"ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು. ಆತನು ಮನೋವ್ಯಥೆಯುಳ್ಳವನಾಗಿ ಇನ್ನೂ ಆಸಕ್ತಿಯಿಂದ ಪ್ರಾರ್ಥಿಸುತ್ತಿರಲಾಗಿ ಆತನ ಬೆವರು ಭೂವಿುಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು". (ಲೂಕ 22:43-44)
"[ಆಮೇಲೆ ಸ್ತ್ರೀಗೆ - ನೀನು ಗರ್ಭಿಣಿಯಾಗಿರುವ ಕಾಲದಲ್ಲಿ ಬಹು ಸಂಕಟಪಡಬೇಕೆಂದು ನಾನು ನೇವಿುಸಿದ್ದೇನೆ; ಕಷ್ಟದಿಂದಲೇ ಮಕ್ಕಳನ್ನು ಹೆರುವಿ; ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು. ಎಂದು ಹೇಳಿದನು. ಮತ್ತು ಪುರುಷನಿಗೆ - ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನೀನು ಹೆಂಡತಿಯ ಮಾತು ಕೇಳಿ ತಿಂದಕಾರಣ ನಿನ್ನ ನಿವಿುತ್ತ ಭೂವಿುಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ದುಡಿದು ದುಡಿದು ಭೂವಿುಯ ಹುಟ್ಟುವಳಿಯನ್ನು ತಿನ್ನಬೇಕು."(ಆದಿಕಾಂಡ 3:16-17)
ಯೇಸು ಗೆತ್ಸೆಮನೆ ತೋಟದಲ್ಲಿದ್ದಾಗ, ಆತನು ರಕ್ತದೋಪಾದಿಯ ಬೆವರನ್ನು ಸುರಿಸಿದನು. ಒಬ್ಬ ವ್ಯಕ್ತಿಯು ತೀವ್ರವಾದ ಒತ್ತಡದಿಂದ ಬಳಲುತ್ತಿರುವಾಗ, ಅವನ ರಕ್ತನಾಳಗಳು ಒಡೆದು, ರಂಧ್ರಗಳಿಂದ ರಕ್ತವು ಹೊರಬರುತ್ತದೆ ಎಂದು ವೈದ್ಯಕೀಯ ವಿಜ್ಞಾನವು ದೃಢಪಡಿಸುತ್ತದೆ. ಗೆತ್ಸೆಮನೆ ತೋಟದಲ್ಲಿ ಯೇಸುವಿಗೆ ನಿಖರವಾಗಿ ಸಂಭವಿಸಿದ್ದು ಅದೇ.
ನೀವು ಏದೆನ್ ತೋಟಕ್ಕೆ ಹಿಂತಿರುಗಿ ನೋಡಿದರೆ ಆದಾಮ ಮತ್ತು ಹವ್ವ ತಮ್ಮ ಅಧಿಕಾರ ಮತ್ತು ಇಚ್ಛಾಶಕ್ತಿಯನ್ನು ಹೇಗೆ ಕಳೆದುಕೊಂಡರು ಎಂಬುದನ್ನು ನಾವು ಗಮನಿಸಬಹುದು. ಆದ್ದರಿಂದ ನೋಡಿ, ಇದೆಲ್ಲವೂ ಒಂದು ತೋಟದಲ್ಲಿಯೇ ಪ್ರಾರಂಭವಾಯಿತು ಮತ್ತು ಒಂದು ತೋಟದಲ್ಲಿಯೇ ಕೊನೆಗೊಂಡಿತು. ಏದೆನ್ ತೋಟದಲ್ಲಿ ಆದಾಮನು ಕಳೆದುಕೊಂಡ ಅಧಿಕಾರ ಮತ್ತು ಇಚ್ಛಾಶಕ್ತಿಯನ್ನು, ಯೇಸು ಗೆತ್ಸೆಮನೆ ತೋಟದಲ್ಲಿ ಸೈತಾನನಿಂದ ಮರಳಿ ಪಡೆದುಕೊಂಡನು.
ನೀವಿಂದು ನಿಮ್ಮ ಜೀವಿತದಲ್ಲಿ ಹೋರಾಟವನ್ನು ಹಾದು ಹೋಗುತ್ತಿದ್ದರೆ, ಬಹುಶಃ ನೀವು ನಿಮ್ಮ ಇಚ್ಛಾಶಕ್ತಿಯನ್ನು ಕಳೆದುಕೊಂಡಿರಬಹುದು. ಏನೇ ಆಗಿರಲಿ, "ಕರ್ತನೇ, ನಿನ್ನ ರಕ್ತದಿಂದ ನನ್ನನ್ನು ತೊಳೆದುಬಿಡು. ನನ್ನ ಜೀವನಕ್ಕೆ ಬಾ. ನಿನ್ನ ಚಿತ್ತವನ್ನು ಮಾಡಲು ನನಗೆ ಬಲವನ್ನು ಅನುಗ್ರಹಿಸು " ಎಂದು ಹೇಳುವ ಮೂಲಕ ನೀವು ಅದನ್ನು ಮರಳಿ ಪಡೆದುಕೊಳ್ಳಬಹುದು.
