ಅನುದಿನದ ಮನ್ನಾ
ಸಾಲದಿಂದ ಹೊರಬನ್ನಿ : ಕೀಲಿಕೈ # 1
Saturday, 10th of February 2024
2
1
382
Categories :
ಸಾಲ(Debt)
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂಬದು ನಿನಗೆ ಗೊತ್ತುಂಟಲ್ಲಾ; ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವದಕ್ಕೆ ಬಂದಿದ್ದಾನೆ ಎಂದು ಮೊರೆಯಿಟ್ಟಳು."(2 ಅರಸುಗಳು 4:1)
1.ಸಾಲವು ನಿಮ್ಮನ್ನು ದಾಸರನ್ನಾಗಿ ಮಾಡುತ್ತದೆ.
ಒಂದು ದೇವರ ಮಗುವು ಸಾಲದಲ್ಲಿರುವುದನ್ನು 2 ಅರಸು 4:1 ರಲ್ಲಿ ನಾವು ಕಾಣುತ್ತೇವೆ. ಆಕೆಯು ತನ್ನ ಮಕ್ಕಳನ್ನು ಸಹ ಸಾಲಕೊಟ್ಟವರಿಗೆ ಬಿಟ್ಟು ಕೊಡಬೇಕಾಗಿರುವ ಪರಿಸ್ಥಿತಿಗೆ ಬಂದಿದ್ದಳು. ಸಾಲವು ನೀವು ನಿಮ್ಮಲ್ಲಿ ಇರುವುದಕಿಂತಲೂ ಹೆಚ್ಚಾಗಿ ಕೊಡುತ್ತೇನೆ ಎಂದು ಪ್ರಮಾಣಿಕರಿಸುವಂತೆ ಮಾಡುತ್ತದೆ. ಸಾಲವು ನೀವು ಇಂದು ದುಡಿದು ನೆನ್ನೆಯದನ್ನು ಭರಿಸುವಂತೆ ಮಾಡುತ್ತದೆ.
ಕೆಲವರಂತೂ ಪೀಟರ್ ಬಳಿಯಲ್ಲಿ ಸಾಲ ಮಾಡುತ್ತಾರೆ ಪೌಲನಿಗೆ ಸಾಲ ತೀರಿಸುತ್ತಾರೆ. ಈ ರೀತಿಯ ಸಾಲದ ಚಕ್ರದಲ್ಲೇ ಸಿಲುಕಿ ಬಿಟ್ಟಿದ್ದಾರೆ. ಸಾಲವು ಸಂಬಂಧಗಳನ್ನು, ಕುಟುಂಬಗಳನ್ನು, ಸಭೆಗಳನ್ನು ಮತ್ತು ನಿಮಗಾಗಿ ದೇವರು ಕೊಟ್ಟ ಕರೆಗಳನ್ನು ಸಹ ನಾಶಪಡಿಸುತ್ತದೆ. ಕೆಲವರು ಒಂದು ಕ್ರೆಡಿಟ್ ಕಾರ್ಡ್ ನ ಬಾಕಿಯನ್ನು ತೀರಿಸಲು ಮತ್ತೊಂದು ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ. ಈ ಒಂದು ದುರಾತ್ಮ ಪೀಡಿತ ಚಕ್ರವು ಮುರಿದಾಗಲೇ ದೇವರು ನಿಮ್ಮನ್ನು ಏನು ಮಾಡಲು ಕರೆದಿದ್ದಾನೋ ಅದನ್ನು ನೀವು ನೆರವೇರಿಸಲು ಸಾಧ್ಯವಾಗುತ್ತದೆ
2.ಸಾಲವು ನಿಮ್ಮ ಆರೋಗ್ಯವನ್ನು ಬಾಧಿಸುತ್ತದೆ.
ಇಂದು ಅನೇಕ ಜನರು ಸಾಲದ ದೆಸೆಯಿಂದ ನಿದ್ದೆ ಮಾಡಲಾಗದವರಾಗಿದ್ದಾರೆ. ಇಂದು ಅನೇಕರು ತಮ್ಮ ಸಾಲದ ದೆಸೆಯಿಂದ ಬಿಪಿ ಮೈಗ್ರೇನ್ ನಂತಹ ರೋಗಳಿಂದ ಬಾಧಿಸಲ್ಪಟ್ಟು ತಮ್ಮ ಆರೋಗ್ಯವನ್ನು ಕಳೆದುಕೊಂಡಿದ್ದಾರೆ. ಕೆಲವರಂತೂ ತಮ್ಮ ಆಯಸ್ಸು ಮುಗಿದಲ್ಲ, ಬದಲಾಗಿ ಸಾಲದ ಒತ್ತಡದಿಂದಲೇ ಸಾಯುತ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೆಲವರು ದುಷ್ಟಚಟಗಳಿಗೆ ದಾಸರಾಗಿದ್ದಾರೆ. ನನಗೆ ಈ ಸಂಗತಿಗಳೆಲ್ಲಾ ಗೊತ್ತುಂಟು ಏಕೆಂದರೆ ನಾನು ಸಹ ನನ್ನ ಜೀವಿತದ ಹಾದಿಯಲ್ಲಿ ಇವುಗಳನ್ನೆಲ್ಲಾ ಹಾದು ಬಂದಿದ್ದೇನೆ. ದೇವರು ನನ್ನ ಮೇಲೆ ಕೃಪೆ ತೋರಿಸಿ ನನ್ನನ್ನು ಇವುಗಳೆಲ್ಲವುಗಳಿಂದಲೂ ಬಿಡುಗಡೆ ಕೊಟ್ಟಿದ್ದಕ್ಕಾಗಿ ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ. ಇಂದು ಅದೇ ಕೃಪೆಯು ನಿಮ್ಮನ್ನು ಸಹ ಬಿಡುಗಡೆ ಮಾಡಬಲ್ಲದು
3. ಸಾಲವು ನಿಮ್ಮ ಅಂದವನ್ನು ಬಾಧಿಸುತ್ತದೆ.
ಸಾಲವು ಯೌವ್ವನಸ್ಥ ಹುಡುಗಿಯನ್ನ ವಯಸ್ಸಾದ ಮಹಿಳೆಯಂತೆಯೂ, ಯೌವ್ವನಸ್ಥ ಹುಡುಗನನ್ನು ವಯಸ್ಸಾದ ಪುರುಷನಂತೆಯೂ ಕಾಣುವಂತೆ ಮಾಡಿಬಿಡುತ್ತದೆ.
4.ಸಾಲವು ನಿಮ್ಮ ಘನತೆಯನ್ನು ನಿಮ್ಮಿಂದ ದೂರ ಮಾಡುತ್ತದೆ.
ಸಾಲ ಮಾಡುವಾಗ ಯಾವ ಘನತೆಯೂ ಇರುವುದಿಲ್ಲ. ನೀವು ಸಾಲ ಮಾಡುವಾಗ ನೀವು ಕೆಲವು ವಿಚಾರಗಳನ್ನು (ಕೆಲವೊಮ್ಮೆ ತೀರಾ ವೈಯಕ್ತಿಕ ಸಂಗತಿಗಳನ್ನು) ಸಹ ಹೇಳಬೇಕಾಗಿರುತ್ತದೆ. ಇದರಿಂದ ಸಾಲ ಕೊಡುವವರಿಗೆ ನಿಮ್ಮ ಮೇಲೆ ಮರುಕ ಹುಟ್ಟಿ ಅವರು ನಿಮಗೆ ಸಾಲವನ್ನು ಕೊಡುತ್ತಾರೆ.ಸಾಲ ಸಿಗುತ್ತದೆ ಎಂದು, ತಮಗೆ ಹಣ ಸಿಗುತ್ತದೆ ಎಂದು ತಮ್ಮ ಘನತೆಯನ್ನೇ ಮಾರಾಟಕ್ಕಿಟ್ಟು ತಮ್ಮ ಮೌಲ್ಯದೊಂದಿಗೆ ಹೊಂದಾಣಿಕೆ ಮಾಡಿಕೊಂಡ ಕೆಲವು ಮಹಿಳೆ ಮತ್ತು ಪುರುಷರು ನನಗೆ ಗೊತ್ತುಂಟು. ಜನರು ಇಂಥವರಿಗೆ ಸಾಲ ಕೊಟ್ಟು ಅವರನ್ನು ಬಹಳ ಕೆಟ್ಟದಾಗಿ ನಡೆಸಿಕೊಂಡದ್ದನ್ನೂ ನಾನು ನೋಡಿದ್ದೇನೆ.
"ಐಶ್ವರ್ಯವಂತನು ಬಡವನಿಗೆ ಒಡೆಯ; ಸಾಲಗಾರನು ಸಾಲಕೊಟ್ಟವನಿಗೆ ಸೇವಕ."(ಜ್ಞಾನೋಕ್ತಿಗಳು 22:7).
5. ಸಾಲವು ನಿಮ್ಮ ಆತ್ಮಿಕತೆಯನ್ನು ಬಾಧಿಸುತ್ತದೆ.
ಕೆಲವು ಕ್ರೈಸ್ತರು ಬಾಯಿ ಮಾತಿನ ಕ್ರೈಸ್ತರಾಗಿದ್ದಾರೆ. ಆದರೆ ಸಾಲದ ದೆಸೆಯಿಂದಾಗಿ ಶತ್ರು ಅವರ ನಾಲಿಗೆಯನ್ನು ಸುಳ್ಳು ಹೇಳುವಂತೆಯೂ ಕಪಟವಾಡುವಂತೆಯೂ ಉಪಯೋಗಿಸುವಂತೆ ಮಾಡುತ್ತಾನೆ. ಇಂಥವರು ಪ್ರಾರ್ಥನೆ ಸಹ ಮಾಡಲು ಸಾಧ್ಯವಿಲ್ಲ. ಭಯವು ಅವರನ್ನು ಆವರಿಸಿರುತ್ತದೆ, ಸಾಲವೇ ಅವರಿಗೆ ಹಿಂಸಕ ಮತ್ತು ವಿನಾಶಕ
ಆದಾಗಿಯೂ ನಾನು ನಿಮಗೆ ಒಂದು ಶುಭ ಸಮಾಚಾರವನ್ನು ಹೇಳಲು ಬಯಸುತ್ತೇನೆ. ನಮ್ಮ ಕರ್ತನು ತನ್ನ ಮಕ್ಕಳು ಸಾಲದ ಬಂಧನದಲ್ಲಿರುವುದನ್ನು ಬಯಸುವವನಲ್ಲ. ಆತನ ವಾಕ್ಯವೇ ಹೇಳುವಂತೆ.. "ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಅವರಿಂದ ಸಾಲತೆಗೆದುಕೊಳ್ಳುವದಿಲ್ಲ; ."(ಧರ್ಮೋಪದೇಶಕಾಂಡ 15:6)
ಕೀಲಿಕೈ #1
ಸಾಲದಿಂದ ಹೊರ ಬರಲು ಪ್ರಾರ್ಥಿಸಿ.
ಪ್ರಾರ್ಥನೆಯು ಒಂದು ಆತ್ಮಿಕ ಅಸ್ತ್ರವಾಗಿದೆ. ಆದರೆ ಅದನ್ನು ನಿರ್ದಿಷ್ಟವಾದ ಗುರಿಯಿಟ್ಟು ಹೊಡೆಯಬೇಕು. ನೀವು ಪ್ರತಿಫಲ ಸಿಗುವವರೆಗೂ ಪಿಸ್ತೂಲಿನಿಂದ ಗುಂಡನ್ನು ಹಾರಿಸುವ ಹಾಗೆ ನೀವು ಫಲಕಾಣುವವರೆಗೂ ಪ್ರಾರ್ಥಿಸುತ್ತಲೇ ಇರಬೇಕು. ಗುರಿ ಇಲ್ಲದೆ ಮಾಡುವ ಪ್ರಾರ್ಥನೆಯು ನಿಮಗೆ ಫಲವನ್ನು ತರಲಾರದು
ನೀವು ಸಾಲದಿಂದ ಹೊರಬರುವುದಕ್ಕಾಗಿ ಪ್ರಾರ್ಥನೆ ಮಾಡಿ ಎಂದು ನಾನು ಏಕೆ ಹೇಳುತ್ತಿದ್ದೇನೆ ಎಂಬುದನ್ನು ಈಗ ನೀವು ದಯವಿಟ್ಟು ಅರ್ಥ ಮಾಡಿಕೊಳ್ಳಿ.
ಕರ್ತನೇ ನಮಗೆ ಒದಗಿಸುವವನಾಗಿದ್ದಾನೆ ಮತ್ತು ನಿಶ್ಚಿತವಾಗಿಯೂ ಆತನು ನಿಮ್ಮನ್ನು ಸಾಲದಿಂದ ಹೊರಬರಲು ತನ್ನ ಸಹಾಯವನ್ನು ನಿಮಗೆ ನೀಡೇ ನೀಡುತ್ತಾನೆ. ಕೆಲವರಿಗೆ ಆತನು ಅವರು ಇದೆ ಎಂದು ನೆನೆಸಿಯೇ ಇಲ್ಲದಂತಹ ಅದ್ಭುತವಾದ ಅವಕಾಶಗಳೆಂಬ ಬಾಗಿಲುಗಳನ್ನು ತೆರೆದು ಕೊಡುತ್ತಾನೆ. ಇನ್ನು ಕೆಲವರಿಗೆ ಅದ್ಭುತವಾದ ಹಣದ ಹರಿವಿನ ಮೂಲಕ, ಕೆಲವರಿಗೆ ಕ್ರಿಯಾತ್ಮಕ ಆಲೋಚನೆಗಳನ್ನು ಕೊಡುವ ಮೂಲಕ, ಕೆಲವರಿಗೆ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ, ಕೆಲವರಿಗೆ ವ್ಯವಹಾರದ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಾಲದಿಂದ ಹೊರಬರಲು ಬಾಗಿಲನ್ನು ತೆರೆಯುತ್ತಾನೆ
ನೀವು ಮಾಡಬೇಕಾದ ಕಾರ್ಯ ಒಂದೇ. ಅದೇನೆಂದರೆ ಕರ್ತನು ನಿಮಗಾಗಿ ಒದಗಿಸಿದ ಅವಕಾಶಗಳನ್ನು ಬಳಸಿಕೊಂಡು ಅದರಂತೆ ಕಾರ್ಯ ಮಾಡಬೇಕು
ಅರಿಕೆಗಳು
ಪ್ರತಿಯೊಂದು ಪ್ರಾರ್ಥನ ಕ್ಷಿಪಣಿಯನ್ನು ನಿಮ್ಮ ಹೃದಯಾಳದಿಂದ ಬರುವವರೆಗೂ ಒಂದು ನಿಮಿಷವಾದರೂ ಪುನರಾವರ್ತಿಸುತ್ತಲೇ ಇರಿ.ಆನಂತರವೇ ಮತ್ತೊಂದು ಪ್ರಾರ್ಥನಾ ಕ್ಷಿಪಣಿಗೆ ತೆರಳಿ.
1.ನನ್ನ ಹಾಗೂ ನನ್ನ ಕುಟುಂಬದವರ ಜೀವಿತದಲ್ಲಿರುವ ಪ್ರತಿಯೊಂದು ಸಾಲದ- ದಾರಿದ್ರ್ಯದ ಬೆಟ್ಟಗಳೇ,ಯೇಸು ನಾಮದಲ್ಲಿ ನಿರ್ಮೂಲವಾಗಿ ಹೋಗಿರಿ.
2.ನನ್ನ ಹಣವನ್ನು- ನನ್ನ ಸಂಪಾದನೆಯನ್ನು ಜಗಿದು ತಿನ್ನುತ್ತಿರುವ ಎಲ್ಲಾ ಸೈತಾನನ ಬಲಗಳು ಯೇಸು ನಾಮದಲ್ಲಿ ಸುಟ್ಟು ಬೂದಿಯಾಗಲಿ.
3. ನನ್ನ ಜೀವಿತದಲ್ಲಿ ನನ್ನ ಆರ್ಥಿಕ ಸ್ಥಿತಿಗತಿಯನ್ನು ಸೀಮಿತಗೊಳಿಸುವ ಎಲ್ಲಾ ಸರಪಳಿಗಳು ಯೇಸು ನಾಮದಲ್ಲಿ ಮುರಿದು ಬೀಳಲಿ.
4.ಯಾವ ಕರ್ತನು ನಾನು ಸಮೃದ್ಧಿ ಹೊಂದುವುದರಲ್ಲಿ ಸಂತೋಷ ಉಳ್ಳವನಾಗಿದ್ದಾನೋ ಆ ನನ್ನ ಕರ್ತನೇ ನಾನು ಕೈ ಹಾಕಿದ ಕೆಲಸಗಳನ್ನು ಯೇಸು ನಾಮದಲ್ಲಿ ಸಫಲ ಮಾಡುತ್ತಾನೆ.
Join our WhatsApp Channel
Most Read
● ದೇವರಿಗಾಗಿ ದಾಹದಿಂದಿರುವುದು● ಪುರುಷರು ಏಕೆ ಪತನಗೊಳ್ಳುವರು -1
● ಉತ್ತಮ ಹಣ ನಿರ್ವಹಣೆ
● ದೇವರ ಆಲಯದಲ್ಲಿರುವ ಸ್ತಂಭಗಳು
● ಸಂತೃಪ್ತಿಯ ಭರವಸೆ
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕಟ್ಟಬೇಕಾದ ಬೆಲೆ
ಅನಿಸಿಕೆಗಳು