ಅನುದಿನದ ಮನ್ನಾ
ಪುರುಷರು ಏಕೆ ಪತನಗೊಳ್ಳುವರು -6
Monday, 13th of May 2024
3
2
181
Categories :
ಜೀವನದ ಪಾಠಗಳು (Life Lessons)
ಇದು ಮಹಾನ್ ಸ್ತ್ರೀ ಪುರುಷರು ಏಕೆ ಪಥನಗೊಳ್ಳುವರು ಎಂಬ ಸರಣಿಯ ಕಡೆಯ ಕಂತಾಗಿದೆ.
ದಾವೀದನ ಜೇವಿತದಿಂದ ನಮ್ಮ ಮನಸ್ಸಿನಲ್ಲಿ ನಾವು ಏನನ್ನು ಯೋಚಿಸುತ್ತೇವೆಯೋ, ಅದರ ಪ್ರಭಾವವೇ ನಮ್ಮ ಜೀವಿತದಲ್ಲಿ ಜರಗುತ್ತವೆ ಎಂಬುದನ್ನು ಸ್ಪಷ್ಟವಾಗಿ ನೋಡಿದೆವು. ತಪ್ಪಾದ ಯೋಚನೆಗಳು -ತಪ್ಪಾದ ಭಾವನೆಗಳೆಡೆಗೆ ಎಳೆದೊಯ್ಯುತ್ತವೆ ಮತ್ತು ಅತಿ ಬೇಗನೆ ಆ ಭಾವನೆಗಳು ನಮ್ಮ ಮೇಲೆ ಪ್ರಭಾವ ಬೀರುತ್ತವೆ ನಂತರ ನಮ್ಮ ಭಾವನೆಗಳನ್ನು ಹೊರತೋರ್ಪಡಿಸಲು ಮುಂದಾಗುತ್ತೇವೆ -ಅದರಲ್ಲಿ ಭಾಗಿಯಾಗುತ್ತೇವೆ ಮತ್ತು ಅಷ್ಟೇ ಶೀಘ್ರವಾಗಿ ನಮ್ಮ ಜೀವನವು ಬೇರೆ ದಿಕ್ಕಿಗೆ ಹೋಗಿಬಿಡುತ್ತದೆ.
"ಮನುಷ್ಯನು ತನ್ನ ಒಳಗಿನ ಯೋಚನೆಯಂತೆಯೇ ಇದ್ದಾನೆ" ಎಂದು ಜ್ಞಾನೋಕ್ತಿ 23:7 ನಮ್ಮ ಆಲೋಚನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾದ ಅಗತ್ಯವನ್ನು ಹೇಳುತ್ತದೆ.
ಅಶುದ್ಧವಾದ ಆಲೋಚನೆಗಳಿಂದ ಮನುಷ್ಯನು ಕೆಡುತ್ತಾನೆ ಎಂದು ಕರ್ತನಾದ ಯೇಸು ಸ್ಪಷ್ಟವಾಗಿ ನಮಗೆ ಪ್ರಕಟಿಸಿದ್ದಾನೆ.
" ಆದರೆ ಬಾಯೊಳಗಿಂದ ಹೊರಡುವಂಥವುಗಳು ಮನಸ್ಸಿನೊಳಗಿಂದ ಬರುತ್ತವೆ; ಇವೇ ಮನುಷ್ಯನನ್ನು ಹೊಲೆ ಮಾಡುವವು.19ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ.20ಮನುಷ್ಯನನ್ನು ಕೆಡಿಸುವಂಥವುಗಳು ಇವೇ; "(ಮತ್ತಾಯ 15:18-20).ಆದುದರಿಂದ ನಮ್ಮ ಜೀವನವನ್ನು ನಡೆಸಲು ಬೇಕಾಗಿರುವ ನಮ್ಮ ಆಲೋಚನೆಗಳ ಕುರಿತು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕಾದದ್ದು ಬಹಳ ಅನಿವಾರ್ಯ.
ಇದು ನಮ್ಮಲ್ಲಿ ಒಂದು ಪ್ರಶ್ನೆಯನ್ನು ಪ್ರಶ್ನೆಯನ್ನು ಮೂಡಿಸುತ್ತದೆ. ಅದೇನೆಂದರೆ ಕ್ರಿಸ್ತನು ನಮಗೆ ವಾಗ್ದಾನ ಮಾಡಿದ ಜಯದಲ್ಲಿ ಅನುದಿನ ನಡೆಯಲು ಹಾಗೂ ಆತನು ನಮಗೆ ಅನುಗ್ರಹಿಸಿದ ಸ್ವಾತಂತ್ರ್ಯದಲ್ಲಿ ನೆಲೆಗೊಳ್ಳಲು ನಾವು ತೆಗೆದುಕೊಳ್ಳಬೇಕಾದ ಕ್ರಮಗಳಾವುವು?
"ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು.... "(2 ಕೊರಿಂಥದವರಿಗೆ 10:5).ನಮ್ಮ ಆಲೋಚನೆಗಳನ್ನು ಸೆರೆ ಹಿಡಿಯುವುದರ ಅರ್ಥವೇನು ಎಂದರೆ ನಾವು ನಮ್ಮ ಕುರಿತು ನಮ್ಮ ಜೀವಿತದ ಕುರಿತು ಆಲೋಚಿಸುವ ಚಿಂತನೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಎಂದು
ನಾವು ಅನುದಿನ ಕ್ರಿಸ್ತನ ಜಯದಲ್ಲಿ ಸ್ವಾತಂತ್ರ್ಯದಲ್ಲಿ ನೆಲೆಗೊಳ್ಳಲು ಹಾಗೂ ನಂಬಿಕೆಯಲ್ಲಿ ನಡೆಯಲು ಇದು ಅತಿ ನಿರ್ಣಾಯಕವಾದ ಅಂಶವಾಗಿದೆ.
ಆಲೋಚನೆಗಳನ್ನು ನಾವು ನೋಡುವುದಕ್ಕಾಗಲಿ, ಅಳತೆ ಮಾಡುವುದಕ್ಕಾಗಲೀ, ತೂಗುವುದಕ್ಕಾಗಲೀ ಸಾಧ್ಯವಿಲ್ಲದಿದ್ದರೂ ಅವು ನೈಜವಾಗಿದ್ದು ಬಹು ಶಕ್ತಿಯುತವಾಗಿವೆ. ಈ ಕೆಟ್ಟ ಆಲೋಚನೆಗಳನ್ನು ಜಯಿಸಲು ಆತ್ಮನಿಂದ ಹೊಂದಿಕೊಂಡ ಕೆಲವು ತಂತ್ರೋಪಾಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಅನುಮತಿಸಿ.
1) .ಕೇವಲ ನಿಮ್ಮ ನಡವಳಿಕೆಯನ್ನಲ್ಲ, ನಿಮ್ಮ ಮನಸ್ಸು ಬದಲಾಗಬೇಕು.
ನಮ್ಮ ಜೀವನವು ಯಾವಾಗಲೂ ನಮ್ಮೊಳಗಿನ ಅತ್ಯಂತ ಪ್ರಬಲವಾದ ಆಲೋಚನೆಗಳ ದಿಕ್ಕಿನಲ್ಲಿ ಚಲಿಸುತ್ತದೆ. ದೇವರು 'ನಮ್ಮಲ್ಲಿರುವ ಆತನನ್ನು ಸನ್ಮಾನಿಸದಂತ ಪಾಪಮಯ ನಡವಳಿಕೆಗಳನ್ನು ಬದಲಾಯಿಸಿಕೊಳ್ಳಲು ನಮ್ಮನ್ನು ಕರೆಯುತ್ತಾನೆ'. ಅದು ಸಂಭವಿಸಬೇಕಾದರೆ ಈ ನಡವಳಿಕೆಗಳು ಉದ್ಭವಿಸುವಂತಹ ಸ್ಥಳವಾದ ನಮ್ಮ ಮನಸ್ಸನ್ನು ಶಿಸ್ತುಗೊಳಿಸುವ ಕಾರ್ಯವನ್ನು ನಾವು ಮಾಡಬೇಕಾಗುತ್ತದೆ.
