ಅನುದಿನದ ಮನ್ನಾ
1
0
72
ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿರುವ ಪ್ರಮುಖ ಸಂಗತಿಗಳು
Wednesday, 6th of August 2025
Categories :
ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವವರು (intercessor)
1. ನಿಮಗಾಗಿ ಅಸಾಮಾನ್ಯ ಮಧ್ಯಸ್ಥಿಕೆ ಪ್ರಾರ್ಥನಾ ವೀರರು ಪ್ರಾರ್ಥಿಸಿದಾಗ ಅಸಾಮಾನ್ಯವಾದ ಅನುಗ್ರಹ ಬಿಡುಗಡೆಯಾಗುತ್ತದೆ
ಅಪೊಸ್ತಲರ ಕೃತ್ಯಗಳು 12 ರಲ್ಲಿ, ಹೆರೋದನು ಸಭೆಯನ್ನು ಹಿಂಸಿಸಲು ಪ್ರಾರಂಭಿಸಿ ಯೋಹಾನನ ಸಹೋದರನಾದ ಯಾಕೋಬನನ್ನು ಕೊಂದು ಪೇತ್ರನನ್ನು ಜೈಲಿಗೆ ಹಾಕಿದನು. ಇದನ್ನು ನೋಡಿದ ಸಭೆ, ಪೇತ್ರನನ್ನು ಬಿಡುಗಡೆಗೊಳಿಸಬೇಕೆಂದು ಕರ್ತನನ್ನು ಕೇಳಿಕೊಂಡು ತೀವ್ರವಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡಲು ಆರಂಭಿಸಿತು. ಸಭೆಯ ಈ ತೀವ್ರವಾದ ಮಧ್ಯಸ್ಥಿಕೆಯ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಾಗಿ, ದೇವರು ಅದ್ಭುತವಾಗಿ ಸೆರೆಮನೆಯ ಬಾಗಿಲುಗಳನ್ನು ತೆರೆದು ಪೇತ್ರನನ್ನು ಮುಕ್ತಗೊಳಿಸಿದನು.
"ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣದೊಳಗೆ ನಡೆಸುವ ಕಬ್ಬಿಣದ ದ್ವಾರಕ್ಕೆ ಅವರು ಬಂದರು. ಅದು ತನ್ನಷ್ಟಕ್ಕೆ ತಾನೇ ತೆರೆಯಲು ಅವರು ಅದನ್ನು ದಾಟಿ ಹೊರಗೆ ಬಂದರು. ಒಂದು ಬೀದಿಯನ್ನು ದಾಟುವವರೆಗೆ ನಡೆದು ಬಂದ ನಂತರ ಫಕ್ಕನೆ ದೇವದೂತನು ಪೇತ್ರನನ್ನು ಬಿಟ್ಟುಹೋದನು. ಆಗ ಪೇತ್ರನು ಸಂಪೂರ್ಣವಾಗಿ ಎಚ್ಚರಗೊಂಡು, “ಈಗ ಕರ್ತದೇವರು ತಮ್ಮ ದೂತನನ್ನು ಕಳುಹಿಸಿ ಹೆರೋದನ ಹಿಡಿತದಿಂದಲೂ ಯೆಹೂದ್ಯ ಜನರು ನಿರೀಕ್ಷಿಸುತ್ತಿದ್ದ ಎಲ್ಲಾ ಕೇಡಿನಿಂದಲೂ ನನ್ನನ್ನು ಉಳಿಸಿ ಕಾಪಾಡಿರುವರು ಎಂದು ಈಗ ನನಗೆ ಗೊತ್ತಾಗಿದೆ,” ಎಂದುಕೊಂಡನು". (ಅಪೊಸ್ತಲರ ಕೃತ್ಯಗಳು 12:10-11)
ಪ್ರಾರ್ಥಿಸುವ ಎಲ್ಲರಿಗೂ ಅಸಾಮಾನ್ಯ ಅನುಗ್ರಹ ಬಿಡುಗಡೆಯಾಗುವುದಿಲ್ಲ, ಆದರೆ ನೀವು ಹೊತ್ತಿರುವ ಭಾರವನ್ನು ಗ್ರಹಿಸಲು ಶಕ್ತವಾದ ದರ್ಶನವನ್ನು ಹೊಂದಿರುವ ಜನರು ನಿಮಗಾಗಿ ಪ್ರಾರ್ಥಿಸುವಾಗ ಅದು ಬಿಡುಗಡೆಯಗುತ್ತದೆ. ಪೇತ್ರನ ವಿಷಯದಲ್ಲಿ, ಅವನಿಗಾಗಿ ಪ್ರಾರ್ಥಿಸುವ ಜನರು ಕೇವಲ ಏನೋ ಧಾರ್ಮಿಕ ಕರ್ತವ್ಯದಲ್ಲಿ ಭಾಗಿಯಾಗಿರಲಿಲ್ಲ. ಅವರು ಪೇತ್ರನನ್ನು ಪ್ರೀತಿಸುತ್ತಿದ್ದರು ಮತ್ತು ಅವನು ಬಿಡುಗಡೆಯಾಗಿ ಬರುವುದನ್ನು ನೋಡಲು ತೀವ್ರವಾಗಿ ಬಯಸುವವರಾಗಿದ್ದರು.
