Daily Manna
1
1
66
ಯೇಸುವಿನ ರಕ್ತವನ್ನು ಹಚ್ಚುವುದು
Tuesday, 13th of May 2025
Categories :
ಯೇಸುವಿನ ರಕ್ತ (Blood of Jesus)
ನಾನು ನಂಬಿಕೆ-ಕೇಂದ್ರಿತ ವಾತಾವರಣದಲ್ಲಿ ಬೆಳೆಯುವ ಸಮಯದಲ್ಲಿ ದೈವಿಕ ಪುರುಷರು ಮತ್ತು ಮಹಿಳೆಯರು ಶತ್ರುಗಳ ಶಕ್ತಿಗಳಿಂದ ತಮ್ಮ ರಕ್ಷಣೆಗಾಗಿಯೂ ತಮ್ಮ ಪ್ರೀತಿಪಾತ್ರರು, ಮನೆಗಳು ಮತ್ತು ಕುಟುಂಬಗಳ ಮೇಲೆಯೂ ಕ್ರಿಸ್ತನ ರಕ್ತದ ಬಲದ ರಕ್ಷಣೆಗಾಗಿ ಬೇಡಿಕೊಳ್ಳುವ ಕುರಿತು ಅವರುಗಳು ಮಾತನಾಡುವುದನ್ನು ಕೇಳುವುದು ನನಗೆ ಸಾಮಾನ್ಯ ಸಂಗತಿಯಾಗಿತ್ತು. ಆದಾಗ್ಯೂ, ಕೆಲವು ಸತ್ಯವೇದ ಬೋದಕರು , ರಕ್ತದ ಮೂಲಕ ರಕ್ಷಿಸುವಂತೆ ಬೇಡಿಕೊಳ್ಳುವ ಕಲ್ಪನೆಯನ್ನು ಪರಿಸ್ಥಿತಿಗಳ ಮೇಲೇಯೂ ಸಹ ಆತನ ರಕ್ತವನ್ನು ಪ್ರೊಕ್ಷಿಸುವಂತೆ ಬೇಡಿಕೊಳ್ಳಿ ಎಂದು ಉಲ್ಲೇಖಿಸುತ್ತಾರೆ.
"ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು." (ಪ್ರಕಟನೆ 12:11)
ಪಸ್ಕದ ಕಥೆಯು ನಂಬಿಕೆ ಮತ್ತು ವಿಧೇಯತೆಯ ಶಕ್ತಿಗೆ ಸಾಕ್ಷಿಯಾಗಿದೆ. ದೇವರು ಈಜಿಪ್ಟಿನಲ್ಲಿ ಇಸ್ರೇಲ್ ಮಕ್ಕಳಿಗೆ ಕುರಿಮರಿಯ ರಕ್ತವನ್ನು ತೆಗೆದುಕೊಂಡು ತಮ್ಮ ಮನೆಗಳ ಬಾಗಿಲಿನ ಕಂಬಗಳ ಮೇಲೆ ಇಡಲು ಸೂಚಿಸಿದನು. ಮರಣದ ದೂತನು ಹಾದಿಯ ಮೂಲಕ ಹಾದುಹೋದಾಗ, ಅವನು ಮನೆಗಳ ಬಾಗಿಲುಗಳನ್ನು ಗುರುತಿಸುವ ರಕ್ತದ ನೋಡಿ ಅವರಿಗೆ ಯಾವುದೇ ಕೇಡು ಮಾಡದೆ ಅವರನ್ನು ಉಳಿಸಿತು (ವಿಮೋಚನಕಾಂಡ 12)
ನೂರಾರು ವರ್ಷಗಳ ನಂತರ, 1 ಪೂರ್ವಕಾಲವೃತ್ತಾಂತ 21:14-28 ರಲ್ಲಿ, ರಾಜ ದಾವೀದನು ಇಸ್ರೇಲ್‌ನ ಜನಗಣತಿಯನ್ನು ಮಾಡುವ ಮೂಲಕ ಪಾಪ ಮಾಡಿದನು, ಇದು ಎಪ್ಪತ್ತು ಸಾವಿರ ಜನರ ಜೀವಗಳನ್ನು ಬಲಿತೆಗೆದುಕೊಂಡ ವಿನಾಶಕಾರಿ ಪ್ಲೇಗ್‌ಗೆ ಕಾರಣವಾಯಿತು. ತನ್ನ ತಪ್ಪನ್ನು ಅರಿತುಕೊಂಡ ದಾವೀದನು ದೇವರ ಕರುಣೆ ಮತ್ತು ಕ್ಷಮೆಯನ್ನು ಬೇಡಿದನು. ಆಗ ದೇವರು ಅವನಿಗೆ ಒಂದು ಬಲಿಪೀಠವನ್ನು ನಿರ್ಮಿಸಿ ಪ್ರಾಣಿ ಬಲಿಯನ್ನು ಅರ್ಪಿಸಲು ದಾವೀದನಿಗೆ ಸೂಚಿಸಿದನು. ದಾವೀದನ ಪಶ್ಚಾತ್ತಾಪ ಮತ್ತು ವಿಧೇಯತೆಯ ಮೂಲಕ ರಕ್ತ ಬಲಿಯನ್ನು ಅರ್ಪಿಸಿದಾಗ ಅದು ಪ್ಲೇಗ್ಅನ್ನು ನಿಲ್ಲಿಸಿ ಅಸಂಖ್ಯಾತ ಜೀವಗಳನ್ನು ಉಳಿಸಿತು.
