ಅನುದಿನದ ಮನ್ನಾ
1
0
107
ಕ್ರೈಸ್ತರು ದೇವದೂತರಿಗೆ ಆಜ್ಞೆ ನೀಡಬಹುದೇ?
Thursday, 22nd of May 2025
Categories :
ದೇವದೂತರು (Angels)
ಇತ್ತೀಚೆಗೆ, ದೇವದೂತರ ವಿಚಾರಗಳಲ್ಲಿ ಎಲ್ಲರೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ . ಕ್ರೈಸ್ತರು ದೇವದೂತರಿಗೆ ಆಜ್ಞೆ ನೀಡಬಹುದು ಮತ್ತು ಅವರು ಏನು ಮಾಡಬೇಕೆಂದು ಬಯಸುತ್ತಾರೋ ಅದನ್ನು ಮಾಡಲು ಹೇಳಬಹುದು ಎಂದು ಹೇಳುವ ಹಲವಾರು (ಪ್ರಸಿದ್ಧ ವ್ಯಕ್ತಿಗಳಿಂದ ಕೂಡ ಲಿಖಿತವಾದ ) ಲೇಖನಗಳನ್ನು ನಾನು ಓದಿದ್ದೇನೆ.
ನಮಗಿರುವ ಏಕೈಕ ಅಧಿಕಾರ ದೇವರ ವಾಕ್ಯವಾಗಿದೆ, ಆದ್ದರಿಂದ ವಾಕ್ಯವು ಏನು ಹೇಳುತ್ತದೆ ಎಂಬುದನ್ನು ನೋಡೋಣ:
1.ದೇವದೂತರು ನಮ್ಮವರಲ್ಲ, ಅವರು ದೇವರ ಸೇವಕರು.
ಅನೇಕ ಜನರು ಪ್ರಾರ್ಥಿಸುವುದನ್ನು ನಾನು ಕೇಳಿದ್ದೇನೆ, "ಓ ಪೂಜ್ಯ ಪ್ರಧಾನ ದೇವದೂತ ಗೇಬ್ರಿಯಲ್ ನನಗಾಗಿ ಮಧ್ಯಸ್ಥಿಕೆ ವಹಿಸು. ಪರಲೋಕದ ಸೈನ್ಯದ ರಾಜಕುಮಾರ ಮಿಕಾಯೆಲನೆ, ಹೋಗಿ ಆ ಶಕ್ತಿಯನ್ನು ನಾಶಮಾಡಲು ನಿಮಗೆ ಆಜ್ಞಾಪಿಸುತ್ತೇನೆ. ದೇವದೂತರು ನಮ್ಮವರಲ್ಲ, ಅವರು ದೇವರ ಸೇವಕರು. ಆತನ ಆಜ್ಞೆಯ ಮೇರೆಗೆ ಅವರುಬಂದು ಹೋಗುವವರಾಗಿದ್ದಾರೆ . ಅವರು ಆತನ ವಾಕ್ಯಕ್ಕೆ, ಆತನ ಧ್ವನಿಗೆ ಪ್ರತಿಕ್ರಿಯಿಸುತ್ತಾರೆ ಹೊರತು ನಮ್ಮ ನೇರ ಆಜ್ಞೆಗಳು ಅಥವಾ ವಿನಂತಿಗಳಿಗೆ ಅಲ್ಲ.
ಕೆಳಗಿನ ದೇವರ ವಾಕ್ಯವನ್ನು ನೋಡೋಣ, ಆಗ ನಾನು ಹೇಳುವುದು ನಿಮಗೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ.
ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ.
ಆತನ ಸೈನ್ಯಗಳೇ, ಆತನ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ.
(ಕೀರ್ತನೆ 103:20-21)
ಕೀರ್ತನೆ 91:11 ಅನ್ನು ನೋಡಿ:
"ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು.
"ಆತನು ತನ್ನ ದೇವದೂತರಿಗೆ ಅಪ್ಪಣೆ ಕೊಡುವನು" ಎಂಬ ವಾಕ್ಯವನ್ನು ಗಮನಿಸಿ.
