"ಮುರಿದ ಹೃದಯದವರಿಗೆ ಯೆಹೋವ ದೇವರು ಸಮೀಪವಾಗಿದ್ದಾರೆ; ಜಜ್ಜಿದ ಆತ್ಮವುಳ್ಳವರನ್ನು ರಕ್ಷಿಸುತ್ತಾರೆ."
(ಕೀರ್ತನೆ 34:18)
ತಮ್ಮ ನೋವನ್ನು ಅರ್ಥ ಮಾಡಿಕೊಳ್ಳುವರೊಡನೆ ಮನುಷ್ಯರು ಸ್ವಾಭಾವಿಕವಾಗಿಯೇ ಹಾಯಾಗಿರುತ್ತಾರೆ. ನಿಮ್ಮದೇ ರೀತಿಯ ಪರಿಸ್ಥಿತಿಯಲ್ಲಿರುವರೊಡನೆ ಎಷ್ಟು ಹೊತ್ತು ಬೇಕಾದರೂ ಸಂಭಾಷಣೆ ನಡೆಸಬಹುದು ಎಂಬುದು ನಿಮಗೇ ತಿಳಿದಿದೆ. ನೀವಿರುವಂತ ನೋವಿನಲ್ಲಿಯೇ ಅವರೂ ಕೂಡ ಇದ್ದಾರೆ ಎಂದು ತಿಳಿದುಕೊಂಡಾಗ ನೀವು ಸಂತೋಷಪಡುವವರಾಗು ತ್ತೀರಿ. ಇದು ಸೈತಾನನ ಒಂದು ತಂತ್ರವಾಗಿದೆ. ಅವನು ತನ್ನ ಬಲಿಪಶುವಿನ ಭವಿಷ್ಯವನ್ನು ಅವರು ಚಿಕ್ಕವರಿದ್ದಾಗಲೇ ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಕ್ರೂರ ಮಾತುಗಳು, ಲೈಂಗಿಕ ಕಿರುಕುಳ, ಕೋಪ ಮತ್ತು ಇತರ ದೈಹಿಕ ಮತ್ತು ಭಾವನಾತ್ಮಕ ಆಯುಧಗಳು ವ್ಯಕ್ತಿಯ ಭಾವನೆಗಳಲ್ಲಿ ರಂಧ್ರವನ್ನು ಸೃಷ್ಟಿಸುತ್ತವೆ. ಈ ನಿರ್ಲಕ್ಷ್ಯ, ದೌರ್ಜನ್ಯ ಮತ್ತು ಲೈಂಗಿಕ ಪಾಪಗಳು ಮುಂದುವರಿದಂತೆ, ಭಾವನೆಗಳಲ್ಲಿ ಹೆಚ್ಚಿನ ರಂಧ್ರಗಳನ್ನು ಕೊರೆಯಲ್ಪಟ್ಟು ಹಿಂದಿನ ರಂಧ್ರಗಳಿಗಿಂತಲೂ ಅವು ದೊಡ್ಡದಾಗುತ್ತವೆ. ಅಂತಿಮವಾಗಿ, ಆ ವ್ಯಕ್ತಿಯು ತಾನು ಆಂತರ್ಯದಲ್ಲಿ ತಾನು ತುಂಬಾ ಅಶುದ್ಧನು , ಅನರ್ಹನು ಮತ್ತು ತಿರಸ್ಕರಿಸಲ್ಪಟ್ಟವನು ಎಂಬುದಾಗಿ ಭಾವಿಸಲಾರಾಂಭಿಸುತ್ತಾನೆ, ಆ ನೋವುಗಳನ್ನು ಮರೆಯಲು ಪರ್ಯಾಯ ಜೀವನಶೈಲಿಯನ್ನು ಹುಡುಕಲು ಪ್ರಾರಂಭಿಸುತ್ತಾನೆ.
