ಅನುದಿನದ ಮನ್ನಾ
ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
Monday, 25th of March 2024
3
2
510
Categories :
ಬದಲಾವಣೆ (Change)
2.ನಿಮ್ಮ ಲಕ್ಷ್ಯವನ್ನು ಗಮನವನ್ನು ದೇವರ ಮೇಲೆಯೂ ಆತನ ವಾಕ್ಯಗಳ ಮೇಲೆಯೂ ಕೇಂದ್ರೀಕರಿಸಬೇಕು.ಆಗ ನಿಮ್ಮ ಆಂತರ್ಯದಿಂದ ಬದಲಾವಣೆ ಹುಟ್ಟಿ ಬಹಿರಂಗವಾಗಿ ಕಾಣುವಂತಾಗುತ್ತದೆ
ನಾವೀಗ ನಮ್ಮ ಜೀವನದಲ್ಲಿ ಎಂದೂ ಅಳಿಯದಂತ ಬದಲಾವಣೆ ತರುವುದು ಹೇಗೆ ಎಂಬುದನ್ನು ಅಧ್ಯಯನ ಮಾಡುತ್ತಿದ್ದೇವಷ್ಟೇ.
ನೀವು ನಿಮ್ಮ ಜೀವಿತದಲ್ಲಿ ಎಂದೂ ಅಳಿಯದ ಬದಲಾವಣೆಯನ್ನು ನಿಶ್ಚಿತವಾಗಿ ನೋಡಬೇಕೆಂದರೆ
ನಿಮ್ಮ ಲಕ್ಷ್ಯವನ್ನು ಮತ್ತು ಗಮನವನ್ನು ದೇವರ ಮೇಲೆಯೂ ಆತನ ವಾಕ್ಯಗಳ ಮೇಲೆಯೂ ಕೇಂದ್ರೀಕರಿಸಬೇಕು.ನಿಮ್ಮ ಜೀವನದ ಮಟ್ಟವನ್ನು ಹೆಚ್ಚಿಸಿಕೊಳ್ಳಲು ನೀವು ನಿಮ್ಮ ಆಲೋಚನೆ ಮಟ್ಟವನ್ನು ಉನ್ನತೀಕರಿಸಿಕೊಳ್ಳಬೇಕು.
ಸತ್ಯವೇನೆಂದರೆ ಬಹುತೇಕ ಜನರು ಅವರ ಜೀವಿತದಲ್ಲಿ ಯಾವೆಲ್ಲವೂ ಸರಿ ಇಲ್ಲವೋ ಅವುಗಳನ್ನೇ ಆಳವಾಗಿ ನೋಡುತ್ತಾ ಯೋಚಿಸುತ್ತಿರುತ್ತಾರೆ. ಹೇಗೂ ಅವರ ಆಲೋಚನೆ ಮಾಡುವ ಕ್ರಮದಿಂದಾಗಿ ಅವರು ಯಾವುದನ್ನು ಮೊದಲಿಂದಲೂ ಮಾಡುತ್ತಿದ್ದರೋ ಅದನ್ನೇ ಮಾಡುತ್ತಾ ಅವರ ಜೀವಿತವನ್ನು ಮುಗಿಸುತ್ತಾರೆ. ಅವರು ತಮ್ಮ ಆ ನಡತೆಗೆ ತಮ್ಮದೇ ಆದ ಆಲೋಚನಾ ರೀತಿಯ ಮೂಲಕ ಸಮರ್ಥನೆ ನೀಡುತ್ತಾರೆ.
ಹಾಗೆಯೇ ವರ್ಷಗಳು ಕಳೆದು ಹೋಗುತ್ತವೆ ಮತ್ತದು ಬದಲಾವಣೆಗೆ ಸಿಗದಷ್ಟು ಕಾಲ ಕೈಮೀರಿ ಹೋಗಿಬಿಟ್ಟಿರುತ್ತದೆ.
