“ದೇವರು ಹೇಳುವುದೇನೆಂದರೆ: ‘ಅಂತ್ಯ ದಿನಗಳಲ್ಲಿ ನನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು, ನಿಮ್ಮ ಯುವಜನರಿಗೆ ದರ್ಶನಗಳು ಕಾಣುವವು, ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು. ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು, ಅವರು ಪ್ರವಾದಿಸುವರು.
(ಅ. ಕೃ 2:17–18; ಯೋವೇಲ 2:28–29)
ನಾವು ಅಂತ್ಯ ದಿನಗಳಲ್ಲಿ ಇದ್ದೇವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಅಂತ್ಯ ದಿನಗಳ ದೇವರ ಕಾರ್ಯಸೂಚಿಯಲ್ಲಿ ಯುವಕರು ಪ್ರಮುಖ ಪಾತ್ರ ವಹಿಸುವವರಾಗಿರುತ್ತಾರೆ ಎಂದು ಧರ್ಮಗ್ರಂಥ ಹೇಳುತ್ತದೆ. ಆದರೆ ಅವರು ಮನೆಯಲ್ಲೇ ಕುಳಿತು ಅಂತ್ಯ ದಿನದ ಪ್ರವಾದನೆ ಹೇಗೆ ನೆರವೇರುತ್ತದೆ ಎಂದು ನೋಡವವರಾಗಿರದೆ ಪರಲೋಕದ ಸಲಹೆಯನ್ನು ನೆರವೇರಿಸವವರಾಗಬೇಕು. ಯಾಕೆಂದರೆ ಅವರು ಅಂತ್ಯಕಾಲದ ದೇವರ ಸೈನ್ಯದ ಭಾಗವಾಗಿದ್ದಾರೆ.
, "ನಿನ್ನ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು; ನಿನ್ನ ಯುವಕರು ದರ್ಶನಗಳನ್ನು ನೋಡುವರು." ಎಂದು ಸತ್ಯವೇದ ಹೇಳುವುದನ್ನು ನೀವು ಗಮನಿಸಿದ್ದೀರಾ? ಆದ್ದರಿಂದ ಯುವತಿಯೇ, ಯುವಕನೇ, ನಿನ್ನ ಲಿಂಗ ಯಾವುದೇ ಇರಲಿ, ನೀನು ದೇವರ ಕಾರ್ಯಸೂಚಿಗಾಗಿ ಸೆರೆಹಿಡಿಯಲ್ಪಟ್ಟಿದ್ದೀಯ. ದೇವರ ರಾಜ್ಯದ ಕಡೆಯ ದಿನದ ಉದ್ದೇಶಗಳಲ್ಲಿ ನೀನು ಕಾಣಿಸಿಕೊಳ್ಳುವವನಾಗಿದ್ದೀಯ . ನೀನು ಇನ್ನೂ ತುಂಬಾ ಚಿಕ್ಕವಳು/ ಚಿಕ್ಕವನು ಎಂದು ನಿನಗೆ ಹೇಳಿದವನು ಬಹುಶಃ ಅಂತ್ಯ ದಿನದ ದೇವರ ನೀಲನಕ್ಷೆಯನ್ನು ಓದಿಲ್ಲ ಎಂದು ಕಾಣಿಸುತ್ತದೆ.
ದೇವರು ಮಕ್ಕಳನ್ನು ಅಲ್ಲ, ವಯಸ್ಕರನ್ನು ಮಾತ್ರ ಎದುರು ನೋಡುತ್ತಾನೆ ಎಂದು ನಿನಗೆ ಹೇಳಿದವನು ಈ ತಲೆಮಾರಿನಲ್ಲಿ ದೇವರ ಅಂತ್ಯಕಾಲದ ನಡೆಯನ್ನು ಅರಿಯದ ಅಜ್ಞಾನಿಯಾಗಿದ್ದಾನೆ . ಈ ಕಡೆಯ ದಿನಗಳಲ್ಲಿ, ದೇವರ ಅದ್ಭುತವಾದ ಆತ್ಮನ ಸುರಿಸುವಿಕೆ ಮೂಲಕ ನೀವು ಪ್ರವಾದನೆ ನುಡಿಯುವಿರಿ ಮತ್ತು ದರ್ಶನಗಳನ್ನು ನೋಡುವಿರಿಎಂದು ದೇವರು ಹೇಳುತ್ತಾನೆ. ಕ್ರಿಸ್ತನ ಪುನರಾಗಮನಕ್ಕೆ ಮುಂಚಿತವಾಗಿ ಯುವಕರಿಗೆ ಪವಿತ್ರಾತ್ಮನ ವಿಶಿಷ್ಟವಾದ ಅಭಿಷೇಕವು ವಾಗ್ದಾನ ಮಾಡಲ್ಪಟ್ಟಿದೆ!
