"ನೀನು ಯೌವನದ ಇಚ್ಫೆಗಳಿಗೆ ದೂರವಾಗಿರು; ನೀತಿ ವಿಶ್ವಾಸ ಪ್ರೀತಿ ಮತ್ತು ಸಮಾಧಾನವನ್ನು ಸಂಪಾದಿಸುವದಕ್ಕೆ ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳುವವರ ಸಂಗಡ ಪ್ರಯಾಸಪಡು. " (2 ತಿಮೊಥೆಯ 2:22)
ಪುರುಷರು ತಮ್ಮ ನೋಟಗಳ ಮೂಲಕ ಲೈಂಗಿಕವಾಗಿ ಪ್ರಚೋದಿಸಲ್ಪಡುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಅಶ್ಲೀಲ ಸಾಹಿತ್ಯವು ಪುರುಷರ ಕಡೆಗೆ ತಲುಪಿಸುವ ಗುರಿಯನ್ನು ಹೊಂದಿದೆಯೇ ಹೊರತು ಮಹಿಳೆಯರ ಕಡೆಗೆ ಅಲ್ಲ. ದುಃಖಕರವೆಂದರೆ, ಲಕ್ಷಾಂತರ ಪುರುಷರು ತಮ್ಮ ಜೀವನದ ಬಾಗಿಲುಗಳನ್ನು ಅಶ್ಲೀಲತೆಗೆ ನೆಲೆಯಾಗಿ ತೆರೆದಿದ್ದಾರೆ ಮತ್ತು ಈಗ ಅಂತಹ ಅಶ್ಲೀಲ ವೆಬ್‌ಸೈಟ್‌ಗಳಿಗೆ ವ್ಯಸನಿಗಳಾಗಿದ್ದಾರೆ. ಅಶ್ಲೀಲ ಸಾಹಿತ್ಯವು ಒಬ್ಬ ವ್ಯಕ್ತಿಯಲ್ಲಿ "ವಂಚಿಸುವ ಆತ್ಮ"ವನ್ನು ಬಿಡುಗಡೆ ಮಾಡಬಹುದು.
"ಆದರೂ ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ." ಎಂದು ಸತ್ಯವೇದದ 1 ತಿಮೊಥೆಯ 4:1ಹೇಳುತ್ತದೆ.ಈ ವಾಕ್ಯವೃಂದದಿಂದ, "ವಂಚಿಸಲ್ಪಡುವುದು " ಎಂಬುದಕ್ಕೆ ಗ್ರೀಕ್ ಪದವು "ಪ್ಲಾನೋಸ್" ಆಗಿದೆ, ಇದರರ್ಥ "ಅಲೆದಾಡುವುದು ಮತ್ತು ಅತ್ತಿತ್ತ ಅಲೆಮಾರಿಯಂತೆ ಅಲೆದಾಡುವುದು." ಪ್ರಲೋಭನೆಯು ಒಬ್ಬ ವ್ಯಕ್ತಿಯನ್ನು ಸತ್ಯದಿಂದ ದೂರ ಎಳೆಯುತ್ತದೆ ಮತ್ತು ಆ ವ್ಯಕ್ತಿಯನ್ನು ವೃತ್ತಗಳಲ್ಲಿ ಅಲೆದಾಡುವಂತೆ ಮಾಡುತ್ತದೆ. ಇದು ಅಂತ್ಯ ಕಾಲದ ಸಂಕೇತವಾಗಿದೆಯಾದರಿಂದ ನಾವು ಬಹಳ ಜಾಗರೂಕರಾಗಿರಬೇಕು. ಪೌಲನು ತಿಮೊಥೆಯನಿಗೆ , ಸೈತಾನನು ಈಗಾಗಲೇ ನಂಬಿಕೆಯಲ್ಲಿರುವವರನ್ನು ಸಹ ಇದಕ್ಕೆ ಗುರಿಯಾಗಿಸಿಕೊಂಡಿದ್ದಾನೆ ಎಂದು ಎಚ್ಚರಿಸಿ ಬರೆಯುತ್ತಿದ್ದನು. ಸೈತಾನನು ಅವರನ್ನು ನಂಬಿಕೆಯಿಂದ ಹೊರಗೆಸೆದು, ಮೋಹದ ಆತ್ಮದಿಂದ ಗುಲಾಮರನ್ನಾಗಿ ಮಾಡಿ ಕೊಳ್ಳಲು ಬಯಸುತ್ತಾನೆ. ಏಕೆಂದರೆ ಅಶ್ಲೀಲತೆಯು ಸುಲಭವಾಗಿ ಬಲೆಗೆ ಬೀಳಿಸುವ ಪಾಪಗಳಲ್ಲಿ ಒಂದಾಗಿದೆ. ಕರ್ತನಾದ ಯೇಸು, "ಪಾಪ ಮಾಡುವವನು ಪಾಪಕ್ಕೆ ದಾಸ " ಎಂದು ಹೇಳಿದನು (ಯೋಹಾನ 8:34).
