"ಅಬ್ರಾಮನು ತೊಂಭತ್ತೊಂಭತ್ತು ವರುಷದವನಾದಾಗ ಯೆಹೋವನು ಅವನಿಗೆ ದರ್ಶನಕೊಟ್ಟು - ನಾನು ಸರ್ವಶಕ್ತನಾದ ದೇವರು; ನನಗೆ ನಡಕೊಂಡು ದೋಷವಿಲ್ಲದವನಾಗಿರು. ನಾನು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅತ್ಯಧಿಕವಾದ ಸಂತತಿಯನ್ನು ನಿನಗೆ ಕೊಡುವೆನು ಅಂದನು."(ಆದಿಕಾಂಡ 17:1-2)
ದೇವರು ಅಬ್ರಹಾಮನೊಂದಿಗಿನ ತನ್ನ ಒಡಂಬಡಿಕೆಯನ್ನು ದೃಢಪಡಿಸಿದನು. ಕರ್ತನು ತನ್ನನ್ನು ಅಬ್ರಹಾಮನಿಗೆ ಹೊಸ ಹೆಸರಿನೊಂದಿಗೆ ಪರಿಚಯಿಸಿಕೊಂಡನು, ಅದು ಅವನ ಹಿಂದಿನ ಮಾನವಕುಲಕ್ಕೆ ತಿಳಿದಿಲ್ಲದ ಹೆಸರು. "ಸರ್ವಶಕ್ತ ದೇವರು" ಎಲ್-ಷಡಾಯಿ ಎಂಬ ಹೀಬ್ರೂ ಪದಗಳನ್ನು ಒಳಗೊಂಡ ಹೆಸರು . "ಎಲ್" ಎಂಬ ಪದದ ಅರ್ಥ "ಬಲಶಾಲಿ ಅಥವಾ ಶಕ್ತಿಶಾಲಿ" ಷಡಾಯ್ ಎಂಬ ಪದದ ಅರ್ಥ "ಎದೆಯುಳ್ಳವನು" ಅಥವಾ "ಪೋಷಿಸುವವನು". ಷಡಾಯ್ ಕೂಡ ಸ್ತ್ರೀಲಿಂಗ ಪದವಾಗಿದೆ.
ದೇವರು ಅಬ್ರಹಾಮನಿಗೆ, "ಒಬ್ಬ ತಾಯಿ ತನ್ನ ಮಗುವಿಗೆ ಹೇಗೆ ಆಹಾರವನ್ನು ನೀಡುತ್ತಾಳೋ ಹಾಗೆಯೇ ನಾನು ನಿಮಗೆ ಸಂಪೂರ್ಣ ಪೋಷಕನಾಗುತ್ತೇನೆ" ಎಂದು ಪ್ರಕಟಪಡಿಸಿದನು.
ನಮ್ಮಲ್ಲಿ ಹೆಚ್ಚಿನವರು ಸರ್ವಶಕ್ತ ದೇವರನ್ನು ಬಲಶಾಲಿ ಮತ್ತು ಶಕ್ತಿಶಾಲಿ ಎಂದು ಚಿತ್ರಿಸುತ್ತಾರೆ ಆದರೆ ಇಂದಿನ ದೇವರವಾಕ್ಯವು(ಆದಿಕಾಂಡ 17:1-2) ಆತನು ತಾಯಿಯಂತೆ(ವಾಸ್ತವವಾಗಿ ತಾಯಿಗಿಂತ ಹೆಚ್ಚು) ಕೋಮಲನೂ ವಾತ್ಸಲ್ಯ ಪೂರ್ಣನು ಆಗಿದ್ದಾನೆಂದು ಹೇಳುತ್ತದೆ.
ತಾಯಿಯೊಬ್ಬಳು ತನ್ನ ಮಕ್ಕಳ ಮೇಲೆ ತೋರುವ ಪ್ರೀತಿ ಮತ್ತು ಕಾಳಜಿಯು ಅವರಲ್ಲಿ ಭಾವನಾತ್ಮಕ ಸ್ಥಿರತೆ ಮತ್ತು ಆರೋಗ್ಯಕರ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಈ ಸಾಂಕ್ರಾಮಿಕ ರೋಗದ ಸಮಯದಲ್ಲಿ, ನಿಮ್ಮಲ್ಲಿ ಕೆಲವರು ನಿಮ್ಮ ಪ್ರೀತಿಪಾತ್ರರನ್ನೊ ಅಥವಾ ನಿಮಗೆ ಮೌಲ್ಯಯುತವಾದದ್ದನ್ನು ಅಂದರೆ ಉದ್ಯೋಗ, ವ್ಯವಹಾರ ಇತ್ಯಾದಿಗಳನ್ನು ಕಳೆದುಕೊಂಡಿರಬಹುದು. ಆತನ ಪ್ರೀತಿಯು ಹಿಂದಿನ ಪ್ರತಿಯೊಂದು ನೋವನ್ನು ಗುಣಪಡಿಸಿ, ನಿಮ್ಮ ಹೃದಯವನ್ನು ಪುನಃಸ್ಥಾಪಿಸಿ ನಿಮ್ಮ ಆತ್ಮದಲ್ಲಿ ನೀವು ಹೊಂದಿರುವ ಯಾವುದೇ ಭಾವನಾತ್ಮಕ ಶೂನ್ಯತೆಯನ್ನು ತುಂಬುತ್ತದೆ.
ಇಂದು ನೀವು ಯಾವ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ದೇವರು ಎಲ್ ಷಡಾಯ್ - ಸರ್ವಶಕ್ತನು ಆಗಿದ್ದಾನೆ ಎಂಬ ಸತ್ಯದಲ್ಲಿ ನೀವು ನೆಲೆಗೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವಿರಿ. ನಿಮಗೆ ಬೇಕಾದುದೆಲ್ಲವನ್ನೂ ದೇವರು ಅನುಗ್ರಹಿಸಲು ಆತನು ಶಕ್ತನ್ನಾಗಿದ್ದಾನೆ. “ಕರ್ತನಿಗೆ ಅಸಾಧ್ಯವಾದದ್ದು ಯಾವುದಾದರೂ ಉಂಟೋ?” (ಆದಿಕಾಂಡ 18:14 NIV)
Bible Reading: Psalms 56-63
ಅರಿಕೆಗಳು
“ಇರುವಾತನು ‘ಸರ್ವಶಕ್ತ ದೇವರು’ ಎಂಬುದನ್ನು ನಾನು ಅರಿತುಕೊಂಡಿದ್ದೇನೆ ಆದರಿಂದ ನಾನು ಆತನ ಮುಂದೆ ದೋಷವಿಲ್ಲದ ಹಾಗೆ ನಡೆಯುತ್ತಾ ಪರಿಪೂರ್ಣತೆಯತ್ತ ಸಾಗುತ್ತೇನೆ.”
Join our WhatsApp Channel

Most Read
● ಅಸಾಮಾನ್ಯ ಆತ್ಮಗಳು● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ನಿಮ್ಮ ಮಾರ್ಗದರ್ಶಕರು ಯಾರು - |
ಅನಿಸಿಕೆಗಳು