ಅನುದಿನದ ಮನ್ನಾ
2
0
53
ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3
Tuesday, 25th of March 2025
Categories :
ಬಿಡುಗಡೆ (Deliverance)
ವಾತಾವರಣ (Atmosphere)
“ಸಮುಯೇಲನು ಎಣ್ಣೆ ಇರುವ ಕೊಂಬನ್ನು ತೆಗೆದುಕೊಂಡು, ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಯೆಹೋವ ದೇವರ ಆತ್ಮರು ಕೂಡಲೆ ದಾವೀದನ ಮೇಲೆ ಇಳಿದು ಬಂದರು. ಅನಂತರ ಸಮುಯೇಲನು ಎದ್ದು ರಾಮಕ್ಕೆ ಹೋದನು. ” (1 ಸಮುವೇಲ 16:13)
ಮೋಶೆಯ ಕಾಲದಲ್ಲಿ, ಮಹಾಯಾಜಕನನ್ನೂ ಅವನ ಗಂಡುಮಕ್ಕಳನ್ನು , ಗುಡಾರದ ಪೀಠೋಪಕರಣಗಳನ್ನೂ ಅಭಿಷೇಕಿಸಲು ಎಣ್ಣೆಯನ್ನು ಬಳಸಲಾಗುತ್ತಿತ್ತು ಮತ್ತು ವಿಮೋಚನಕಾಂಡ 29, 30 ಮತ್ತು 40 ನೇ ಅಧ್ಯಾಯಗಳಲ್ಲಿ ದಾಖಲಾಗಿರುವ ದೇವದರ್ಶನ ಗುಡಾರದಲ್ಲಿನ ರೊಟ್ಟಿಯ ಮೇಜಿನ ಮೇಲಿನ ರೊಟ್ಟಿಯೊಂದಿಗೆ ಆ ಅಭಿಷೇಕದ ಎಣ್ಣೆಯನ್ನು ಬೆರೆಸಲಾಗುತ್ತಿತ್ತು.
“ನೀನು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ, ಅದರಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ ಪರಿಶುದ್ಧ ಮಾಡು. ಆಗ ಅದು ಪರಿಶುದ್ಧವಾಗುವುದು. ದಹನಬಲಿಯ ಪೀಠವನ್ನೂ, ಅದರ ಎಲ್ಲಾ ಸಲಕರಣೆಗಳನ್ನೂ ನೀನು ಅಭಿಷೇಕಿಸಿ, ಬಲಿಪೀಠವನ್ನು ಪವಿತ್ರಮಾಡು. ಆಗ ಅದು ಅತಿಪರಿಶುದ್ಧವಾದ ಬಲಿಪೀಠವಾಗುವುದು. ಗಂಗಾಳವನ್ನೂ, ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ, ಅದನ್ನು ಪ್ರತಿಷ್ಠಾಪನೆ ಮಾಡಬೇಕು." ಎಂದು ಸತ್ಯವೇದದ ವಿಮೋಚನಕಾಂಡ 40:9-11 ರಲ್ಲಿ ಹೇಳುತ್ತದೆ,
ಜನರನ್ನು ಒಂದು ದೈವೀಕ ನಿಯೋಜನೆಗಾಗಿ ನಿಯೋಜಿಸಲು ಬಯಸಿದಾಗ ಅಭಿಷೇಕ ತೈಲವನ್ನು ಮುಖ್ಯವಾಗಿ ಅವರಿಗೆ ಹಚ್ಚಲಾಗುತ್ತದೆ . ಇದು ದೈವಿಕ ಉಪಸ್ಥಿತಿ ಮತ್ತು ಅಲೌಕಿಕ ಸಾಮರ್ಥ್ಯದ ಸಂಕೇತವಾಗಿದೆ. ಇಸ್ರೇಲ್‌ನಲ್ಲಿನ ಎಲ್ಲಾ ರಾಜರು ಸಿಂಹಾಸನವನ್ನು ಏರುವ ಮೊದಲು ಅವರು ಅಭಿಷೇಕಿಸಲ್ಪಡಬೇಕಾಗಿತ್ತು. ದಾವೀದನು ಅಭಿಷೇಕಿಸಲ್ಪಟ್ಟಾಗ, ದೇವರ ಆತ್ಮವು ಅವನ ಮೇಲೆ ಬಂದಿತು. ಆದ್ದರಿಂದ, ಅಭಿಷೇಕ ಎಂಬುದು ದೇವರ ಆತ್ಮನ ವರ್ಗಾವಣೆಗೆ ಒಂದು ಮಾಧ್ಯಮವಾಗಿದೆ. ಆದ್ದರಿಂದ, ಯಾವಾಗಲೂ ನಿಮ್ಮ ಮಕ್ಕಳನ್ನು ಎಲ್ಲಾ ಸಮಯದಲ್ಲೂ ಅಭಿಷೇಕಿಸಿ.