ಶೀಘ್ರದಲ್ಲೇ ಈ ರೀತಿ ನೋವನ್ನು ಅನುಭವಿಸುತ್ತಿರುವ ವ್ಯಕ್ತಿಗಳು ಅದೇ ರೀತಿಯ ನೋವನ್ನು ಅನುಭವಿಸುತ್ತಿರುವ ಇತರ ವ್ಯಕ್ತಿಗಳತ್ತ ಆಕರ್ಷಿತರಾಗುತ್ತಾರೆ. ಅವರು ಮದ್ಯಪಾನ ಮಾಡುವ, ಅಕ್ರಮ ಡ್ರಗ್ಸ ತೆಗೆದುಕೊಳ್ಳುವ ಅಥವಾ ಅಕ್ರಮ ರೀತಿಯಲ್ಲಿ ಲೈಂಗಿಕವಾಗಿ ಸಕ್ರಿಯರಾಗಿರುವ ಇತರ ನೋವುಂಡ ಜನರೊಂದಿಗೆ ಸೇರುತ್ತಾರೆ. ಅವರು ಕುಡಿದು ಅಥವಾ ಮೋಹಕ್ಕೆ ಒಳಗಾಗಿ , ನಂತರ ಅವರು ಇನ್ನೊಬ್ಬ ವ್ಯಕ್ತಿಗೆ ಶರಣಾಗಿ, ಅದು ಹೃದಯದ ಶೂನ್ಯತೆಯನ್ನು ತುಂಬುತ್ತದೆ ಎಂದು ಭಾವಿಸುತ್ತಾರೆ. ಆದರೆ ಪಾರ್ಟಿ ಮುಗಿದು ಬೆಳಿಗ್ಗೆ ಸೂರ್ಯ ಉದಯಿಸಿದಾಗ, ಆ ಸ್ನೇಹಿತರೆಲ್ಲಾ ಹೊರಟು ಹೋದಮೇಲೆ ಅವರು ತಮ್ಮ ಹೃದಯದಲ್ಲಿ ಮತ್ತೆ ಅದೇ ಶೂನ್ಯತೆಯಿಂದ ಎಚ್ಚರಗೊಳ್ಳುತ್ತಾರೆ.
ಅವರು ಹೆಚ್ಚು ಕುಡಿದರೆ ಅವರ ನೋವುಗಳು ಬೇಗ ದೂರವಾಗುತ್ತವೆ ದಾರಿ ತಪ್ಪಿ ನಡೆದರೆ ಜೀವನದ ಹೊರೆ ಕಡಿಮೆಯಾಗುತ್ತದೆಯೇನೋ ಎಂದು ಯೋಚಿಸಿ ಅವರು ತಮ್ಮನ್ನೇ ಮೋಸಗೊಳಿಸಿಕೊಳ್ಳುತ್ತಾರೆ. ಇವೆಲ್ಲವೂ ನರಕದ ಕೂಪದಿಂದ ಬಂದ ಸುಳ್ಳುಗಳಾಗಿವೆ. ಸೈತಾನನು ಚಿಕ್ಕ, ಮುಗ್ಧ ಮಕ್ಕಳನ್ನು ಹುಡುಕಿ ಅವರಿಗಾಗಿ ದೇವರು ಇಟ್ಟಿರುವ ಉದ್ದೇಶವನ್ನು ನಾಶಮಾಡಲು ಅವರನ್ನು ಅದೇ ರೀತಿಯ ದುಷ್ಟ ಮಕ್ಕಳೊಂದಿಗೆ ಅವರನ್ನು ಕೂಡಿಸುತ್ತಾನೆ.
ಉದಾಹರಣೆಗೆ, ನಾವು 2 ಸಮುವೇಲ 13:1-4 ರಲ್ಲಿ ಅಮ್ನೋನ್ ಮತ್ತು ಯೋನಾದಾಬನ ಕಥೆಯನ್ನು ಓದುತ್ತೇವೆ: "ಕಾಲಾಂತರದಲ್ಲಿ ದಾವೀದನ ಮಗ ಅಬ್ಷಾಲೋಮನಿಗೆ ತಾಮಾರಳೆಂಬ ಹೆಸರುಳ್ಳ ಸುಂದರಿಯಾದ ಒಬ್ಬ ಸಹೋದರಿ ಇದ್ದಳು. ಅವಳನ್ನು ದಾವೀದನ ಮಗ ಅಮ್ನೋನನು ಪ್ರೀತಿಮಾಡಿದನು. ತನ್ನ ಸಹೋದರಿಯಾದ ತಾಮಾರಳ ನಿಮಿತ್ತ ಬಹು ಸಂಕಟಪಟ್ಟು ಅಸ್ವಸ್ಥನಾದನು. ಅವಳು ಕನ್ಯೆಯಾಗಿದ್ದಳು. ಆದ್ದರಿಂದ ಅವಳನ್ನು ಏನಾದರೂ ಮಾಡುವುದಕ್ಕೆ ಅಮ್ನೋನನಿಗೆ ಕಷ್ಟವಾಗಿತ್ತು. ಆದರೆ ಅಮ್ನೋನನಿಗೆ ದಾವೀದನ ಸಹೋದರನಾಗಿರುವ ಶಿಮೆಯನ ಮಗ ಯೊನಾದಾಬನೆಂಬ ಹೆಸರುಳ್ಳ ಒಬ್ಬ ಸ್ನೇಹಿತನಿದ್ದನು. ಈ ಯೋನಾದಾಬನು ಬಹು ಕುಯುಕ್ತಿಯುಳ್ಳವನಾಗಿದ್ದನು. ಯೋನಾದಾಬನು ಅಮ್ನೋನನಿಗೆ, “ಅರಸನ ಮಗನಾದ ನೀನು ದಿನದಿನಕ್ಕೆ ಏಕೆ ಕ್ಷೀಣವಾಗಿ ಹೋಗುತ್ತೀ? ನನಗೆ ತಿಳಿಸುವುದಿಲ್ಲವೋ?” ಎಂದನು. ಅದಕ್ಕೆ ಅಮ್ನೋನನು ಅವನಿಗೆ, “ನಾನು ನನ್ನ ಸಹೋದರನಾಗಿರುವ ಅಬ್ಷಾಲೋಮನ ಸಹೋದರಿ ತಾಮಾರಳನ್ನು ಪ್ರೀತಿಮಾಡುತ್ತಿದ್ದೇನೆ,” ಎಂದನು ಎಂದು ಸತ್ಯವೇದ ಹೇಳುತ್ತದೆ,.
