ಅನುದಿನದ ಮನ್ನಾ
ನಂಬಿಕೆ- ನಿರೀಕ್ಷೆ -ಪ್ರೀತಿ
Friday, 6th of September 2024
2
1
162
Categories :
ನಂಬಿಕೆ (Faith)
ಪ್ರೀತಿ (Love)
"ಹೀಗಿರುವದರಿಂದ ನಂಬಿಕೆ ನಿರೀಕ್ಷೆ ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ."(1 ಕೊರಿಂಥದವರಿಗೆ 13:13)
ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಇವುಗಳನ್ನು ದೇವರ ರೀತಿಯ ಪ್ರೀತಿ ಎಂದು ಕರೆಯಲಾಗಿದ್ದು, ಇದು ಆಳವಾದ ದೈವಿಕ ಗುಣಗಳ ಹೂರಣವನ್ನು ಹೊಂದಿದೆ. ಮತ್ತೊಂದೆಡೆ ಸೈತಾನನು ಈ ಯಾವುದೇ ಗುಣಗಳನ್ನು ಹೊಂದಿರದೆ ಅವಗಳನ್ನು ಹೊಂದಿರುವವರನ್ನು ದ್ವೇಷಿಸುವನಾಗಿದ್ದಾನೆ. ದೇವರು ನಂಬಿಕೆ ನಿರೀಕ್ಷೆ ಮತ್ತು ಪ್ರೀತಿಯ ಸಾಕಾರ ಮೂರ್ತಿಯಾಗಿದ್ದಾನೆ ಯಾಕೆಂದರೆ ಅವು ಆತನ ಸಾರವನ್ನು ಪ್ರತಿಬಿಂಬಿಸುತ್ತದೆ.
ಈ ಗುಣಗಳನ್ನು ನಿಜವಾಗಿಯೂ ಹೊಂದಿರುವ ವ್ಯಕ್ತಿಗಳನ್ನು ದೇವರಿಂದ ತುಂಬಿಸಲ್ಪಟ್ಟ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಆ ವ್ಯಕ್ತಿಗಳನ್ನು ಕರ್ತನಿಂದ ಮತ್ತು ಕರ್ತನ ಮೂಲಕ ಮಾತ್ರ ನಾವು ಪಡೆಯಬಹುದಾಗಿದೆ. ಆದ್ದರಿಂದ ಈ ಗುಣಗಳನ್ನು ಅಳವಡಿಸಿಕೊಳ್ಳುವಂಥದ್ದು ದೇವರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಉದ್ದೇಶದಿಂದ ಕೂಡಿದ ಹಾಗೂ ಅರ್ಥಗರ್ಭಿತ ಜೀವಿತ ನಡೆಸಲು ಅವು ಸಹಕರಿಸುತ್ತದೆ.
ಇಂದಿನ ಸಮಾಜದಲ್ಲಿರುವ ನಂಬಿಕೆ ಇಲ್ಲದಿರುವಿಕೆ, ಆಶಾ ಭಂಗ ಮತ್ತು ಪ್ರೀತಿಯ ಕೊರತೆ ಇವುಗಳ ಹೊರತಾಗಿಯೂ ಈ ಗುಣಗಳು ಮನುಕುಲದ ಸೃಷ್ಟಿಯಿಂದಲೂ ಅಸ್ತಿತ್ವದಲ್ಲಿದೆ. ಮತ್ತು ದೇವರು ತನ್ನ ಭಕ್ತರ ಹೃದಯದಲ್ಲಿ ವಾಸಿಸುವವರೆಗೂ ಅದು ಅಸ್ತಿತ್ವದಲ್ಲಿ ಇರುತ್ತದೆ. ಈ ಗುಣಲಕ್ಷಣಗಳು ಸಮಾಜದ ಮೌಲ್ಯಗಳ ಏರಿಳಿತಕ್ಕೆ ಒಳಪಡದೆ ಸ್ಥಿರವಾಗಿ ಬದಲಾಗದೆ ಉಳಿಯುವಂತದ್ದಾಗಿವೆ.