ಪವಿತ್ರಾತ್ಮನ ಸುರಿಸುವಿಕೆಯ ಮೂಲಕ, ನೀವು ಇನ್ನೂ ಹೆಚ್ಚಾದ ಆತ್ಮೀಕ ದರ್ಶನಗಳು ಮತ್ತು ಕನಸುಗಳನ್ನು ವೀಕ್ಷಿಸುವಿರಿ.ಆಗ ದೇವರ ಯೋಜನೆಗಳನ್ನು ಪ್ರಕಟ ಪಡಿಸಲು ಮತ್ತು ವಿರೋಧಿಯ ತಂತ್ರಗಳನ್ನು ಬಹಿರಂಗಪಡಿಸಲು ನಿಮಗೆ ಬೇಕಾದುದನ್ನು ನೀವು ಹೊಂದಿರುತ್ತೀರಿ. ಈ ಕಡೆಯ ದಿನಗಳಲ್ಲಿ, ಭವಿಷ್ಯವನ್ನು ದೂರದಿಂದ ನೋಡಲು ಮತ್ತು ಇಂದಿನ ದೇವರ ಉದ್ದೇಶದೊಂದಿಗೆ ಮಾನವೀಯತೆಯನ್ನು ಹೊಂದಿಸಲು ದೇವರು ನಿಮ್ಮ ಕಣ್ಣುಗಳಿಗೆ ಬಲ ನೀಡುತ್ತಾನೆ.
ಉದಾಹರಣೆಗೆ, ಸತ್ಯವೇದದ 1 ಸಮುವೇಲ 3:1-4, 10-11, ರಲ್ಲಿ ಹೇಳುವುದನ್ನು ನೋಡುವುದಾದರೆ
"ಬಾಲಕನಾದ ಸಮುಯೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವ ದೇವರಿಗೆ ಸೇವೆ ಮಾಡಿಕೊಂಡಿದ್ದನು. ಆ ದಿನಗಳಲ್ಲಿ ಯೆಹೋವ ದೇವರ ವಾಕ್ಯವು ವಿರಳವಾಗಿತ್ತು. ಅಲ್ಲಿ ದೇವದರ್ಶನಗಳು ಅಪರೂಪವಾಗಿದ್ದವು. ಒಂದು ರಾತ್ರಿ ಏಲಿಯು ತನ್ನ ಸ್ಥಳದಲ್ಲಿ ಮಲಗಿದ್ದನು. ನೋಡುವುದಕ್ಕಾಗದಂತೆ ಅವನ ಕಣ್ಣುಗಳು ಮಬ್ಬಾಗುತ್ತಿದ್ದವು. ದೇವರ ಮಂಜೂಷವಿರುವ ಯೆಹೋವ ದೇವರ ಮಂದಿರದಲ್ಲಿ ದೇವರ ದೀಪವು ಆರಿಹೋಗುವುದಕ್ಕಿಂತ ಮುಂಚೆ ಸಮುಯೇಲನು ಮಲಗಿದ್ದನು. ಆಗ ಯೆಹೋವ ದೇವರು ಸಮುಯೇಲನನ್ನು ಕರೆದರು. ಅದಕ್ಕವನು, “ಇಗೋ, ನಾನು ಇಲ್ಲಿದ್ದೇನೆ,” ಎಂದು ಹೇಳಿ,' ಆಗ ಯೆಹೋವ ದೇವರು ಬಂದು ನಿಂತು ಮೊದಲಿನ ಹಾಗೆಯೇ, “ಸಮುಯೇಲನೇ, ಸಮುಯೇಲನೇ,” ಎಂದು ಕರೆದರು. ಅದಕ್ಕೆ ಸಮುಯೇಲನು, “ಯೆಹೋವ ದೇವರೇ ಮಾತನಾಡಿ; ನಿಮ್ಮ ದಾಸನು ಕೇಳುತ್ತಾನೆ,” ಎಂದನು. ಆಗ ಯೆಹೋವ ದೇವರು ಸಮುಯೇಲನಿಗೆ, “ನಾನು ಇಸ್ರಾಯೇಲಿನಲ್ಲಿ ಒಂದು ಕಾರ್ಯವನ್ನು ಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳೂ ಕಂಪಿಸುವುವು."
ಆ ದಿನಗಳಲ್ಲಿ ಯಾವುದೇ ದರ್ಶನಗಳಿರಲಿಲ್ಲ ಎಂದು ಸತ್ಯವೇದ ಹೇಳುತ್ತದೆ. ಆ ದಿನಗಳಲ್ಲಿ ಏಲಿಯು ಯಾಜಕನಾಗಿದ್ದು ಅವನ ಭೌತಿಕ ಕಣ್ಣುಗಳು ಮಸುಕಾಗಿತ್ತು. ಇಡೀ ಇಸ್ರೇಲ್ ಜನಾಂಗವು ಅಸ್ತವ್ಯಸ್ತವಾಗಿತ್ತು. ಭೂಮಿಗಾಗಿ ದೇವರ ಯೋಜನೆ ಮತ್ತು ಉದ್ದೇಶ ಯಾರಿಗೂ ತಿಳಿದಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಮನಸೋ ಇಚ್ಛೆಯಂತೆ ನಡೆಯುತ್ತಿದ್ದರು, ಆದರೆ ದೇವರು ಮಧ್ಯಪ್ರವೇಶಿಸಿ ಇವೆಲ್ಲವುಗಳನ್ನು ಮೀರಿ ನೋಡಬಲ್ಲ ಒಬ್ಬ ಯೌವ್ವನಸ್ಥನನ್ನು ಕರೆದನು. ದೇವರು ಸಮುವೇಲನನ್ನು ಕರೆದು ತನ್ನ ಉದ್ದೇಶ ಮತ್ತು ಸಲಹೆಯನ್ನು ಅವನಿಗೆ ಪ್ರಕಟ ಪಡಿಸಿದನು. ಮುಂಬರುವ ವರ್ಷಗಳಲ್ಲಿ ಇಸ್ರೇಲ್‌ನಲ್ಲಿ ತಾನು ಇಂತಿಂಥ ಕಾರ್ಯಗಳನ್ನು ಮಾಡುತ್ತೇನೆಂದು ಸಮುವೇಲನಿಗೆ ಆತನು ಮುಂಚಿತವಾಗಿ ಹೇಳಿದನು. ಮರುದಿನ, ವೃದ್ಧನಾದ ಏಲಿ ಸಮುವೇಲನನ್ನು ಕರೆದು ಕರ್ತನು ಏನು ಹೇಳಿದನೆಂದು ಕೇಳಬೇಕಾಯಿತು. ಆತ್ಮನ ಸುರಿಸುವಿಕೆಯು ಇದನ್ನೇ ಮಾಡುತ್ತದೆ. ಇದು ಯುವಕರು ಮತ್ತು ಮಕ್ಕಳು ತಮ್ಮ ಕುಟುಂಬಗಳಿಗಾಗಿಯೂ ಮತ್ತು ಜನಾಂಗಕ್ಕೂ ದೇವರಿಂದ ಬೇಡಿಕೊಳ್ಳುವಂತೆ ಅದು ಅವಕಾಶ ನೀಡುತ್ತದೆ.
ವೈದ್ಯರು, ರಾಜಕಾರಣಿಗಳು ಮತ್ತು ಹೌದು, ಇನ್ನೂ ಹುಟ್ಟಬೇಕಾದ ಶಿಶುಗಳ ಅಕಾಲಿಕ ಮರಣವನ್ನು ಕಾಣುತ್ತಿರುವ ಗರ್ಭಿಣಿಯರ ಕಣ್ಣುಗಳನ್ನೇ ಸೈತಾನನು ಕುರುಡಾಗಿಸಿದ್ದಾನೆ ಎಂಬ ವಿಚಾರಕ್ಕೆ ನಾವು ಆಶ್ಚರ್ಯಪಡಬೇಕಾಗಿಲ್ಲ ಎನ್ನುವಲ್ಲಿ ಇನ್ನೂ ಅಂತಹ ಕ್ರಿಯಾತ್ಮಕ ವಾಗ್ದಾನವಿದ್ದರೂ, ನಮ್ಮ ಕಾಲದ ಯುವಕರು ಎದುರಾಳಿಯ ಅತ್ಯಂತ ಸೂಕ್ಷ್ಮ ಮತ್ತು ಕುತಂತ್ರದ ದಾಳಿಯನ್ನು ಅನುಭವಿಸುತ್ತಿರುವುದು ಆಶ್ಚರ್ಯವೇ? ದೇವರೊಂದಿಗೆ ಯೌವ್ವನಸ್ಥರು ಹೊಂದಿರಬೇಕಾದ ಸಂಬಂಧವನ್ನು ತಡೆಯುವ ಮೂಲಕ, ದೇವರ ವಾಕ್ಯವನ್ನು ಕೇಳದಂತೆ ಮಾಡುವ ಮೂಲಕ ಶತ್ರುವು ಅವರ ಕಿವಿಗಳನ್ನು ನಿರ್ಬಂಧಿಸುತ್ತಿದ್ದಾನೆ. ಮಾದಕ ದ್ರವ್ಯಗಳು ಅಥವಾ ಮದ್ಯದ ವ್ಯಸನಗಳಿಂದ ಅವರನ್ನು ಬಂಧಿಸುವ ಮೂಲಕ, ಪವಿತ್ರಾತ್ಮನ ಶಾಂತಿಯುತ ಮತ್ತು ಸಂತೋಷದಾಯಕ ಪ್ರಸನ್ನತೆಯನ್ನು ಅನುಭವಿಸುದಂತೆ ಅವರನ್ನು ಅವನು ತಡೆಯುತ್ತಿದ್ದಾನೆ. ಅವರನ್ನು ದಂಗೆಯಲ್ಲಿ ಕಾರ್ಯಪ್ರವೃತ್ತರಾಗಿ ಇರಿಸುವ ಮೂಲಕ, ದುರಾತ್ಮ ಶಕ್ತಿಗಳು ಅವರ ಪೋಷಕರು ಅವರ ಮೇಲೆ ಹೊಂದಿರುವ ಪ್ರೀತಿಯನ್ನು ಯೌವ್ವನಸ್ಥರು ಅನುಭವಿಸದಂತೆ ತಡೆಯುತ್ತಿವೆ.
ಆದರೆ ಇದು ಬಿಡುಗಡೆಯ ಸಮಯ. ಈ ಯುವಕರಿಗಾಗಿ ಪ್ರಾರ್ಥಿಸಲು ಮತ್ತು ದೇವರ ತ್ರಾಣವುಳ್ಳ ಹಸ್ತದ ಕೆಳಗೆ ಅವರನ್ನು ಸರಿಯಾಗಿ ಇರಿಸಲು ಇದುವೇ ಸಮಯವಾಗಿದ್ದು ತನ್ಮೂಲಕ ಆತ್ಮನು ತನ್ನ ಅಭಿಷೇಕವನ್ನು ಅವರ ಮೇಲೆ ಅಳತೆಯಿಲ್ಲದೆ ಸಂಪೂರ್ಣವಾಗಿ ಸುರಿಯಲ್ಪಡುವಂತೆ ಆಗುತ್ತದೆ. ಆಗ ಮಾತ್ರ ಅವರು ಸಮುವೇಲನಂತೆ ಎದ್ದು ತಮ್ಮ ತಲೆಮಾರಿಗೆ ದಾರಿ ತೋರಿಸಬಹುದು.
Bible Reading: Deuteronomy 33-34; Joshua 1-2
ಪ್ರಾರ್ಥನೆಗಳು
ತಂದೆಯೇ ಈ ಯೌವ್ವನಸ್ಥರಿಗಾಗಿ ನೀನು ಮಾಡಿರುವ ಆತ್ಮನ ವಾಗ್ದಾನಕ್ಕಾಗಿ ಯೇಸುನಾಮದಲ್ಲಿ ಸ್ತೋತ್ರ. ಅವರ ಮೇಲಿನ ನರಕದ ಪ್ರತಿಯೊಂದು ಹಿಡಿತವೂ ಮುರಿಯಲ್ಪಡಲಿ ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಅವರ ಮೇಲಿರುವ ಸೈತಾನನ ಪ್ರತಿಯೊಂದು ಕುತಂತ್ರವೂ ನಾಶವಾಗಲಿ ಎಂದು ಪ್ರಾರ್ಥಿಸುತ್ತೇನೆ. ಪವಿತ್ರಾತ್ಮನ ಸುರಿಸಲ್ಪಡುವಿಕೆಯ ಮೂಲಕ ಅವರು ದರ್ಶನಗಳನ್ನು ಕಾಣುವಂತಾಗಲಿ ಮತ್ತು ಅವರ ತಲೆಮಾರಿಗಾಗಿ ನೀನಿಟ್ಟಿರುವ ಉದ್ದೇಶವನ್ನು ಅವರು ಅರ್ಥಮಾಡಿಕೊಳ್ಳಲಿ ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ಆತ್ಮೀಕ ನಿಯಮ : ಸಹವಾಸ ನಿಯಮ● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೈವೀಕ ಶಿಸ್ತಿನ ಸ್ವರೂಪ-1
● ವಾಕ್ಯದಿಂದ ಬೆಳಕು ಬರುತ್ತದೆ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ದೇವರು ಹೇಗೆ ಒದಗಿಸುತ್ತಾನೆ #2
ಅನಿಸಿಕೆಗಳು