ಕೆಲವು ಜನರು ಪಾಸ್ಟರ್ ಗಳು ಅಭಿಷೇಕ ಸೇವೆಯನ್ನು ಆಯೋಜಿಸುವವರೆಗೂ ಕಾಯುತ್ತಿರುತ್ತಾರೆ ಅಥವಾ ಅದನ್ನು ಪಾಸ್ಟರ್ ಗಳು ಮಾತ್ರವೇ ಅದನ್ನು ಹಚ್ಚಲು ಸಾಕಾದಷ್ಟು ನಂಬಿಕೆಯನ್ನು ಹೊಂದಿರುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ಅದು ಹಾಗಲ್ಲ . ನಾವು ನಂಬಿಕೆಯಿಂದ ದೇವರ ರಾಜ್ಯದ ರಹಸ್ಯಗಳನ್ನು ನಂಬಿ ಅಳವಡಿಸಿಕೊಂಡರೆ ನಮ್ಮಲ್ಲೂ ಕಾರ್ಯ ಮಾಡುವ ದೇವರು ಒಬ್ಬನೇ ಆಗಿದ್ದಾನೆ. ಅಭಿಷೇಕವು ಕಡೆಯ ದಿನಗಳ ದುರಾತ್ಮಗಳನ್ನು ನಿಮ್ಮ ಮಕ್ಕಳು ಮತ್ತು ಕುಟುಂಬದಿಂದ ದೂರವಿಟ್ಟು ದೇವರ ಆತ್ಮನ ಬಿಡುಗಡೆಯನ್ನು ಅವರೊಳಗೆ ಬಲಪಡಿಸುತ್ತದೆ. ಆಗ ಅವರು ಪವಿತ್ರಾತ್ಮನ ವಾಹಕರಾಗುತ್ತಾರೆ.
"ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯನನ್ನು ಕರೆಕಳುಹಿಸಲಿ. ಅವರು ಕರ್ತ ಯೇಸುವಿನ ಹೆಸರಿನಿಂದ ಎಣ್ಣೆ ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುತ್ತದೆ. ಕರ್ತ ಯೇಸು ಅವನನ್ನು ಎಬ್ಬಿಸುವರು. ಪಾಪಗಳನ್ನು ಮಾಡಿದವನಾಗಿದ್ದರೆ ಅವನು ಕ್ಷಮೆಯನ್ನು ಪಡೆಯುತ್ತಾನೆ. " ಎಂದು ಯಾಕೋಬ 5:14-15 ರಲ್ಲಿ ಬೈಬಲ್ ಹೇಳುತ್ತದೆ,.
ಯಾವುದೇ ರೀತಿಯ ಕಾಯಿಲೆ ಮತ್ತು ರೋಗವನ್ನು ಗುಣಪಡಿಸಲು ಅಭಿಷೇಕವು ಅತ್ಯಗತ್ಯ. ನೀವು ಆ ಅಸ್ವಸ್ಥ ಮಗುವಿನ ಮೇಲೆ ನಂಬಿಕೆಯಿಂದ ಅಭಿಷೇಕವನ್ನು ಅನ್ವಯಿಸಿದರೆ ನೀವು ಆ ಮರುಕಳಿಸುವ ಅನಾರೋಗ್ಯವನ್ನು ದೂರ ಕಳುಹಿಸಬಹುದು. ಅಂತೆಯೇ, ನಿಮ್ಮ ಮನೆಯನ್ನು ಅಭಿಷೇಕ ಮಾಡುವುದು ಪವಿತ್ರಾತ್ಮದ ಅಭಿಷೇಕವನ್ನು ಪ್ರತಿನಿಧಿಸುವ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಮನೆಯ ವಿವಿಧ ಭಾಗಗಳಿಗೆ ಹಚ್ಚುವುದನ್ನು ಈ ಪ್ರಕ್ರಿಯೆ ಒಳಗೊಂಡಿರುತ್ತದೆ. ಎಣ್ಣೆಯು ಯಾವುದೇ ಆಂತರಿಕ ಮೌಲ್ಯವನ್ನು ಹೊಂದಿಲ್ಲವಾದರೂ, ದೇವರವಾಕ್ಯದಲ್ಲಿ , ಅಭಿಷೇಕದ ಕ್ರಿಯೆಯನ್ನು ದೇವತ್ತಾತ್ಮನ ಮೂಲಕ ವ್ಯಕ್ತಿಯನ್ನು ಅಥವಾ ವಸ್ತುವನ್ನೂ ಪವಿತ್ರೀಕರಣ ಮಾಡುವ ಪ್ರಕ್ರಿಯೆಯಾಗಿ ನೋಡಲಾಗುತ್ತದೆ
ಮೋಶೆಯು ಗುಡಾರದ ಪಾತ್ರೆಗಳನ್ನು ಅಭಿಷೇಕಿಸಿದನು, ಆಗ ಅವು ಕರ್ತನಿಗಾಗಿ ಮೀಸಲಾದವುಗಳಾದವು . ಆದ್ದರಿಂದ, ನಿಮ್ಮ ಮನೆ ಮತ್ತು ನಿಮ್ಮ ಕುಟುಂಬವನ್ನು ಯಾವಾಗಲೂ ಅಭಿಷೇಕಿಸುವುದು ರೂಢಿಯಾಗಿಸಿ. ನಿಮ್ಮ ಮನೆಯ ಪ್ರತಿಯೊಂದು ಮೂಲೆ ಮತ್ತು ಪಾತ್ರೆಯನ್ನು ಅಭಿಷೇಕಿಸಿ ಇದರಿಂದ ಅವು ಕರ್ತನಿಗೆ ಮೀಸಲಾಗಿರುತ್ತವೆ. ನೀವು ಅಭಿಷೇಕದ ಮೂಲಕ ಸೈತಾನ ಅವನ ಎಲ್ಲಾ ದುರಾತ್ಮಗಳ ಸೇನೆಯನ್ನು ನಿಮ್ಮ ಮನೆಯಿಂದ ದೂರವಿಡುವವರಾಗುತ್ತೀರಿ. ಇದು ಸೈತಾನನಿಗೆ ನಿಷೇಧಿತ ಪ್ರದೇಶವಾಗುತ್ತದೆ.
ಮೋಶೆಯು ಅಭಿಷೇಕಿಸಿದ ಪಾತ್ರೆಗಳನ್ನು ದೇವರಿಗೆ ಮಾತ್ರ ಸೇವೆ ಮಾಡಲು ಬಳಸಲಾಗುತ್ತಿತ್ತು. ಅದೇ ರೀತಿ, ನೀವು ಅಭಿಷೇಕದಲ್ಲಿ ತೊಡಗಿದಾಗ ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ಪಾತ್ರೆಯು ದೇವರ ಮಹಿಮೆಗಾಗಿ ಒಂದು ಸಾಧನವಾಗಿ ಉಳಿಯುತ್ತದೆ.