ಸೈತಾನನಿಂದಲೂ ಮತ್ತು ಅವನ ದಾಸರಿಂದಲೂ ಪ್ರಭಾವಿತರಾದ ಜನರು ಈ ಸದ್ಗುಣಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರೂ ಅವರ ಪ್ರಯತ್ನಗಳೆಲ್ಲಾ ವ್ಯರ್ಥವೇ ಆಗಿದೆ. ಏಕೆಂದರೆ ನಿರ್ದಿಷ್ಟವಾಗಿ ಪ್ರೀತಿಯು ಎಂದಿಗೂ ಬಿದ್ದು ಹೋಗುವುದಿಲ್ಲ (1 ಕೊರಿಯಂತೆ 13:8) ನಂಬಿಕೆಯು ಲೋಕವನ್ನೇ ಗೆಲ್ಲುತ್ತದೆ (1ಯೋಹಾನ5:4) ನಿರೀಕ್ಷೆಯು ನಮ್ಮನ್ನು ರಕ್ಷಿಸಿ ಕಾಪಾಡುತ್ತದೆ (ರೋಮಾ 8:24). ಕ್ರೈಸ್ತರಾದ ನಾವು ನಮ್ಮ ಸ್ವ ಪ್ರಯೋಜನಕ್ಕಾಗಿ ಹಾಗೂ ನಮ್ಮ ಸುತ್ತಲಿನವರ ಪ್ರಪಂಚದ ಮೇಲೆ ಸಕರಾತ್ಮಕ ಪ್ರಭಾವ ಬೀರಲು ಮತ್ತು ಈ ಗುಣಗಳನ್ನೆಲ್ಲಾ ಸಾಕಾರಗೊಳಿಸಲೆಂದೇ ಕರೆಯಲ್ಪಟ್ಟವರಾಗಿದ್ದೇವೆ.
ನಂಬಿಕೆ ನಿರೀಕ್ಷೆ ಮತ್ತು ಪ್ರೀತಿಯು ಜೀವನವನ್ನು ಮೌಲ್ಯಯುತ ವಾಗಿ ಮಾಡುತ್ತದೆ ಮತ್ತು ಅದರ ಉದ್ದೇಶವನ್ನು ನೆರವೇರಿಸುತ್ತದೆ. ಈ ಗುಣಗಳೇ ನಮ್ಮನ್ನು ಮನುಷ್ಯರನ್ನಾಗಿ ಮಾಡಿ ಇತರೆ ಸೃಷ್ಟಿಗಳಿಂದ ನಮ್ಮನ್ನು ಪ್ರತ್ಯೇಕಿಸುವಂತದ್ದು. ಇವುಗಳಿಲ್ಲದ ಜನರು ತಮ್ಮ ಮೂಲ ಪ್ರವೃತ್ತಿ ಮತ್ತು ಇಚ್ಛೆಗಳಿಗೆ ಬಲಿಯಾಗಿ ಕೇವಲ ಮೃಗಗಳ ಹಾಗೆ ವರ್ತಿಸುತ್ತಾರೆ.ಆದರೆ ಈ ಸದ್ಗುಣಗಳು ನಮ್ಮ ಜೀವಿತದಲ್ಲಿ ಇದ್ದಾಗ ಅತ್ಯಂತ ಕಠಿಣ ಹೃದಯಗಳು ಸಹ ಮೃದುವಾಗುತ್ತವೆ ಮತ್ತು ದೇವರ ಪ್ರತಿರೂಪವಾಗಿ ರೂಪಾಂತರಗೊಳ್ಳುತ್ತದೆ. ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿ ಇಲ್ಲದ ಒಂದು ಬದುಕು ಅರ್ಥರಹಿತವಾದ ನಿಜವಾದ ಸಂತೋಷವಿಲ್ಲದ ಕೀಳುಮಟ್ಟದ ಬದುಕಾಗಿರುತ್ತದೆ.