ನಮ್ಮ ರಕ್ಷಣೆಗಾಗಿ ಆತನ ದೇವದೂತರನ್ನು ಯೇಸುವಿನ ಹೆಸರಿನಲ್ಲಿ ತಂದೆಗೆ ಮಾಡಿದ ಪ್ರಾರ್ಥನೆಗೆ ಪ್ರತಿಕ್ರಿಯೆಯಾಗಿ ಈ ರೀತಿಯಾಗಿ ನೀಡಲಾಗುತ್ತಿದೆ.
ಕರ್ತನಾದ ಯೇಸು ಭೂಮಿಯ ಮೇಲೆ ನಡೆಯುವಾಗ, ದೇವದೂತರು ತನ್ನ ತಂದೆಯ ಅಧಿಕಾರದಡಿಯಲ್ಲಿದ್ದಾರೆ ಎಂದು ಆತನು ಒಪ್ಪಿಕೊಂಡನು.
"ಆಗ ಯೇಸು ಅವನಿಗೆ - ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು. ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ? (ಮತ್ತಾಯ 26:52-53)
ಪುನರುತ್ಥಾನದ ನಂತರ, ದೇವದೂತರು ಈಗ ಯೇಸುವಿನ ಆಜ್ಞೆಯಲ್ಲಿದ್ದಾರೆ ಎಂದು 1 ಪೇತ್ರ 3:21-22 ಹೇಳುತ್ತದೆ. " ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ, ಒಳ್ಳೇ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ. ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೇವದೂತರೂ ಅಧಿಕಾರಿಗಳೂ ಮಹತ್ವಗಳೂ ಆತನ ಸ್ವಾಧೀನವಾಗಿವೆ."
1 ಪೇತ್ರ 3:21-22 ಮತ್ತು ನಮಗೆ ಸಹಾಯ ಮಾಡಲು ಈ ದೇವದೂತರನ್ನು ಬಿಡುಗಡೆ ಮಾಡುವವನು ಕರ್ತನಾದ ಯೇಸು.
"ಅವರೆಲ್ಲರೂ, ರಕ್ಷಣೆಯನ್ನು ಬಾಧ್ಯತೆಯಾಗಿ ಪಡೆಯಲಿರುವವರ ಸೇವೆಗಾಗಿ ಕಳುಹಿಸಲ್ಪಟ್ಟ ಸೇವಕಾತ್ಮಗಳಲ್ಲವೇ?" (ಇಬ್ರಿಯ 1:14)
ಆದ್ದರಿಂದ ನೋಡಿ, ಈ ದೇವದೂತರು ನಮಗೆ ಸೇವೆ ಸಲ್ಲಿಸುತ್ತಾರೆ, ಆದರೆ ಅವರು ಕರ್ತನ ಆತ್ಮೀಕ ಅಧಿಕಾರವನ್ನು ಮಾತ್ರವೇ ಅವರು ಪಾಲಿಸುತ್ತಾರೆ.
