ತಂದರು. ಯೇಸುವನ್ನು ನೋಡಿದ ತಕ್ಷಣವೇ ಆ ದೆವ್ವವು ಆ ಬಾಲಕನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಕಾರುತ್ತಾ ಹೊರಳಾಡಿದನು. ಯೇಸು ಅವನ ತಂದೆಗೆ, “ಇದು ಇವನನ್ನು ಹಿಡಿದು ಎಷ್ಟು ಕಾಲವಾಯಿತು?” ಎಂದು ಕೇಳಲು, ಅವನು, “ಬಾಲ್ಯದಿಂದಲೇ ಹೀಗಿದೆ. ಅಶುದ್ಧಾತ್ಮವು ಅವನನ್ನು ಕೊಲ್ಲಬೇಕೆಂದು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು. ಆದರೆ ನೀನು ಏನಾದರೂ ಮಾಡಲು ಸಾಧ್ಯವಿದ್ದರೆ, ಕನಿಕರಿಸಿ ನಮಗೆ ಸಹಾಯಮಾಡು,” ಎಂದನು. ಆಗ ಯೇಸು ಅವನಿಗೆ, “ನಿನಗೆ ಸಾಧ್ಯವಿದ್ದರೆ ಎನ್ನುತ್ತೀಯಲ್ಲಾ? ನಂಬುವವನಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದನು
ಕ್ರಿಸ್ತನ ಸೇವಾ ಸಮಯದಲ್ಲಿ ಆತನು ಒಂದು ಸಂದರ್ಭದಲ್ಲಿ, ಬಾಲ್ಯದಿಂದಲೂ ದುರಾತ್ಮಗಳು ದೈಹಿಕವಾಗಿ ಆಕ್ರಮಣ ಮಾಡುತ್ತಿದ್ದ ಮೂರ್ಛೆರೋಗದಿಂದ ಬಳಲುತ್ತಿದ್ದ ಹುಡುಗನಿಗೆ ಆತನು ಬಿಡುಗಡೆಯನ್ನು ಕೊಟ್ಟನು (ಮಾರ್ಕ 9:21).
ಇನ್ನೊಂದು ಸಂದರ್ಭದಲ್ಲಿ, ದುರಾತ್ಮಗಳಿಂದ ಪೀಡಿತವಾಗಿದ್ದ ಒಬ್ಬ ಸ್ತ್ರೀಯ ಚಿಕ್ಕ ಮಗಳನ್ನು ಆತನು ಬಿಡುಗಡೆ ಮಾಡಿದನು (ಮತ್ತಾಯ 15:22). ಈ ಎರಡೂ ಘಟನೆಗಳು ಕೆಲವು ರೀತಿಯ ದುರಾತ್ಮಗಳು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಜೀವನವನ್ನು ಆಕ್ರಮಿಸಲು ಪ್ರಯತ್ನಿಸುತ್ತವೆ ಎಂಬುದನ್ನು ಸೂಚಿಸುತ್ತವೆ. ಪ್ರಾಯಶಃ ಈ ಮಕ್ಕಳು ಪೂರೈಸ ಬೇಕಾದ ಒಂದು ಅದ್ಭುತವಾದ ಉದ್ದೇಶವನ್ನು ಹೊಂದಿದ್ದು, ಅವು ಜಾಗತಿಕ ಮಟ್ಟದಲ್ಲಿ ಪರಿಹಾರ ಕೊಡುವಂತಾವುಗಳಾಗಬಹುದು. ಬಹುಶಃ ಅದಕ್ಕಾಗಿಯೇ ಸೈತಾನನು ಈ ನಕ್ಷತ್ರಗಳನ್ನು ನೋಡಿ ಆ ಮಕ್ಕಳು ಅವರ ಹೆತ್ತವರ ಚಿಂತೆಗೆ ಕಾರಣವನ್ನಾಗಿ ಮಾಡಲು ಅವನು ನಿರ್ಧರಿಸಿರಬಹುದು.
