Daily Manna
1
1
119
ಪ್ರೀತಿ - ಗೆಲ್ಲುವ ತಂತ್ರ -2
Sunday, 31st of August 2025
Categories :
ಪ್ರೀತಿ (Love)
ಶಾಸ್ತ್ರ ದಲ್ಲಿ ಹೇಳಲಾದ ಪ್ರೀತಿಯು ಅದೊಂದು ಭಾವನಾತ್ಮಕ ಭಾವನೆಯಲ್ಲ, ಬದಲಾಗಿ ಮುಖ್ಯವಾಗಿ ಕ್ರಿಯಾಪದವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಅದು ಕೇವಲ ನಿಮ್ಮನ್ನು ಬೆರಗುಗೊಳಿಸುವ ಭಾವನೆಯಲ್ಲ. "ಮಾತುಗಳಿಂದ ಅಥವಾ ನಾಲಿಗೆಯಿಂದ ಮಾತ್ರ ಹೇಳುವಂತದ್ದಾಗಿರದೆ, ಕ್ರಿಯೆಗಳಿಂದ ಮತ್ತು ಸತ್ಯದಿಂದ ಪ್ರೀತಿಸಿ" ಎಂದು ದೇವರವಾಕ್ಯವು ನಮಗೆ ಸ್ಪಷ್ಟವಾಗಿ ಆಜ್ಞಾಪಿಸುತ್ತದೆ (1 ಯೋಹಾನ 3:18)
ಸಾಮಾನ್ಯವಾಗಿ, ನಾವು ನಮ್ಮ ಸ್ನೇಹಿತರನ್ನು ಅವರು ನಮಗೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎನ್ನುವುದನ್ನು ನೋಡಿ ಆಯ್ಕೆ ಮಾಡಿ ಕೊಳ್ಳುತ್ತೇವೆ. ಆಗ ನಾವು ಅವರೊಂದಿಗೆ ಇರುವುದು ಸುಲಭವಾಗಿ, ಅವರ ಜೊತೆಗೆ ಆನಂದಿಸಲು ಹೆಚ್ಚು ಶ್ರಮವಹಿಸ ಬೇಕಾದ ಅವಶ್ಯಕತೆ ಇರುವುದಿಲ್ಲ.
ಇದು ಅನುಕೂಲಕರವಾಗಿರುತ್ತದೆ. ಇದು ಆರಾಮದಾಯಕವಾಗಿರುತ್ತದೆ. ಆದರೆ ನಿಜವಾದ ಪ್ರೀತಿಯು ಕರುಣೆ, ಕಾಳಜಿ ಮತ್ತು ಇನ್ನೊಬ್ಬರ ಯೋಗಕ್ಷೇಮದ ಕುರಿತು ವ್ಯಕ್ತಪಡಿಸುವ ಕಾಳಜಿಯಾಗಿದೆ. ಇದು ಬದ್ಧತೆಯನ್ನು ಆಧರಿಸಿದೆ ಹೊರತು ಅನುಕೂಲತೆಯನ್ನಲ್ಲ.
ನಮ್ಮ ಹಾಳುಬಿದ್ದ, ಪಾಪ ತುಂಬಿದ ಈ ಜಗತ್ತಿನಲ್ಲಿ, ನಾವು ಹೊಂದಿಕೊಳ್ಳಲು ಕಷ್ಟಕರವೆಂದು ಕಂಡುಕೊಳ್ಳುವ ಜನರು ಯಾವಾಗಲೂ ಇರುತ್ತಾರೆ; ಪ್ರೀತಿಸಲು ಕಷ್ಟಕರವಾದ ಜನರು ಯಾವಾಗಲೂ ಇರುತ್ತಾರೆ. ನಮ್ಮ ನೈಸರ್ಗಿಕ ಮಾನವ ಪ್ರವೃತ್ತಿಯೆಂದರೆ ಅವರನ್ನು ಬಿಟ್ಟು ಬೇರೆ ರೀತಿಯಲ್ಲಿ ಓಡುವುದು, ಸಾಧ್ಯವಾದಷ್ಟು ಅವರಿಂದ ತಪ್ಪಿಸಿಕೊಳ್ಳುವುದು ಆಗಿರುತ್ತದೆ.