2. ಪ್ರತಿಯೊಬ್ಬರಿಗೂ ಮಧ್ಯಸ್ಥಗಾರನ ಅಗತ್ಯವಿದೆ
“ಓಹ್, ಒಬ್ಬ ಮನುಷ್ಯನು [ನನಗಾಗಿ] ದೇವರೊಂದಿಗೆ ಮಧ್ಯಸ್ಥಿಕೆ ವಹಿಸಿ ಒಬ್ಬ ಮನುಷ್ಯನು ತನ್ನ ನೆರೆಯವನು ಮತ್ತು ಸ್ನೇಹಿತನೊಂದಿಗೆ [ಮಧ್ಯಸ್ಥಿಕೆ ವಹಿಸಿ ಬೇಡಿಕೊಳ್ಳುವಂತೆ].ಬೇಡಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ (ಯೋಬ 16:21)
ಮೇಲಿನ ವಚನವು ಹೇಳಿಕೆಯ ಸತ್ಯವನ್ನು ಎತ್ತಿ ತೋರಿಸುತ್ತದೆ: ಈ ಗ್ರಹದ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಮಧ್ಯಸ್ಥಗಾರನ ಅವಶ್ಯಕತೆಯಿದೆ. ಅಪೊಸ್ತಲ ಪೌಲನು ಸ್ವತಃ ಒಬ್ಬ ಪ್ರಬಲ ಪ್ರಾರ್ಥನಾ ಯೋಧನಾಗಿದ್ದರೂ ಮತ್ತು ದೇವರಿಂದ ಬಹಳವಾಗಿ ಬಳಸಲ್ಪಟ್ಟಿದ್ದರೂ ಸಹ, ಅವನು ಆಗಾಗ್ಗೆ ಸಭೆಗೆ ತನಗಾಗಿ ಪ್ರಾರ್ಥಿಸಬೇಕೆಂದು ಬೇಡಿ ಕೊಂಡನು.
" ಪ್ರಿಯರೇ, ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕವಾಗಿಯೂ ಪವಿತ್ರಾತ್ಮರ ಪ್ರೀತಿಯ ಮೂಲಕವಾಗಿಯೂ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ, ನನ್ನೊಂದಿಗೆ ಹೋರಾಡಿರಿ". (ರೋಮ 15:30)
ದೇವರು ನನ್ನನ್ನು ಕರೆದಿರುವ ಕೆಲಸದಲ್ಲಿ ನಾನು ನಂಬಿಗಸ್ತನಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯಲು ನನಗಾಗಿ, ನನ್ನ ಕುಟುಂಬಕ್ಕಾಗಿ ಮತ್ತು ತಂಡಕ್ಕಾಗಿ ಪ್ರತಿದಿನ ಪ್ರಾರ್ಥಿಸಬೇಕೆಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ.