ದುರಾತ್ಮಗಳಿಂದ ಪೀಡಿತಳಾಗಲು ಆ ಒಬ್ಬ ಪುಟ್ಟ ಹುಡುಗಿ ಜೀವನದಲ್ಲಿ ಏನು ತಾನೇ ಮಾಡಿರಲು ಸಾಧ್ಯ?. ಆ ಮಗು ಯಾರಿಗೆ ತಾನೇ ಅಪರಾಧ ಮಾಡಿದ್ದೀತು ಅಥವಾ ಅದು ಜೀವನದಲ್ಲಿ ಯಾವ ಪಾಪ ಕಾರ್ಯದಲ್ಲಿ ತಾನೇ ತನ್ನನ್ನು ತೊಡಗಿಸಿಕೊಂಡೀತು? ಆ ಚಿಕ್ಕ ಹುಡುಗನು ದುರಾತ್ಮಗಳಿಂದ ಪೀಡಿಸಲ್ಪಡುವಂತದ್ದು ಏನು ಮಾಡಿರಬಲ್ಲನು?ಎಂದು ನೀವು ಊಹಿಸಿರಬಹುದು.ಪ್ರಾಯಶಃ ಇವರೆಲ್ಲಾ ಮುಂದೆ ಅಂಧಕಾರ ರಾಜ್ಯವನ್ನು ಧಮನ ಗೊಳಿಸಲು ಬೆಳೆಯುವ ಜನರಾಗಬಹುದೇನೋ ಆದ್ದರಿಂದಲೇ ಸೈತಾನನು ಅವರ ಜೀವನಕ್ಕಾಗಿ ದೇವರ ಯೋಜನೆಯನ್ನು ಆಶಾಭಂಗ ಮಾಡಲು ಹೊರಟಿದ್ದಾನೆ. ಆದರೆ ಅವನು ವಿಫಲನಾಗುತ್ತಾನೆ.
ನಿಮಗೂ ಸಮಸ್ಯೆಗಳನ್ನು ಉಂಟುಮಾಡುವ ಮಗು ಇದೆಯೇ? ಪ್ರಮಾದಗಳಲ್ಲಿ ನಿಮ್ಮನ್ನು ಸಿಲುಕಿಸಿ ನಿಮಲ್ಲಿ ಸಂತೋಷಕ್ಕಿಂತ ಹೆಚ್ಚಾಗಿ ಕಣ್ಣೀರನ್ನೇ ತರಿಸುವಂತ ಮಗು ನಿಮಗಿದೆಯೇ? ನಿಮ್ಮ ಮಗು ಯಾವುದಾದರೂ ವ್ಯಸನಕ್ಕೆ ಒಳಗಾಗಿದೆಯೇ? ಆ ಮಕ್ಕಳು ರಕ್ಷಕರಾಗುವರು ಎಂದು ನಾನು ನಿಮಗೆ ತಿಳಿಸಬೇಕೆಂದು ಬಯಸುತ್ತೇನೆ. ಹೌದು, ಅವುಗಳಿಗಾಗಿ ಅದ್ಭುತ ಮತ್ತು ವರ್ಣರಂಜಿತ ಯೋಜನೆಗಳಿವೆ. ಇಡೀ ಲೋಕವೇ ಕಾಯುತ್ತಿರುವ ಉತ್ತರ ಅವುಗಳಲ್ಲಿದೆ. ಅಹಂಕಾರಿಗಳನ್ನು ದೀನರನ್ನಾಗಿ ಮಾಡುವಂತ ಮಹಾನ್ ಆವಿಷ್ಕಾರಗಳು ಅವುಗಳಲ್ಲಿವೆ. ಆದ್ದರಿಂದ ನಿಮ್ಮ ಮನೋಧೈರ್ಯವನ್ನು ಬಿಟ್ಟುಬಿಡಬೇಡಿ. ನೀವು ಈಗ ಅನುಭವಿಸುತ್ತಿರುವುದು ಅವನನ್ನು ಅಥವಾ ಅವಳನ್ನು ಆ ಅದ್ಭುತ ಯೋಜನೆಗಳಿಂದ ದೂರವಿರಿಸಲು ಸೈತಾನನು ಮಾಡುತ್ತಿರುವ ಕುಯುಕ್ತಿಯಷ್ಟೇ.
