ಅನುದಿನದ ಮನ್ನಾ
ದೇವರ ಕೃಪೆಯನ್ನು ಸೇದುವುದು
Tuesday, 4th of June 2024
1
0
261
Categories :
ಅನುಗ್ರಹ (Grace)
"ನಾವು ಆತನೊಂದಿಗೆ ಕೆಲಸ ನಡಿಸುವವರಾಗಿದ್ದು - ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥ ಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ."(2 ಕೊರಿಂಥದವರಿಗೆ 6:1)
ನಮ್ಮ ಜೀವಿತದಲ್ಲಿ ನೆಲ ಕಚ್ಚಿಬಿಟ್ಟಿದ್ದೇವೆ ಎನ್ನುವಂತಹ ಕೆಲವು ಸಮಯಗಳು ಬರುತ್ತವೆ. ಆಗ ನಮ್ಮ ಬಳಿ ಪ್ರಶ್ನೆಗಳು ಗೊಂದಲಗಳು ಮತ್ತು ಹತಾಶೆ ಬಿಟ್ಟು ಬೇರೆನೂ ಸಹ ಉಳಿದಿರುವುದಿಲ್ಲ. ಅಂತಹ ಸಮಯದಲ್ಲಿ ಇಬ್ರಿಯ 4:16ರಲ್ಲಿ ನಮಗೆ ಹೇಳಿರುವಂತಹ ಈ ವಾಕ್ಯವನ್ನು ನಾವು ನಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ತರಬೇಕಾಗುತ್ತದೆ.
"ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ."(.ಇಬ್ರಿಯರಿಗೆ 4:16)
ಈ ವಾಕ್ಯದಲ್ಲಿ ಉಪಯೋಗಿಸಲಾದ "ಹೊಂದುವಂತೆ" ಮತ್ತು "ದೊರೆಯುವಂತೆ" ಎಂಬ ಪದಗಳನ್ನು ಸ್ವಲ್ಪ ಜಾಗರೂಕತೆಯಿಂದ ಗಮನಿಸಿ. ಆದಿ ಸಭೆಯು ಆಗ ಅಪೋ.ಕೃತ್ಯದಲ್ಲಿ ಸತ್ಯವೇದ ಹೇಳಿರುವಂತೆ "ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವದಕ್ಕೆ ಕೈಹಾಕಿ...."("ಅಪೊಸ್ತಲರ ಕೃತ್ಯಗಳು 12:1).. ಆಗ ಹೆರೋದನು ದೊಡ್ಡ ಪ್ರಮಾಣದ ಹಿಂಸಾಕೃತ್ಯಗಳನ್ನು ಮಾಡಲಾರಂಭಿಸಿದನು. ಯಾಕೋಬನನ್ನು ಕೊಂದು, ಪೇತ್ರನನ್ನು ಹಿಂಸೆ ಪಡಿಸಲು ಸೆರೆಮನೆಗೆ ಹಾಕಿಸಿದನು. ಈ ಒಂದು ಹತಾಶೆ, ಗೊಂದಲ ಮತ್ತು ಭಯದ ಸನ್ನಿವೇಶದ ಮಧ್ಯದಲ್ಲಿ ಅಪೋಸ್ತಲಕೃತ್ಯ 12ರಲ್ಲಿ ಸತ್ಯವೇದ ಹೇಳುವಂತೆ ಸಭೆಯು ಒಗ್ಗೂಡಿ ಭಾರದಿಂದ ಪ್ರಾರ್ಥಿಸುತಿತ್ತು.
ನಾವು ಪ್ರಾರ್ಥನೆ ಎಂಬ ಪ್ರಕ್ರಿಯೆ ಮೂಲಕವೇ ದೇವರ ಕೃಪೆಯನ್ನು ಸೆಳೆಯುವವರಾಗುತ್ತೇವೆ.
ಆಗ ಅವರು ಬಲವನ್ನು ಪಡೆದುಕೊಂಡು ಒಂದು ಅಲೌಕಿಕ ಅದ್ಬುತ ಜರುಗುವವರೆಗೂ ಪ್ರಾರ್ಥಿಸುತ್ತಲೇ ಇದ್ದರು: ಆಗ ದೇವದೂತನೊಬ್ಬ ದೇವರಿಂದ ಪೇತ್ರನನ್ನು ಬಿಡಿಸಲು ಕಳುಹಿಸಲ್ಪಟ್ಟನು. ನಾವು ದೇವರ ಕೃಪೆಯನ್ನು ಪಡೆದುಕೊಳ್ಳುವಾಗ ಅದು ಅಲೌಕಿಕತೆಯನ್ನು ಸೃಷ್ಟಿಸುತ್ತದೆ. ಅದೇ ಧಮನಿಯಲ್ಲಿಯೇ ಕ್ರೈಸ್ತರು ದೇವರ ಜೊತೆ- ಕೆಲಸರಾಗಲು ಕರೆಯಲ್ಪಟ್ಟಿದ್ದಾರೆ. ದೇವರು ಎಂದಿಗೂ ಅಪನಂಬಿಗಸ್ತನಲ್ಲ! ಆದ್ದರಿಂದಲೇ ಆತನು ನಮಗಾಗಿಯೇ ಕೃಪೆಯನ್ನು ಇಟ್ಟಿದ್ದಾನೆ.
ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಮಟ್ಟದ ಹಾಗೂ ಅಳತೆಯ ಕೃಪೆ ಇದೆ. ಈ ಕೃಪೆಯು ಒಂದು ಸೂಕ್ತವಾದ ಕಾರ್ಯವೆಂದು ಪಟ್ಟಿ ಹಾಕಿ ನೇತು ಹಾಕುವಂತದ್ದಲ್ಲಾ. ಬದಲಾಗಿ ನಮ್ಮ ಜೀವಿತ ಹಾಗೂ ಸೇವೆಗಾಗಿ ಬೇಕಾದ ಎಲ್ಲವುಗಳಿಗಾಗಿ ಕೃಪೆಯನ್ನು ಪಡೆದುಕೊಳ್ಳಲು ಕೃಪೆಯ ಬಾಗಿಲನ್ನು ತಟ್ಟಬೇಕಾಗಿದೆ.
ಹಳೆಒಡಂಬಡಿಕೆಯ ಉದ್ದಗಲಕ್ಕೂ ದೇವರೊಂದಿಗೆ ಸಮಾಧಾನ ಹೊಂದಲು ಅನೇಕ ನಿಯಮಗಳನ್ನೂ ಧಾರ್ಮಿಕ ಸಂಪ್ರದಾಯಗಳನ್ನೂ ನೆರವೇರಿಸಬೇಕಾದ ಅವಶ್ಯಕತೆ ಇತ್ತು. ಆದರೆ ಎಲ್ಲರೂ ಅನುಸರಿಸಬೇಕಾದ ಆ ಧಾರ್ಮಿಕ ಆಚರಣೆಗಳು ನಿಯಮಗಳಿಂದ ಬಿಡಿಸಲು ಕ್ರಿಸ್ತನು ಒಂದೇ ಸಾರಿ ಸಾಯಲು ಬಂದನು. ಆದ್ದರಿಂದ ನಾವಿನ್ನು ಇವುಗಳನ್ನು ಪೂರೈಸಬೇಕಾದ ಹಂಗಿನಲ್ಲಿಲ್ಲ. ನಾವಿಂದು ದೇವರು ಹೇಳುವ ಜೀವಿತವನ್ನು ಅಲೌಕಿಕವಾದ ಬಲ ಹೊಂದಿ ಜೀವಿಸಬಹುದಾಗಿದೆ.
ದೇವರ ಚಿತ್ತದ ಜೀವಿತವನ್ನು ಜೀವಿಸಲು ಕ್ರಿಸ್ತನ ಮೂಲಕ ನಮಗೆ ಕೃಪೆ ದೊರೆತಿದೆ. ಈ ಜೀವನವನ್ನು ಸತ್ಯವೇದದಲ್ಲಿ 'ಆತ್ಮನ ನಡೆಸುವಿಕೆಯ ಜೀವನ' ಎಂದು ಕರೆಯುತ್ತಾರೆ. ಇದು ಸಂಪೂರ್ಣವಾಗಿ ಆತ್ಮಿಕ ಜೀವನವಾಗಿದ್ದು ನಮ್ಮೊಳಗಿರುವ ದೇವರ ಆತ್ಮನಿಂದಲೇ ಅದು ನಿಯಂತ್ರಿಸಲ್ಪಡುತ್ತದೆ. ಆದ್ದರಿಂದ ನೀವು ಯಾವಾಗಲು ಆತನ ಸಮೃದ್ಧಿಯಲ್ಲಿ ನೆಲೆಗೊಳ್ಳಲು ಖಚಿತವಾದ ಮಾರ್ಗವಾದ ದೇವರ ಕೃಪೆಯನ್ನು ನಿಮ್ಮೆಡೆಗೆ ಸೆಳೆದುಕೊಳ್ಳಬೇಕು.
"ತನ್ನ ಭುಜಬಲದಿಂದಲೇ ಯಾವ ಮನುಷ್ಯನು ಜಯಶಾಲಿಯಾಗಲಾರನು" ( 1 ಸಮುವೇಲ 2:9)ಮತ್ತು "ದೇವರು ದೀನರಿಗೆ ಕೃಪೆಯನ್ನು ಅನುಗ್ರಹಿಸುವನಾಗಿದ್ದಾನೆ" ಎಂದು ಸತ್ಯವೇದ ಹೇಳುತ್ತದೆ (ಯಾಕೋಬ 4:6)
ನೀವು ದೇವರ ಆಜ್ಞೆಗಳನ್ನು ನೆರವೇರಿಸಲು ಸೆಣೆಸಾಡುತ್ತಿದ್ದೀರಾ ಈ ಸೆಣೆಸಾಟವು ನೀವು ಮನುಷ್ಯ ಜ್ಞಾನದಿಂದ ಆತ್ಮಿಕ ಜೀವಿತ ಜೀವಿಸಲು ಪ್ರಯತ್ನಿಸುವ ಕಾರಣದಿಂದಾಗಿರಬಹುದು.
ನೀವು ಆತನ ಕೃಪೆಯ ಮೇಲೆ ಸಂಪೂರ್ಣವಾಗಿ ಆಧಾರಗೊಳ್ಳುವುದಾದರೆ ಮತ್ತು ಆತನ ಬಳಿಗೆ ಓಡಿ ಬರುವವರಾಗಿದ್ದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ಆತ ನಿಮಗೆ ಸಹಾಯ ಮಾಡುವನು (1ಯೋಹಾನ 1:9)
ನೀವು ದೇವರ ಕೃಪೆಯಿಂದಲೇ ಜೀವಿಸುವವರಾಗಿದ್ದೀರಿ ಎಂಬುದನ್ನು ಕುರಿತು ಜಾಗರೂಕರಾಗಿರ್ರಿ ಮತ್ತು ಇಂದು ದೇವರ ಕೃಪೆಯ ಬಾವಿಯಿಂದ ಕೃಪೆಯನ್ನು ಸೇದಲು ಸಿದ್ಧರಿದ್ದೀರಾ?
ಪ್ರಾರ್ಥನೆಗಳು
ಕರ್ತನೇ, ಯಾವಾಗಲೂ ನಿನ್ನಿಂದಲೇ ನಾನು ಬಲವನ್ನು ಹೊಂದಿಕೊಳ್ಳುವಂತೆ ಸಹಾಯ ಮಾಡು. ನಾನಿಂದು ಹೊರಗೆ ಹೋಗುವಾಗ ಸಂಪೂರ್ಣವಾಗಿ ನಿನ್ನ ಕೃಪೆಯನ್ನು ಮತ್ತು ಸಹಾಯವನ್ನೇ ಎದುರು ನೋಡುವಂತ ಕೃಪೆಯನ್ನು ಯೇಸು ನಾಮದಲ್ಲಿ ಬೇಡಿ ಹೊಂದಿದ್ದೇನೆ. ಆಮೇನ್.
Join our WhatsApp Channel
Most Read
● ಆತನಿಗೆ ಯಾವುದೇ ಮಿತಿಯಿಲ್ಲ.● ನಿಮ್ಮ ಅನುಭವವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ
● ಹೋಲಿಕೆಯ ಬಲೆ
● ಕೊಡುವ ಕೃಪೆ -2
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಅಂತಿಮ ಸುತ್ತನ್ನೂ ಗೆಲ್ಲುವುದು
ಅನಿಸಿಕೆಗಳು