ವಿಮೋಚನಕಾಂಡ 29:39 ರಲ್ಲಿ, ಬೆಳಿಗ್ಗೆ ಒಂದು ಕುರಿಮರಿಯನ್ನು ಮತ್ತು ಸಂಜೆ ಇನ್ನೊಂದು ಕುರಿಮರಿಯನ್ನು ಅರ್ಪಿಸುವ ಬಗ್ಗೆ ದೇವರು ಯಾಜಕರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದನು. ಈ ಪದ್ಧತಿಯನ್ನು ಭಕ್ತರು ದಿನವಿಡೀ ಯೇಸುವಿನ ರಕ್ತದ ಶಕ್ತಿ ಮತ್ತು ರಕ್ಷಣೆಯ ಮೇಲೆ ನಿರಂತರವಾಗಿ ಅವಲಂಬಿತರಾಗುವ ಅಗತ್ಯತೆಯ ಸಾಂಕೇತಿಕವಾದ ನಿರೂಪಣೆಯಾಗಿ ನಾವು ಕಾಣಬಹುದು.
ಪ್ರತಿದಿನ ಬೆಳಿಗ್ಗೆ ಯೇಸುವಿನ ರಕ್ತದಡಿಯಲ್ಲಿ ನಮ್ಮನ್ನು ಮರೆಮಾಚುವ ಮೂಲಕ, ನಾವು ನಮ್ಮ ದಿನವನ್ನು ಭದ್ರತೆಯ ಭಾವನೆ ಯಲ್ಲಿಯೂ ಮತ್ತು ಕರ್ತನು ಅನುಗ್ರಹಿಸಿರುವ ರಕ್ಷಣೆಯಲ್ಲಿಯೂ ವಿಶ್ವಾಸದಿಂದ ಪ್ರಾರಂಭಿಸಬಹುದು. ಈ ನಂಬಿಕೆಯ ಕ್ರಿಯೆಯು ನಾವು ದೇವರ ಚಿತ್ತದೊಂದಿಗೆ ಹೊಂದಾಣಿಕೆಯಲ್ಲಿ ನಡೆಯುತ್ತಿದ್ದೇವೆ ಎಂದು ಅರಿತುಕೊಂಡಾಗ ನವೀಕೃತ ಶಕ್ತಿ ಮತ್ತು ದೃಢನಿಶ್ಚಯದಿಂದ ದಿನದ ಸವಾಲುಗಳನ್ನು ಎದುರಿಸಲು ಅನುವು ಅದು ನಮಗೆ ಮಾಡಿಕೊಡುತ್ತದೆ.
ನಾವು ನಮ್ಮ ದಿನವನ್ನು ಕೊನೆಗೊಳಿಸುತ್ತಿದ್ದಂತೆ, ಮತ್ತೊಮ್ಮೆ ಯೇಸುವಿನ ರಕ್ತದಡಿಯಲ್ಲಿ ನಮ್ಮನ್ನು ಮರೆಮಾಚುವಂತದ್ದು ನಮ್ಮ ಜೀವನದಲ್ಲಿ ದೇವರ ಅಚಲವಾದ ಪ್ರಸನ್ನತೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ನಾವು ನಮ್ಮ ರಾತ್ರಿಯ ಸಮಯವನ್ನೂ ಸಹ ಕರ್ತನಿಗೆ ಒಪ್ಪಿಸುವಾಗ, ಆತನು ನಮ್ಮನ್ನು ನಿರಂತರವಾಗಿ ಕಾಯುವವನಾಗಿದ್ದು ಮುಂದಿನ ದಿನಕ್ಕೆ ನಮಗೆ ಬೇಕಾದ ಆತ್ಮೀಕ ಪುನಃಸ್ಥಾಪನೆಯನ್ನು ಒದಗಿಸುತ್ತಾನೆ ಎಂಬ ಭರವಸೆಯಲ್ಲಿ ನಾವು ಶಾಂತಿಯನ್ನೂ ಮತ್ತು ವಿಶ್ರಾಂತಿಯನ್ನೂ ಕಂಡುಕೊಳ್ಳಬಹುದು.