ಹಾಗಾದರೆ, ನಾನು ಎಣ್ಣೆಯನ್ನು ಎಲ್ಲಿ ಹಚ್ಚಬೇಕು ?
ಎಣ್ಣೆಯು ಕಲೆ ಹಾಕಬಹುದು, ಆದ್ದರಿಂದ ನೀವು ಎಣ್ಣೆಯನ್ನು ಬಾಗಿಲಿನ ಮೇಲ್ಮೈಯಲ್ಲಿ ಅಥವಾ ಅಷ್ಟಾಗಿ ಕಾಣದಂತೆ ಹಚ್ಚಿ ಎಂದು ನಾನು ಸೂಚಿಸ ಬಯಸುತ್ತೇನೆ. ನೆನಪಿಡಿ, ಇದು ನಂಬಿಕೆಯ ಕ್ರಿಯೆ.
ಮನೆಯನ್ನು ಅಭಿಷೇಕಿಸುವಾಗ ನಾವು ಏನನ್ನು ಹೇಳಬೇಕು?
ನಿಮ್ಮ ಮನೆಯಲ್ಲಿ ಎಣ್ಣೆ ಹಚ್ಚುವಾಗ, ನಂಬಿಕೆಯಿಂದ ಈ ಮಾತುಗಳನ್ನು ಹೇಳಿ, “ನಮ್ಮ ಮನೆಯನ್ನು ಕರ್ತನಿಗೆ ಮೀಸಲು ಗೊಳಿಸಿ ನಾವು ನಮ್ಮ ಮನೆಗಳನ್ನು ಭೌತಿಕವಾಗಿ ಆಕ್ರಮಣ ಮಾಡುವವರಿಂದ ರಕ್ಷಿಸುತ್ತೇವೆ. ಅಂದಮೇಲೆ ಆತ್ಮೀಕ ಆಕ್ರಮಣಕಾರಿಗಳ ಮೇಲೆ ಅದು ಇನ್ನು ಎಷ್ಟು ಹೆಚ್ಚು ರಕ್ಷಿಸಬಹುದು? ಆದ್ದರಿಂದ, ನೀವು ಆತ್ಮನ ಬಲವನ್ನು ಬಿಡುಗಡೆ ಮಾಡುವ ಮೂಲಕ ನಿಮ್ಮ ಮನೆಯಲ್ಲಿನ ವಾತಾವರಣವನ್ನು ಬದಲಾಯಿಸಿ.
Bible Reading: Judges 8-9
ಪ್ರಾರ್ಥನೆಗಳು
ತಂದೆಯೇ, ಅಭಿಷೇಕದ ಕುರಿತು ಈ ಸತ್ಯವನ್ನು ನನಗೆ ಪ್ರಕಟ ಪಡಿಸಿದ್ದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ಈ ಸತ್ಯವನ್ನು ನಂಬಲು ನನ್ನಲ್ಲಿ ನಂಬಿಕೆಯನ್ನು ಹುಟ್ಟಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನಾನು ಈಗಿನಿಂದ ಅಭಿಷೇಕ ತೈಲವನ್ನು ಹಚ್ಚುವಾಗ, ನಿನ್ನ ಆತ್ಮನು ನನ್ನ ಮನೆಯಲ್ಲಿ ವಾಸಿಸಲಿ ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ● ಆಟ ಬದಲಿಸುವವ
● ಜೀವಬಾದ್ಯರ ಪುಸ್ತಕ
● ಕೊರತೆಯಿಲ್ಲ
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ಅನಂತವಾದ ಕೃಪೆ
● ನಿತ್ಯತ್ವದ ಮನಃಸ್ಥಿತಿಯಲ್ಲಿ ಬದುಕುವುದು.
ಅನಿಸಿಕೆಗಳು