ಅನುದಿನದ ಮನ್ನಾ
2
2
128
ವಿಶ್ವಾಸಿಗಳ ರಾಜತ್ವ ಯಾಜಕತ್ವ
Friday, 17th of October 2025
Categories :
ಕ್ರಿಸ್ತನಲ್ಲಿ ಗುರುತು (Identity in Christ)
ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮ ಸಂಬಂಧವಾದ ಮಂದಿರವಾಗಲಿಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ, ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕವರ್ಗದವರಾಗಿದ್ದೀರಿ. (1 ಪೇತ್ರ 2:5)
ಅರಸನಾದ ದಾವೀದನು ಒಡಂಬಡಿಕೆಯ ಮಂಜೂಷವನ್ನು ಯೆರುಸಲೇಮಿಗೆ ಮರಳಿ ತರುವ ಸಂತೋಷದ ದೃಶ್ಯವು ಒಂದು ದೈವಿಕ ಅನ್ಯೋನ್ಯತೆ ಮತ್ತು ಅವನಲ್ಲಿನ ದೀನತ್ವ ಎರಡೂ ಎದ್ದುಕಾಣುವ ಚಿತ್ರಣವನ್ನು ಚಿತ್ರಿಸುತ್ತದೆ. ರಾಜಮನೆತನದ ಉಡುಪನ್ನು ಧರಿಸದೆ, ಸಾಮಾನ್ಯ ಯಾಜಕನ ಉಡುಪಿನಲ್ಲಿ ಅಲಂಕರಿಸಲ್ಪಟ್ಟ ದಾವೀದನು, ಕರ್ತನ ಮಂಜೂಷದ ಮುಂದೆ ಬಹಳ ಸಂತೋಷದಿಂದ ನೃತ್ಯ ಮಾಡಿದನು, ಅವನು ತನ್ನಲ್ಲಿ ಕರ್ತನಿಗೋಸ್ಕರ ಹೊಂದಿದ್ದ ಪ್ರೀತಿ ಮತ್ತು ಭಕ್ತಿಯನ್ನು ಇದರ ಮೂಲಕ ವಿವರಿಸುತ್ತಾನೆ (2 ಸಮುವೇಲ 6:14).
ಅವನ ಹೆಂಡತಿಯಾದ ಮಿಕಾಯೇಲಳು, ಈ ಅನಿಯಂತ್ರಿತ ಆರಾಧನೆಯ ಸಾರ್ವಜನಿಕ ಪ್ರದರ್ಶನವನ್ನು ವೀಕ್ಷಿಸುತ್ತಾ, ಅವಳಿಗೆ, ಅರಸನು ತನ್ನ ರಾಜಮನೆತನದ ನಿಲುವನ್ನು ತ್ಯಜಿಸಿ, ಸಾಮಾನ್ಯ ಜನರೊಂದಿಗೆ ಅಸ್ಪಷ್ಟವಾಗಿ ಬೆರೆಯುತ್ತಿದ್ದದ್ದನ್ನು ನೋಡಿ ತುಂಬಾ ಕೋಪಗೊಂಡಳು (2 ಸಮುವೇಲ 6:16). ಆದರೆ, ದೇವರು ನಮ್ಮಿಂದ ಬಯಸುವುದು ಈ ನಮ್ರತೆ ಮತ್ತು ಉತ್ಸಾಹಭರಿತ ಆರಾಧನೆಯ ಕ್ರಿಯೆಯನ್ನೇ - ಆತನ ರಾಜಮನೆತನದ ಯಾಜಕತ್ವವನ್ನೇ(1 ಪೇತ್ರ 2:9).
ದೇವರ ಮಕ್ಕಳಾದ ನಾವು ಆರಾಧಿಸಲು ಒಟ್ಟುಗೂಡಿ ಬರುವಾಗ ನಾವು ಲೌಕಿಕ ಬಿರುದುಗಳು ಮತ್ತು ಸ್ಥಾನಗಳಾವುದಕ್ಕೂ ಅರ್ಥವಿರದ ದೈವಿಕ ಸಮ್ಮುಖದಲ್ಲಿ ಪ್ರವೇಶಿಸುವವರಾಗಿರುತ್ತೇವೆ. ಆತನ ಸಮ್ಮುಖದಲ್ಲಿ, ನಾವು ಬ್ಯಾಂಕರ್‌ಗಳು, ವಕೀಲರು ಇತ್ಯಾದಿ ಯಾವುದೂ ಆಗಿರದೇ; ನಮ್ಮ ಯಾಜಕರ ಪಾತ್ರದಲ್ಲಿ ನಾವು ಒಂದಾಗಿ ಕೂಡಿಬಂದು ನಮ್ಮ ರಾಜಾಧಿರಾಜನಿಗೆ ಸ್ತುತಿಗಳನ್ನು ಅರ್ಪಿಸುವವರಾಗಿರುತ್ತೇವೆ. ಆತ್ಮೀಕ ಸಮಾನತೆಯನ್ನು ಪ್ರತಿಬಿಂಬಿಸುವ ನಾರುಮುಡಿ ಎಫೋದ್ ಧರಿಸಿದ ಪ್ರತಿಯೊಬ್ಬ ವಿಶ್ವಾಸಿಯು ರಾಜಧಿರಾಜನೂ ಮತ್ತು ಕರ್ತಾಧಿಕಾರ್ತನನ್ನು ಮಹಿಮೆಪಡಿಸಲು ಒಗ್ಗಟ್ಟಿನಿಂದ ತಮ್ಮ ಧ್ವನಿಯನ್ನು ಎತ್ತುವ ಸ್ಥಳ ಅದಾಗಿರುತ್ತದೆ.
