ಅನುದಿನದ ಮನ್ನಾ
1
0
36
ಯೇಸು ಅಂಜೂರದ ಮರವನ್ನು ಏಕೆ ಶಪಿಸಿದನು?
Thursday, 28th of August 2025
Categories :
ಆತ್ಮನ ಫಲ (Fruit of the Spirit)
"ಮರುದಿನ ಅವರು ಬೇಥಾನ್ಯವನ್ನು ಬಿಟ್ಟು ಬರುತ್ತಿರುವಾಗ ಆತನಿಗೆ ಹಸಿವಾಯಿತು. ಎಲೆಗಳಿದ್ದ ಅಂಜೂರದ ಮರವನ್ನು ದೂರದಿಂದ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ."(ಮಾರ್ಕ 11:12-14)
ಸತ್ಯವೇದದಲ್ಲಿ ಹೆಚ್ಚಾಗಿ ಉಲ್ಲೇಖಿಸಲ್ಪಟ್ಟ ಮರಗಳಲ್ಲಿ ಅಂಜೂರದ ಮರವು ಒಂದಾಗಿದೆ. ಆದಾಮ ಮತ್ತು ಹವ್ವರು ತಮ್ಮ ಮೊದಲ ಹೊದಿಕೆಯನ್ನು ಅದರ ಎಲೆಗಳಿಂದಲೇ ಮಾಡಿಕೊಂಡರು (ಆದಿಕಾಂಡ 3:7). ಅಂಜೂರದ ಮರವನ್ನು ಮೊದಲನೆಯದಾಗಿ ಅದರ ರುಚಿಕರವಾದ, ಸಿಹಿಯಾದ ಹಣ್ಣಿಗೆ ಮೌಲ್ಯಯುತಗೊಳಿಸಲಾಯಿತು (ನ್ಯಾಯಾಧೀಶರು 9:11). 'ಅಂಜೂರದ ಮರ' ವನ್ನು ಇಸ್ರೇಲ್ ರಾಷ್ಟ್ರಕ್ಕೆ ಸಾಂಕೇತಿಕವಾದ ಹೆಸರಾಗಿ ಬಳಸಲಾಗುತ್ತದೆ. ಇಸ್ರೇಲ್ ರಾಷ್ಟ್ರವು ಮತ್ತೆ ಹುಟ್ಟುವುದಕ್ಕೆ ಸಂಬಂಧಿಸಿದಂತೆ ಕರ್ತನಾದ ಯೇಸು ಕೂಡ ಅಂಜೂರದ ಮರದ ಕುರಿತೇ ಉಲ್ಲೇಖಿಸಿದ್ದಾನೆ. (ಮತ್ತಾಯ 24:32-33)
ಹಳೆಯ ಒಡಂಬಡಿಕೆಯಲ್ಲಿಯೂ ಹಲವಾರು ಬಾರಿ, ದೇವರು ಇಸ್ರೇಲ್ ಅನ್ನು "ಪ್ರಥಮ ಫಲದ ಅಂಜೂರದ ಹಣ್ಣುಗಳಿಗಾಗಿ" ಪರೀಕ್ಷಿಸುತ್ತಿದ್ದಾನೆ, ಇದು ಆತ್ಮೀಕ ಫಲಪ್ರದತೆಯ ಸಂಕೇತವಾಗಿದೆ (ಮೀಕ 7:1; ಯೆರೆಮಿಯ 8:13; ಹೋಶೇಯ 9:10-17)—"ಆದರೆ ಆತನು “ನನ್ನ ಆತ್ಮವು ಬಯಸುವ ಮೊದಲ ಮಾಗಿದ ಅಂಜೂರವನ್ನು” ಆತನು ಕಾಣಲಿಲ್ಲ." ಎಂದು ಪ್ರವಾದಿಗಳು ವಿವರಿಸುತ್ತಾರೆ.