ಅಶ್ಲೀಲ ವೀಡಿಯೊಗಳನ್ನು ನೋಡುವುದು ಕಷ್ಟಕರವಾಗಿದ್ದ ದಿನಗಳು ಮುಗಿದುಹೋಗಿವೆ, ಆದರೆ ಈಗ, ನಮ್ಮಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಹೈ-ಸ್ಪೀಡ್ ಇಂಟರ್ನೆಟ್‌ಗೆ ಒಡ್ಡಿಕೊಳ್ಳುವ ಪೀಳಿಗೆ ಇದೆ. ಡೆಲಿವರ್ಡ್: ಟ್ರೂ ಸ್ಟೋರೀಸ್ ಆಫ್ ಮೆನ್ ಅಂಡ್ ವುಮನ್ ಹೂ ಟರ್ನ್ಡ್ ಫ್ರಮ್ ಪೋರ್ನ್ ಟು ಪ್ಯೂರಿಟಿಯ ಲೇಖಕ ಮ್ಯಾಟ್ ಫ್ರಾಡ್ ಅವರ ಪ್ರಕಾರ, "ಇತ್ತೀಚಿನ ಅಧ್ಯಯನಗಳು 95 ಪ್ರತಿಶತ ಹದಿಹರೆಯದವರು ಈಗ ಪೋರ್ಟಬಲ್ ಎಕ್ಸ್-ರೇಟೆಡ್ ಥಿಯೇಟರ್‌ಗೆ - ಅಂದರೆ ಸ್ಮಾರ್ಟ್‌ಫೋನ್‌ಗೆ ಪ್ರವೇಶವನ್ನು ಹೊಂದಿದ್ದಾರೆ ಎಂದು ತೋರಿಸುತ್ತವೆ. ಸ್ಮಾರ್ಟ್‌ಫೋನ್‌ಗಳ ಏರಿಕೆಯು ಯುವ ಪೀಳಿಗೆಯಲ್ಲಿ ಹೆಚ್ಚಿದ ಅಶ್ಲೀಲ ಸಂಬಂಧಿತ ಬಳಕೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಹೆಚ್ಚು ವೈವಿಧ್ಯತೆ ಮತ್ತು ಹೆಚ್ಚು ಸಾಮಾಜಿಕ ಸ್ವೀಕಾರಾರ್ಹತೆಯೊಂದಿಗೆ ಇದನ್ನು ಪ್ರವೇಶಿಸುವುದು ಎಂದಿಗಿಂತಲೂ ಸುಲಭವಾಗಿದೆ." ಇದು ಆತಂಕಕಾರಿಯಾಗಿದೆ; ಇದು ಸೈತಾನನು ನಮ್ಮ ಪೀಳಿಗೆಯನ್ನು ಮತ್ತು ಯುವಕರ ಭವಿಷ್ಯವನ್ನು ಅಸ್ತವ್ಯಸ್ತಗೊಳಿಸಲು ಎಷ್ಟು ಪ್ರಯತ್ನಿಸುತ್ತಿದ್ದಾನೆ ಎಂಬುದನ್ನು ತೋರಿಸುತ್ತದೆ. ಆದರೆ ಅವನು ಯಶಸ್ವಿಯಾಗುವುದಿಲ್ಲ.
"ಫಿಲಿಷ್ಟಿಯ ಪ್ರಭುಗಳು ಅವಳ ಬಳಿಗೆ ಹೋಗಿ ಅವಳಿಗೆ - ನೀನು ಅವನನ್ನು ಮರುಳುಗೊಳಿಸಿ ಅವನ ಮಹಾಶಕ್ತಿಯ ಮೂಲ ಯಾವದೆಂಬದನ್ನೂ ನಾವು ಅವನನ್ನು ಗೆದ್ದು ಕಟ್ಟಿ ಕುಂದಿಸುವದು ಹೇಗೆಂಬದನ್ನೂ ಗೊತ್ತುಮಾಡಿಕೊಂಡು ನಮಗೆ ತಿಳಿಸು; ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಸಾವಿರದ ನೂರು ರೂಪಾಯಿ ಕೊಡುವೆವು ಎಂದು ಹೇಳಿದರು" ಎಂದು ನ್ಯಾಯಾಸ್ಥಾಪಕರು 16:5 ರಲ್ಲಿ ಸತ್ಯವೇದ ಹೇಳುತ್ತದೆ.
ಫಿಲಿಷ್ಟಿಯರು ಸಂಸೋನನ ಶಕ್ತಿಯನ್ನು ತಟಸ್ಥಗೊಳಿಸಲು, ಅವನನ್ನು ಕುರುಡನನ್ನಾಗಿ ಮಾಡಲು ಮತ್ತು ಅವನ ಕರೆಯನ್ನು ಹಾಳುಮಾಡಲು ದೆಲೀಲಾಳ ಹಿಂದೆ ಇದ್ದಂತೆಯೇ, ದುರಾತ್ಮಗಳು ಅಶ್ಲೀಲತೆಯ ಹಿಂದೆ ಇವೆ. ಅವರಿಗೆ ಸಂಸೋನನನ್ನು ಸೋಲಿಸಲು ಮತ್ತು ಅವನನ್ನು ಶಕ್ತಿಹೀನಗೊಳಿಸಲು ಒಂದು ಮಾರ್ಗ ಬೇಕಿತ್ತು, ಮತ್ತು ಅದನ್ನು ಮಾಡಲು ಏಕೈಕ ಮಾರ್ಗವೆಂದರೆ ಅವನನ್ನು ದೆಲೀಲಾಳ ಮೂಲಕ ಆಕರ್ಷಿಸುವುದು ಎಂದು ಅವರು ಕಂಡುಕೊಂಡರು.
ಸಂಸೋನನಂತೆಯೇ, ನೀವು ಸಹ ಬಲಿಷ್ಠರಾಗಿದ್ದು ನಿಮ್ಮ ಮುಂದೆ ಒಂದು ಉತ್ತಮ ಭವಿಷ್ಯ ಮತ್ತು ದೈವೀಕ ಕರೆ ಇದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ದೇವರು ನಿಮ್ಮನ್ನು ಶ್ರೇಷ್ಠತೆಗಾಗಿ ಗುರುತಿಸಿದ್ದು ನೀವು ಅನೇಕ ಜನರನ್ನು ವಿಮೋಚಿಸುವವರಾಗಿದ್ದೀರಿ . ಅದಕ್ಕಾಗಿಯೇ ಸೈತಾನನು ನಿಮ್ಮನ್ನು ದುರ್ಬಲಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾನೆ. ದೆಲೀಲಾಳ ಕೆಲಸವು ಸಂಸೋನನ ಶಕ್ತಿಯನ್ನು ಕಂಡುಹಿಡಿಯುವುದಲ್ಲ, ಆದರೆ ಅದನ್ನು ತಟಸ್ಥಗೊಳಿಸುವುದಾಗಿತ್ತು. ಅದು ಈ ಅಂತ್ಯಕಾಲದ ಪ್ರಲೋಭನೆ ಚೈತನ್ಯದ ಶಕ್ತಿಯಾಗಿದೆ. ಸೈತಾನನು ಅದನ್ನು ಭೂತಗನ್ನಡಿಯಂತೆ ನಿಮ್ಮ ಅಲೌಕಿಕ ಶಕ್ತಿಯನ್ನು ಕಂಡುಹಿಡಿಯಲು ತದ ನಂತರ ಅದನ್ನು ತಟಸ್ಥಗೊಳಿಸಲು ಬಯಸುತ್ತಾನೆ. ಆದರೆ ಅವನು ಯಶಸ್ವಿಯಾಗುವುದಿಲ್ಲ. ಅದಕ್ಕಾಗಿಯೇ ನೀವು ಅವುಗಳಿಂದ ಪಲಾಯನ ಮಾಡಬೇಕಾಗಿದೆ. ಪೌಲನು ತಿಮೋತಿಗೆ, " ಇಂತಹ ಜೀವನಶೈಲಿಗೆ ಇರುವ ಯಾವುದೇ ಆಹ್ವಾನವನ್ನು ನಿರಾಕರಿಸು" ಎಂದು ಹೇಳಿದನು.
ನಾನು ನಿಮಗೆ ನೇರವಾಗಿ ಹೇಳುತ್ತೇನೆ; ಅಶ್ಲೀಲತೆಯು ನಿಮ್ಮ ಆತ್ಮಕ್ಕೆ ವಿಷವಾಗಿದೆ. ಆದ್ದರಿಂದ ಅದನ್ನು ಸಂಪೂರ್ಣವಾಗಿ ನಿರಾಕರಿಸಿ. ಅದು ನಿಮ್ಮ ಉದ್ದೇಶದಿಂದ ನಿಮ್ಮನ್ನು ದೂರವಿಡಲು ಮತ್ತು ನಿಮ್ಮನ್ನು ದುರ್ಬಲರನ್ನಾಗಿ ಮಾಡಲು ಬಯಸುವ ಪಾಪ. ಅದರಿಂದ ಓಡಿಹೋಗಿ. ಅಶ್ಲೀಲ ವೀಕ್ಷಕರಿಗೆ ಸಂಬಂಧಿಸಿದ ಅಂಕಿಅಂಶಗಳ ಭಾಗವಾಗಬೇಡಿ.
