ಅನುದಿನದ ಮನ್ನಾ
4
2
63
ನಿಮ್ಮ ಕುಟುಂಬವನ್ನು ಕಳೆದುಕೊಳ್ಳದೆ ಸಮಯವನ್ನು ಪುನಃ ಪಡೆದುಕೊಳ್ಳಿ.
Sunday, 4th of January 2026
ಆಧುನಿಕ ಜೀವನದಲ್ಲಿ ಅತ್ಯಂತ ದೊಡ್ಡ ಒಂದು ಹೋರಾಟವೆಂದರೆ ಅದು ಕುಟುಂಬದ ಮೇಲಿನ ಪ್ರೀತಿಯ ಕೊರತೆಯಲ್ಲ - ಆದರೆ ಸಮಯದ ಕೊರತೆ. ಕೆಲಸದ ಒತ್ತಡಗಳು, ಗಡುವುಗಳು, ಪ್ರಯಾಣ, ಹಣಕಾಸಿನ ಜವಾಬ್ದಾರಿಗಳು ಮತ್ತು ನಿರಂತರ ಸಂಪರ್ಕವು ನಮ್ಮ ಜೀವನ ದಲ್ಲಿ ಯಾವುದು ಹೆಚ್ಚು ಮುಖ್ಯವಾದದ್ದೋ ಅದನ್ನೇ ನಿಧಾನವಾಗಿ ಬರಿದು ಮಾಡುತ್ತದೆ. ಅನೇಕ ಜನರು ತಮಗೇ ತಾವೇ ಭರವಸೆ ನೀಡಿಕೊಳ್ಳುತ್ತಾ, "ನಾನು ಒಂದು ದಿನ ಇದೆಲ್ಲವನ್ನು ನಿಧಾನಗೊಳಿಸುತ್ತೇನೆ." ಎನ್ನುತ್ತಾರೆ.
ಒಂದು ದಿನ ಬರುತ್ತದೆ ಎಂಬುದಕ್ಕೆ ಯಾವುದೇ ಖಾತರಿಇಲ್ಲ - ಆದರೆ ಇಂದು ಎನ್ನುವಂತದ್ದು ನಮಗೆ ಕೊಡಲ್ಪಟ್ಟಿದೆ. ಎಂದು ದೇವರವಾಕ್ಯವು ನಮಗೆ ಸಮಾಧಾನವಾಗಿ ನೆನಪಿಸುತ್ತದೆ.
"ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ. ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ." (ಎಫೆಸ 5:15–16).
ದೇವರು ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕೆಂದು ಮಾತ್ರವಷ್ಟೇ ನಮಗೆ ಹೇಳದೇ; ಅದನ್ನು ಪುನಃ ಪಡೆದುಕೊಳ್ಳಬೇಕೆಂದು -ಅದನ್ನು ಉದ್ದೇಶಪೂರ್ವಕವಾಗಿ, ಯೋಜನಾ ಪೂರ್ವಕವಾಗಿ ಮತ್ತು ವಿಮೋಚನೆಯಿಂದ ಬಳಸಿಕೊಳ್ಳಬೇಕೆಂದು ಆತನು ನಮ್ಮನ್ನು ಕರೆದಿದ್ದಾನೆ.
ಸಮಯವು ಮನೆವಾರ್ತೆಯವನಾಗಿದೆ ಹೊರತು ನಮ್ಮ ಶತ್ರುವಲ್ಲ.
ಸಮಯವು ಖಳನಾಯಕನಲ್ಲ - ತಪ್ಪಾಗಿ ಅದನ್ನು ಕಳೆಯುವಂತದ್ದು ಖಳನಾಯಕ ನಾಗುತ್ತಾನೆ. ದೇವರು ಸ್ವತಃ ಸಮಯಬದ್ಧನ್ನಾಗಿದ್ದಾನೆ ಮತ್ತು ಉದ್ದೇಶಪೂರ್ವಕವಾಗಿ ಕಾರ್ಯ ಮಾಡುವವನಾಗಿದ್ದಾನೆ ಎಂದು ಬೈಬಲ್ ಬೋದಿಸುತ್ತದೆ.
"ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” (ಪ್ರಸಂಗಿ 3:1).
ಯಾವಾಗಲೂ ಕೆಲಸ ಕೆಲಸ ಎಂದು ಕಾರ್ಯನಿರತರಾಗಿರುವುದರಿಂದ, ಅಸಮತೋಲನವು ಉಂಟಾಗುತ್ತದೆ. ದೇವರವಾಕ್ಯವು ಎಂದಿಗೂ ಕಾರ್ಯನಿರತತೆಯನ್ನು ಹೊಗಳುವುದಿಲ್ಲ; ಅದು ನಂಬಿಗಸ್ತಿಕೆಯನ್ನು ಗೌರವಿಸುತ್ತದೆ. ಲೋಕ ವಿಮೋಚನೆಯ ಭಾರವನ್ನು ಹೊತ್ತುಕೊಂಡ ಕರ್ತನಾದ ಯೇಸು ಕೂಡ ವಿಶ್ರಾಂತಿ, ಪ್ರಾರ್ಥನೆ ಮತ್ತು ಸಂಬಂಧಗಳಿಗಾಗಿ ಸಮಯವನ್ನು ಮೀಸಲಿಟ್ಟನು.
"ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ ಎಂದು ಹೇಳಿದನು. ಯಾಕಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದದರಿಂದ ಅವರಿಗೆ ಊಟಮಾಡುವದಕ್ಕೂ ಅವಕಾಶ ಸಿಕ್ಕಲಿಲ್ಲ". (ಮಾರ್ಕ್ 6:31).
ಯೇಸು ಜನರಿಗಾಗಿ ವಿಶ್ರಾಂತಿ ಬೇಕು ಎನ್ನುವುದಾದರೆ, ವಿಶ್ರಾಂತಿಯನ್ನು ನಿರ್ಲಕ್ಷಿಸಲು ನಾವಿನ್ನೆಷ್ಟರವರು? ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು.
ಕುಟುಂಬ ಸೇವೆಯು ಸೇವೆಗಿಂತ ಮೊದಲು ಸೇವೆಯಾಗಿದೆ
ದೇವರು ಎಲ್ಲ ವೃತ್ತಿಗಿಂತ ಮೊದಲು, ಆಡಳಿತಕ್ಕಿಂತ ಮೊದಲು ಮತ್ತು ಸಭೆಗಿಂತ ಮೊದಲು ಕುಟುಂಬವನ್ನು ಸ್ಥಾಪಿಸಿದನು.
“ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು." (ಆದಿಕಾಂಡ 2:24).
ಪೌಲನು ಈ ಆದ್ಯತೆಯನ್ನು ಸ್ಪಷ್ಟವಾಗಿ ಬಲಪಡಿಸುತ್ತಾನೆ:
"ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ." (1 ತಿಮೊಥೆಯ 5:8).
ಒದಗಿಸುವಿಕೆಯು ಹಣಕಾಸುಗಳನ್ನು ಒಳಗೊಂಡಿದೆ - ಆದರೆ ಇದು ಉಪಸ್ಥಿತಿಯನ್ನೂ ಸಹ ಒಳಗೊಂಡಿದೆ. ಮಕ್ಕಳೊಡನೆ ಪ್ರೀತಿಯನ್ನು ಹಂಚಿಕೊಳ್ಳಲು ಸಮಯ ಕೊಡುವಾಗ ಸಂಗಾತಿಯು ಕೇವಲ ಒದಗಿಸುವಿಕೆಯ ಮೂಲಕ ಮಾತ್ರವಲ್ಲದೆ ಗಮನ ಕೊಡಲು, ಸಂಭಾಷಣೆ ಮಾಡಲು ಮತ್ತು ವಿಷಯ ಹಂಚಿಕೊಳ್ಳಲು ಸಮಯ ವೀಸಲಾಗಿಡುವ ಜೀವನದ ಮೂಲಕವೂ ಆ ಸಂಬಂಧಗಳು ಮೌಲ್ಯಯುತ ವಾಗಿರುತ್ತದೆ ಎಂದು ಭಾವಿಸುತ್ತಾರೆ.
