"ಅದಕ್ಕೆ ಆತನು - ಪರಲೋಕದಲ್ಲಿರುವ ನನ್ನ ತಂದೆಯು ನೆಡದೆ ಇರುವ ಗಿಡಗಳೆಲ್ಲಾ ಬೇರಿನೊಂದಿಗೆ ಕಿತ್ತುಹಾಕಲ್ಪಡುವವು." (ಮತ್ತಾಯ 15:13)
ಇದು ಕೆಲವರಿಗೆ ವಿಚಿತ್ರವೆನಿಸಬಹುದು, ಆದರೆ ನಿಮ್ಮ ಮನೆಯಲ್ಲಿ ಶಾಪಗ್ರಸ್ತ ವಾತಾವರಣವನ್ನು ಸೃಷ್ಟಿಸುವ ಕೆಲವು ವಸ್ತುಗಳು ಅಥವಾ ಸಂಗತಿಗಳು ಇರಬಹುದು. ಉದಾಹರಣೆಗೆ, ಕೆಲವೊಮ್ಮೆ, ಕೆಲವು ವ್ಯಕ್ತಿಗಳು ಪೈಶಾಚಿಕ ಆಚರಣೆಗಳಲ್ಲಿ ಬಳಸಲಾದ ವಸ್ತುವನ್ನು ಮನೆಗೆ ತಂದಿರಬಹುದು. ಅಶ್ಲೀಲಚಿತ್ರಗಳಂತಹ ಇತರ ವಿಷಯಗಳು ಕೆಲವು ರೀತಿಯ ಶಕ್ತಿಗಳಿಗೆ ಬಾಗಿಲು ತೆರೆಯಬಹುದು. ಕೆಲವೊಮ್ಮೆ ಒಂದು ವಸ್ತುವು ಅದರ ಮೇಲೆ ಇರಿಸಲಾದ ಶಾಪವನ್ನು ಹೊಂದಿರಬಹುದು.
ಈಜಿಪ್ಟ್‌ನಿಂದ ತರಲ್ಪಟ್ಟ ಚಾಕು
ಪವಿತ್ರ ಭೂಮಿ, ಇಸ್ರೇಲ್‌ಗೆ ನಮ್ಮ ಪ್ರವಾಸಗಳೊಂದರಲ್ಲಿ , ನಾವು ಈಜಿಪ್ಟ್ ಗೂ ಸಹ ಪ್ರವಾಸ ಮಾಡಿದ್ದೆವು. ಪ್ರವಾಸದಲ್ಲಿರುವಾಗ, ನಮ್ಮ ಸದಸ್ಯರಲ್ಲಿ ಒಬ್ಬರು, ನಮಗೆ ತಿಳಿಯದೆಯೇ ಒಂದು ಚಾಕುವನ್ನು ಖರೀದಿಸಿದ್ದರು. ಅದು ತುಂಬಾ ಪುರಾತವಾದದ್ದು ಆಗಿದ್ದರಿಂದಲೂ ಅದು ತುಂಬಾ ಸುಂದರವಾಗಿ ಕಾಣುತ್ತಿದ್ದರಿಂದಲೂ , ಅದನ್ನು ಖರೀದಿಸಲು ನಿರ್ಧರಿಸಿದೆ ಎಂದು ಅವರು ನಂತರ ನಮಗೆ ಹೇಳಿದರು. ಅವರು ಮನೆಗೆ ಹಿಂದಿರುಗಿದಾಗ, ರಾತ್ರಿ ಅವರ ಎದೆಯ ಮೇಲೆ ಕುಳಿತಿದ್ದ ಒಂದು ಆಕೃತಿಯು ಅವರನ್ನು ಉಸಿರುಗಟ್ಟಿಸುತ್ತಿರುವುದನ್ನು ನೋಡಿದರು. ಅವರ ಪತ್ನಿ, ಭಯಭೀತರಾಗಿ, ರಾತ್ರಿಯಲ್ಲಿಯೇ ನನಗೆ ಕರೆ ಮಾಡಿ ಆ ಭಯಾನಕತೆಯ ಬಗ್ಗೆ ಹೇಳಿದರು.