ನಿಮ್ಮನ್ನು ಪ್ರಚೋದಿಸುವ ಕೇಂದ್ರಗಳನ್ನು ತೆಗೆದುಹಾಕಿ. ನಿಮ್ಮ ಫೋನ್ ಮತ್ತು ಕಂಪ್ಯೂಟರ್‌ನಲ್ಲಿರುವ ಎಲ್ಲಾ ಅಶ್ಲೀಲ ಮಾಧ್ಯಮಗಳನ್ನು ಅಳಿಸಿ, ಹಾಕಿ ಅಶ್ಲೀಲತೆಗೆ ಸಂಬಂಧಿಸಿದ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿ. ಅದು ಟಿವಿ ಸರಣಿಯಾಗಿದ್ದರೆ, ಅದನ್ನು ಸಂಪೂರ್ಣವಾಗಿ ಕತ್ತರಿಸಿ. ಆ ಎಲ್ಲಾ ಅಶ್ಲೀಲ ನಿಯತಕಾಲಿಕೆಗಳನ್ನು ಕಸದ ತೊಟ್ಟಿಗೆ ಎಸೆಯಿರಿ. ನಿಮಗೆ ಪ್ರಚೋದಿಸುವ ಕೇಂದ್ರ ಬಿಂದು ಸಂಜೆಯ ವಿರಾಮ ಸಮಯವಾಗಿದ್ದರೆ, ನಿಮ್ಮ ಜೀವನದ ಮುಂದಿನ ಕಾಲಮಾನಕ್ಕಾಗಿ ನಿಮ್ಮ ಸಮಯವನ್ನು ದೈವಿಕ ಚಟುವಟಿಕೆಗಳಿಂದ ತುಂಬಿಸಿ. ಪ್ರತಿದಿನ ಧರ್ಮಗ್ರಂಥಗಳನ್ನು ಧ್ಯಾನಿಸಿ ಮತ್ತು ಸತ್ಯವೇದ ಅಧ್ಯಯನ ಅವಧಿಗಳೊಂದಿಗೆ ನಿಮ್ಮ ಆಲೋಚನೆಯನ್ನು ತೊಡಗಿಸಿಕೊಳ್ಳುವ ದೈವಿಕ ಸ್ನೇಹಿತರೊಂದಿಗೆ ಸುತ್ತಾಡಿ. ನೀವು ಅದಕ್ಕೆ ವ್ಯಸನಿಯಾಗಿದ್ದರೆ, ನಿಮ್ಮ ಮನಸ್ಸು ಮತ್ತು ಆತ್ಮಸಾಕ್ಷಿಯನ್ನು ಶುದ್ಧೀಕರಿಸಲು ಯೇಸುವಿನ ರಕ್ತವನ್ನು ಪ್ರೊಕ್ಷಿಸುವಂತೆ ಪ್ರಾರ್ಥಿಸಿ ಮತ್ತು ಬೇಡಿಕೊಳ್ಳಿ. ನೀವು ಯೇಸುನಾಮದಲ್ಲಿಬಿಡುಗಡೆ ಹೊಂದಿದವರಾಗಿದ್ದೀರಿ ಎಂಬುದನ್ನು ಮರೆಯಬೇಡಿ.
Bible Reading: Joshua 20-22
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ಇಂದು ನನ್ನ ಜೀವನದಲ್ಲಿರುವ ಸೈತಾನನ ಚಟುವಟಿಕೆಯನ್ನು ಪ್ರಕಟ ಪಡಿಸಿದ್ದಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ಇಂದು ನಿಮ್ಮ ರಕ್ತದಿಂದ ನನ್ನ ಹೃದಯವನ್ನು ಶುದ್ಧೀಕರಿಸಿ ಅಶ್ಲೀಲತೆಯ ಪ್ರತಿಯೊಂದು ನಿರ್ಜೀವ ಕ್ರಿಯೆಗಳಿಂದ ನನ್ನ ಮನಸ್ಸಾಕ್ಷಿಯನ್ನು ಶುದ್ಧೀಕರಿಸ ಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ; ನಾನು ಇನ್ನು ಮುಂದೆ ಅದಕ್ಕೆ ದಾಸನಲ್ಲ ಎಂದು ನಾನು ಯೇಸುನಾಮದಲ್ಲಿ ಆದೇಶಿಸುತ್ತೇನೆ. ಆಮೆನ್.
Join our WhatsApp Channel

Most Read
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ಅತ್ಯುನ್ನತವಾದ ರಹಸ್ಯ
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
ಅನಿಸಿಕೆಗಳು