ದೇವರ ವಾಕ್ಯವು ನಮಗೆ ಸವಾಲು ಹಾಕುತ್ತಾ, "ಆದರೆ ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ, ನಿಮಗೇನು ಕೀರ್ತಿ? ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವರನ್ನೇ ಪ್ರೀತಿಸುತ್ತಾರಲ್ಲಾ. ನಿಮಗೆ ಒಳ್ಳೆಯದನ್ನು ಮಾಡುವವರಿಗೆ ನೀವು ಒಳ್ಳೆಯದನ್ನು ಮಾಡಿದರೆ, ನಿಮಗೇನು ಕೀರ್ತಿ? ಪಾಪಿಗಳು ಸಹ ಹಾಗೆಯೇ ಮಾಡುತ್ತಾರಲ್ಲಾ. (ಲೂಕ 6:32-33) ಎಂದು ಕೇಳುತ್ತದೆ.
ದೇವರು ನಿಮ್ಮ ಜೀವನದಲ್ಲಿ ಇರಿಸಿರುವ ಕಷ್ಟಕರ ಜನರನ್ನು ಪ್ರೀತಿಸಲು, ದೇವರು ಉಚಿತವಾಗಿ ನೀಡುವ ಕೃಪೆ ನಿಮಗೆ ಬೇಕಾಗುತ್ತದೆ. ರೋಮನ್ನರು 5:5 ಹೇಳುತ್ತದೆ, "ನಮಗೆ ಕೊಡಲ್ಪಟ್ಟ ಪವಿತ್ರಾತ್ಮನ ಮೂಲಕ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಲ್ಪಟ್ಟಿದೆ." ಎಂದು.
ನಾವು ಪವಿತ್ರಾತ್ಮನೊಂದಿಗಿನ ಅನ್ಯೋನ್ಯತೆಯಲ್ಲಿ ಸಮಯ ಕಳೆಯುವಾಗ, ದೇವರ ಪ್ರೀತಿಯು ನಮ್ಮ ಆತ್ಮಗಳಲ್ಲಿ ಆಳವಾಗಿ ತುಂಬಲ್ಪಡುತ್ತದೆ. ಅದು ಬೇರೆ ಯಾವುದೇ ರೀತಿಯಲ್ಲಿ ಸಂಭವಿಸಲು ಸಾಧ್ಯವಿಲ್ಲ. ನಮ್ಮ ಸುತ್ತಲಿನ ಕಷ್ಟಕರ ಜನರನ್ನು ಪ್ರೀತಿಸಲು ನಮಗೆ ಸಹಾಯ ಮಾಡುವ ಅನುಗ್ರಹ ಇದು.
Bible Reading: Lamentations 2-4
Prayer
ನಾವು ಈ ರೀತಿ ಮಾಡಿದಾಗ, ದೇವರಿಗೆ ಮಹಿಮೆ ಉಂಟಾಗುತ್ತದೆ ಮತ್ತು ನಮ್ಮ ಹೃದಯಗಳು ಆಳವಾದ ತೃಪ್ತಿಯನ್ನು ಕಂಡುಕೊಳ್ಳುತ್ತವೆ. ಇದು ನಿಸ್ಸಂದೇಹವಾಗಿ ಉನ್ನತ ಮಾನದಂಡವಾಗಿದೆ ಮತ್ತು ಅದಕ್ಕಾಗಿಯೇ ಇದು ಗೆಲುವಿನ ತಂತ್ರವಾಗಿದೆ.
Join our WhatsApp Channel

Most Read
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ● ಸಮೃದ್ಧಿಗಾಗಿರುವ ಮರೆತುಹೋದ ಒಂದು ಕೀಲಿಕೈ
● ಶ್ರೇಷ್ಠತೆಯನ್ನು ಸಾಧಿಸುವುದು ಹೇಗೆ?
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ಯುದ್ಧಕ್ಕಾಗಿ ತರಬೇತಿ - 1.
● ಪರಿಶೋಧನೆಯ ಸಮಯದಲ್ಲಿ ನಂಬಿಕೆ
● ಪ್ರೀತಿಯ ಹುಡುಕಾಟ
Comments