ನಾನು ಇತ್ತೀಚಿಗಷ್ಟೇ ಕೊಲ್ಕತ್ತಗೆ ಭೇಟಿ ನೀಡಿದ್ದೆ. ಇಂದಿಗೂ ಅಲ್ಲಿಯ ಜನರು ಮದರ್ ತೆರೇಸಾ ಅವರ ಬಗ್ಗೆ ತುಂಬಾ ಗೌರವದಿಂದ ಮಾತನಾಡುತ್ತಾರೆ. ಲೆಕ್ಕವಿಲ್ಲದಷ್ಟು ಅಡೆತಡೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದರೂ ಮದರ್ ತೆರೇಸ ಅವರು ನಂಬಿಕೆ ಹಾಗೂ ಪ್ರೀತಿಯಲ್ಲಿರುವ ಪರಿವರ್ತನ ಶಕ್ತಿಯ ಮೇಲಿನ ತಮ್ಮ ನಿರೀಕ್ಷೆಯನ್ನು ಎಂದಿಗೂ ಕಳೆದುಕೊಂಡಿರಲಿಲ್ಲ.
ಮಿಶನರಿ ಆಫ್ ಚಾರಿಟಿಯಲ್ಲಿನ ಅವರ ಸೇವೆಯು ಸಂಖ್ಯಾತ ಜೀವಿತವನ್ನು ಮುಟ್ಟಿತ್ತು. ಬಡವರಿಗೆ ಮತ್ತು ಸಮಾಜದಲ್ಲಿ ನಗಣ್ಯರಾದವರಿಗೆ ಬೇಕಿದ್ದ ಕಾಳಜಿ ಹಾಗೂ ಬೆಂಬಲವನ್ನು ಅದು ನೀಡುತ್ತಿತ್ತು.ಒಂದು ದಿನ ಒಬ್ಬರು ಆಕೆಯನ್ನು "ನೀವು ನಂಬಿಕೆ ನಿರೀಕ್ಷೆ ಮತ್ತು ಪ್ರೀತಿಯಲ್ಲಿ ಇಷ್ಟರವರೆಗೆ ಮುಂದುವರೆಯಲು ಕಾರಣವೇನು?" ಎಂದು ಕೇಳಿದರು. ಅದಕ್ಕೆ ಆಕೆ "ನಾನು ಸೇವೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ನಾನು ಕ್ರಿಸ್ತನ ಮುಖವನ್ನು ನೋಡುತ್ತೇನೆ" ಎಂದು ಉತ್ತರ ಕೊಟ್ಟರು.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಾನಿಂದು ನಿಮ್ಮ ದೈವೀಕ ಗುಣಗಳಾದ ನಂಬಿಕೆ ನಿರೀಕ್ಷೆ ಮತ್ತು ಪ್ರೀತಿಯಿಂದ ನನ್ನನ್ನು ತುಂಬಿಸಬೇಕೆಂದು ಬೇಡಿಕೊಳ್ಳಲು ನಿಮ್ಮ ಸಾನಿಧ್ಯಕ್ಕೆ ಬರುತ್ತೇನೆ.
ನಂಬಿಕೆ ಇಲ್ಲದಂತಾ, ನಿರೀಕ್ಷೆಯಿಲ್ಲದ ಹಾಗೂ ನಿಮ್ಮ ಪ್ರೀತಿಯ ಕೊರತೆಯಿರುವವರಿಗಾಗಿ ನಾನು ಬೆಳಕಿನ ಮಾರ್ಗವಾಗುವಂತೆ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯು ನನ್ನ ಮೂಲಕ ಹರಿದು ಬರಲೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
ನಂಬಿಕೆ ಇಲ್ಲದಂತಾ, ನಿರೀಕ್ಷೆಯಿಲ್ಲದ ಹಾಗೂ ನಿಮ್ಮ ಪ್ರೀತಿಯ ಕೊರತೆಯಿರುವವರಿಗಾಗಿ ನಾನು ಬೆಳಕಿನ ಮಾರ್ಗವಾಗುವಂತೆ ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯು ನನ್ನ ಮೂಲಕ ಹರಿದು ಬರಲೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ಕೊಡುವ ಕೃಪೆ -2● ಕೃಪೆಯ ಉಡುಗೊರೆ
● ಉತ್ತಮ ಹಣ ನಿರ್ವಹಣೆ
● ಜೀವಬಾದ್ಯರ ಪುಸ್ತಕ
● ಕಾವಲುಗಾರನು
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು