ಅನುದಿನದ ಮನ್ನಾ
2
0
373
ಕಳೆದು ಹೋದ ರಹಸ್ಯ
Monday, 30th of September 2024
Categories :
ಶಿಷ್ಯತ್ವ (Discipleship)
ಸ್ವಯಂ ಪರಿಶೀಲನೆ (Self Examination)
"ಪ್ರತಿಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ."(1 ಕೊರಿಂಥದವರಿಗೆ 11:28)
ನಾನು ನನ್ನ ಕರ್ತನ ಜೊತೆಗೆ ನಡೆಯುವಾಗ ಒಂದು ದಿನ ಪವಿತ್ರಾತ್ಮನನ್ನು " ನಾನು ಮುಂದಿನ ಹಂತಕ್ಕೆ ಹೇಗೆ ಹೋಗಬಹುದು" ಎಂದು ಕೇಳಿದೆನು. ಅದಕ್ಕಾತನು "ವ್ಯಕ್ತಿಗತವಾಗಿ ನಿನ್ನನ್ನು ನೀನು ಪರಿಶೋಧಿಸಿಕೊಳ್ಳುವಂತಹ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು" ಅಂದನು. ನಾನು ಇದನ್ನು ನನ್ನ ಆತ್ಮದಲ್ಲಿ ಕೇಳಿಸಿಕೊಂಡಾಗ ಇದನ್ನು ಇನ್ನು ಹೆಚ್ಚು ಹೆಚ್ಚಾಗಿ ದೇವರ ವಾಕ್ಯದಲ್ಲಿ ಕಾಣಲಾರಂಬಿಸಿದನು.
"ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬದು ನಿಮ್ಮನ್ನು ಕುರಿತು ನಿಮಗೆ ಚೆನ್ನಾಗಿ ತಿಳಿಯುವದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರೇ."(2 ಕೊರಿಂಥದವರಿಗೆ 13:5)
"ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿವಿುತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿವಿುತ್ತದಿಂದಾಗುವದಿಲ್ಲ. "(ಗಲಾತ್ಯದವರಿಗೆ 6:4 )
ಮತ್ತಾಯ 7:1-5ರಲ್ಲಿ ಕರ್ತನಾದ ಯೇಸು ಕ್ರಿಸ್ತನು ಬಹಳ ಸುಂದರವಾಗಿ ಆತ್ಮ ಪರಿಶೋಧನೆಯ ಸತ್ಯವನ್ನು ವಿವರಿಸಿದ್ದಾನೆ.
ನಾವು ಯಾವಾಗಲೂ ನಮ್ಮ ಸುತ್ತಮುತ್ತಲಿನ ಜನರ ಕಣ್ಣಿನಲ್ಲಿ ಬಿದ್ದಿರುವ ಧೂಳನ್ನು ನೋಡುತ್ತಿರುತ್ತೇವೆ ಹೊರತು ನಮ್ಮ ಕಣ್ಣುಗಳಲ್ಲಿ ಮೊದಲು ಏನು ಬಿದ್ದಿದೆ ಎಂದು ಪರೀಕ್ಷಿಸಿಕೊಳ್ಳೋದಿಲ್ಲ. ನಾನು ನಮ್ಮನ್ನು ನೋಡಿಕೊಂಡರೆ ಮಾತ್ರವೇ ನಮ್ಮಲ್ಲೇ ಇರುವ ದೊಡ್ಡ ಸಮಸ್ಯೆಗಳನ್ನು ನಾವು ಗುರುತಿಸಿಕೊಳ್ಳಬಹುದು. ನಾವು ಈ ರೀತಿ ನಮ್ಮ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ನಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡುವ ಸ್ಥಾನಕ್ಕೆ ತಲುಪತ್ತೇವೆ.
ನಾನು ಮತ್ತಾಯ 7:1-5 ರ ವಾಕ್ಯವನ್ನು ನೀವು ಅರ್ಥ ಮಾಡಿಕೊಳ್ಳುವ ಹಾಗೆ ವಾಕ್ಯವೃಂದವಾಗಿ ಈ ರೀತಿ ವಿಂಗಡಿಸಿದ್ದೇನೆ.
* ನೀವು ಏನನ್ನು ಮಾಡುತ್ತಿದ್ದೀರಿ?
* ನಿಮ್ಮ ಸಮಯವನ್ನು ದಿನದಲ್ಲಿ ಹೇಗೆ ಕಳುಹಿಸುತ್ತಿದ್ದೀರಿ?
* ನೀವು ಏನನ್ನು ಆಲೋಚಿಸುತ್ತಿದ್ದೀರಿ?
ಎನ್ನುವ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಮೂಲಕ
ನಿಮಗೆ ನೀವೇ ಬಂದು ಅಳತೆಯನ್ನು ಏರ್ಪಡಿಸಿಕೊಂಡು ನೀವು ದಿನೇ ದಿನೇ ಎಷ್ಟು ಉತ್ತಮಗೊಳ್ಳುತ್ತಿದ್ದೀರಿ ಎಂದು ಅಳೆಯಿರಿ. ನಾಳಿನ ದಿನಗಳನ್ನು ಉತ್ತಮಗೊಳಿಸಿಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಇಂದು ನೀವು ಮಾಡಿರುವ ತಪ್ಪುಗಳನ್ನು ತಿಳಿದುಕೊಳ್ಳುವುದಾಗಿದೆ.
ಕಡೆಯದಾಗಿ ಈ ಒಂದು ಆತ್ಮ ಪರಿಶೋಧನೆಯ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಮತ್ತೆ ಆ ತಪ್ಪುಗಳು ಪುನರಾವರ್ತಿತವಾಗದಿರುವಂತೆ ಒಂದು ಸ್ಪಷ್ಟವಾದ ಯೋಜನೆಯನ್ನು ರೂಪಿಸಿಕೊಳ್ಳಬೇಕು.
ಪ್ರಾರ್ಥನೆಗಳು
"ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು."(ಕೀರ್ತನೆಗಳು 139:23-24)
Join our WhatsApp Channel

Most Read
● ಕರ್ತನಾದ ಯೇಸುವಿನ ಮುಖಾಂತರ ಕೃಪೆ● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು-1
● ಶ್ರೇಷ್ಠತೆಯ ಬೆನ್ನಟ್ಟುವಿಕೆ.
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಆತನು ನಿಮ್ಮ ಗಾಯಗಳನ್ನು ಗುಣಪಡಿಸಬಲ್ಲನು.
ಅನಿಸಿಕೆಗಳು