Bible Reading: 1 Chronicles 26-28
ಅರಿಕೆಗಳು
ವೈಯಕ್ತಿಕ ಆತ್ಮೀಕ ಬೆಳವಣಿಗೆ
ಸೈತಾನನು ಹೊರಿಸಿದ ಹೊರೆಯು ನನ್ನ ಬೆನ್ನಿನಿಂದಲೂ ಹೂಡಿದ ನೊಗವು ನನ್ನ ಕತ್ತಿನಿಂದಲೂ ತೊಲಗುವವು; ನಾನು ಅಭಿಷೇಕ ಹೊಂದಿದ ಕಾರಣ ಎಲ್ಲಾ ನೊಗವು ಮುರಿದು ಹೋಗುವದು.(ಯೆಶಾಯ 10:27)
ಕುಟುಂಬ ರಕ್ಷಣೆ
ನನಗೆ ಸಿಕ್ಕ ಬಾದ್ಯತೆಯು ಶಾಶ್ವತವಾಗಿರುತ್ತದೆ. ನಾನು ಕೇಡಿನ ಸಮಯದಲ್ಲಿ ನಾಚಿಕೆಪಡುವುದಿಲ್ಲ: ಮತ್ತು ಕ್ಷಾಮದ ದಿನಗಳಲ್ಲಿ, ನಾನು ಮತ್ತು ನನ್ನ ಕುಟುಂಬ ಸದಸ್ಯರು ಆತ್ಮೀಕವಾಗಿಯೂ ಮತ್ತು ಆರ್ಥಿಕವಾಗಿಯೂ ತೃಪ್ತರಾಗುತ್ತೇವೆ. (ಕೀರ್ತನೆ 37:18-19)
ಆರ್ಥಿಕ ಪ್ರಗತಿ
ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಮಹಿಮೆಯ ಐಶ್ವರ್ಯದ ಪ್ರಕಾರ ನನ್ನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾನೆ. (ಫಿಲಿಪ್ಪಿ 4:19) ನಾನು ಮತ್ತು ನನ್ನ ಕುಟುಂಬ ಸದಸ್ಯರಿಗೆ ಯಾವು ಒಳ್ಳೆಯದರಲ್ಲಿಯೂ ಯೇಸುನಾಮದಲ್ಲಿ ಕೊರತೆಯಾಗುವುದಿಲ್ಲ.
KSM ಚರ್ಚ್
ತಂದೆಯೇ, ನಿಮ್ಮ ವಾಕ್ಯವು ಹೇಳುತ್ತದೆ, ನಮ್ಮನ್ನು ಕಾಪಾಡಲು ಮತ್ತು ನಮ್ಮ ಮಾರ್ಗಗಳಲ್ಲಿ ನಮ್ಮನ್ನು ಕಾಯಲು ನೀವು ನಿಮ್ಮ ದೂತರುಗಳಿಗೆ ನಮ್ಮ ಮೇಲೆ ಅಪ್ಪಣೆ ನೀಡುತ್ತೀರಿ. ಪಾಸ್ಟರ್ ಮೈಕೆಲ್ , ಅವರ ಕುಟುಂಬ, ತಂಡದ ಸದಸ್ಯರು ಮತ್ತು ಕರುಣಾ ಸದನ ಸಭೆಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯ ಸುತ್ತಲು ನಿಮ್ಮ ಪರಿಶುದ್ಧ ದೇವದೂತರನ್ನು ಯೇಸುನಾಮದಲ್ಲಿ ಬಿಡುಗಡೆ ಮಾಡಿ.
ಅವರ ವಿರುದ್ಧ ಕಾರ್ಯಮಾಡುವ ಅಂಧಕಾರ ಪ್ರತಿಯೊಂದು ಶಕ್ತಿಯನ್ನು ಯೇಸುನಾಮದಲ್ಲಿ ನಾಶಮಾಡಿ.
ರಾಷ್ಟ್ರ
ತಂದೆಯೇ, ನಿಮ್ಮ ಸಮಾಧಾನವೂ ಮತ್ತು ನೀತಿಯೂ ನಮ್ಮ ರಾಷ್ಟ್ರವನ್ನು ತುಂಬಲಿ. ನಮ್ಮ ರಾಷ್ಟ್ರದ ವಿರುದ್ಧ ಕಾರ್ಯ ಮಾಡುವ ಅಂಧಕಾರದ ಮತ್ತು ವಿನಾಶದ ಎಲ್ಲಾ ಶಕ್ತಿಗಳು ಯೇಸುನಾಮದಲ್ಲಿ ನಾಶವಾಗಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಯು ಭಾರತದ ಪ್ರತಿಯೊಂದು ನಗರ ಮತ್ತು ರಾಜ್ಯದಲ್ಲಿ ಯೇಸುನಾಮದಲ್ಲಿ ಹರಡಲಿ.
Join our WhatsApp Channel

Most Read
● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಪ್ರೀತಿಯ ಭಾಷೆ
● ಹೊಟ್ಟೆಕಿಚ್ಚು ಎಂಬ ಪೀಡೆ.
ಅನಿಸಿಕೆಗಳು