ಅಮ್ನೋನನು ಸಹ ಇಂದಿನ ಹೆಚ್ಚಿನ ಯುವಕರಂತೆಯೇ , ಅವರಲ್ಲಿ ಕೆಲವರು ಸವಾಲುಗಳನ್ನು ಎದುರಿಸುತ್ತಿರಬಹುದು ಅಥವಾ ಮನ ಮುರಿದವರಾಗಿರಬಹುದು ಅಥವಾ ಬಹುಶಃ ಛಿದ್ರಗೊಂಡ ಕುಟುಂಬದಿಂದ ಬಂದಿರಬಹುದು. ದುರದೃಷ್ಟವಶಾತ್, ಸೈತಾನನು ಅವನ ಸುತ್ತಲೂ ದುಷ್ಟ ಸಹವಾಸವನ್ನು ಇರಿಸಿಬಿಟ್ಟನು. ಯೋನಾದಾಬನು ಒಬ್ಬ ಕುತಂತ್ರಿಯಾಗಿದ್ದನು ಎಂದು ಸತ್ಯವೇದ ಹೇಳುತ್ತದೆ. ಅವನು ನಿಜವಾಗಿಯೂ ಸೈತಾನನ ಏಜೆಂಟ್ ಆಗಿದ್ದು, ಅವನು ಅಮ್ನೋನನನ್ನು ಆಳವಾದ ಹಳ್ಳಕ್ಕೆ ಸೆಳೆದುಕೊಂಡುಹೋಗುತ್ತಾನೆ. ಯೋನಾದಾಬನ ಸಲಹೆಯನ್ನು ಅನುಸರಿಸುವ ಮೂಲಕ ತನ್ನ ನೋವಿನ ಭಾವನೆ ಹೋಗುತ್ತದೆ ಎಂದು ಅವನು ಭಾವಿಸಿದನು, ಆದರೆ ದುರದೃಷ್ಟವಶಾತ್, ಅವನು ತನ್ನ ಅಕಾಲಿಕ ಮರಣಕ್ಕೆ ತಾನೇ ಸಹಿ ಹಾಕಿದನು.
“ಕುರುಡನು ಕುರುಡನಿಗೆ ದಾರಿತೋರಿಸಬಲ್ಲನೋ? ಅವರಿಬ್ಬರೂ ಹಳ್ಳಕ್ಕೆ ಬೀಳುವರಲ್ಲವೇ? ಎಂದು ಕರ್ತನಾದ ಯೇಸು ಹೇಳುತ್ತಾ ಒಂದು ಸಾಮ್ಯವನ್ನು ಹೇಳಿದನು. (ಲೂಕ 6:39). ನಿಮ್ಮ ಮನ ಮುರಿದ ಸ್ಥಿತಿಗೆ ಪರಿಹಾರವು ಇತರ ಮನಮುರಿದ ಜನರಲ್ಲಿಲ್ಲ. ಆ ಪರಿಹಾರವು ಕ್ರಿಸ್ತಯೇಸುವಿನಲ್ಲಿದೆ. ಒಳ್ಳೆಯ ಸುದ್ದಿ ಏನೆಂದರೆ, ನಾವು ಪಾಪಗಳಿಗೆ ಪಶ್ಚಾತ್ತಾಪಪಟ್ಟು ಕ್ರಿಸ್ತನಲ್ಲಿ ನಮ್ಮ ನಂಬಿಕೆಯನ್ನು ಇಡುವಂತದ್ದು ನಮ್ಮನ್ನು ಬಂಧನಗಳಿಂದ ಬಿಡುಗಡೆ ಮಾಡುವುದು ಮಾತ್ರವಲ್ಲದೆ ನಮ್ಮ ಆಂತರಿಕ ಆತ್ಮಗಳಿಗೆ ಸಂಪೂರ್ಣತೆಯನ್ನು ತಂದು ಕೊಡುತ್ತದೆ!