ಭೂಲೋಕದ ಸಭೆಯು ಪರಲೋಕದ ಸಿಂಹಾಸನ ಸನ್ನಿಧಿಯ ಛಾಯೆಯಾಗಿದೆ. ಇದು ವೈವಿಧ್ಯಮಯ ಹಿನ್ನೆಲೆಗಳು ಮತ್ತು ಸ್ಥಾನಮಾನಗಳು ಸಾಮರಸ್ಯದ ಆರಾಧನೆಯಲ್ಲಿ ಒಮ್ಮುಖವಾಗುವ ಸ್ಥಳವಾಗಿದ್ದು, ಪ್ರತಿಯೊಂದು ಕುಲ, ಭಾಷೆ ಮತ್ತು ರಾಷ್ಟ್ರವು ಯಜ್ಞದ ಕುರಿಮರಿಯ ಮುಂದೆ ನಿಂತು ಶಾಶ್ವತ ಸ್ತುತಿಗಳನ್ನು ಅರ್ಪಿಸುವ ಪರಲೋಕ ರಾಜ್ಯದ ಸಾರವನ್ನು ಸಾಕಾರಗೊಳಿಸುತ್ತದೆ (ಪ್ರಕಟನೆ 7:9).
ಆ ಇಪ್ಪತ್ತುನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಾತನ ಪಾದಕ್ಕೆ ಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ... ಯಜ್ಞದ ಕುರಿಮರಿಯಾದಾತನನ್ನು ಸ್ತುತಿಸುತ್ತಾರೆ ಎಂದು ಸತ್ಯವೇದವು ಪ್ರಕಟನೆ 4:10 ರಲ್ಲಿ ಹೇಳುತ್ತದೆ.
ಅಂತೆಯೇ, ನಾವು ನಮ್ಮ ಲೌಕಿಕ ವ್ಯತ್ಯಾಸಗಳನ್ನು ತ್ಯಜಿಸಿ ಆತ್ಮೀಕ ಐಕ್ಯತೆಯ ವಸ್ತ್ರಗಳನ್ನು ಧರಿಸಿಕೊಂಡು, ಅತ್ಯುನ್ನತ ಮಹಾಯಾಜಕನಾದ - ಯೇಸುವಿನ ಆರಾಧನೆಯಲ್ಲಿ ನಾವು ಮಿಂದೇಳಬೇಕೆಂದೇ ನಾವು ಕರೆಯಲ್ಪಟ್ಟಿದ್ದೇವೆ.
ಇಂದು, ಆರಾಧನೆಯಲ್ಲಿ ನಿಮ್ಮ ವಿಧಾನವನ್ನು ಪರೀಕ್ಷಿಸಿ ಕೊಳ್ಳಿ. ನೀವು ನಿಮ್ಮ 'ರಾಜ ನಿಲುವಂಗಿಗಳಿಗೆ' ಅಂಟಿಕೊಳ್ಳುತ್ತಿದ್ದೀರಾ ಅಥವಾ ಕಲಬೆರಕೆಯಿಲ್ಲದ ಆರಾಧನೆಯಲ್ಲಿ ರಾಜಮನೆತನದ ಯಾಜಕತ್ವ ಸೇರಲು 'ನಾರುಮುಡಿ ಎಫೋ'ದನ್ನು ಧರಿಸಲು ಸಿದ್ಧರಿದ್ದೀರಾ?
Bible Reading: Matthew 23-24
ಪ್ರಾರ್ಥನೆಗಳು
ಕರ್ತನೇ, ನಮ್ಮ ಲೌಕಿಕ ನಿಲುವಂಗಿಗಳನ್ನು ತೆಗೆದುಹಾಕಿ ನಿನ್ನ ಯಾಜಕರಾಗಿ ನಮ್ಮ ಪಾತ್ರವನ್ನು ಸ್ವೀಕರಿಸಲು ನಮಗೆ ಅನುಗ್ರಹವನ್ನು ನೀಡು. ನಮ್ಮ ಹೃದಯಗಳು ಯೇಸುನಾಮದಲ್ಲಿ ಆರಾಧನೆಯಲ್ಲಿ ಐಕ್ಯವಾಗಲಿ, ಮತ್ತು ಪ್ರತಿಯೊಬ್ಬ ವಿಶ್ವಾಸಿಯೂ ಸಹ ನಿನ್ನ ರಾಜ್ಯದಲ್ಲಿ ಯಾಜಕನಾಗಿ ಕಾಣಲ್ಪಡಲಿ. ಆಮೆನ್!
Join our WhatsApp Channel
Most Read
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I● ಮನುಷ್ಯನ ಹೃದಯ
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ಜೀವನದ ದೊಡ್ಡ ಬಂಡೆಗಳನ್ನು ಗುರುತಿಸುವುದು ಮತ್ತು ಆದ್ಯತೆ ನೀಡುವುದು
● ಹುಳಿಯಿಲ್ಲದ ಹೃದಯ
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ಪುರುಷರು ಏಕೆ ಪತನಗೊಳ್ಳುವರು -1
ಅನಿಸಿಕೆಗಳು