ಎಂದೂ ಅಳಿಯದ ಬದಲಾವಣೆಯನ್ನು ಹೊಂದಲು ನಿಮಗೊಂದು ಮಾದರಿಯ ಅವಶ್ಯಕತೆ ಇದೆ. ನಿಮ್ಮ ಜೀವಿತದ ಮಾದರಿಯು ಪರಿಪೂರ್ಣವಾದ ಯೇಸುಕ್ರಿಸ್ತನ ಜೀವನ ಮಾದರಿಯಂತೆ ಇರಬೇಕು. ನಿಮ್ಮ ಗತಕಾಲದ ಅನಾರೋಗ್ಯಕರವಾದ ಆಲೋಚನೆ ಮಾದರಿಯನ್ನು ಬರಿದು ಮಾಡಿ ಆ ಜಾಗವನ್ನು ದೇವರ ವಾಕ್ಯದಲ್ಲಿ -ಸತ್ಯವೇದದಲ್ಲಿ ದೊರಕುವ ಹೊಸದಾದ ತತ್ವಗಳ ಮೂಲಕ ತುಂಬಿಸಬೇಕು.
ನನಗೊಂದು ಉದಾಹರಣೆ ಕೊಡಲು ಅವಕಾಶ ಕೊಡಿ ಒಂದು ದಿನ ನಾನು ದೇವರ ವಾಕ್ಯವನ್ನು ಓದುತ್ತಿರುವಾಗ ನನ್ನ ಕಣ್ಣುಗಳು ಈ ವಚನಗಳಲ್ಲಿ ನಿಂತವು.
"ಶ್ರೇಷ್ಠವಾದವುಗಳಿಂದ ನಿನ್ನ ಬಾಯನ್ನು ತುಂಬಿಸುತ್ತಾನೆ ; ಹದ್ದಿಗೆ ಬರುವಂತೆಯೇ ನಿನಗೆ ಯೌವನವನ್ನು ತಿರಿಗಿ ಬರಮಾಡುತ್ತಾನೆ."(ಕೀರ್ತನೆಗಳು 103:5 )
ಈ ವಾಕ್ಯವು ನನ್ನೊಡನೆ ಮಾತನಾಡಿ ನಾನು ಆರೋಗ್ಯಕರವಾಗಿ ಇರಬೇಕೆಂದರೆ ನನ್ನ ಬಾಯಲ್ಲಿ ಪ್ರವೇಶಿಸುವ ಆಹಾರದ ಬಗ್ಗೆ ನಾನು ಜಾಗರೂಕನಾಗಿರಬೇಕು ಎಂದು ಹೇಳಿತು. ನಾನು ಆ ದಿನ ಮೊದಲುಗೊಂಡು ನನ್ನ ಆಹಾರ ಕ್ರಮದಲ್ಲಿ ಮೂರು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡೆನು.
- ಗಾಳಿ ತುಂಬಿಸಿದ ತಂಪು ಪಾನೀಯಗಳನ್ನು ಕುಡಿಯುವುದಿಲ್ಲ.
- ಐಸ್ ಕ್ರೀಮ್ ಅನ್ನು ತಿನ್ನುವುದಿಲ್ಲ
- ನಾನು ಯಾವುದೇ ಸಮಯದಲ್ಲಾಗಲೀ ಸಕ್ಕರೆಯನ್ನು ತಿನ್ನದಂತೆ ನಿಯಂತ್ರಿಸುವೆನು, ನಿಯಂತ್ರಿಸಲು ಪ್ರಯತ್ನಿಸುವೆನು. ಎಂದು
ಈ ಮೇಲೆ ಕಾಣುವಂತವುಗಳು ಬಹು ಜನರಿಗೆ ಬಹಳ ಸರಳವಾಗಿ ಕಾಣಿಸಬಹುದು. (ಕೆಲವರಿಗೆ ಭಯವು ಹುಟ್ಟಿಸಿರಬಹುದು). ಆದರೆ ವಾಸ್ತವವೇನೆಂದರೆ ಇದು ನನ್ನಲ್ಲಿ ವೈಯಕ್ತಿಕವಾಗಿ ದೊಡ್ಡ ವ್ಯತ್ಯಾಸವನ್ನು ತಂದಿತು.
ನೀವು ನಿಮ್ಮ ಬದಲಾವಣೆಯ ಪಯಣವನ್ನು ಆರಂಭಿಸಲು ಸಹಾಯವಾಗಲೆಂದು ಕೇವಲ ಒಂದು ಸಣ್ಣ ಉದಾಹರಣೆಯನ್ನು ಕೊಡುತ್ತಿರುವೆನಷ್ಟೇ.
ನೀವು ನಿಮ್ಮ ಆಲೋಚನೆಯ ಮಟ್ಟವನ್ನು ಸಹ ಹೀಗೆಯೇ ಬದಲಾಯಿಸಬಹುದು. ಉದಾಹರಣೆಗೆ ನಿಮ್ಮ ದೇಹವನ್ನು ತರಬೇತಿಗೊಳಿಸಲು, ಪ್ರಾರ್ಥನೆ ಮಾಡಲು ಇತ್ಯಾದಿ.
ನಿಮ್ಮ ಜೀವನದಲಾಗುವ ಪರಿಣಾಮ ಮತ್ತು ಪ್ರಭಾವವು ನಿಮ್ಮ ಆಲೋಚನೆ ಮಟ್ಟವನ್ನು ಪ್ರತಿಬಿಂಬಿಸುತ್ತಿರುತ್ತದೆ. ಯಾರು ಬೇಕಾದರೂ ತಮ್ಮ ಬ್ಯಾಂಕಿನ ಖಾತೆಯಲ್ಲಿ ಹಣವಿದ್ದರೆ ತಮ್ಮ ಆಲೋಚನೆಯ ಮಟ್ಟವನ್ನು ಉನ್ನತೀಕರಿಸಿಕೊಳ್ಳಬಹುದು.ಆದರೆ ಇದು ಹಣಕ್ಕೆ ಸಂಬಂಧಿಸಿದಲ್ಲ.ಬದಲಾಗಿ ಮನಸ್ಥಿತಿಗೆ ಸಂಬಂಧಿಸಿದೆ.
ನಿಜವಾದ ಬದಲಾವಣೆಯು ಆಂತರ್ಯದಿಂದ ಹುಟ್ಟಿ ಹೊರಗೆ ಪ್ರತಿಫಲಿಸುವಂತದ್ದಾಗಿದೆ. ಮೊದಲು ಆಂತರ್ಯದಲ್ಲಿ ಬದಲಾವಣೆ ಬರಬೇಕು ಆಗ ತಾನೇ ತಾನಾಗಿ ಎಲ್ಲರೂ ಕಾಣುವಂತ ಬದಲಾವಣೆಯ ಹೊರಗೆ ಕಂಡೆ ಕಾಣುತ್ತದೆ.
"ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದಂದರೆ - ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು. 23ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. 24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ."(ಎಫೆಸದವರಿಗೆ 4:22-24 ).
ನಾವು ಹೊಸ ಬಟ್ಟೆಗಳನ್ನು ಕೊಂಡುಕೊಳ್ಳಲು ಹೋಗುವಾಗ, ಅದು ನಮಗೆ ಸರಿ ಹೊಂದುವುದೋ ಎಂದು ನೋಡಲು ಮೊದಲು ನಮ್ಮ ಹಳೆಯ ಬಟ್ಟೆಗಳನ್ನು ತೆಗೆದು ಆನಂತರ ಹೊಸದನ್ನು ಹಾಕಿಕೊಂಡು ನೋಡುತ್ತೇವೆ. ನಾವು ಹಳೆಯ ಬಟ್ಟೆಯ ಮೇಲೆಯೇ ಹೊಸದನ್ನು ಹಾಕಿಕೊಳ್ಳುವುದಿಲ್ಲ. ಆ ರೀತಿ ಕಾರ್ಯ ನಡೆಯುವುದಿಲ್ಲ. ಹಾಗೆಯೇ ನಾವು ಎಂದೂ ಅಳಿಯದಂತ ಬದಲಾವಣೆ ತರಬೇಕೆಂದರೆ ದೇವರ ವಾಕ್ಯಕ್ಕೆ ಅನುಗುಣವಾಗಿ ನಮ್ಮ ಆಲೋಚನಮಟ್ಟವನ್ನು ಉನ್ನತೀ ಕರಿಸಬೇಕು. ಇದು ಹಳೆಯ ಎಲ್ಲಾ ನಕಾರಾತ್ಮಕ ನಡತೆಗಳೆಲ್ಲಾ ಹೊರಟು ಹೋಗಲಿ, ಹಳೆಯ ಪ್ರಾಪಂಚಿಕ ಆಲೋಚನೆಗಳೆಲ್ಲಾ ಬಿಟ್ಟು ಹೋಗಲಿ ಎನ್ನುವ ಅರ್ಥ ಕೊಡುತ್ತದೆ.
ಕೆಲವರಿಗೆ ಇದು ತುಂಬಾ ಪ್ರಯಾಸವಾದ ಕಾರ್ಯ ಎಂದು ಕಾಣಬಹುದು.ಅದಾಗಿಯೂ ನಿಮ್ಮ ಸುತ್ತಲಿನ ಜನರು ಇದರಿಂದ ಆಗುವ ಪರಿಣಾಮವನ್ನು ನಿಮ್ಮಲ್ಲಿ ನೋಡುವಾಗ ಹೇಗಿರುತ್ತದೆ ಎಂದು ಯೋಚಿಸಿ ನೋಡಿರಿ. ಚರಿತ್ರೆಯಲ್ಲಿ ಪೂರ್ವಕಾಲದ ವೃತ್ತಾಂತಗಳಲ್ಲಿ ತಮ್ಮ ಆಲೋಚನೆ ಮಟ್ಟವನ್ನು ಉನ್ನತೀಕರಿಸಿಕೊಂಡು, ಉನ್ನತವಾದ ಜೀವಿತವನ್ನು ಜೀವಿಸಿದವರ ಉದಾಹರಣೆಗಳನ್ನು ನೋಡಿರಿ. ಇದನ್ನೇ ಕೆಲವು ತಿಂಗಳಲ್ಲಿ ನಿಮ್ಮ ಬಗ್ಗೆ ಕೂಡ ಇತರರು ಮಾತಾಡುವಂತೆ ಆಗಬಹುದು.
ಪ್ರಾರ್ಥನೆಗಳು
ತಂದೆಯೇ, ನನ್ನ ಆಂತರ್ಯದ ಮನುಷ್ಯನನ್ನು ನಿನ್ನ ಆತ್ಮದಿಂದ ಬಲಗೊಳಿಸು ಎಂದು ಪ್ರಾರ್ಥಿಸುತ್ತೇನೆ. ಯೇಸುವಿನ ನಾಮದಲ್ಲಿರುವ ನಂಬಿಕೆಯ ಮೂಲಕ ಕ್ರಿಸ್ತನು ನನ್ನ ಹೃದಯವನ್ನು ಆಳ್ವಿಕೆ ಮಾಡಲೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ಆತನಿಗೆ ಯಾವುದೇ ಮಿತಿಯಿಲ್ಲ.● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ಬದಲಾಗಲು ಇನ್ನೂ ತಡವಾಗಿಲ್ಲ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಇತರರಿಗಾಗಿ ಪ್ರಾರ್ಥಿಸುವುದು
● ಮರೆತುಹೋದ ಆಜ್ಞೆ.
ಅನಿಸಿಕೆಗಳು