ಯೇಸು ಮೂರು ಬಾರಿ ತಂದೆಗೆ ಈ ದುಃಖದ ಪಾತ್ರೆಯನ್ನು ಚಿತ್ತವಿದ್ದರೆ ತೆಗೆದುಬಿಡುವಂತೆ ಪ್ರಾರ್ಥಿಸಿದನು. ಆದರೆ ನಂತರ, "ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ನೆರವೇರಲಿ" ಎಂದು ಹೇಳಿದನು. ನೀವು ಕಳೆದುಕೊಂಡ ಇಚ್ಛಾಶಕ್ತಿಯನ್ನು ಯೇಸು ಕ್ರಿಸ್ತನಲ್ಲಿ ಪಡೆದುಕೊಳ್ಳಬಹುದು.
"ಹೊಡೆಯುವವರಿಗೆ ಬೆನ್ನುಕೊಟ್ಟು ಕೂದಲುಕೀಳುವವರಿಗೆ ಗಡ್ಡವನ್ನು ಒಡ್ಡಿದೆನು; ಉಗುಳಿಸಿಕೊಳ್ಳುವ ಅವಮಾನಕ್ಕೆ ನನ್ನ ಮುಖವನ್ನು ಮರೆಮಾಡಲಿಲ್ಲ." ಎಂದು ಯೆಶಾಯ 50:6 ಹೇಳುತ್ತದೆ,
ಮುಖವು ಗೌರವ ಮತ್ತು ಅನುಗ್ರಹದ ಕುರಿತು ಹೇಳುವಂತದ್ದಾಗಿದೆ. ಯೇಸು ತನ್ನ ಮುಖದಲ್ಲಿ ತನ್ನ ರಕ್ತವನ್ನು ಸುರಿಸಿದರಿಂದ ನಾವು ಯೇಸುವಿನ ಮೂಲಕ ಗೌರವ ಮತ್ತು ಮನ್ನಣೆಯನ್ನು ಪಡೆಯಬಹುದು. ನಿಮ್ಮ ಮುಖವನ್ನು ಸ್ವೀಕರಿಸಲ್ಪಡುವಂತೆ ಆತನ ಮುಖವು ಜಜ್ಜಲ್ಪಟ್ಟಿತು.
ಇಂದು, ದೇವರು ನಿಮ್ಮನ್ನು ಪುನಃಸ್ಥಾಪಿಸಲು ಧೈರ್ಯದಿಂದ ಮುಂದೆ ಬನ್ನಿ. ಆತನು ನಿಮ್ಮಲ್ಲಿ ಜಜ್ಜಿಹೋದದನೆಲ್ಲ ಸರಿಪಡಿಸಿ ನಿಮ್ಮನ್ನು ಸ್ವಸ್ತ ಪಡಿಸುತ್ತಾನೆ.
Bible Reading: Amos 8-9; Obadiah; Jonah 1
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನನ್ನ ಪರವಾಗಿ ಬಲಿಯಾಗಲು ನಿಮ್ಮ ಮಗನಾದ ಯೇಸುವನ್ನು ಈ ಲೋಕಕ್ಕೆ ಕಳುಹಿಸಿದ್ದಕ್ಕಾಗಿ ಸ್ತೋತ್ರ. ಕ್ರಿಸ್ತನು ನನಗಾಗಿ ಇಟ್ಟುಕೊಂಡಿರುವ ಆಶೀರ್ವಾದಗಳನ್ನು ನಾನು ಯೇಸುನಾಮದಲ್ಲಿ ಸ್ವೀಕರಿಸುತ್ತೇನೆ. ನಿನ್ನಿಂದ ಬರುವ ಗೌರವ ಮತ್ತು ಮನ್ನಣೆಯನ್ನು ನಾನು ಸ್ವೀಕರಿಸಿ ನಿನಗೆ ಎಲ್ಲಾ ಮಹಿಮೆಯನ್ನು ಯೇಸುನಾಮದಲ್ಲಿ ಸಲ್ಲಿಸುತ್ತೇನೆ.ಆಮೆನ್.
Join our WhatsApp Channel

Most Read
● ಈ ದಿನಗಳಲ್ಲಿ ಇದನ್ನು ಮಾಡಿರ● ಮರೆತುಹೋಗುವಿಕೆಯ ಅಪಾಯಗಳು
● ಪವಿತ್ರಾತ್ಮನ ದೂಷಣೆ ಎಂದರೇನು?
● ಆತನು ನೋಡುತ್ತಿದ್ದಾನೆ.
● ಕ್ರಿಸ್ತನ ರಾಯಭಾರಿಗಳು
● ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.
● ನಿಮ್ಮ ವಿಮೋಚನೆ ಮತ್ತು ಗುಣಪಡಿಸುವಿಕೆಯ ಉದ್ದೇಶ
ಅನಿಸಿಕೆಗಳು