3. ದೇವರು ಮಧ್ಯಸ್ಥಗಾರರನ್ನು ಹುಡುಕುತ್ತಾನೆ
ನಿಜವಾದ ಮಧ್ಯಸ್ಥಗಾರರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅವರು ಅಪರೂಪದ ತಳಿ. ದೇವರು ಸ್ವತಃ ಮಧ್ಯಸ್ಥಗಾರರನ್ನು ಹುಡುಕುವುದರಲ್ಲಿ ಆಶ್ಚರ್ಯವಿಲ್ಲ. ಕರ್ತನು ಹೀಗೆ ಹೇಳಿದನು,
“ ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶರಕ್ಷಣೆಗಾಗಿ ಪೌಳಿಯ ಒಡಕಿನಲ್ಲಿ ನಿಲ್ಲುವದಕ್ಕೂ ಗೋಡೆಯನ್ನು ಗಟ್ಟಿಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಿಲ್ಲ.” (ಯೆಹೆಜ್ಕೇಲ 22:30)
ದೇವರು ತನ್ನ ಹೃದಯದಲ್ಲಿ ಜನರಿಗೂ ಮಧ್ಯಸ್ಥಿಕೆ ವಹಿಸುವವರಿಗೂ, ನಡುವೆ ವಿಶೇಷ ಸ್ಥಾನವನ್ನು ಹೊಂದಿದ್ದಾನೆ. ಮಧ್ಯಸ್ಥಗಾರನಾಗಲು ಮತ್ತು ಸೈತಾನ - ಶತ್ರುವಿನ ಯೋಜನೆಗಳನ್ನು ತಡೆದು ನಿಲ್ಲಿಸುವ ಮಧ್ಯಸ್ತಿಕೆ ಪ್ರಾರ್ಥನೆ ಮಾಡುವ ಕರೆಯನ್ನು ಎಂದಾದರೂ ನೀವು ಬೇಡಿಕೊಂಡಿದ್ದೀರಾ?ಹಾಗಿದ್ದರೆ ದೇವರು ಖಂಡಿತವಾಗಿಯೂ ನಿಮ್ಮನ್ನು ಗೌರವಿಸುತ್ತಾನೆ.
Bible Reading: Isaiah 49-51
ಪ್ರಾರ್ಥನೆಗಳು
ಪವಿತ್ರಾತ್ಮನೇ, ಮಧ್ಯಸ್ಥಿಕೆ ವಹಿಸುವ ಕರೆಯನ್ನು ಸ್ಪಷ್ಟವಾಗಿ ಕೇಳುವಂತೆ ನನ್ನ ಕಿವಿಗಳನ್ನು ತೆರೆಯಿರಿ. ನಾನು ನನ್ನ ಹೃದಯವನ್ನು ತೆರೆದು ಮಧ್ಯಸ್ಥಗಾರನಾಗಲು ಕರೆಯನ್ನು ಸ್ವೀಕರಿಸುತ್ತೇನೆ. ನಿನ್ನ ಆತ್ಮನ ಮೂಲಕ ಮಧ್ಯಸ್ಥಿಕೆ ವಹಿಸಲು ನನಗೆ ಯೇಸುನಾಮದಲ್ಲಿ ಅಧಿಕಾರ ನೀಡು.
1. ನಿಮ್ಮ ಕುಟುಂಬ ಮತ್ತು ಸಂಬಂಧಿಕರ ರಕ್ಷಣೆಗಾಗಿ
2. KSM ಸೇವೆಗಳಿಗೆ ಹಾಜರಾಗುವ ಜನರ ರಕ್ಷಣೆಗಾಗಿ
(ಈಗ ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ಸ್ವಲ್ಪ ಸಮಯ ಕಳೆಯಿರಿ)
1. ನಿಮ್ಮ ಕುಟುಂಬ ಮತ್ತು ಸಂಬಂಧಿಕರ ರಕ್ಷಣೆಗಾಗಿ
2. KSM ಸೇವೆಗಳಿಗೆ ಹಾಜರಾಗುವ ಜನರ ರಕ್ಷಣೆಗಾಗಿ
(ಈಗ ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ಸ್ವಲ್ಪ ಸಮಯ ಕಳೆಯಿರಿ)
Join our WhatsApp Channel

Most Read
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
● ದೇವರು ಹೇಗೆ ಒದಗಿಸುತ್ತಾನೆ #3
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
ಅನಿಸಿಕೆಗಳು