ನೀವು ಯಾವುದೇ ವ್ಯಕ್ತಿ ಅಥವಾ ಪರಿಸ್ಥಿತಿಯ ಮೇಲೆ ಯೇಸುವಿನ ರಕ್ತದ ಮೂಲಕ ದೊರಕುವ ರಕ್ಷಣೆಯನ್ನು ಬೇಡಿಕೊಳ್ಳಬಹುದು. ಉದಾಹರಣೆಗೆ, ನಿಮ್ಮ ಮಕ್ಕಳು ಶಾಲೆ ಅಥವಾ ಕಾಲೇಜಿಗೆ ಹೋಗಲಿರುವಾಗ, "ಯೇಸುವಿನ ಹೆಸರಿನಲ್ಲಿ, ನಾನು (ನಿಮ್ಮ ಮಗುವಿನ ಹೆಸರೇಳಿ ) ಯೇಸುವಿನ ರಕ್ತದಿಂದ ಮರೆಮಾಚುತ್ತೇನೆ "ಎಂದು ಹೇಳಿ. ನೀವು ಚಾಲನೆ ಮಾಡುವಾಗ, "ಯೇಸುವಿನ ಹೆಸರಿನಲ್ಲಿ, ನಾನು ಈ ವಾಹನವನ್ನು, ಅದರಲ್ಲಿರುವ ಎಲ್ಲರನ್ನೂ ಮತ್ತು ನನ್ನ ಪ್ರಯಾಣವನ್ನು ಯೇಸುವಿನ ರಕ್ತದಿಂದ ಮರೆಮಾಚುತ್ತೇನೆ". . ಹೋಗಿ ಪರಿಪೂರ್ಣ ಸುರಕ್ಷತೆಯೊಂದಿಗೆ ಹಿಂತಿರುಗುತ್ತೇವೆ" ಎಂದು ಹೇಳಿ.
ನೀವು ಯೇಸುವಿನ ರಕ್ತದ ಪ್ರಯೋಜನವನ್ನು ಹೇಗೆ ಬೇಡಿಕೊಳ್ಳಬೇಕೆಂದು ನೀವು ಕಲಿತುಬಿಟ್ಟರೆ , ದೇವರು ಸ್ವತಃ ನಿಮಗೆ ನೀಡಿದ ಶಕ್ತಿ ಮತ್ತು ಅಧಿಕಾರವನ್ನು ನೀವು ಹೊಂದಿಕೊಂಡು ಅದನ್ನು ನಿಮ್ಮ ಜೀವನದಲ್ಲಿ ಆತನು ಉದ್ದೇಶಿಸಿದಂತೆ ಕಾರ್ಯರೂಪಕ್ಕೆ ತರುತ್ತೀರಿ. ಯೇಸುವಿನ ರಕ್ತದ ಬಲದ ವಿರುದ್ಧ ಯಾವುದೂ ಸಹ ನಿಲ್ಲಲು ಸಾಧ್ಯವಿಲ್ಲ!
ಆದ್ದರಿಂದ, ನಿಮ್ಮ ಜೀವನದಲ್ಲಿ ಯೇಸುವಿನ ರಕ್ತದ ಬಲವನ್ನು ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಬೇಡಿಕೊಳ್ಳಲು ಪ್ರಾರಂಭಿಸಿ ಮತ್ತು ಸೈತಾನನು ಓಡಿಹೋಗುವುದನ್ನು ನೋಡಿ!
Bible Reading: 2 Kings 24-25
Prayer
ನಾನು ಯೇಸುವಿನ ರಕ್ತವನ್ನು ನನ್ನ ಆಲೋಚನೆಗಳು, ಮಾತುಗಳು ಮತ್ತು ಕನಸಿನ ಜೀವನದ ಮೇಲೆಯೂ ಹಚ್ಚುತ್ತೇನೆ. ನನ್ನ ಜೀವನದಲ್ಲಿನ ಪ್ರತಿಯೊಂದು ಮೊಂಡುತನದ ಸಮಸ್ಯೆಯು ಕುರಿಮರಿಯ ರಕ್ತದಿಂದ ಯೇಸುನಾಮದಲ್ಲಿ ಸೋಲಿಸಲ್ಪಡಲಿ. ಆಮೆನ್!
Join our WhatsApp Channel

Most Read
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.● ಗೌರವ ಮತ್ತು ಮೌಲ್ಯ
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಹೋಲಿಕೆಯ ಬಲೆ
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸುಮ್ಮನೆ ಓಡಬೇಡಿ.
Comments