ಅನುದಿನದ ಮನ್ನಾ
ನಿಮ್ಮ ಅನುಭವವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ
Sunday, 4th of August 2024
2
2
205
Categories :
ಸಾಕ್ಷಿ (Testimony)
"ಆದದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.ಇದುವೇ ನಿಮ್ಮ ಕುರಿತ ತಂದೆಯಾದ ದೇವರ ಚಿತ್ತ "(1 ಥೆಸಲೋನಿಕದವರಿಗೆ 5:11)
ನಿಮ್ಮ ಹೋರಾಟಗಳು ಮತ್ತು ನಿಮ್ಮ ನೋವನ್ನುನೀವು ಮತ್ತೊಬ್ಬರೊಟ್ಟಿಗೆ ಹಂಚಿಕೊಳ್ಳುವಾಗ, ದೇವರು ನಿಮ್ಮನ್ನು ಅವುಗಳಿಂದ ಹೇಗೆ ಹೊರ ತಂದನು ಎಂದು ನೀವು ಹೇಳುವಾಗ ನಿಮ್ಮ ಮಾತುಗಳನ್ನು ಜನರು ಮರೆತುಬಿಡಬಹುದು. ಆದರೆ ನೀವು ಹೇಳಿದ ಮಾತುಗಳಿಂದ ಅವರಿಗಾದ ಅನಿಸಿಕೆಗಳನ್ನು ಅವರು ಎಂದಿಗೂ ಮರೆಯುವುದಿಲ್ಲ. ಇಂದಿನ ಕಾಲದ ಜನರಿಗೆ ಇದುವೇ ಬೇಕಾದ ಭರವಸೆಯನ್ನು ನೀಡುವಂತಾದ್ದಾಗಿದೆ. "ನಾನು ಇದನ್ನು ಹೇಗೆಲ್ಲಾ ಮಾಡಿದೆ.ದೇವರು ನನ್ನನ್ನು ಈ ಸಮಸ್ಯೆಯಿಂದ ಹೊರತಂದ ಹಾಗೆಯೇ ನಿಮ್ಮನ್ನೂ ಸಹ ಹೊರತರುವನು ನೋಡಿಕೊಳ್ಳಿರಿ " ಎಂದು ನೀವು ಹೇಳುವವರಾಗುತ್ತೀರಿ.:ಇದು ಭಯ ಆತಂಕದ ಬಂಧನದಿಂದ ಹೊರಬರಲು ಅವರಿಗೆ ಸಹಾಯ ಮಾಡುತ್ತದೆ. ಈಗ ನೀವು ಅವರಿಗೆ ಕೇವಲ ಒಬ್ಬ ಕಥೆಗಾರರಂತೆ ಕಾಣದೇ ಹೋರಾಡಿ ಗೆದ್ದ ವೀರರಂತೆ ಕಾಣುವಿರಿ.
ಸ್ವಲ್ಪ ಕಾಲದ ಹಿಂದೆ ಒಬ್ಬ ಪಾಸ್ಟರ್ ಮತ್ತು ಅವರ ಕುಟುಂಬದವರು ನನ್ನನ್ನು ಪ್ರಾರ್ಥನೆಗಾಗಿ ಆಹ್ವಾನಿಸಿದ್ದರು. ಅವರೆಲ್ಲರೂ ವೈರಸ್ ನಿಂದ ಭಾದಿತರಾದ್ದರಿಂದ ಎಲ್ಲರೂ ಮನಸೋತು ಹೋಗಿದ್ದರು. ಇಷ್ಟೇ ಅಲ್ಲದೆ ಅವರ ಈ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಂತೆ ಕೆಲವರು ಈ ವೈರಸ್ ನಿಂದ ಬಾದೆಗೊಳಗಾಗಿದ್ದಕ್ಕಾಗಿ ಅವರನ್ನು ಖಂಡಿಸುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ನಾವು ಪ್ರಾರ್ಥಿಸುವಾಗ ದೇವರು "ನಿಮ್ಮೊಳಗೆ ರೋಗ ಹಿಡಿದವರ ಮತ್ತು ನರಳುತ್ತಿರುವವರ ಮೇಲೆ ಸಹಾನುಭೂತಿಯನ್ನು ಹುಟ್ಟಿಸುತ್ತಿದ್ದಾನೆ. ನಿಮ್ಮ ಈ ಅನುಭವವೇ ಮತ್ತೊಬ್ಬರು ಇಂತಹ ಕಷ್ಟದಲ್ಲಿದ್ದಾಗ ಅವರನ್ನು ಸಂತೈಸಲು ನಿಮಗೆ ಬಲ ಕೊಡುತ್ತದೆ " ಎಂದು ಪವಿತ್ರಾತ್ಮನು ನನಗೆ ಸ್ಪಷ್ಟವಾಗಿ ಹೇಳಿದ್ದು ನನಗೆ ಇಂದಿಗೂ ನೆನಪಿದೆ. ಅವರು ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಿದ್ದರು ಅದೇ ಸಮಯದಲ್ಲಿ ಅವರೆಲ್ಲರೂ ದೇವರ ಪ್ರಸನ್ನತೆಯಿಂದ ಆಗ ಆನಂದದಿಂದ ತುಂಬಿ ತುಳುಕುವರಾದರು.
ಇತ್ತೀಚೆಗೆ ಅವರು ನನ್ನನ್ನು ಸಂಪರ್ಕಿಸಿದಾಗ ಅವರೀಗ ವೈರಸ್ಸಿನ ಬಾದೆಗೆ ತುತ್ತಾದವರಿಗೆ ಹೇಗೆ ಪ್ರಾಯೋಗಿಕವಾಗಿ ಸಹಾಯ ಮಾಡುತ್ತಿದ್ದಾರೆ ಮತ್ತು ಆ ಜನರು ಅವರು ತಮ್ಮ ಅನುಭವಗಳನ್ನು ಹೇಗೆ ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ವಿವರಿಸಿದರು. ಮತ್ತು ಈ ಮೂಲಕ ಅನೇಕ ಕುಟುಂಬಗಳು ಭರವಸೆ ಮತ್ತು ನೆಮ್ಮದಿಯನ್ನು ಪಡೆದುಕೊಂಡಿದೆ ಎಂಬುದನ್ನೂ ಹೇಳಿದರುನೀವು ಈಗಾಗಲೇ ಏನನ್ನು ಅನುಭವಿಸಿದ್ದೀರೋ ಅದುವೇ ಮತ್ತೊಬ್ಬರಿಗೆ ಸ್ಪೂರ್ತಿದಾಯಕವಾಗಿಯೂ ಪ್ರೇರಕವಾಗಿಯೂ ಇರುತ್ತದೆ
" ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ." ಎಂದು 1 ಪೇತ್ರನು 2:9 ಹೇಳುತ್ತದೆ.
ಎರಡನೆಯದಾಗಿ ನಿಮ್ಮ ಅನುಭವಗಳನ್ನು ಹಂಚಿಕೊಳ್ಳುವಂತದ್ದು ಇಂದಿನ ಅಂಧಕಾರ ಸಮಯದಲ್ಲಿ ಸಂಪರ್ಕವನ್ನು ಬಾಂಧವ್ಯವನ್ನು ಕಟ್ಟುವಂತದ್ದಾಗಿದೆ.ಇದು ನಿಮ್ಮ ಬೆಳಕನ್ನು ಅಂಧಕಾರದ ಸ್ಥಳಗಳಲ್ಲಿ ಬೆಳಗುವಂತೆ ಮಾಡಿ ನಿಶ್ಚಲವಾದ ಈ ಲೋಕದಲ್ಲಿ ಸಂಚಲನೆಯನ್ನು ಉಂಟುಮಾಡುತ್ತದೆ.
ಈ ಲೋಕವು ಜನರ ಅನುಭವಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತದೆ. ಇದನ್ನು ಓದುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಯೇಸುಕ್ರಿಸ್ತನ ಮತ್ತು ಆತನ ವಾಕ್ಯಗಳ ಮೂಲಕ ಹೇಗೆ ಜಯ ಹೊಂದಿದರು ಎಂಬುದನ್ನು ಕುರಿತು ತಮ್ಮ ವೈಯಕ್ತಿಕವಾದ ನಿಜವಾದ ಅನುಭವಗಳನ್ನು ಹಂಚಿಕೊಳ್ಳಲು ಆರಂಭಿಸಿದರೆ ಏನಾಗಬಹುದು?ಸ್ವಲ್ಪ ಯೋಚಿಸಿ ನೋಡಿರಿ. ಇದೊಂದು ಕ್ರಾಂತಿಯನ್ನೇ ಹುಟ್ಟು ಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಾರ್ಥನೆಗಳು
ತಂದೆಯೇ, ಯೇಸುಕ್ರಿಸ್ತನಲ್ಲಿ ನಾನು ಹೊಂದಿಕೊಂಡ ವಿಜಯಗಳನ್ನು ಹಂಚಿಕೊಳ್ಳಲು ನನಗೆ ಸಹಾಯ ಮಾಡಿರಿ. ನಾನು ಈ ರೀತಿ ಮಾಡುವಾಗ ಎಲ್ಲರ ಮನೋ ನೇತ್ರಗಳು ಮತ್ತು ಕರ್ಣಗಳು ತೆರೆಯಲ್ಪಡಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೆಯೇ ಇದು ಮತ್ತೊಬ್ಬರೂ ಸಹ ಕ್ರಿಸ್ತನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಹಾಗೆ ಮಾಡುವ ಪ್ರೇರಕ ಶಕ್ತಿಯಾಗಬೇಕೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel
Most Read
● ನೆಪ ಹೇಳುವ ಕಲೆ● ಕರ್ತನ ಸೇವೆ ಮಾಡುವುದು ಎಂದರೇನು II
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
● ಬಲವಾದ ಮೂರುಹುರಿಯ ಹಗ್ಗ
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ನಡೆಯುವುದನ್ನು ಕಲಿಯುವುದು
ಅನಿಸಿಕೆಗಳು