ಅನುದಿನದ ಮನ್ನಾ
1
0
119
ಉಪದ್ರವ ಕಾಲದ ಒಂದು ನೋಟ
Monday, 26th of May 2025
Categories :
ಅಂತಿಮ ಸಮಯ (End Time)
"ಆತನು ಸತ್ತವರೊಳಗಿಂದ ಎಬ್ಬಿಸಿದಂಥ ಆಕಾಶದೊಳಗಿಂದ ಬರುವಂಥ ಆತನ ಕುಮಾರನನ್ನು ಎದುರುನೋಡುವವರಾದಿರೆಂತಲೂ ತಿಳಿಸುತ್ತಾರೆ. ಈ ಯೇಸುವು ಮುಂದೆ ಬರುವ ದೈವಕೋಪದಿಂದ ನಮ್ಮನ್ನು ತಪ್ಪಿಸುವಾತನು."(1 ಥೆಸಲೊನೀಕ 1:10)
ಇಲ್ಲಿ " ಮುಂದೆ ಬರಲಿರುವ ಕೋಪ' ಎಂಬ ವಾಕ್ಯವನ್ನು ಗಮನಿಸಿ. ಸತ್ಯವೇದ ತೀವ್ರವಾದ ದೈವಿಕ ಕೋಪದ ಒಂದು ಅಪೂರ್ವ ಅವಧಿಯನ್ನು ಮುನ್ಸೂಚಿಸುತ್ತದೆ, ಈ ಸಮಯದಲ್ಲಿ ಅದರ ಉಗ್ರತೆಯು ಎಷ್ಟು ವಿಶಿಷ್ಟವಾಗಿರುತ್ತದೆಯೆಂದರೆ ಅದು ಈ ಹಿಂದೆ ದೇವರು ಪ್ರಕಟಿಸಿದ ಎಲ್ಲಾ ಕೋಪಕ್ಕಿಂತ ಭಿನ್ನವಾಗಿರುತ್ತದೆ. ಈ ವಿಪತ್ಕಾರಕ ಅವಧಿಯನ್ನು 'ಉಪದ್ರವ ಕಾಲ ' ಎಂದು ಕರೆಯಲಾಗುತ್ತದೆ.
1 ಥೆಸಲೊನೀಕ 1:10 ರಲ್ಲಿ, ಸತ್ತವರೊಳಗಿಂದ ಎದ್ದ ಯೇಸು, ಈ ಸನ್ನಿಹಿತವಾದ ಕೋಪದಿಂದ ನಮ್ಮನ್ನು ಬಿಡಿಸುತ್ತಾನೆ ಎಂದು ನಮಗೆ ನೆನಪಿಸಲಾಗುತ್ತದೆ. ಅಪೊಸ್ತಲ ಪೌಲನು ಇಲ್ಲಿ ಹೇಳುತ್ತಿರುವುದು, ಕರ್ತನಾದ ಯೇಸು ತನ್ನ ಶಕ್ತಿಯ ಪ್ರಬಲ ಕಾರ್ಯದ ಮೂಲಕ (ರಾಪ್ಚರ್ ) ಭೂಮಿಯ ಮೇಲೆ ಭವಿಷ್ಯದ ದಿನದಲ್ಲಿ ಉಂಟಾಗುವ ಕರ್ತನ ಕೋಪದಿಂದ ನಮಗೆ ಈಗಾಗಲೇ ನೀಡಲಾದ ಮತ್ತು ಕ್ರೈಸ್ತರಾದ ನಮಗೆ ಒದಗಿಸಲಾದ ವಿಮೋಚನೆಯನ್ನು ಒದಗಿಸುತ್ತಾನೆ. ದೇವರ ಕೋಪದ ಈ ಕಾಲವನ್ನು 'ಸಂಕಟಕಾಲ / ಉಪದ್ರವದ ಕಾಲ ' ಎಂದು ಕರೆಯಲಾಗುತ್ತದೆ.
ದಾನಿಯೇಲ 12:1 ಇದನ್ನು "ಹಿಂದೆ ಎಂದಿಗೂ ಆಗದಷ್ಟು ಸಂಕಟದ ಸಮಯ..." ಎಂದು ಉಲ್ಲೇಖಿಸುತ್ತದೆ. ಕರ್ತನ ಕೋಪದ ಈ ಸಮಯವು ಅಕ್ಷರಶಃ ಏಳು ವರ್ಷಗಳ ಕಾಲ ಇರುತ್ತದೆ.
ಯಾಕೆ ಈ ಸಂಕಟ ಕಾಲ ಏಳು ವರ್ಷಗಳು ಮಾತ್ರ ?
ಕರ್ತನಾದ ಯೇಸು ಸಂಕಟಕಾಲದ ಬಗ್ಗೆ ಮಾತನಾಡುತ್ತಾ, "[ಕರ್ತನು] ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು."ಎಂದು ಭವಿಷ್ಯ ನುಡಿದನು. (ಮತ್ತಾಯ 24:22)
ಎಲ್ಲಾ ಕ್ರೈಸ್ತರು ಪರಲೋಕಕ್ಕೆ ಏರಿಹೋದ ನಂತರ, ಏಳು ವರ್ಷಗಳ ಸಂಕಟದ ಅವಧಿಯಲ್ಲಿ, ಮಾನಸಾಂತರಪಡದ ಪಾಪಿಗಳ ಮೇಲೆ ದೇವರ ಕೋಪವು ಸುರಿಯಲ್ಪಡುತ್ತದೆ ಎಂದು ಸತ್ಯವೇದ ಎಚ್ಚರಿಸುತ್ತದೆ. ಪ್ರಕಟಣೆಯಲ್ಲಿ ವಿವರಿಸಿದ ಈ ತೀರ್ಪುಗಳಲ್ಲಿ ವಿಶ್ವಾದ್ಯಂತ ಯುದ್ಧ (ಸಾಂಪ್ರದಾಯಿಕ ಮತ್ತು ಪರಮಾಣು), ಕ್ಷಾಮ, ಪ್ಲೇಗ್, ಮಾನವರ ಮೇಲೆ ದಾಳಿ ಮಾಡುವ ಕಾಡು ಪ್ರಾಣಿಗಳು, ಉಲ್ಕಾಪಾತಗಳು, ಬೃಹತ್ ಜಾಗತಿಕ ಭೂಕಂಪಗಳು ಮತ್ತು ಇನ್ನೂ ಹೆಚ್ಚಿನವು ಸೇರಿವೆ.
ಈ ಭಯಾನಕ ನ್ಯಾಯತೀರ್ಪಿನ ಆರಂಭವು ಏಳು ವರ್ಷಗಳ ಸಂಕಟದ ಕಾಲದ ಆರಂಭದಲ್ಲಿ ಪ್ರಾರಂಭವಾಗುತ್ತದೆ, ಇದು ಕ್ರಿಸ್ತವಿರೋಧಿ ಮತ್ತು ಇಸ್ರೇಲ್ ನಡುವೆ ಏಳು ವರ್ಷಗಳ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಗುರುತಿಸಲ್ಪಟ್ಟಿದೆ. ಈ ಸಂಕಟದ ಅವಧಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದೂ ಮೂರುವರೆ ವರ್ಷಗಳಷ್ಟು ಪರ್ಯಂತವಾಗಿರುತ್ತದೆ. ಏಳು ವರ್ಷಗಳ ಸಂಕಟದ ಅವಧಿಯ ದ್ವಿತೀಯಾರ್ಧವು ಮೊದಲಾರ್ಧಕ್ಕಿಂತ ಕೆಟ್ಟದಾಗಿರುತ್ತದೆ. ಆದರಿಂದ ಇದು "ಮಹಾ ಸಂಕಟಕಾಲ" ಎಂದು ಕರೆಯಲ್ಪಡುವ ಅವಧಿಯಾಗಿದೆ.