ನಿಮ್ಮ ಮನಸ್ಸನ್ನು ನೂತನ ಪಡಿಸಿಕೊಳ್ಳುವುದರ ಮೂಲಕ ನಿಮ್ಮನ್ನು ಪರಿವರ್ತಿಸಲು ದೇವರಿಗೆ ನಿಮ್ಮನ್ನು ಒಪ್ಪಿಸಿಕೊಡಿ. ನಿಮ್ಮ ಮನಸ್ಸನ್ನು ಹೇಗೆ ನೂತನ ಪಡಿಸಿಕೊಳ್ಳಬೇಕು? ಇಹಲೋಕದ ನಡವಳಿಕೆಗಳನ್ನು ಕೊಂಚವೂ ಅನುಸರಿಸದೇ ದೇವರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಆಗ ನೀವು ಆಂತರ್ಯದಿಂದ ಬದಲಾವಣೆಯನ್ನು ಹೊಂದುವಿರಿ. ಆತನು ನಿಮ್ಮಿಂದ ಬಯಸುವುದೇನು ಎಂಬುದನ್ನು ಗುರುತಿಸಿ ಹಾಗು ಅದಕ್ಕೆ ತ್ವರಿತವಾದ ಪ್ರತಿಕ್ರಿಯೆಯನ್ನು ತೋರಿಸಿರಿ.
2) ನಿಮ್ಮ ಆಲೋಚನೆಗಳಿಗಿಂತ ಜೋರಾಗಿ ಮಾತನಾಡಿ
ಪ್ರತಿಯೊಂದು ಆಲೋಚನೆಗೂ ಒಂದು ಧ್ವನಿ ಇದೆ. ಆರಂಭಿಕ ಹಂತದಲ್ಲಿ ಆಲೋಚನೆಗಳ ಧ್ವನಿ ಸೌಮ್ಯವಾಗಿರುತ್ತದೆ. ಆದರೆ ನೀವು ಅದನ್ನು ಕೇಳಲು ಕಿವಿ ಕೊಡುತ್ತಾ ಹೋದಂತೆ ಅದರ ಸ್ವರ ಜೋರಾಗುತ್ತಾ ಇನ್ನೂ ಜೋರಾಗುತ್ತಾ ಹೋಗುತ್ತದೆ. ಆದ್ದರಿಂದಲೇ "ನಿಮ್ಮ ಆಲೋಚನೆಗಳನ್ನೆಲ್ಲಾ ಸೆರೆ ಹಿಡಿದು ಕ್ರಿಸ್ತನಿಗೆ ವಿಧೇಯರಾಗುವಂತೆ ಮಾಡಿ "ಎಂದು ಅಪೋಸ್ತಲನಾದ ಪೌಲನು ಹೇಳುತ್ತಾನೆ. (2ಕೊರಿಯಂತೆ 10:5).
ಇದನ್ನು ಮಾಡುವ ಒಂದು ವಿಧಾನವೆಂದರೆ ನಿಮ್ಮ ಮನಸ್ಸಿನಲ್ಲಿ ಮಾತನಾಡುತ್ತಿರುವ ದುಷ್ಟ ಸ್ವರಕ್ಕೆ ತದ್ವಿರುದ್ಧವಾಗಿ ದೇವರ ವಾಕ್ಯಗಳನ್ನು ಬಾಯಿಂದ ಅರಿಕೆ ಮಾಡುವಂತದ್ದು.
ಉದಾಹರಣೆಗೆ ದುಷ್ಟ ಆಲೋಚನೆಯು "ನೀನು ಬೇರೆಯವರಂತೆ ಬೇಗನೆ ರೋಗಕ್ಕೆ ಬೀಳಲಿರುವೆ" ಎಂದು ಹೇಳಿದಾಗ ನೀವು "ನನ್ನ ದೇಹವು ಪವಿತ್ರಾತ್ಮನ ಗರ್ಭಗುಡಿಯಾಗಿದೆ. ಆದ್ದರಿಂದ ಯಾವುದೇ ರೋಗವಾಗಲೀ ನನ್ನ ದೇಹವನ್ನು ಮುಟ್ಟಲು ಸಾಧ್ಯವಿಲ್ಲ" ಎಂದು ಜೋರಾಗಿ ಯೇಸುವಿನ ನಾಮದಲ್ಲಿ ಬಾಯರಿಕೆ ಮಾಡಿರಿ.ನಿಮ್ಮ ಆಲೋಚನೆಗಳು ಪುನಃ ಹಾಗೆ ಹೇಳಿದರೆ ನೀವು ಸಹ ಮತ್ತೊಮ್ಮೆ ಬಾಯರಿಕೆ ಮಾಡಿರಿ.ಪ್ರತಿ ಬಾರಿ ನಿಮ್ಮ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಮೂಡುವಾಗ ಅವುಗಳನ್ನು ಸೆರೆ ಹಿಡಿಯುವ ಕಾರ್ಯ ಮಾಡಬೇಕಾಗುತ್ತದೆ. ಆದರೆ ಧೈರ್ಯವಾಗಿರಿ ಕರ್ತನು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುವನು.
3). ನಿಮ್ಮ ಆಲೋಚನೆಗಳ ಮೇಲೆ ಲಕ್ಷ್ಯವಿಡಿರಿ.
ಸರಿಯಾದ ಸಂಗತಿಗಳ ಮೇಲೆ ನಿಮ್ಮ ಚಿಂತನೆಗಳಿರುವಂತೆ ಲಕ್ಷ್ಯವಹಿಸಿ. "ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ." ಎಂದು ದೇವರ ವಾಕ್ಯ ಹೇಳುತ್ತದೆ. (ಫಿಲಿಪ್ಪಿ 4:8). ನಾವು ವಿವೇಕ ಪೂರ್ವಕವಾಗಿ ಈ ಸಂಗತಿಗಳ ಮೇಲೆ ಲಕ್ಷ್ಯವಿಡುವಾಗ ದೇವರ ವಾಗ್ದಾನವು ನಮಗೆ ಸಮಾಧಾನವನ್ನು ಕೊಡುತ್ತದೆ.
ಒಂದು ಸಲಹೆ ಮಾತು:ನಿಮ್ಮೊಂದಿಗೆ ನೀವು ತಾಳ್ಮೆಯಿಂದಿರ್ರಿ. ನಿಮ್ಮ ಆಲೋಚನೆ ಮಾದರಿಗಳನ್ನು ಬದಲಾಯಿಸುವುದನ್ನು ನೀವು ಕಲಿಯುವಾಗ ನಿಮಗೆ ನೀವೇ ಕಠಿಣ ಹೃದಯಗಳಾಗಬೇಡಿರಿ ಮತ್ತು ನಿಮ್ಮನ್ನು ನೀವೇ ನಿಂದಿಸಿಕೊಳ್ಳಬೇಡಿರಿ. ಮುರಿದು ಹೋದ ಭದ್ರಕೋಟೆಯ ಸುಳ್ಳನ್ನು ಕುರಿತು ನೀವು ಯೋಚಿಸಲಾರಂಭಿಸುವುದನ್ನು ಬಿಟ್ಟು ನಿಮಗೆ ಅದರ ಕುರಿತು ಅರಿವು ಬಂದಾಕ್ಷಣವೇ ಪಶ್ಚಾತಾಪ ಪಡಿರಿ.
ಪಶ್ಚಾತಾಪವು ಜೀವನ ಶೈಲಿ ಆಗಿರಲಿ. ಆದ್ದರಿಂದ ಯಾವುದೇ ಚಿಂತನೆಗಳು ಬೇರು ಬಿಡಲು ಅವಕಾಶ ಕೊಡುವ ಅಗತ್ಯವಿಲ್ಲ. ಅದನ್ನು ಬಿಟ್ಟು ನಿಮಗೆ ಕೊಟ್ಟ ಸ್ವಾತಂತ್ರ್ಯದಲ್ಲಿ ಮುಂದುವರೆಯಿರಿ. ಹೊಸ ಮಾರ್ಗಗಳನ್ನು ಕಲಿಯುತ್ತಿರುವುದರಿಂದ ಅಸಹನೆಯನ್ನು ಬೆಳೆಸಿಕೊಳ್ಳಬೇಡಿರಿ.
ಪ್ರಾರ್ಥನೆಗಳು
ನನ್ನನ್ನು ಮುತ್ತಿಕೊಳ್ಳಲು ತವಕಿಸುವ ಎಲ್ಲಾ ಆತಂಕಗಳು ಖಿನ್ನತೆಯು ಯೇಸುನಾಮದಲ್ಲಿ ನನ್ನನ್ನು ಬಿಟ್ಟು ತೊಲಗಿದೆ.
ಎಲ್ಲಾ ಗ್ರಹಿಕೆಯನ್ನು ಮೀರಿದ ದೇವರ ಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನನ್ನ ಹೃದಯವನ್ನು ಮತ್ತು ಮನಸ್ಸನ್ನು ಕಾಪಾಡುತ್ತಿದೆ.
ಎಲ್ಲಾ ಗ್ರಹಿಕೆಯನ್ನು ಮೀರಿದ ದೇವರ ಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನನ್ನ ಹೃದಯವನ್ನು ಮತ್ತು ಮನಸ್ಸನ್ನು ಕಾಪಾಡುತ್ತಿದೆ.
Join our WhatsApp Channel
Most Read
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ಕೃಪೆಯ ಉಡುಗೊರೆ
● ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು