"ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ಉದಾಸೀನಮಾಡುವಂಥ ಕೆಲವರಿಗೆ ಒಂದು ಸಾಮ್ಯವನ್ನು ಹೇಳಿದನು. ಅದೇನಂದರೆ - ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಒಬ್ಬನು ಸುಂಕದವನು.ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ - ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ. ವಾರಕ್ಕೆ ಎರಡಾವರ್ತಿ ಉಪವಾಸ ಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ ಅಂದುಕೊಂಡನು. ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಾ - ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು. ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು."(ಲೂಕ 18:9-14)
ಕೆಲವೊಮ್ಮೆ, ನಾವು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇವೆ. ನಾವು ನಮ್ಮ ಬೆಳಗ್ಗೆ ಎದ್ದು ಪ್ರಾರ್ಥನೆ ಮಾಡುತ್ತೇವೆ, ನಿಯಮಿತವಾಗಿ ಚರ್ಚ್‌ಗೆ ಹೋಗಿ ಕರ್ತನ ಮತ್ತು ಆತನ ಜನರ ಸೇವೆಯಲ್ಲಿ ಭಾಗವಹಿಸುತ್ತೇವೆ ಎಂದು ಭಾವಿಸುತ್ತೇವೆ. ಆದರೆ ಪ್ರತಿದಿನ ನಮ್ಮನ್ನು ಪೋಷಿಸುವ ಕೃಪೆಯನ್ನೇ ಕಳೆದುಕೊಳ್ಳುವ ಮೂಲಕ ಆತ್ಮೀಕ ಹೆಮ್ಮೆಯ ಬಲೆಗೆ ಸುಲಭವಾಗಿ ಜಾರಿ ಬಿಡುತ್ತೇವೆ . ಫರಿಸಾಯ ಮತ್ತು ಸುಂಕದವನ ದೃಷ್ಟಾಂತವು ಇಂತಹ ಆತ್ಮೀಕ ಹೆಮ್ಮೆಯ ವಿರುದ್ಧ ಒಂದು ಕಠಿಣ ಎಚ್ಚರಿಕೆಯನ್ನು ನೀಡಿ ನಿಜವಾದ ನೀತಿಯ ಮಾರ್ಗವನ್ನು ನಮಗೆ ತೋರಿಸುತ್ತದೆ.
ಫರಿಸಾಯನಲ್ಲಿದ್ದ ಆತ್ಮೀಕ ಹೆಮ್ಮೆ.
1. ಸ್ವ-ನೀತಿ:
ಫರಿಸಾಯನು ತಾನು ಇತರರಿಗಿಂತ ಶ್ರೇಷ್ಠನೆಂದು ಭಾವಿಸಿದ್ದನು. ಅವನ ಪ್ರಾರ್ಥನೆಯು ದೇವರೊಂದಿಗಿನ ವಿನಮ್ರ ಸಂಭಾಷಣೆಗಿಂತ ಹೆಚ್ಚಾಗಿ ಸ್ವಯಂ-ಅಭಿನಂದನಾ ಸ್ವಗತಭಾಷಣವಾಗಿತ್ತು. "ದೇವರು ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು." ಎಂದು ರೋಮ 12:3 ನಮಗೆ ಎಚ್ಚರಿಕೆ ನೀಡುತ್ತದೆ.
2. ತೀರ್ಪಿನ ಮನೋಭಾವ:
ಫರಿಸಾಯನು ತನ್ನ ಸ್ವಭಾವವನ್ನು ದೇವರ ಪವಿತ್ರ ಸ್ವಭಾವಡೊಡನೆ ಹೋಲಿಸಿಕೊಳ್ಳದೆ ಇತರ ಮನುಷ್ಯರ ಸ್ವಭಾವದ ಜೊತೆಗೆ ಹೋಲಿಸಿಕೊಂಡು ತೀರ್ಪು ಮಾಡುತ್ತಾನೆ. ನೀವು ನಿಮ್ಮ ಸ್ವಭಾವವನ್ನು ದೇವರ ಪವಿತ್ರ ಸ್ವಭಾವದೊಡನೆ ಹೋಲಿಸಿಕೊಳ್ಳದೆ ಇತರ ಮನುಷ್ಯರ ಸ್ವಭಾವದೊಂದಿಗೆ ಹೋಲಿಸಿಕೊಂಡು ತೀರ್ಪು ಮಾಡುವಾಗ, ನೀವು ಹೆಮ್ಮೆಯಿಂದ ನಡೆಯುತ್ತಿದ್ದೀರಿ ಎಂದರ್ಥ. ಅವನು ಸುಂಕದವನನ್ನು ತಿರಸ್ಕರಿಸಿ ಅವನ ವಿರುದ್ಧ ತನ್ನನ್ನು ತಾನು ಶ್ರೇಷ್ಠ ನೆಂದು ತನಗೆ ತೀರ್ಪು ಮಾಡಿಕೊಂಡನು.
"ತೀರ್ಪುಮಾಡಬೇಡಿರಿ; ಹಾಗೆ ನಿಮಗೂ ತೀರ್ಪಾಗುವದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವದು; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು."ಎಂದು ಮತ್ತಾಯ 7:1-2 ಎಚ್ಚರಿಸುತ್ತದೆ.
3. ಸ್ವ ಕಾರ್ಯಗಳಲ್ಲಿರುವ ಸುಳ್ಳು ಭದ್ರತೆ:
ಫರಿಸಾಯನು ತನ್ನ ಸ್ವ -ಕಾರ್ಯಗಳಲ್ಲಿ ಭರವಸೆಯನ್ನು ಕಂಡುಕೊಂಡನು - ಅಂದರೆ ತಾನು ವಾರಕ್ಕೆ ಎರಡು ಬಾರಿ ಉಪವಾಸ ಮಾಡುವುದು, ದಶಮಾಂಶಗಳನ್ನು ನೀಡುವುದು, ಇತ್ಯಾದಿಗಳಿಂದಾಗಿ ತಾನು ದೇವರ ಮೆಚ್ಚುಗೆ ಪಡೆಯಲು ತಾನು ಅರ್ಹನೆಂದು ಭಾವಿಸಿದ್ದನು."ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ." ಎಂದು ಎಫೆಸ 2:8-9 ನಮಗೆ ನೆನಪಿಸುತ್ತದೆ,
4. ಪಶ್ಚಾತ್ತಾಪದ ಕೊರತೆ:
ಫರಿಸಾಯನ ಪ್ರಾರ್ಥನೆಯಲ್ಲಿ ಒಂದು ನಿರ್ಣಾಯಕ ಅಂಶದ ಕೊರತೆಯಿತ್ತು: ಅದುವೇ ಪಶ್ಚಾತ್ತಾಪ. ಅವನಿಗೆ ತಾನು ತನ್ನ ಪಾಪವನ್ನು ಒಪ್ಪಿ ಅರಿಕೆ ಮಾಡಬೇಕು ಅಥವಾ ದೇವರ ಕರುಣೆ ತನಗೆ ಅಗತ್ಯವಾಗಿದೆ ಎಂಬ ಅರಿವೇ ಇರಲಿಲ್ಲ. "ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷವಿುಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು." ಎಂದು ಯೋಹಾನ 1:9 ಹೇಳುತ್ತದೆ.
ಹೆಮ್ಮೆಯ ಅಪಾಯಗಳು
ಎ) ಅದು ನಮ್ಮ ಸ್ವಂತ ತಪ್ಪುಗಳನ್ನು ಕಾಣಲಾರದಂತೆ ನಮ್ಮನ್ನು ಕುರುಡರನ್ನಾಗಿ ಮಾಡುತ್ತದೆ:
ಫರಿಸಾಯನು ತನ್ನ ಸ್ವ-ನೀತಿಯಲ್ಲಿ ಎಷ್ಟು ಮುಳುಗಿದ್ದನೆಂದರೆ ಅವನಿಗೆ ತನ್ನದೇ ಆದ ಆತ್ಮೀಕ ಕುರುಡುತನವನ್ನು ನೋಡಿಕೊಳ್ಳಲು ಸಾಧ್ಯವಾಗಲಿಲ್ಲ.
ಬಿ) ಅದು ಸಮುದಾಯವನ್ನು ವಿಭಜಿಸುತ್ತದೆ:
ಆತ್ಮೀಕ ಹೆಮ್ಮೆಯು ಕ್ರಿಸ್ತನ ದೇಹದಲ್ಲಿ ಅಡೆತಡೆಗಳನ್ನು ಸ್ಥಾಪಿಸಿ, ಯೋಹಾನ 17:21 ರಲ್ಲಿ ಕ್ರಿಸ್ತನು ಪ್ರಾರ್ಥಿಸಿದ ಐಕ್ಯತೆಯನ್ನು ನಾಶಪಡಿಸುತ್ತದೆ.
ಸಿ) ದೇವರೊಂದಿಗಿನ ನಮ್ಮ ಸಂಬಂಧಕ್ಕೆ ತಡೆಯನ್ನೊಡ್ಡುತ್ತದೆ:
ಫರಿಸಾಯನ ಪ್ರಾರ್ಥನೆಯು ಅಹಂಕಾರದಿಂದ ತುಂಬಿದ್ದರಿಂದ ನಿಜವಾಗಿಯೂ ಅದು ದೇವರನ್ನು ತಲುಪಲೇ ಇಲ್ಲ "ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ ಆದರೆ ದೀನರಿಗಾದರೋ ಕೃಪೆ ತೋರಿಸುತ್ತಾನೆ.” ಎಂದು ಯಾಕೋಬ 4:6 ನಮಗೆ ಹೇಳುತ್ತದೆ.
ಡಿ) ಸೈತಾನನು ನಮ್ಮನ್ನು ವಂಚಿಸುವ ಹಾಗೇ ಅದು ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ:
ನಾವು ಎತ್ತರವಾಗಿ ಬೆಳೆದು ನಿಂತಿದ್ದೇವೆ ಎಂದು ನಾವು ಭಾವಿಸುವಾಗಲೇ, ನಾವು ಬಿದ್ಫು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೈತಾನನು ಘರ್ಜಿಸುವ ಸಿಂಹದಂತೆ ಯಾರನ್ನಾದರೂ ನುಂಗಲು ಹುಡುಕುತ್ತಿದ್ದಾನಾದರಿಂದ 1 ಪೇತ್ರ 5:8 ನಮ್ಮನ್ನು ಎಚ್ಚರವಾಗಿರಬೇಕೆಂದು ಎಚ್ಚರಿಸುತ್ತದೆ.
Bible Reading: Acts 2-4
ಪ್ರಾರ್ಥನೆಗಳು
ಪ್ರೀತಿಯುಳ್ಳ ತಂದೆಯೇ, ಎಲ್ಲಾ ಒಳ್ಳೆಯ ವಿಷಯಗಳು ನಿನ್ನಿಂದ ಬರುತ್ತವೆ ಎಂದು ಒಪ್ಪಿಕೊಂಡು ನಾನು ದೀನನಾಗಿ ಯೇಸುನಾಮದಲ್ಲಿ ನಿನ್ನ ಮುಂದೆ ಬರುತ್ತೇನೆ. ಪ್ರತಿ ಕ್ಷಣವೂ ನನಗೆ ಬೇಕಾದ ನಿನ್ನ ಕೃಪೆಯ ಅಗತ್ಯವನ್ನು ಗುರುತಿಸಿಕೊಂಡು, ನಮ್ರತೆಯಿಂದ ನಡೆಯುವಂತೆ ನನಗೆ ಯೇಸುನಾಮದಲ್ಲಿ ಸಹಾಯ ಮಾಡು. ಆತ್ಮೀಕ ಹೆಮ್ಮೆಯ ವಂಚನೆಯಿಂದ ನನ್ನನ್ನು ಯೇಸುನಾಮದಲ್ಲಿ ಬಿಡಿಸಿ ಕಾಪಾಡು. ಆಮೆನ್.
Join our WhatsApp Channel
Most Read
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ಸಮಾಧಾನ - ದೇವರ ರಹಸ್ಯ ಆಯುಧ
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ಪಾಪದ ವಿರುದ್ಧದ ಹೋರಾಟ.
● ದೈವಿಕ ಅನುಕ್ರಮ - 1
ಅನಿಸಿಕೆಗಳು