ಯಾವ ವೃತ್ತಿಜೀವನದ ಯಶಸ್ಸು ಸಹ ನಿರ್ಲಕ್ಷ್ಯಗೊಂಡ ಮನೆಯನ್ನು ಗುಣಪಡಿಸಲು ಸಾಧ್ಯವಿಲ್ಲ.
ಕರ್ತನಾದ ಯೇಸು ಆರೋಗ್ಯಕರ ಆದ್ಯತೆಗಳನ್ನು ಮಾದರಿಯಾಗಿಟ್ಟುಕೊಂಡಿದ್ದನು.
ಕರ್ತನಾದ ಯೇಸು ದೈವಿಕ ತುರ್ತುಸ್ಥಿತಿಯೊಂದಿಗೆ ಬದುಕಿದನು, ಆದರೂ ಆ ತುರ್ತು ಪರಿಸ್ಥಿತಿಗಳು ಸಂಬಂಧಗಳನ್ನು ನಾಶಮಾಡಲು ಆತನು ಎಂದಿಗೂ ಅನುಮತಿಸಲಿಲ್ಲ.
ಆತನು ಮದುವೆಗಳಿಗೆ ಹಾಜರಾದನು (ಯೋಹಾನ 2), ಮಕ್ಕಳನ್ನು ಸ್ವಾಗತಿಸಿದನು (ಮಾರ್ಕ್ 10:14), ಪ್ರೀತಿಪಾತ್ರರೊಂದಿಗೆ ಊಟ ಮಾಡಿದನು ಮತ್ತು ತನ್ನ ಶಿಷ್ಯರೊಂದಿಗೆ ಉಪಸ್ಥಿತಿಯಲ್ಲಿರಲು ಜನಸಂದಣಿಯಿಂದ ದೂರವಿದ್ದನು.
"ನಿಮ್ಮ ಸಂಪತ್ತು ಎಲ್ಲಿದೆಯೋ ನಿಮ್ಮ ಹೃದಯವೂ ಅಲ್ಲಿಯೇ ಇರುತ್ತದೆ" (ಮತ್ತಾಯ 6:21).
ನಾವು ಯಾವುದಕ್ಕೆ ಸಮಯವನ್ನು ವಿನಿಯೋಗಿಸುತ್ತೇವೋ ಅದರ ಮೂಲಕ ನಾವು ಯಾವುದನ್ನು ಅಮೂಲ್ಯ ಎಂದು ಪರಿಗಣಿಸುತ್ತೆವೋ ಅದನ್ನು ಬಹಿರಂಗಪಡಿಸುತ್ತದೆ.
ಇಂದಿನ ಪ್ರಾಯೋಗಿಕವಾದ ಜ್ಞಾನ.
ಕುಟುಂಬದೊಂದಿಗೆ ಸಮಯವನ್ನು ನಿರ್ವಹಿಸುವುದು ಪರಿಪೂರ್ಣತೆಯನ್ನು ಕುರಿತ್ತದ್ದಾದಲ್ಲ - ಬದಲಾಗಿ ಇದು ಉದ್ದೇಶಪೂರ್ವಕ ಆಯ್ಕೆಗಳ ಕುರಿತದ್ದಾಗಿದೆ:
- ಕೆಲಸದ ವೇಳಾಪಟ್ಟಿಯ ಹಾಗೇ ಉದ್ದೇಶಪೂರ್ವಕವಾಗಿ ಕುಟುಂಬಕ್ಕಾಗಿಯೂ ಸಮಯವನ್ನು ನಿಗದಿಪಡಿಸಿ.
- ಊಟ, ಸಂಭಾಷಣೆ ಮತ್ತು ವಿಶ್ರಾಂತಿಯನ್ನು ಕಾಪಾಡಿಕೊಳ್ಳಿ.
- ದೇವರ ಸಂಗತಿಗಳನ್ನು ಸಂರಕ್ಷಿಸಿಕೊಳ್ಳಲು ಒಳ್ಳೆಯದು ಎಣಿಸುವ ಸಂಗತಿಗಳಿಗೆ ಇಲ್ಲ ಎನ್ನುವುದನ್ನು ಕಲಿಯಿರಿ
- ನೀವು ಕುಟುಂಬದೊಂದಿಗೆ ಇರುವಾಗ ಸಂಪೂರ್ಣವಾಗಿ ಉಪಸ್ಥಿತರಾಗಿರ್ರಿ - ನಿರ್ಲಕ್ಷ ಬೇಡ.