ಆದ್ದರಿಂದ ಎರಡು ದೇಶಭ್ರಷ್ಟತೆಗಳ ಮೇಲೆ (ಆಶೂರ್ಯ ಮತ್ತು ಬಾಬೆಲ್), ದೇವರು ಬಂಜೆತನದ ಶಾಪವನ್ನು ಸುರಿಸುತ್ತಾನೆ (ಹೋಶೇಯ 9:16), ಮತ್ತು ಇಸ್ರೇಲ್ ಕೊಳೆತ ಅಂಜೂರವಾಗುತ್ತದೆ (ಯೆರೆಮಿಾಯ 29:17). ಎಂದು ದೇವರು ಪ್ರವಾದನೆಯನ್ನು ಹೇಳಿಸುತ್ತಾನೆ.
ಆದ್ದರಿಂದ ಫಲಪ್ರದವಾಗದಿರುವುದು ನ್ಯಾಯತೀರ್ಪಿಗೆ ಕಾರಣವಾಗುತ್ತದೆ ಎಂಬುದನ್ನು ನೀವು ನೋಡುತ್ತೀರಿ. ಆದರೆ ಅದು ಅಂಜೂರದ ಹಣ್ಣುಗಳಿಗೆ ಸರಿಯಾದ ಕಾಲವಲ್ಲದಿದದ್ದರೂ ಯೇಸು ಅಂಜೂರದ ಮರವನ್ನು ಏಕೆ ಶಪಿಸಿದನು? ಈ ಪ್ರಶ್ನೆಗೆ ಉತ್ತರವನ್ನು ಅಂಜೂರದ ಮರಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡುವ ಮೂಲಕ ನಾವು ನಿರ್ಧರಿಸಬಹುದು.
ಅಂಜೂರದ ಮರದಲ್ಲಿ ಹಣ್ಣುಗಳು ಸಾಮಾನ್ಯವಾಗಿ ಎಲೆ ಬಿಡುವ ಮೊದಲೇ ಕಾಣಿಸಿಕೊಂಡು ಆ ಕಾಯಿಯೂ ಹಸಿರಾಗಿರುವುದರಿಂದ, ಅದು ಬಹುತೇಕ ಹಣ್ಣಾಗುವವರೆಗೂ ಅದು ಎಲೆಗಳೊಂದಿಗೆ ಬೆರೆಯುತ್ತದೆ. ಆದ್ದರಿಂದ, ಯೇಸು ಮತ್ತು ಅವನ ಶಿಷ್ಯರು ಮರವು ಎಲೆಗಳನ್ನು ಹೊಂದಿರುವುದನ್ನು ದೂರದಿಂದ ನೋಡಿದಾಗ, ಅದು ಋತುವಿನ ಆರಂಭದಲ್ಲಿದ್ದರೂ ಅದರಲ್ಲಿ ಫಲ ಇರಬಹುದೆಂದು ಅವರು ನಿರೀಕ್ಷಿಸಿದರು.
ಈಗ ನೀವು ಅರ್ಥಮಾಡಿಕೊಳ್ಳಬೇಕಾದ್ದು ಎಲೆಗಳು ಮಾತ್ರ ಇರುವ ಅನೇಕ ಮರಗಳು ಅಲ್ಲಿ ಇದ್ದರೂ ಇವು ಶಾಪಗ್ರಸ್ತವಾಗಲಿಲ್ಲ ಎಂಬುದು. ಎಲೆಗಳು ಅಥವಾ ಹಣ್ಣುಗಳಿಲ್ಲದ ಅನೇಕ ಮರಗಳು ಅಲ್ಲಿ ಇದ್ದರೂ ಇವು ಶಾಪಗ್ರಸ್ತವಾಗಲಿಲ್ಲ. ಆದರೆ ಈ ಮರವು ಶಪಿಸಲ್ಪಟ್ಟಿತು ಏಕೆಂದರೆ ಅದು ಹಣ್ಣುಗಳನ್ನು ಹೊಂದಿರುವಂತೆ ಕಂಡರೂ ಅದರಲ್ಲಿ ಹಣ್ಣುಗಳು ಇರಲಿಲ್ಲ.
ಸಾಂಕೇತಿಕವಾಗಿ, ಅಂಜೂರದ ಮರವು ಇಸ್ರೇಲ್ ಆತ್ಮೀಕವಾಗಿ ಸಾವಿನಂಚಿಗೆ ಸಾಗುತ್ತಿರುವುದನ್ನು ಪ್ರತಿನಿಧಿಸುತ್ತಾ, ಇಸ್ರಾಯೇಲ್ಯರು ಎಲ್ಲಾ ಯಜ್ಞಗಳ ಅರ್ಪಣೆ ಮತ್ತು ಆಚರಣೆಗಳೊಂದಿಗೆ ಬಾಹ್ಯವಾಗಿ ಬಹಳ ಧಾರ್ಮಿಕರಾಗಿ ಕಾಣುತ್ತಿದ್ದರೂ, ಆಂತರಿಕವಾಗಿ ಆತ್ಮೀಕವಾಗಿ ಬಂಜೆತನದಲ್ಲಿದ್ದರು ಎಂಬುದನ್ನು ಎತ್ತಿ ತೋರಿಸಿತ್ತು.
ವ್ಯಕ್ತಿಯ ಜೀವನದಲ್ಲಿ ನಿಜವಾದ ರಕ್ಷಣೆಯ ಫಲವು ಸಾಬೀತಾಗದ ಹೊರತು ಕೇವಲ ಬಾಹ್ಯ ಧಾರ್ಮಿಕ ಆಚರಣೆಗಳು ಆಂತರಿಕ ರಕ್ಷಣೆಯನ್ನು ಖಾತರಿಪಡಿಸಲು ಸಾಕಾಗುವುದಿಲ್ಲ ಎಂಬ ತತ್ವವನ್ನು ಇದು ನಮಗೆ ಕಲಿಸುತ್ತದೆ. ಅಂಜೂರದ ಮರದ ಪಾಠವೆಂದರೆ ನಾವು ಆತ್ಮೀಕವಾಗಿ ಫಲವನ್ನು ನೀಡಬೇಕು (ಗಲಾತ್ಯ 5:22-23), ಕೇವಲ ಧಾರ್ಮಿಕತೆಯ ಬಾಹ್ಯ ನೋಟವನ್ನು ನೀಡಬಾರದು.
ದೇವರು ಫಲವಿಲ್ಲದಿರುವಿಕೆಯನ್ನು ನೋಡಿ ನಿರ್ಣಯಿಸಿಯೇ ಆತನೊಂದಿಗೆ ಸಂಬಂಧ ಹೊಂದಿರುವವರು "ಬಹಳ ಫಲವನ್ನು ಕೊಡುತ್ತಾರೆ" ಎಂಬುದಾಗಿಯೂ ಆತನು ನಮ್ಮಿಂದ ಆತನಲ್ಲಿ ನೆಲೆಗೊಳ್ಳುವಿಕೆಯನ್ನು ನಿರೀಕ್ಷೆಸುತ್ತಾನೆ(ಯೋಹಾನ 15:5-8).ಎಂಬುದಾಗಿಯೂ ಇದು
ತಿಳಿಸಿಕೊಡುತ್ತದೆ.
Bible Reading: Jeremiah 49 -50
ಅರಿಕೆಗಳು
ತಂದೆಯೇ, ನಾನು ಹೇರಳವಾದ ಫಲವನ್ನು, ಆತ್ಮನ ಫಲವನ್ನು ಕೊಡುವಂತೆ ಮಾಡುವ ಮುಖಾಂತರ, ನಿಮ್ಮನ್ನೇ ಯೇಸುನಾಮದಲ್ಲಿ ಮಹಿಮೆಪಡಿಸಿಕೊಳ್ಳಿರಿ ಆಗ ನಾನು ನಿಮ್ಮ ನಿಜವಾದ ಶಿಷ್ಯನಾಗುತ್ತೇನೆ. ಆಮೆನ್
Join our WhatsApp Channel

Most Read
● ಸಂತೃಪ್ತಿಯ ಭರವಸೆ● ಅಗಾಪೆ ಪ್ರೀತಿಯಲ್ಲಿ ಬೆಳೆಯುವುದು
● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅತ್ಯುನ್ನತವಾದ ರಹಸ್ಯ
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು