ಅನುದಿನದ ಮನ್ನಾ
ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Saturday, 7th of December 2024
3
2
132
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಕೃತಜ್ಞತೆ ಸಲ್ಲಿಸುವ ಮೂಲಕ ತೆರೆಯಲ್ಪಡುವ ಅದ್ಭುತದ ಬಾಗಿಲು
"ಯೆಹೋವನೇ, ನಿನ್ನನ್ನು ಕೊಂಡಾಡುವದೂ ಪರಾತ್ಪರನೇ, ನಿನ್ನ ನಾಮವನ್ನು ಸಂಕೀರ್ತಿಸುವದೂ ಯುಕ್ತವಾಗಿದೆ. 2ವೀಣಾಸ್ವರಮಂಡಲಗಳಿಂದಲೂ ಕಿನ್ನರಿಯ ಘನಸ್ವರದಿಂದಲೂ 3ಹೊತ್ತಾರೆಯಲ್ಲಿ ನಿನ್ನ ಪ್ರೇಮವನ್ನೂ ರಾತ್ರಿಯಲ್ಲಿ ನಿನ್ನ ಸತ್ಯತೆಯನ್ನೂ ವರ್ಣಿಸುವದು ಉಚಿತವಾಗಿದೆ. 4 ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದೀ; ನಿನ್ನ ಕೆಲಸಗಳ ದೆಸೆಯಿಂದ ಉತ್ಸಾಹಧ್ವನಿ ಮಾಡುತ್ತೇನೆ."(ಕೀರ್ತನೆಗಳು 92:1-4).
ಕೃತಜ್ಞತೆ ಸ್ತೋತ್ರ ಸಲ್ಲಿಸುವಂತದ್ದು ದೇವರು ನಮಗೆ ಮಾಡಿದ, ಮಾಡುತ್ತಿರುವ ಮತ್ತು ಮುಂದೆ ಮಾಡಲಿರುವ ಕಾರ್ಯಗಳಿಗಾಗಿ ನಾವು ಆತನನ್ನು ಕೊಂಡಾಡುವ ಕ್ರಿಯೆಯಾಗಿದೆ. ದೇವರ ವಾಕ್ಯದ ಪ್ರಕಾರ ದೇವರಿಗೆ ಉಪಕಾರ ಸ್ತುತಿ ಮಾಡುವಂತದ್ದು ಒಳ್ಳೆಯದ್ದಾಗಿದೆ. (ಕೀರ್ತನೆ92:1). ಯಾವ ಕ್ರೈಸ್ತನಿಗಿದರೂ ಈ ವಿಚಾರದಲ್ಲಿ ಜ್ಞಾನದ ಕೊರತೆ ಇದ್ದರೆ ನಿಜಕ್ಕೂ ಅದು ಅವರು ಪ್ರಯೋಜನವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಕೃತಜ್ಞತಾ ಸ್ತುತಿ, ಸ್ತೋತ್ರ ಮತ್ತು ಆರಾಧನೆ ಗಳಿಗೆ ಜೋಡಣೆಯಾಗಿರುವ ಕೆಲವು ಆಶೀರ್ವಾದಗಳನ್ನು ನಿಮಗೆ ತೋರಿಸಿಕೊಡಲು ನಾನು ಇಚ್ಚಿಸುತ್ತೇನೆ.
ಕೃತಜ್ಞತಾ ಸ್ತೋತ್ರ, ಸ್ತುತಿ ಮತ್ತು ಆರಾಧನೆ ಇವುಗಳನ್ನು ನೀವು ಒಂದರಿಂದ ಮತ್ತೊಂದನ್ನು ಬೇರೆ ಮಾಡಲು ಸಾಧ್ಯವಿಲ್ಲ.ನೀವು ಕೃತಜ್ಞತಾ ಸ್ತೋತ್ರ ಸಲ್ಲಿಸುತ್ತಲೇ ಪವಿತ್ರಾತ್ಮನು ನಿಮ್ಮನ್ನು ಆರಾಧನೆಗೆ ಮುನ್ನಡಿಸಲಾರಾಂಭಿಸುತ್ತಾನೆ.
ಪವಿತ್ರಾತ್ಮನು ಸಹ ಯಾವಾಗಲೂ ಕೃತಜ್ಞತಾಸ್ತೋತ್ರ,ಸ್ತುತಿ ಆರಾಧನೆಗಳನ್ನು ಒಂದೇ ಸಮಯದಲ್ಲಿಯೇ ಎಲ್ಲವನ್ನೂ ಹರಿದು ಬರುವಂತೆ ಮಾಡುತ್ತಾನೆ.ಕೃತಜ್ಞತಾ ಸ್ತುತಿಎನ್ನುವುದು ಆತ್ಮೀಕವಾಗಿ ಹೊರಡುವ ಕಾರ್ಯವಾಗಿದೆಯೇ ಹೊರತು ಬುದ್ದಿಯಿಂದ ಮಾಡುವ ಕಾರ್ಯವಲ್ಲ. ಪವಿತ್ರಾತ್ಮನು ನಾವು ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸುವಾಗ ಬಹಳ ಸುಲಭವಾಗಿ ಕಾರ್ಯ ಮಾಡಲಾರಾಂಭಿಸುತ್ತಾನೆ.
ಜನರು ಏಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದಿಲ್ಲ?
ಜನರು ದೇವರಿಗೆ ಯಾತಾಕ್ಕಾಗಿ ಉಪಕಾರ ಸ್ತುತಿಯನ್ನು ಸಲ್ಲಿಸದೇ ಹೋಗುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವನ್ನು ನಾನಿಂದು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.
1.ಅವರು ಅವುಗಳನ್ನು ಆಳವಾಗಿ ಆಲೋಚಿಸುವುದೇ ಇಲ್ಲ. (ಕೀರ್ತನೆ 103:2).
ನಿಮಗೆ ಅದರ ಆಲೋಚನೆಯೇ ಬಂದಿಲ್ಲವಾದರೆ ನೀವು ನೀಡಬೇಕಾದ ಕೃತಜ್ಞತಾ ಸ್ತುತಿಯನ್ನು ಮಾಡದೆ ಹೋಗುವಿರಿ. ಆಳವಾಗಿ ಆಲೋಚಿಸುವಂತದ್ದು ಆಳವಾದ ಆರಾಧನೆಗೆ ನಿಮ್ಮನ್ನು ನಡೆಸುತ್ತದೆ.
ಯಾವೆಲ್ಲಾ ವಿಷಯಗಳನ್ನು ಕುರಿತು ನಾವು ಆಲೋಚಿಸ ಬೇಕು?
-ದೇವರು ನಿಮಗಾಗಿ ಏನೆಲ್ಲಾ ಮಾಡಿದ್ದಾನೆಂದು ಆಲೋಚಿಸಿ.
-ದೇವರು ನಿಮ್ಮನ್ನು ಎಲ್ಲಿಂದ ಆರಿಸಿ ಕೊಂಡನೆಂದು ಆಲೋಚಿಸಿ.
-ಆತನು ನಿಮ್ಮ ಸಂಕಷ್ಟಗಳ ಕಾಲದಲ್ಲಿ ಹೇಗೆ ಸಹಾಯ ಮಾಡಿದನೆಂಬುದನ್ನು ಆಲೋಚಿಸಿ.
-ನಿಮ್ಮನ್ನು ಸಾವಿನ ದವಡೆಯಿಂದ ತಪ್ಪಿಸಿದ್ದನ್ನು, ಅಪಘಾತ ಎಲ್ಲಾ ಕೆಟ್ಟಕಾಲದಿಂದ ತಪ್ಪಿಸಿದನ್ನು ಕುರಿತು ಆಲೋಚಿಸಿ.
-ನಿಮ್ಮ ಮೇಲೆ ಆತನಿಗಿರುವ ಪ್ರೀತಿಯನ್ನು ಕುರಿತು ಆಲೋಚಿಸಿ.
-ಸದ್ಯದ ಪರಿಸ್ಥಿತಿಯಲ್ಲಿ ಆತನು ನಿಮಗಾಗಿ ಏನೆಲ್ಲಾ ಮಾಡುತ್ತಿದ್ದಾನೆ ಎಂಬುದನ್ನು ಆಲೋಚಿಸಿ.
-ಆತನು ನಿಮಗಾಗಿ ಮುಂದೆ ಏನೆಲ್ಲಾ ಮಾಡಬಹುದು ಎಂಬುದನ್ನು ಕುರಿತು ಆಲೋಚಿಸಿ.
ನೀವು ಈ ಎಲ್ಲಾ ವಿಚಾರಗಳನ್ನು ಕುರಿತು ಆಲೋಚಿಸುವಾಗ ನಿಮ್ಮೊಳಗಿಂದ ತಾನೇ ತಾನಾಗಿ ಕೃತಜ್ಞತಾ ಸ್ತುತಿ, ಸ್ತೋತ್ರ ಆರಾಧನೆ ಉಕ್ಕುತ್ತದೆ.
ನೀವು ಅನೇಕ ವಿಚಾರಗಳಿಗಾಗಿಪ್ರಾರ್ಥಿಸುತ್ತೀರಲ್ಲವೇ ಅವುಗಳಿಗಾಗಿ ಮುಂಗಡವಾಗಿಯೇ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಲು ಆರಂಭಿಸಿ.
2. ಸಾಧನೆ ಮತ್ತು ಸಂಪಾದನೆ.
ಅವರು ತಮ್ಮೆಲ್ಲಾ ಸಾಧನೆಗಳು ಸಂಪಾದನೆಗಳು ತಮ್ಮ ಸ್ವಂತ ಸಾಮರ್ಥ್ಯದಿಂದ ಉಂಟಾಗಿದೆ ಅಂದುಕೊಳ್ಳುತ್ತಾರೆ.ನೀವು ದೇವರೇ ನಿಮ್ಮ ಬಲ ಮತ್ತು ನಿಮ್ಮ ಬಾಳಿನ ಸಾಮರ್ಥ್ಯ ಎಂದು ಅರಿತುಕೊಳ್ಳುವಾಗ ಉಪಕಾರ ಸ್ತುತಿಯನ್ನು ಮಾಡಲು ನೀವು ಉತ್ತೇಜನಗೊಳ್ಳುತ್ತೀರಿ ಆದರೆ ಯಾವಾಗ ನೀವು ಇವುಗಳನ್ನೆಲ್ಲಾ ಕಷ್ಟಪಟ್ಟು ನಾನೇ ಸಂಪಾದಿಸಿಕೊಂಡಿದ್ದೇನೆ ಎಂದು ಆಲೋಚಿಸಿಕೊಳ್ಳುವಿರೋ ಆಗ ನೀವು ಕೃತಜ್ಞತಾ ಪೂರ್ವಕ ಆತ್ಮದಿಂದ ಆರಾಧಿಸಲು ನಿಮಗೆ ಕಷ್ಟವೆನಿಸುತ್ತದೆ.
ನೆಬುಕಾದ್ನೇಚ್ಚರನಿಗೆ ನಿಜವಾಗಿ ಆಗಿದ್ದು ಇದೇ.
"ಹನ್ನೆರಡು ತಿಂಗಳು ಕಳೆದನಂತರ ಅವನು ಬಾಬೆಲಿನ ಅರಮನೆಯ ಮೇಲೆ ತಿರುಗಾಡುತ್ತಾ - 30ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್ ಎಂದು ಕೊಚ್ಚಿಕೊಂಡನು.