" ನಮ್ಮ ದಿನಗಳು ಕೊಂಚವೇ ಎಂದು ಎಣಿಸಿಕೊಳ್ಳುವ ಹಾಗೆ ನಮಗೆ ಕಲಿಸು; ಆಗ ಜ್ಞಾನದ ಹೃದಯವನ್ನು ಪಡಕೊಳ್ಳುವೆವು. (ಕೀರ್ತನೆ 90:12).
ಜ್ಞಾನ ಎಂದರೆ ಇಂದು ಈ ಸಮಯಕ್ಕೆ ಏನು ಬೇಕು ಎಂದು ತಿಳಿದುಕೊಳ್ಳುವುದಲ್ಲ, ಇಂದು ಈ ಸಮಯಕ್ಕೆ ಯಾವುದು ಅಗತ್ಯವಿದೆ ಎಂದು ತಿಳಿದುಕೊಳ್ಳುವುದಾಗಿದೆ.
ಒಂದು ಉತ್ತೇಜನಕಾರಿಯಾದ ಪ್ರವಾದನಾ ಮಾತು.
ನೀವು ಜವಾಬ್ದಾರಿಯನ್ನು ಬಿಟ್ಟೇ ಬಿಡಬೇಕು ಎಂಬುದಾಗಿ ದೇವರು ನಿರೀಕ್ಷಿಸುವುದಿಲ್ಲ - ಆದರೆ ಅದನ್ನು ಸಮತೋಲನಗೊಳಿಸಿಕೊಳ್ಳಬೇಕು ಎಂಬುದಾಗಿ ನಿಮ್ಮನ್ನು ಕರೆಯುತ್ತಾನೆ. ನೀವು ನಿಮ್ಮ ಕುಟುಂಬವನ್ನು ಗೌರವಿಸುವಾಗ, ಅವರನ್ನು ನಿಮಗೆ ವಹಿಸಿಕೊಟ್ಟ ದೇವರನ್ನು ಸಹ ನೀವು ಗೌರವಿಸುವವರಾಗುತ್ತೀರಿ. ಸಮಯವನ್ನು ಪುನಃ ಪಡೆದುಕೊಂಡಾಗ, ಕುಟುಂಬಗಳು ಬಲಗೊಳ್ಳುತ್ತವೆ - ಆಗ ದೇವರು ಮಹಿಮೆ ಹೊಂದುತ್ತಾನೆ.
Bible Reading: Genesis 12-15
ಪ್ರಾರ್ಥನೆಗಳು
ತಂದೆಯೇ, ನನ್ನ ಸಮಯವನ್ನು ಪುನಃ ಹೊಂದಿಕೊಳ್ಳುವಂತೆ ನನಗೆ ಕಲಿಸು. ನನ್ನ ಕುಟುಂಬವನ್ನು ಬಿಟ್ಟುಬಿಡದೆ ಕುಟುಂಬದ ಜೊತೆಯಲ್ಲೇ ಯಶಸ್ವಿಯಾಗಲು ನನಗೆ ಸಹಾಯ ಮಾಡು. ನನ್ನ ದಿನಗಳು, ನನ್ನ ಆದ್ಯತೆಗಳು ಮತ್ತು ನನ್ನ ಹೃದಯವನ್ನು ಯೇಸುನಾಮದಲ್ಲಿ ಕ್ರಮಗೊಳಿಸು. ಆಮೆನ್.
Join our WhatsApp Channel
Most Read
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.● ಕ್ರಿಸ್ತನ ಮೂಲಕ ಜಯಶಾಲಿಗಳು
● ಇತರರಿಗಾಗಿ ಪ್ರಾರ್ಥಿಸುವುದು
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ನಡೆಯುವುದನ್ನು ಕಲಿಯುವುದು
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
ಅನಿಸಿಕೆಗಳು