ಉಪಶಮನ ಎದುರು ನೋಡುತ್ತಾ ನೀವು ಕ್ಲಬ್‌ಹೌಸ್ ಅಥವಾ ವೇಶ್ಯಾಗೃಹಕ್ಕೆ ಹೋಗಕೂಡದು ಮತ್ತು ನೀವು ಪಾಪಿಗಳೊಂದಿಗೆ ಸೇರಬಾರದು; ಯೇಸು ನಿಮ್ಮ ಆಂತರಿಕ ಗಾಯವನ್ನು ಗುಣಪಡಿಸಲು ಸಮರ್ಥನಾಗಿದ್ದಾನೆ. ಆತನು ನಿಮ್ಮ ಸಮಾಧಾನವನ್ನು ಪುನಃಸ್ಥಾಪಿಸಿ ನಿಮಗೆ ಹೇರಳವಾದ ಸಂತೋಷವನ್ನು ನೀಡಬಲ್ಲನು. ನೀವು ಜೀವಂತವಾಗಿರುವವರೆಗೂ ಯೇಸುವಿನಲ್ಲಿ ನಿರೀಕ್ಷೆ ಇದೆ ಎಂದು ಖಚಿತವಾಗಿರಿ. ನಿಮಗೆ ಈಗ ಗೊಂದಲದಲ್ಲಿರುವ ಮಗುವಿದೆಯೇ? ಯೇಸು ಅದನ್ನು ನರಕದ ಬಂಧನದಿಂದ ಮುಕ್ತಗೊಳಿಸಲು ಬಯಸುತ್ತಿರುವುದರಿಂದಲೇ ಇಂದು ನೀವು ಈ ಭಕ್ತಿವೃದ್ಧಿಯ ವಾಕ್ಯವನ್ನು ಓದುತ್ತಿದ್ದೀರಿ.
Bible Reading: Joshua 6-7
ಪ್ರಾರ್ಥನೆಗಳು
ತಂದೆಯೇ, ನಾನು ನಿಮ್ಮಲ್ಲಿರುವ ನಿರೀಕ್ಷೆಗಾಗಿ ಯೇಸುನಾಮದಲ್ಲಿ ಸ್ತೋತ್ರ ಸಲ್ಲಿಸುತ್ತೇನೆ. ಇಂದು ನಾನು ನನ್ನನ್ನೇ ನಿನ್ನ ಸಾನಿಧ್ಯಕ್ಕೆ ಕರೆ ತಂದು ನನ್ನನ್ನು ನಿನ್ನ ಪ್ರೀತಿಯಿಂದ ತುಂಬಿಸಬೇಕೆಂದು ಪ್ರಾರ್ಥಿಸುತ್ತೇನೆ. ನಾನು ಪಾಪದ ಎಲ್ಲಾ ಭಾರವನ್ನು ಬದಿಗಿಟ್ಟು ನಿನ್ನ ಕೃಪೆ ಮತ್ತು ಸಮಾಧಾನವನ್ನು ಹೊಂದಿಕೊಳ್ಳುತ್ತೇನೆ. ನನ್ನ ಗಾಯಗಳು ಸ್ವಸ್ಥವಾಗಲೆಂದು ನಾನು ಯೇಸುನಾಮದಲ್ಲಿ ಆಜ್ಞಾಪಿಸುತ್ತೇನೆ. ಆಮೆನ್.
Join our WhatsApp Channel

Most Read
● ಅತ್ಯಂತ ಸಾಮಾನ್ಯ ಭಯಗಳು● ಆತ್ಮನ ಸುರಿಸಲ್ಪಡುವಿಕೆ
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
● ತುರ್ತು ಪ್ರಾರ್ಥನೆ.
● ಸಾಧನೆಯ ಪರೀಕ್ಷೆ.
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ದೇವರಿಗಾಗಿ ಮತ್ತು ದೇವರೊಂದಿಗೆ.
ಅನಿಸಿಕೆಗಳು