ಉದಾಹರಣೆಗೆ, ಐಗುಪ್ತದ ಫರೋಹನು ಐಗುಪ್ತದಲ್ಲಿದ್ದ ಸೂಲಗಿತ್ತಿಯರಿಗೆ, “ನೀವು ಹಿಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವುದಕ್ಕೆ ಹೆರಿಗೆಯ ಸಮಯದಲ್ಲಿ ಅವರನ್ನು ಪರಾಂಬರಿಸುವಾಗ, ಗಂಡು ಮಗುವಾದರೆ ಅದನ್ನು ಕೊಂದುಹಾಕಿರಿ, ಹೆಣ್ಣಾದರೆ ಬದುಕಲಿ,” ಎಂದು ಹೇಳಿದ್ದನು.
" ಫರೋಹನು ತನ್ನ ಎಲ್ಲಾ ಜನರಿಗೆ, “ಹುಟ್ಟುವ ಹಿಬ್ರಿಯರ ಗಂಡು ಮಕ್ಕಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಮಕ್ಕಳನ್ನೆಲ್ಲಾ ಬದುಕಿಸಬೇಕು,” ಎಂದು ಅಪ್ಪಣೆಕೊಟ್ಟನು.
(ವಿಮೋಚನಕಾಂಡ 1:16, 22).
ಗಂಡುಮಕ್ಕಳ ಮೇಲಿನ ಈ ಮರಣದ ಆಜ್ಞೆಯು ಮೋಶೆಯ ತಾಯಿಯನ್ನು ನೈಲ್ ನದಿಯಲ್ಲಿ ತನ್ನ ಕೈಯಿಂದ ಮಾಡಿದ ಸಣ್ಣ ಬಿದಿರಿನ ಪೆಟ್ಟಿಗೆಯಲ್ಲಿ ತನ್ನ ಸ್ವಂತ ಶಿಶುವನ್ನು ಮರೆಮಾಡಿ ಇರಿಸುವಂತೆ ಒತ್ತಾಯಿಸಿತು.
ಶತಮಾನಗಳ ನಂತರ, ಯೆಹೂದ್ಯರ ಅರಸನೊಬ್ಬ ಬೆತ್ಲೆಹೇಮ್ ನಲ್ಲಿ ಜನಿಸಿದ್ದಾನೆಂದು ಹೆರೋದನು ಕೇಳಿದನು. ಭಯದಿಂದ, ಎರಡು ವರ್ಷದೊಳಗಿನ ಎಲ್ಲಾ ಶಿಶುಗಳನ್ನು ಕೊಲ್ಲಲು ಅವನು ರೋಮನ್ ಸೈನಿಕರಿಗೆ ಆದೇಶಿಸಿದನು (ಮತ್ತಾಯ 2:16). ಆದರೆ, ದೇವರ ರಕ್ಷಣೆಯ ಮೂಲಕ, ಮೋಶೆ ಮತ್ತು ಯೇಸು ಇಬ್ಬರೂ ಈ ಮರಣದ ಆಜ್ಞೆಗಳಿಂದ ತಪ್ಪಿಸಿಕೊಂಡು ತಮ್ಮ ಪೀಳಿಗೆಗೆ ವಿಮೋಚನೆಯನ್ನು ತಂದರು - ಒಂದು ಇಸ್ರೇಲ್ ಜನಾಂಗಕ್ಕೆ ಮತ್ತೊಂದು ಇಡೀ ಲೋಕಕ್ಕೆ.
ಆದ್ದರಿಂದ, ನಿಮ್ಮ ಮಗುವನ್ನು ಬಲಿಪಶುಮಾಡಬೇಡಿ. ದೇವರು ಅವುಗಳೊಳಗೆ ದೊಡ್ಡ ದೊಡ್ಡ ಆವಿಷ್ಕಾರಗಳನ್ನು ಉದ್ದೇಶಿಸಿ ರೂಪಿಸಿದ್ದಾನೆ. ನೀವು ಮಾಡಬೇಕಾಗಿರುವುದು ಮಾರ್ಕ 9 ನೇ ಅಧ್ಯಾಯದಲ್ಲಿ ಮಗುವಿನ ತಂದೆ ಅಥವಾ ಮತ್ತಾಯ 15 ನೇ ಅಧ್ಯಾಯದಲ್ಲಿ ತಾಯಿ ತೆಗೆದುಕೊಂಡ ಹೆಜ್ಜೆಯನ್ನೇ. ನಿಮ್ಮ ಮಗುವಿನ ಸಲುವಾಗಿ ಯೇಸುವಿನ ಹಿಂದೆ ಹೋಗಿ. ದಯವಿಟ್ಟು ಅವನ ಅಥವಾ ಅವಳ ಮೇಲೆ ಕೈ ಎತ್ತಬೇಡಿ ಏಕೆಂದರೆ ಲೋಕವು ಅವರ ಬೆಳಕಿಲ್ಲದೆ ಹೋದರೆ ಅಂಧಕಾರದಲ್ಲೇ ಉಳಿದು ಬಿಡುತ್ತದೆ. ದೇವರು ಅವರೊಳಗೆ ಲೋಕವನ್ನು ಸ್ವತಂತ್ರಗೊಳಿಸುವ ದೊಡ್ಡ ಸಂಪತ್ತನ್ನು ಇಟ್ಟಿದ್ದಾನೆ. ಆದ್ದರಿಂದ, ಅವರಿಗಾಗಿ ಪ್ರಾರ್ಥಿಸಿ. ಅವರ ಜಾಗತಿಕ ನಿಯೋಜನೆಯು ಅವರಲ್ಲಿ ಉತ್ತಮವಾಗಿ ನೆಲೆಯನ್ನು ಕಂಡುಕೊಳ್ಳುವಂತೆ ಪ್ರಾರ್ಥನೆಯಲ್ಲಿ ಅವರನ್ನು ರಕ್ಷಕನ ಬಳಿಗೆ ಕೊಂಡೊಯ್ಯಿರಿ.
Bible Reading: Deuteronomy 31-32
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ಈ ಮಕ್ಕಳಿಗಾಗಿ ನೀನು ಅನುಗ್ರಹಿಸಿರುವ ಆಶೀರ್ವಾದಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ಅವರನ್ನು ಕತ್ತಲೆಯ ಸಂಕೋಲೆಗಳಿಂದ ರಕ್ಷಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಅವರು ತಮ್ಮ ಜೀವನದ ಗತಿಯಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಎದ್ದು ಬರಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಸೈತಾನನು ಅವರನ್ನು ನಿಮ್ಮ ಉದ್ದೇಶದಿಂದ ಎಂದಿಗೂ ಕಸಿದು ಕೊಳ್ಳುವುದಿಲ್ಲ . ಖಂಡಿತವಾಗಿಯೂ ಆ ಮಕ್ಕಳು ತಮ್ಮ ಜನಾಂಗವನ್ನು ಅವನತಿಯಿಂದ ಯೇಸುನಾಮದಲ್ಲಿ ರಕ್ಷಿಸುತ್ತಾರೆ. ಆಮೆನ್!
Join our WhatsApp Channel

Most Read
● ಆತ್ಮದಲ್ಲಿ ಉರಿಯುತ್ತಿರ್ರಿ.● ಅನುಕರಣೆ
● ದೇವರಿಗಾಗಿ ಮತ್ತು ದೇವರೊಂದಿಗೆ.
● ವಾಕ್ಯದಲ್ಲಿರುವ ಜ್ಞಾನ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ನಿಮ್ಮ ಮಾರ್ಗದರ್ಶಕರು ಯಾರು - II
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
ಅನಿಸಿಕೆಗಳು