33ಈ ನುಡಿಯು ನೆಬೂಕದ್ನೆಚ್ಚರನಲ್ಲಿ ತಕ್ಷಣವೇ ನೆರವೇರಿತು; ಅವನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ದನಗಳಂತೆ ಹುಲ್ಲು ಮೇಯುತ್ತಾ ಆಕಾಶದ ಇಬ್ಬನಿಯಿಂದ ನೆನೆಯುತ್ತಾ ಇದ್ದನು; ಅವನ ಕೂದಲು ಹದ್ದುಗಳ ಗರಿಯಂತೆಯೂ ಅವನ ಉಗುರು ಹಕ್ಕಿಗಳ ಉಗುರಿನ ಹಾಗೂ ಬೆಳೆದವು."
(ದಾನಿಯೇಲನು 4:29-30,33).
3. ಅವರು ತಾವು ಉಸಿರಾಡುತ್ತಿರುವ ಶ್ವಾಸಕೂಡ ಆತನದೇ ಎಂಬುದನ್ನು ಮರೆತುಬಿಟ್ಟಿರುತ್ತಾರೆ.
ನಿಮ್ಮ ಮೂಗಿನಿಂದ ಉಸಿರಾಡುತ್ತಿರುವ ಜೀವಶ್ವಾಸವೂ ಆತನದೇ ಅದಿಲ್ಲದಿದ್ದರೆ ಕ್ಷಣಮಾತ್ರದಲ್ಲಿ ನೀವು ಸತ್ತು ಬೀಳುತ್ತೀರಿ.ನಾವಿಂದು ಜೀವಂತವಾಗಿ ಬದುಕಿರುವುದಕ್ಕಾಗಿ ಆಭಾರಿಯಾಗಿದ್ದು ಆತನಿಗೆ ಸ್ತೋತ್ರ ಸಲ್ಲಿಸಬೇಕು.
"ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ; ಯಾಹುವಿಗೆ ಸ್ತೋತ್ರ!"(ಕೀರ್ತನೆಗಳು 150:6).
4. ದೇವರೇ ಅವರ ಜೀವಿತದಲ್ಲಿನ ಎಲ್ಲಾ ಒಳಿತಿಗೂ ಆಧಾರ ಸಂಭೂತನಾಗಿದ್ದಾನೆ ಎಂಬುದನ್ನು ತಿಳಿಯದವರಾಗಿದ್ದಾರೆ.
ನೀವು ನಿಮ್ಮ ಜೀವಿತದಲ್ಲಿ ಹೊಂದಿರುವಂತ ಪ್ರತಿಯೊಂದು ಒಳಿತುಗಳು ನಿಮಗೆ ದೇವರಿಂದ ದೊರೆತಿವೆ. ಆತನ ಅಪ್ಪಣೆ ಇಲ್ಲದೇ ಯಾವುದೂ ಸಹ ನಿಮಗೆ ದೊರಕಲು ನಿಮ್ಮ ಜೀವಿತದಲ್ಲಿ ಸಾಧ್ಯವೇ ಇರುತ್ತಿರಲಿಲ್ಲ.
"ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ಸೂಚನೆಯೂ ಇಲ್ಲ."(ಯಾಕೋಬನು 1:17)
5. ಅವರು ಹೆಚ್ಚಾಗಿ ಆಶಿಸುವುದರಿಂದ.
ದೇವರು ನಿಮಗೆ ಹೆಚ್ಚು ಹೆಚ್ಚಾಗಿ ಕೊಡಲು ಬಯಸುತ್ತಾನೆ ಆದರೆ ನೀವು ಯಾವಾಗ ಆತನು ನಿಮಗೆ ಈಗಾಗಲೇ ಕೊಟ್ಟಿರುವುದಕ್ಕೆ ಕೃತಜ್ಞರಾಗಿರುವುದಿಲ್ಲವೋ ಆಗ ಆ ಆಶೀರ್ವಾದದ ಹರಿಯುವ ಸೆಲೆ ಮುಚ್ಚಿಹೋಗುತ್ತದೆ. ಅನೇಕ ಮಂದಿ ಇನ್ನೂ ಹೆಚ್ಚಿನದನ್ನು ಆಶಿಸಿ ಆಶಿಸಿ ತಮಗೆ ದೊರೆತದ್ದಕ್ಕೆ ಕೃತಜ್ಞತಾ ಸ್ತುತಿ ಸಲ್ಲಿಸದೇ ಹೋಗುತ್ತಾರೆ.
"ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. [7] ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. [8] ನಮಗೆ ಅನ್ನವಸ್ತ್ರಗಳಿದ್ದರೆ ಸಾಕು;"(1 ತಿಮೊಥೆಯನಿಗೆ 6:6-8).
6.ತಮ್ಮನ್ನು ಇತರರೊಂದಿಗೆಹೋಲಿಸಿ ಕೊಳ್ಳುವುದರಿಂದ.
"..ಅವರಂತೂ ತಮ್ಮತಮ್ಮನ್ನು ಅಳತೆಮಾಡಿಕೊಂಡು ತಮತಮಗೆ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ."(2 ಕೊರಿಂಥದವರಿಗೆ 10:12).
ಕೃತಜ್ಞತಾ ಸ್ತೋತ್ರಕ್ಕೆ ಹೊಂದಿಕೊಂಡಿರುವಂತ ಅದ್ಭುತ ಆಶೀರ್ವಾದಗಳಾವುವು?
ಎ). ಕೃತಜ್ಞತಾ ಸ್ತೋತ್ರವು ನೀವು ದೇವರಿಂದ ಹೊಂದಿದ ಸ್ವಸ್ಥತೆಯನ್ನು ಮತ್ತು ಎಲ್ಲವನ್ನೂ ಸಂಪೂರ್ಣಮಾಡುತ್ತದೆ. (ಲೂಕ 17:17-19, ಫಿಲಿಪ್ಪಿ 1:6).
ಬಿ). ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸುವಂತದ್ದು ನಿಮ್ಮನ್ನುಇನ್ನೂ ಹೆಚ್ಚಿನ ಆಶೀರ್ವಾದಕ್ಕೆ ಕೊಂಡೊಯ್ಯುತ್ತದೆ.
ಸಿ).ಕೃತಜ್ಞತಾ ಸ್ತುತಿಯು ನಿಮ್ಮ ಜೀವಿತದಲ್ಲಿನ ಅಸಾಧ್ಯವಾದ ಪರಿಸ್ಥಿತಿಯಲ್ಲಿ ದೇವರ ಅದ್ಭುತ ಶಕ್ತಿಯು ಪ್ರಕಟಗೊಳ್ಳುವಂತೆ ಮಾಡುತ್ತದೆ. (ಯೋಹಾನ 11:41-44)
ಡಿ).ಕೃತಜ್ಞತಾಸ್ತುತಿಯು ದೇವರ ಪ್ರಸನ್ನತೆಯನ್ನು ಇಳಿಯುವಂತೆ ಮಾಡಿ ದುರಾತ್ಮಗಳನ್ನು ಓಡಿಸಬಲ್ಲದು.
ಇ).ಕೃತಜ್ಞತಾ ಸ್ತುತಿಯು ಪರಲೋಕದ ದ್ವಾರದ ಬಳಿಗೆ ನೀವು ಪ್ರವೇಶಿಸುವಂತೆ ಮಾಡುತ್ತದೆ (ಕೀರ್ತನೆ 100:4).
ಎಫ್). ಕೃತಜ್ಞತಾ ಸ್ತೋತ್ರವು ದೇವರ ದಯೆಯನ್ನು ನಿಮಗೆ ದೊರಕಿಸುತ್ತದೆ.(ಅಪೋಸ್ತಲರಕೃತ್ಯಗಳು 2:45).
ಜಿ). ಕೃತಜ್ಞತಾ ಸ್ತುತಿಯಿಲ್ಲದ ಪ್ರಾರ್ಥನೆಯು ಅಸಂಪೂರ್ಣವಾದ್ದಾದ್ದಾಗಿದೆ.ಅಸಾಧ್ಯವಾದ ಕಾರ್ಯಗಳು ಸಾಧ್ಯವಾಗುವಂತೆ ಮಾಡಲು ನಿಮ್ಮ ಪ್ರಾರ್ಥನೆಯು ಯಾವಾಗಲೂ ಕೃತಜ್ಞತಾ ಸ್ತುತಿಯಿಂದ ಕೂಡಿರಲಿ.ಯೋಹಾನ 11:41-44 ರಲ್ಲಿ ನಮ್ಮ ಕರ್ತನಾದ ಯೇಸು ತನ್ನ ಪ್ರಾರ್ಥನೆಯಲ್ಲಿ ಕೃತಜ್ಞತಾ ಸ್ತುತಿಯನ್ನು ಮಿಶ್ರಣ ಮಾಡುವುದನ್ನು ನಾವು ಕಾಣಬಹುದು.
ಹೆಚ್). ಕೃತಜ್ಞತಾ ಸ್ತೋತ್ರವು ನಮ್ಮನ್ನು ಕರ್ತನ ಚಿತ್ತವನ್ನು ನಾವು ನೆರವೇರಿಸುವಂತೆ ಮಾಡುತ್ತದೆ.(1ಥೆಸಲೋನಿಕ 5:18).ನಾವು ಕೃತಜ್ಞತಾ ಸ್ತುತಿಯನ್ನು ಸಲ್ಲಿಸುವಾಗಲೆಲ್ಲಾ ನಾವು ನೇರವಾಗಿ ದೇವರ ಚಿತ್ತವನ್ನೇ ಮಾಡುವವರಾಗುತ್ತೇವೆ. ಮತ್ತು ಯಾರು ಆತನ ಚಿತ್ತವನ್ನು ನೆರವೇರಿಸುವರೋ ಅವರು ಆತನ ಚಿತ್ತಕ್ಕೆ ಹೊಂದಿಕೆಯಾಗಿರುವಂತ ಆಶೀರ್ವಾದಗಳನ್ನೂ ಆನಂಧಿಸುತ್ತಾರೆ(ಇಬ್ರಿಯ 10:36).
ಇಸ್ರಾಯೇಲ್ಯರು ಅನೇಕಬಾರಿ ಗುಣುಗುಟ್ಟುವುದಕ್ಕಾಗಿಯೂ ದೂರು ಹೇಳುವುದಕ್ಕಾಗಿಯೂ ದೇವರಿಂದ ಶಿಕ್ಷೆಗೊಳಗಾದರು. ಸೈತಾನನು ನೀವೂ ಸಹ ಗುಣುಗುಟ್ಟುವಂತೆ ಮಾಡಿ ಇದರಿಂದ ನೀವು ದೇವರ ಚಿತ್ತಕ್ಕೆ ಅವಿಧೇಯರಾಗಬೇಕೆಂದು ಬಯಸುತ್ತಾನೆ.ಯೇಸುನಾಮದಲ್ಲಿ ನಿಮ್ಮ ಮನೋನೇತ್ರಗಳು ತೆರೆಯಲ್ಪಟ್ಟು ಕೃತಜ್ಞತಾ ಸ್ತೋತ್ರದಲ್ಲಿ ಇರುವ ಆಶೀರ್ವಾದಗಳನ್ನು ನೀವು ಅರಿತುಕೊಳ್ಳಬೇಕೆಂದು ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ.
ಐ). ಕೃತಜ್ಞತಾ ಸ್ತುತಿಎಂಬುದು ನೀವು ದೇವರ ಮೇಲಿಟ್ಟಿರುವ ನಂಬಿಕೆಯನ್ನು ಪ್ರಕಟಿಸುವ ಒಂದು ರೂಪವಾಗಿದೆ. ಅದು ನಿಮ್ಮ ನಂಬಿಕೆಯನ್ನು ಬಲಗೊಳಿಸಿ ನೀವು ಶೀಘ್ರದಲ್ಲಿ ನಿಮ್ಮ ಅದ್ಭುತಗಳನ್ನು ಸಾಕಾರಗೊಳಿಸಿಕೊಳ್ಳುವ ಭರವಸೆಯನ್ನು ನಿಮ್ಮಲ್ಲಿ ಮೂಡಿಸುತ್ತದೆ. (ರೋಮ 4:20-22).
ಜೆ). ಅದು ನಿಮ್ಮ ಪ್ರತಿಕೂಲ ಪರಿಸ್ಥಿತಿಗಳನ್ನು ಬದಲಾಯಿಸುತ್ತದೆ.
ಯೋನನು ಮೀನಿನ ಹೊಟ್ಟೆಯೊಳಗಿಂದ ದೇವರಿಗೆ ಉಪಕಾರ ಸ್ತುತಿ ಮಾಡತೊಡಗಿದನು ಅವನು ಸ್ತೋತ್ರ ಸಲ್ಲಿಸಿದ ಮೇಲೆ ದೇವರು ಆ ಮೀನಿಗೆ ಅವನನ್ನು ಡಂಡೆಗೆ ಕಾರಲು ಆಜ್ಞಾಪಿಸಿದನು.(ಯೋನ 2:7-10).
ಕೆ). ಅದ್ಭುತವಾದ ಜಯಕ್ಕೆ ಇದು ಭರವಸೆಯಾಗಿದೆ. (2ಪೂರ್ವಕಾಲ ವೃತಾಂತ 20:22-24).
ಎಲ್). ಕೃತಜ್ಞತಾ ಸ್ತುತಿಯು ಅಭಿವೃದ್ಧಿಯ ಭರವಸೆಯಾಗಿದೆ. (ಯೋಹಾನ 6:10-13).
ನೀವು ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಪರವಾಗಿಲ್ಲ ದೇವರ ಬಲವು ನಿಮ್ಮಲ್ಲಿ ಪ್ರಕಟಗೊಳ್ಳುವ ಪರ್ಯಂತರ ನೀವು ಕೃತಜ್ಞತಾ ಸ್ತೋತ್ರದಲ್ಲಿಯೂ ಸ್ತುತಿಯಲ್ಲೂ ಆರಾಧನೆಯಲ್ಲಿಯೂ ನಿರತರಾಗಿರಿ.(ಅಪೋಸ್ತಲರ ಕೃತ್ಯ 16:25-26).
ಹೆಚ್ಚಿನ ಅಧ್ಯಯನಕ್ಕಾಗಿ:ಕೀರ್ತನೆಗಳು 107:31, ಲೂಕ 17:17-19, ಕೀರ್ತನೆ 67:5-7.
Bible Reading Plan : John 10-14
ಪ್ರಾರ್ಥನೆಗಳು
1.ನನ್ನ ಹಾಗೂ ನನ್ನ ಕುಟುಂಬದಲ್ಲಿರುವ ಎಲ್ಲಾ ಹತಾಶೆಯ ದುರಾತ್ಮವನ್ನು ಯೇಸುನಾಮದಲ್ಲಿ ಕಿತ್ತು ಬಿಸಾಡುತ್ತೇನೆ. (ಯೆಶಾಯ 61:3).
2.ಯೇಸುಕ್ರಿಸ್ತನಲ್ಲಿ ನನಗೆ ದಯಪಾಲಿಸಿರುವ ಎಲ್ಲಾ ಆಶೀರ್ವಾದಗಳಿಗಾಗಿ ಯೇಸುನಾಮದಲ್ಲಿ ತಂದೆಯೇ ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ.(ಎಫಸ್ಸೆ 1:3)
3.ತಂದೆಯೇ, ನೀನು ನನ್ನೆಲ್ಲಾ ಕೊರತೆಗಳನ್ನು ನೀಗಿಸುವವನಾಗಿದ್ದೀಯ ಎಂದು ಯೇಸುನಾಮದಲ್ಲಿ ನಿಮಗೆ ಆಭಾರಿಯಾಗಿರುತ್ತೇನೆ. (ಫಿಲಿಪ್ಪಿ 4:19).
4. ಕರ್ತನೇ ಸ್ತುತಿ-ಸ್ತೋತ್ರಗಳ ವಸ್ತ್ರದಿಂದ ಯೇಸುನಾಮದಲ್ಲಿ ನನ್ನನ್ನು ಹೊದಿಸು. (ಯೆಶಾಯ 61:3)
5. ತಂದೆಯೇ, ಯೇಸುನಾಮದಲ್ಲಿ ಪವಿತ್ರಾತ್ಮನ ಹರ್ಷದ ಆತ್ಮದಿಂದ ನನ್ನನ್ನು ತುಂಬಿಸು. (ರೋಮ 15:13).
6. ತಂದೆಯೇ, ನೀನು ಇದುವರೆಗೂ ನನ್ನ ಜೀವಿತದ ಎಲ್ಲಾ ಕಾರ್ಯಗಳಿಗಾಗಿಯೂ, ಈಗ ಮಾಡುತ್ತಿರುವ ಕಾರ್ಯಗಳಿಗಾಗಿಯೂ ಮುಂದೆ ಮಾಡಲಿರುವ ಕಾರ್ಯಗಳಿಗಾಗಿಯೂ ನಿನಗೆ ಕೃತಜ್ಞತಾ ಸ್ತೋತ್ರವನ್ನು ಯೇಸುನಾಮದಲ್ಲಿ ಸಲ್ಲಿಸುತ್ತೇನೆ. (1ಥೆಸಲೋನಿಕ5:18).
7. ತಂದೆಯೇ, ನೀನು ಎಲ್ಲಾ ಕಾರ್ಯವನ್ನುನನ್ನ ಹಿತಕ್ಕಾಗಿ ಮಾಡುವಿ ಎಂದು ಯೇಸುನಾಮದಲ್ಲಿ ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. (ರೋಮ 8:28).
8. ನನ್ನ ಜೀವಿತದಲ್ಲಿ ನನಗೆ ಸಂಕಟ ತರಲೆಂದು ರೂಪಿಸಲ್ಪಟ್ಟಿರುವ ಎಲ್ಲವೂ ಯೇಸುನಾಮದಲ್ಲಿ ಆಶೀರ್ವಾದಗಳಾಗಿಯೂ ನನಗೆ ಆನಂದದಾಯಕವಾಗಿಯೂ ಮಾರ್ಪಡಲಿ. (ಆದಿಕಾಂಡ 50:20).
9.ಓ ಕರ್ತನೇ ನನ್ನ ಬಾಯಲ್ಲಿ ನೂತನ ಕೀರ್ತನೆಯನ್ನು ಹುಟ್ಟಿಸು ಅದು ನಿನ್ನನ್ನು ಸ್ತುತಿಸಲಿ (ಕೀರ್ತನೆ 40:3)
10. ನನ್ನ ಮನೆಯಲ್ಲೂ ಮತ್ತು ಈ 21ದಿನಗಳ ಉಪವಾಸ ಪ್ರಾರ್ಥನೆಯ ಕೂಟದಲ್ಲಿಯೂ ಭಾಗಿಯಾಗಿರುವ ಪ್ರತಿಯೊಬ್ಬರ ಮನೆಯಲ್ಲೂ ಆನಂದದ ಹರ್ಷೋದ್ಗಾರಗಳು ಯೇಸುನಾಮದಲ್ಲಿ ಪ್ರತಿಧ್ವನಿಸಲಿ. (ಕೀರ್ತನೆ 118:15).
11. ಅನ್ಯಭಾಷೆಯಲ್ಲಿ ಪ್ರಾರ್ಥಿಸುತ್ತಾ ದೇವರಿಗೆ ಮಹಿಮೆಯನ್ನು ಸಲ್ಲಿಸಿ(1ಕೊರಿಯಂತೆ 14:2).
12. ಉತ್ತಮ ಆರಾಧನೆಯ ಸಮಯವನ್ನು ದೇವರಿಗಾಗಿ ಮೀಸಲಿಡಿ(ಕೀರ್ತನೆ 95:6).
Join our WhatsApp Channel
Most Read
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರಿಗೆ ಮೊದಲಸ್ಥಾನ ನೀಡುವುದು #3
● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
ಅನಿಸಿಕೆಗಳು