ಮರುದಿನ ಆರಾಧನೆಯ ಸಮಯದಲ್ಲಿ, ಈ ಮನುಷ್ಯನನ್ನು ಪವಿತ್ರಾತ್ಮನ ಬಲದ ಮುಖೇನ ಬಿಡುಗಡೆ ಮಾಡಲಾಯಿತು. ನಂತರ ಅವನು ನನಗೆ ಆ ವ್ಯಕ್ತಿ ತನ್ನ ಮೇಲೆ ಕೂಗುತ್ತಾ "ನೀನು ನನ್ನನ್ನು ಏಕೆ ಕೊಂದೆ?" ಎಂದು ಕೇಳುತ್ತಿದ್ದನೆಂದು ಹೇಳಿದನು. ಅವನು ಚಾಕುವನ್ನು ಎಸೆದು ಬಿಟ್ಟ ಮೇಲೆ ಆ ಪ್ರೇತಗಳು ಕಾಣಿಸಿಕೊಳ್ಳುವುದು ನಿಂತುಹೋದವು. ಇದನ್ನು ಓದುವ ಅನೇಕ ಜನರಿಗೆ ಈ ಕಥೆಗಳು ಚಿತ್ರ ವಿಚಿತ್ರವೆನಿಸುತ್ತದೆ ಎಂದು ನನಗೆ ಗೊತ್ತು . ಆದಾಗ್ಯೂ, ಆತ್ಮೀಕ ಯುದ್ಧವು ಮನಸ್ಸಿನಲ್ಲಿ ಅಥವಾ ಕಲ್ಪನೆಯಲ್ಲೊ ನಡೆಸಲ್ಪಡುವ ಊಹೆ ಯಲ್ಲ ; ಅದು ತುಂಬಾ ನೈಜವಾದದ್ದು. ಅದಕ್ಕಾಗಿಯೇ ಅಪೊಸ್ತಲನಾದ ಪೌಲನು ಹೀಗೆ ಬರೆದನು: "ಏಕೆಂದರೆ, ನಾವು ಹೋರಾಡುವುದು ನರಮಾನವರೊಂದಿಗಲ್ಲ, ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಗಳ ಮೇಲೆಯೂ ಆಗಿದೆ. (ಎಫೆಸ 6:12 )
ಅಂಧಕಾರ ಬಲಗಳು ನುಗ್ಗುವ ಶಕ್ತಿಗೆ ನೀವು ಆತ್ಮೀಕವಾಗಿ ಸಂವೇದನಾಶೀಲರಾಗಿರಲು ಸಾಧ್ಯವಿಲ್ಲ. ನಾವು ಯುದ್ಧರಂಗದಲ್ಲಿದ್ದೇವೆ ಮತ್ತು ಶತ್ರು ಕುಟುಂಬಗಳನ್ನು ಗುರಿಯಾಗಿಸಿಕೊಂಡಿದ್ದಾನೆ. 2001 ರಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಮೇಲಿನ ದಾಳಿಯ ಸಮಯದಲ್ಲಿ, ಭಯೋತ್ಪಾದಕನು ನೆಲದ ಮಟ್ಟದಲ್ಲಿ ಸುತ್ತಿಗೆಯಿಂದ ಕಟ್ಟಡವನ್ನು ಸ್ಫೋಟಿಸುವ ಮೂಲಕ ಅದನ್ನು ಕೆಡವಲಿಲ್ಲ; ಭದ್ರತಾ ಪಡೆಗಳು ಅವರನ್ನು ಬಂಧಿಸದಿದ್ದರೆ ಅದು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬೇಕಾದಿತ್ತು. ಆದ್ದರಿಂದ ಅವರು ಭೂಮಿಯ ಮೇಲಿನ ಅತಿ ಎತ್ತರದ ಕಟ್ಟಡಗಳಲ್ಲಿ ಒಂದನ್ನು ಒಂದೇ ಬಾರಿಗೆ ಕೆಡವುವ ತಂತ್ರವನ್ನು ಅನುಸರಿಸಿದರು. ಅದೇ ರೀತಿ, ಶತ್ರುವು ಕುಟುಂಬದ ಹಿಂದೆ ಬಿದ್ದಿದ್ದಾನೆ ಏಕೆಂದರೆ ಕುಟುಂಬಕ್ಕೆ ಒಮ್ಮೆ ಹೊಡೆತ ಬಿದ್ದರೆ, ಸಮಾಜಕ್ಕೂ ಸಹ ಹೊಡೆತ ಬೀಳುತ್ತದೆ ಎಂದು ಅವನಿಗೆ ತಿಳಿದಿದೆ.
ಆದ್ದರಿಂದ, ನಾವು ನಮ್ಮ ಕುಟುಂಬಗಳನ್ನು ರಕ್ಷಿಸಿಕೊಳ್ಳುವ ಕಾರ್ಯ ಮಾಡಬೇಕಾಗಿದೆ. ನಮ್ಮ ಮನೆಗಳ ಮೇಲೆ ದುರಾತ್ಮಗಳ ಹಸ್ತಕ್ಷೇಪದ ವಿರುದ್ಧ ಹೋರಾಡಬೇಕಾಗಿದೆ. ನಮ್ಮ ಮನೆಯಲ್ಲಿ ಯಾವುದೇ ದುರಾತ್ಮನ ಸಸಿಗಳನ್ನೂ ಉಳಿಯುವುದನ್ನು ಬಿಡುವುದಕ್ಕೂ ನಾವು ಶಕ್ತರಲ್ಲ. ನಾವು ಅವುಗಳನ್ನು ಬೇರುಸಹಿತ ಕಿತ್ತುಹಾಕಬೇಕಾಗಿದೆ. ನಾವು ತಿಳಿಯದೆ ಬಹಳ ಸಮಯದಿಂದ ಅವುಗಳಿಗೆ ನೀರು ಹಾಕಿದ್ದೇವೆ; ಅವುಗಳನ್ನು ಕೆಡವುವ ಸಮಯ ಈಗ ಬಂದಿದೆ. ನಮ್ಮ ಕುಟುಂಬಗಳಿಂದ ಅವುಗಳನ್ನು ಬೇರುಸಹಿತ ಕಿತ್ತುಹಾಕಿ ಶಾಂತಿ ಆಳ್ವಿಕೆ ನಡೆಸಲು ಅನುಮತಿಸುವ ಸಮಯ ಬಂದಿದೆ.
ಅಶ್ಲೀಲತೆ
ನಮ್ಮ ಆತ್ಮೀಕ ಸ್ಥಳದ ಮೇಲೆ ಹಿಡಿತ ಸಾಧಿಸಲು ಶತ್ರು ಬಳಸುವ ಮತ್ತೊಂದು ಶಾಪಗ್ರಸ್ತ ವಿಷಯ ಇದು. ನೀವು ಚಲನಚಿತ್ರವನ್ನು ಖರೀದಿಸಬೇಕಾದ ದಿನಗಳು ಕಳೆದುಹೋಗಿವೆ, ಆದರೆ ಈಗ ಅದೆಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಿದೆ. ನೀವು ಆನ್‌ಲೈನ್‌ನಲ್ಲಿ ಹುಡುಕಬೇಕು, ಮತ್ತು ನೀವು ಅಶ್ಲೀಲ ಸೈಟ್‌ನಲ್ಲಿ ಲೈವ್ ಆಗಿದ್ದೀರಿ. ದಾಂಪತ್ಯವನ್ನು ಬೇರ್ಪಡಿಸಲು ಮತ್ತು ಯುವಕರ ಭವಿಷ್ಯವನ್ನು ಹಾಳುಮಾಡಲು ಸೈತಾನನು ಬಳಸುತ್ತಿರುವ ಭ್ರಷ್ಟಾಚಾರಗಳಲ್ಲಿ ಇದೂ ಒಂದು. ಈಗ ಇದಕ್ಕೂ "ಬೇಡ" ಎಂದು ಹೇಳುವ ಸಮಯ ಬಂದಿದೆ. ಈ ವ್ಯಸನದ ವಿರುದ್ಧ ಪ್ರಾರ್ಥಿಸಲು ಮತ್ತು ಅದರ ವಿರುದ್ಧ ಹೋರಾಡಲು ಇದು ಸಮಯ. ಆ ಟಿವಿಯನ್ನು ಆಫ್ ಮಾಡಿ, ಆ ಸೈಟ್ ಅನ್ನು ಬಿಡಿ ಮತ್ತು ನೀವು ಅವನ ಕೈಗೊಂಬೆಯಲ್ಲ ಎಂದು ಸೈತಾನನಿಗೆ ತಿಳಿಸಿ. ನೀವು ಕುರಿಮರಿಯ ರಕ್ತದಿಂದ ವಿಮೋಚನೆಗೊಂಡಿದ್ದೀರಿ, ಆದ್ದರಿಂದ ನೀವು ಸ್ವತಂತ್ರರು. ನಿಮ್ಮ ಮನೆಯಲ್ಲಿ ದೇವರ ಉಪಸ್ಥಿತಿಯೊಂದಿಗೆ ಹೋರಾಡಲು ನಿಂತಿರುವ ಎಲ್ಲಾ ಅಂಧಕಾರ ಶಕ್ತಿಗಳ ವಿರುದ್ಧ ದೇವರು ನಿಮ್ಮ ಮನೆಯ ಸುತ್ತಲೂ ಬೆಂಕಿಯ ಗೋಡೆಯನ್ನು ನಿರ್ಮಿಸಲಿ ಎಂದು ಪ್ರಾರ್ಥಿಸಿ. ನೀವು ಬಲಿಪಶುವಲ್ಲ, ಜಯಶಾಲಿಗಳು.
Bible Reading: Joshua 17-19
ಪ್ರಾರ್ಥನೆಗಳು
ತಂದೆಯೇ, ಶಾಪಗ್ರಸ್ತ ವಿಷಯದ ಬಗ್ಗೆ ನಿನ್ನ ವಾಕ್ಯದಲ್ಲಿರುವ ಸತ್ಯವನ್ನು ಕಾಣುವಂತೆ ನಮ್ಮ ಕಣ್ಣುಗಳನ್ನು ತೆರೆದಿದ್ದಕ್ಕಾಗಿ ನಾನು ನಿನಗೆ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ನಮ್ಮ ಮನೆಗೆ ಇರುವ ಸೈತಾನನ ಪ್ರವೇಶ ದ್ವಾರಗಳಾವುವು ಎಂದು ನೋಡಲು ಮತ್ತೊಮ್ಮೆ ನಮ್ಮ ಕಣ್ಣುಗಳನ್ನು ತೆರೆಯಬೇಕೆಂದು ನಾನು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿನ್ನ ಕರುಣೆಯು ಅಂಧಕಾರದ ಹಿಡಿತ ಮತ್ತು ನರಕದ ಗುಲಾಮಗಿರಿಯಿಂದ ನಮ್ಮನ್ನು ಬಿಡುಗಡೆ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಾವು ಸ್ವತಂತ್ರರು ಎಂದು ನಾನು ಯೇಸುನಾಮದಲ್ಲಿ ಆದೇಶಿಸುತ್ತೇನೆ. ಆಮೆನ್
Join our WhatsApp Channel

Most Read
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
● ಧೈರ್ಯವಾಗಿರಿ.!
● ನಿಮ್ಮ ಆತ್ಮಗಳ ಪುನಃಸ್ಥಾಪನೆ
● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
ಅನಿಸಿಕೆಗಳು