ಈ ಕೊನೆಯ ಮೂರುವರೆ ವರ್ಷಗಳು ಕ್ರಿಸ್ತವಿರೋಧಿಯು ಇಸ್ರೇಲ್ ಜೊತೆ ಸಹಿ ಮಾಡಿದ ಒಪ್ಪಂದವನ್ನು ಉಲ್ಲಂಘಿಸುವುದರೊಂದಿಗೆ ಪ್ರಾರಂಭವಾಗುತ್ತವೆ. ಅವನು ಜೆರುಸಲೆಮ್‌ನಲ್ಲಿ ಪುನರ್ನಿರ್ಮಿಸಲಾದ ದೇವಾಲಯದಲ್ಲಿ ಯಜ್ಞಬಲಿಯನ್ನು ನಿಲ್ಲಿಸುವ ಮೂಲಕ ಮತ್ತು ಅತೀ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವ ಮೂಲಕ ಒಡಂಬಡಿಕೆಯನ್ನು ಮುರಿಯುವನು. ಇದು "ಹಾಳುಮಾಡುವ ಅಸಹ್ಯವು "ಎನ್ನುವ ಪ್ರವಾದನೆಯಾಗಿದೆ (ದಾನಿಯೇಲ 9:26-27; ಮತ್ತಾಯ 24:15 ನೋಡಿ) ಮತ್ತು ಇದು ಏಳು ವರ್ಷಗಳ ಉಪದ್ರವದ ಅವಧಿಯು ಕಡೆಯ ಮೂರುವರೆ ವರ್ಷಗಳ ಆರಂಭವನ್ನು ಸೂಚಿಸುತ್ತದೆ.
ಆರ್ಮಗೆಡ್ಡೋನ್ ಯುದ್ಧದಲ್ಲಿ ಈ ಉಪದ್ರವದ ಅವಧಿಯು ಯೇಸುವಿನ ವಿಜಯದೊಂದಿಗೆ ಕೊನೆಗೊಳ್ಳುತ್ತದೆ.
ಆದ್ದರಿಂದ ದಯವಿಟ್ಟು ನಿಮ್ಮನ್ನು ಆತ್ಮೀಕವಾಗಿ ಸಿದ್ಧಪಡಿಸಿಕೊಳ್ಳಿ. ನೀವು ಕುಟುಂಬವಾಗಿ ಪ್ರಾರ್ಥನೆಯನ್ನು ಮಾಡಿತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಅದು ನಿಮ್ಮ ಕುಟುಂಬವನ್ನೂ ಸಿದ್ಧಪಡಿಸುತ್ತದೆ. ಕರ್ತನು ಶೀಘ್ರದಲ್ಲೇ ಬರುತ್ತಿದ್ದಾನೆ.
Bible Reading: 2 Chronicles 9-12
ಪ್ರಾರ್ಥನೆಗಳು
ಅಮೂಲ್ಯನಾದ ತಂದೆಯೇ, ನಿನ್ನ ಆತ್ಮ ಮತ್ತು ವಾಕ್ಯದ ಮೂಲಕ, ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಆ ಆನಂದಪರವಶತೆಗೆ ಸಿದ್ಧಪಡಿಸು . ನನ್ನನ್ನು ಮತ್ತು ನನ್ನ ಕುಟುಂಬ ಸದಸ್ಯರನ್ನು ಯೇಸುವಿನ ಹೆಸರಿನಲ್ಲಿ ನಿನ್ನ ಆತ್ಮ ಮತ್ತು ವಾಕ್ಯದ ಮೂಲಕ ಮುನ್ನಡೆಸು ಆಮೆನ್.
Join our WhatsApp Channel

Most Read
● ದೇವರಿಗಾಗಿ ದಾಹದಿಂದಿರುವುದು● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
● ಉತ್ತಮ ಹಣ ನಿರ್ವಹಣೆ
● ಆರಾಧನೆಗೆ ಬೇಕಾದ ಇಂಧನ
● ಗೌರವಿಸುವ ಜೀವಿತ ಜೀವಿಸಿ
● ತುರ್ತು ಪ್ರಾರ್ಥನೆ.
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
ಅನಿಸಿಕೆಗಳು