ಅನುದಿನದ ಮನ್ನಾ
ಭಾವನಾತ್ಮಕ ರೋಲರ್ ಕೋಸ್ಟರ್ ಗೆ ಬಲಿಪಶು.
Monday, 14th of October 2024
4
1
95
Categories :
Deliverance
"ಅವನು ಇದನ್ನು ಕೇಳಿದೊಡನೆ ತನ್ನ ಪ್ರಾಣರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು. ತರುವಾಯ ತಾನೊಬ್ಬನಾಗಿ ಅರಣ್ಯದೊಳಗೆ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀಗಿಡದ ಕೆಳಗೆ ಕೂತುಕೊಂಡು ಮರಣವನ್ನು ಅಪೇಕ್ಷಿಸಿದನು. ಅವನು - ಯೆಹೋವನೇ, ನನಗೆ ಸಾಕಾಯಿತು; ನನ್ನ ಪ್ರಾಣವನ್ನು ತೆಗೆದುಬಿಡು; ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ ಎಂದು ದೇವರನ್ನು ಪ್ರಾರ್ಥಿಸಿ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆಮಾಡಿದನು. ಫಕ್ಕನೆ ಒಬ್ಬ ದೇವದೂತನು ಅವನನ್ನು ತಟ್ಟಿ - ಎದ್ದು ಊಟಮಾಡು ಎಂದು ಹೇಳಿದನು"(1 ಅರಸುಗಳು 19:3-5)
ಈ ಜೀವನದಲ್ಲಿ ನೀವು ಒಬ್ಬರೇ ಕಠಿಣ ಪರಿಸ್ಥಿತಿಗಳನ್ನು ಹಾದು ಹೋಗುತ್ತಿರುವ ವ್ಯಕ್ತಿಯಾಗಿದ್ದೀರಿ ಮತ್ತು ನಿಮ್ಮ ಭಾವನೆಗಳನ್ನು ನೀವೊಬ್ಬರೇ ಹಿಡಿತದಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ನೀವು ಯೋಚಿಸುತ್ತಿರುವುದಾದರೆ, ಇದೋ ನಿಮಗಿಲ್ಲಿ ಒಂದು ನಿರೀಕ್ಷೆ ಇದೆ.
ಸತ್ಯವೇದವು ಪ್ರವಾದಿಯಾದ ಎಲೀಯನೂ ಸಹ ನಮ್ಮಂತ ಸ್ವಭಾವವದ ವ್ಯಕ್ತಿಯಾಗಿದ್ದನು ಎಂದು ವಿವರಿಸುತ್ತದೆ. (ಯಾಕೋಬ 5: 17). ಒಂದು ಸಮಯದಲ್ಲಿ ಅವನು ಆಕಾಶದಿಂದ ಬೆಂಕಿ ತರಿಸುವಂತಹ ವ್ಯಕ್ತಿಯಾಗಿದ್ದನು.ಬಾಳನ 450 ಪ್ರವಾದಿಗಳನ್ನು ಕೊಂದಿದ್ದನು. ಮರುಕ್ಷಣವೇ ಜೀವ ಭಯದಿಂದ ಓಡಿ ಹೋಗಿ ದೇವರಲ್ಲಿ ಪ್ರಾರ್ಥಿಸುತ್ತಾ ಮರಣವನ್ನು ಅಪೇಕ್ಷಿಸಿದನು. ಅವನ ಭಾವನಾತ್ಮಕ ಜೀವಿತ ರೋಲರ್ ಕೋಷ್ಟರನ್ನು ಹೋಲುತ್ತದೆ.
ಸತ್ಯವೇನೆಂದರೆ ದೇವರು ನಮ್ಮನ್ನು ನಾವು ಹೇಗಿದ್ದೇವೋ ಹಾಗೆಯೇ ಪ್ರೀತಿಸುವವನಾಗಿದ್ದಾನೆ. ಆತನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದರೆ ನಾವು ಇದ್ದ ಮಾರ್ಗದಲ್ಲೇ ಬಂದು ಸಂಧಿಸುವಷ್ಟು ನಮ್ಮನ್ನು ಪ್ರೀತಿಸುತ್ತಾನೆ.
ದೇವರು ಎಲೀಯನಿಗಾಗಿ ದೇವದೂತನನ್ನು ಕಳುಹಿಸಿ ಎಲೀಯಮುಂದಿನ ಪ್ರಯಾಣಕ್ಕೆ ಬೇಕಾದ ಶಕ್ತಿಗಾಗಿ ಊಟವನ್ನು ಕೊಡಲು ಕಳುಹಿಸಿದನು. ಆ ಊಟದ ಬಲದಿಂದ ಅವನು 40 ದಿನದ ಪ್ರಯಾಣ ಮಾಡಿದನು. ಆ ಮಾರ್ಗಮಧ್ಯದಲ್ಲಿಯೇ ದೇವರು ತಂಗಾಳಿಯಲ್ಲಿ ಕಾಣಿಸಿಕೊಂಡು ಮೇಲುದ್ವನಿಯಲ್ಲಿ ಮಾತನಾಡಿಸಿದನು.(1 ಅರಸುಗಳು 19:12)
ನಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸುವ ಕೆಲವು ಪ್ರಾಯೋಗಿಕ ವಿಧಾನಗಳು ಇಲ್ಲಿವೆ :
1). ತಕ್ಷಣ ಪ್ರತಿಕ್ರಿಯಿಸಬೇಡಿರಿ.
ಭಾವನಾತ್ಮಕವಾಗಿ ನಿಮ್ಮನ್ನು ಪ್ರಚೋದಿಸುವ ಸಂಗತಿಗಳಿಗೆ ಸರಿಯೋ ತಪ್ಪೋ ಎಂದು ಖಾತರಿಪಡಿಸಿಕೊಳ್ಳದೆ ಪ್ರತಿಕ್ರಿಯಿಸುವುದು ಕೆಲವೊಮ್ಮೆ ತಪ್ಪಾಗಬಹುದು.ಇದರಿಂದ ನೀವು ನಂತರದಲ್ಲಿ ವಿಷಾದ ಪಡಬೇಕಾಗುತ್ತದೆ. ಆದ್ದರಿಂದ ತಕ್ಷಣವೇ ಇಂಥ ಸಂಗತಿಗಳಿಗೆ ಪ್ರತಿಕ್ರಿಸಬೇಡಿರಿ.
2). ಆತ್ಮಿಕ ಸಂಗತಿಗಳ ಮೇಲೆ ನಿಮ್ಮ ಲಕ್ಷ್ಯವಿಡಿರಿ.
"ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ."ಎಂದು ದೇವರ ವಾಕ್ಯವು ನಮಗೆ ಹೇಳುತ್ತದೆ. (ಕೊಲೊಸ್ಸೆಯವರಿಗೆ 3:2)
ನಿಮ್ಮ ಮನಸ್ಸು ಕೇವಲ ಶಾರೀರಿಕ ವಿಚಾರಗಳು, ನಿಮ್ಮ ಅಗತ್ಯಗಳು, ನಿಮ್ಮ ಬಯಕೆಗಳು ಮತ್ತು ನಿಮ್ಮ ನ್ಯೂನತೆಗಳ ಮೇಲೆಯೇ ಕೇಂದ್ರೀಕೃತವಾಗಿದ್ದರೆ ಶತ್ರು ನಿಮ್ಮ ಈ ಒಂದು ಬಲಹೀನತೆಯನ್ನು ಹಿಡಿದುಕೊಂಡೆ ನಿಮ್ಮನ್ನು ಪ್ರಚೋದಿಸಿ ದೀರ್ಘಕಾಲದವರೆಗೂ ಭಾವನಾತ್ಮಕ ರೋಲರ್ ಕೋಸ್ಟರ್ ನಲ್ಲಿ ನಿಮ್ಮನ್ನು ಬಂಧಿಸಬಹುದು.
ನಾವು ಕರ್ತನ ವಾಕ್ಯಗಳಲ್ಲಿ ನೆಲೆಗೊಂಡಾಗ ನಾವು ಸತ್ಯವನ್ನು ತಿಳಿದುಕೊಳ್ಳುತ್ತೇವೆ ಮತ್ತು ಆ ಸತ್ಯವು ನಮ್ಮನ್ನು ಬಿಡುಗಡೆ ಮಾಡುತ್ತದೆ ಎಂದು ಕರ್ತನಾದ ಯೇಸು ಯೋಹಾನ 8.31-32 ರಲ್ಲಿ ಹೇಳುತ್ತಾನೆ. ನಾವು ವಾಕ್ಯ ಅಧ್ಯಯನ ಮಾಡುವುದು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ನಿಲ್ಲಿಸಿದಾಗಲೇ ಶತ್ರುವಿನ ಧ್ವನಿಗೆ ಹೆಚ್ಚು ಗಮನ ಕೊಡಲು ಆರಂಭಿಸುತ್ತೇವೆ. ಆಗ ಅವನ ಆರೋಪಗಳು, ಖಂಡನೆ ಮತ್ತು ನಾವಷ್ಟು ಒಳ್ಳೆಯವರಲ್ಲ ಎಂಬ ಕೀಳರಿಮೆಗಳು ಸಹಿಸಲು ಅಸಹನೀಯವಾಗಿ ನಮ್ಮ ಭಾವನಾತ್ಮಕ ಆರೋಗ್ಯವೇ ನಮಗೆ ಒಂದು ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ.
ಪ್ರತಿದಿನ ದೇವರ ವಾಕ್ಯವನ್ನು ಕೇಳಲು ಓದಲು ಅದನ್ನು ಧ್ಯಾನಿಸಲು ಸಮಯ ಮೀಸಲಿದೆ ಜೊತೆಗೆ ಪವಿತ್ರಾತ್ಮನು ನಮಗೆ ಕಲಿಸಿ ಆತನು ಅನುಮತಿಸಿದಂತೆ ಆತನ ವಾಕ್ಯಗಳನ್ನು ಘೋಷಿಸಲು ನಿಮ್ಮ ಆದ್ಯತೆ ನೀಡಿ. ನೀವು ಹೀಗೆ ಮಾಡುವಾಗ ಕರ್ತನ ಸಂತೋಷವೋ ನಿಮ್ಮ ಮನಸ್ಸು ಮತ್ತು ಆತ್ಮವನ್ನು ಆವರಿಸಿಕೊಳ್ಳುತ್ತದೆ. (ನೆಹೆಮಿಯಾ 8:10). ಈ ಸಂತೋಷವು ನಿಮ್ಮನ್ನು ಬಲಪಡಿಸಿ ನೀವು ಆ ಭಾವನಾತ್ಮಕ ರೋಲರ್ ಕೊಸ್ಟರ್ ಗೆ ಬಲಿಪಶು ಆಗದಂತೆ ಕಾಪಾಡುತ್ತದೆ.
3). ಚರ್ಚಿನ ಸೇವಾಕಾರ್ಯಗಳಲ್ಲಿ ನಿಯಮಿತವಾಗಿ ಭಾಗಿಯಾಗಿ.
ಸಭೆಯಾಗಿ ನೀವು ಕೂಡಿಬರಬೇಕೆಂದು ನಾನು ಮನಃ ಪೂರ್ವಕವಾಗಿ ಒತ್ತಾಯಿಸುತ್ತೇನೆ. ಅಲ್ಲಿ ಬೋದಿಸುವಂತಹ ಸಂದೇಶದ ಒಂದು ವಾಕ್ಯವು ನಿಮ್ಮ ಮನದಾಳದಲ್ಲಿ ಅಲೆಗಳನ್ನೆಬ್ಬಿಸಿ ನಿಮ್ಮನ್ನು ಮೇಲೇತ್ತಬಹುದು.
ನೀವು ಇದನ್ನು ನಿಯಮಿತವಾಗಿ ರೂಡಿಸಿಕೊಳ್ಳಬೇಕೆಂದು ಪ್ರೋತ್ಸಾಹಿಸಲು ಬಯಸುತ್ತೇನೆ. ನೀವು ಇದರಿಂದಾಗುವ ವ್ಯತ್ಯಾಸವನ್ನು ತಕ್ಷಣವೇ ಕಾಣದಿರಬಹುದು. ಆದರೆ ಅದನ್ನು ಬಿಡದೇ ಮಾಡುವಾಗ ನೀವು ಖಂಡಿತ ಕಾಣುವಿರಿ.
ಪ್ರಾರ್ಥನೆಗಳು
ದೇವರ ವಾಕ್ಯವು ಹೇಳುವಂತೆಯೇ ನಾನು ಯೇಸುನಾಮದಲ್ಲಿ ಪ್ರೀತಿಯಿಂದ ಪ್ರತಿಕ್ರಿಯಿಸುತ್ತೇನೆ. ಯಾರೂ ಸಹ ನನ್ನ ಮೇಲೆ ಪ್ರಭಾವ ಬೀರಲು ನಾನು ಬಿಡುವುದಿಲ್ಲ. ಯಾಕೆಂದರೆ ಕರ್ತನು ನನ್ನ ಸಹಾಯಕನಾಗಿದ್ದಾನೆ.
Join our WhatsApp Channel
Most Read
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಭೂರಾಜರುಗಳ ಒಡೆಯನು
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪರಲೋಕದ ವಾಗ್ದಾನ
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
● ಕೃಪೆಯಲ್ಲಿ ಬೆಳೆಯುವುದು
ಅನಿಸಿಕೆಗಳು